ಪರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಬಲವಂತ ಮಾಡಿದ್ರು; ಪತಿಯ ದೌರ್ಜನ್ಯ ಎಳೆ ಎಳೆಯಾಗಿ ಬಿಚ್ಚಿಟ್ಟ ಸೆಲಿನಾ ಜೇಟ್ಲಿ
Celina Jaitly: ಬಾಲಿವುಡ್ ನಟಿ ಸೆಲಿನಾ ಜೇಟ್ಲಿಯ 14 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಆಸ್ಟ್ರೀಯಾ ಉದ್ಯಮಿ ಪೀಟರ್ ಹೇಗ್‌ನನ್ನು ವರಿಸಿದ್ದ ಅವರು ಇದೀಗ ಡಿವೋಸರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಪತಿ ತನ್ನ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತಿದ್ದರು ಎನ್ನುವುದನ್ನು ತಿಳಿಸಿದ್ದಾರೆ. ತನ್ನ ನಗ್ನ ಚಿತ್ರ ತೋರಿಸಿ ಪರ ಪುರುಷರೊಂದಿಗೆ ಮಲಗುವಂತೆ ಪೀಡಿಸುತ್ತಿದ್ದುದಾಗಿ ವಿವರಿಸಿದ್ದಾರೆ.
ಪತಿ ಪೀಟರ್ ಹೇಗ್‌ನೊಂದಿಗೆ ನಟಿ ಸೆಲಿನಾ ಜೇಟ್ಲಿ(ಸಂಗ್ರಹ ಚಿತ್ರ). -
ಮುಂಬೈ, ನ. 26: ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಗ್ಲ್ಯಾಮರ್ ಡಾಲ್ ಆಗಿ ಮಿಂಚಿದ ನಟಿ ಸೆಲಿನಾ ಜೇಟ್ಲಿ (Celina Jaitly) ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ಪತಿ, ಆಸ್ಟ್ರೀಯಾ ಉದ್ಯಮಿ ಪೀಟರ್ ಹೇಗ್ (Peter Haag)ನಿಂದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಆರೋಪಿಸಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿವ ಮೂಲಕ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇರಲಿಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಇದೀಗ ಅವರು ತಮ್ಮ ಮೇಲೆ ನಡೆದ ಮತ್ತಷ್ಟು ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜತೆಗೆ ಪತಿಯ ವಿರುದ್ಧ ಮತ್ತಷ್ಟು ಆರೋಪ ಹೊರಿಸಿದ್ದಾರೆ. ಪತಿ ತನ್ನ ನಗ್ನ ಚಿತ್ರವನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿ, ಪರ ಪುರಷರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಆಗ್ರಹಿಸಿದ್ದಾಗಿ ತಿಳಿಸಿದ್ದಾರೆ.
ಸದ್ಯ ಅವರ ಈ ಆರೋಪ ಭಾರಿ ಸಂಚಲನ ಮೂಡಿಸಿದೆ. ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿರುವ ಅವರು ಪತಿಯ ಬಗ್ಗೆ ಗಂಭೀರ ಆರೋಪ ಹೊರಿಸಿದ್ದಾರೆ. ಪೀಟರ್ ಹೇಗ್ ತನ್ನ ನಗ್ನ ಚಿತ್ರವನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡಿ 2014-15ರ ಅವಧಿಯಲ್ಲಿ ತಮ್ಮ ಕಂಪನಿಯ ನಿರ್ದೇಕರ ಮಂಡಳಿಯ ಸದಸ್ಯರೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಬೇಕೆಂದು ಸೂಚಿಸಲು ಪ್ರಾರಂಭಿಸಿದರು ಎಂದಿದ್ದಾರೆ. ʼʼಉದ್ಯೋಗದಲ್ಲಿ ಪ್ರಗತಿ ಹೊಂದಲು ಅವರು ನನ್ನನ್ನು ಬಲಿಪಶುವಾಗಿಸಲು ಮುಂದಾದರು. ಪರ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಆಗ್ರಹಿಸಿದರುʼʼ ಎಂದು ಸೆಲಿನಾ ಹೇಳಿದ್ದಾರೆ.
ಸೆಲಿನಾ ಜೇಟ್ಲಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಪತಿ ತನ್ನ ಯಾವುದೇ ಭಾವನೆಗೆ, ಪ್ರೀತಿಗೆ, ಗೌರವಕ್ಕೆ ಸ್ಪಂದಿಸದೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದರು. ಒಟ್ಟಿನಲ್ಲಿ ತಮ್ಮ ಸಂಬಂಧ ಹಿಂಸೆಯಿಂದ ಕೂಡಿತ್ತು ಎಂದು ಹೇಳಿದ್ದಾರೆ.
ಮೂರೇ ವರ್ಷಕ್ಕೆ ಮುರಿದುಬಿತ್ತು ಅಖಿಲಾ ಪಜಿಮಣ್ಣು ದಾಂಪತ್ಯ: ಗಾಯಕಿ ವಿಚ್ಛೇದನಕ್ಕೆ ಅರ್ಜಿ
ಲೈಂಗಿಕ ದೌರ್ಜನ್ಯದ ಹೊರತಾಗಿ ದೀರ್ಘಕಾಲದ ಭಾವನಾತ್ಮಕ ಮತ್ತು ದೈಹಿಕ ಕ್ರೌರ್ಯವನ್ನು ಎದುರಿಸಿದ್ದಾಗಿಯೂ ವಿವರಿಸಿದ್ದಾರೆ. ಪೀಟರ್ ತನ್ನನ್ನು ಸೇವಕಿ ಮತ್ತು ಇತರ ನಿಂದನೆ ಪದಗಳಿಂದ ನಿಂದಿಸಿದ್ದಾರೆ ಎಂದು ಸೆಲೀನಾ ಹೇಳಿಕೊಂಡಿದ್ದಾರೆ. ಪತಿ ತನ್ನ ಆಸ್ತಿ, ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸಿದ್ದಾರೆ ಮತ್ತು ಆಸ್ತಿ ಮಾಲೀಕತ್ವವನ್ನು ವರ್ಗಾಯಿಸಲು ಒತ್ತಾಯಿಸಿದ್ದಾಗಿ ಹೇಳಿದ್ದಾರೆ. ಸೆಲಿನಾ ಮತ್ತು ಪೀಟರ್ ಹೇಗ್ 2011ರಲ್ಲಿ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ.
50 ಕೋಟಿ ರೂ. ಪರಿಹಾರ ಕೇಳಿದ ಸೆಲಿನಾ
ಕೌಟುಂಬಿಕ ದೌರ್ಜನ್ಯ ಅಡಿ ಸೆಲಿನಾ ಜೇಟ್ಲಿ ಪತಿ ವಿರುದ್ಧ ದೂರು ದಾಖಲಿಸಿ 50 ಕೋಟಿ ರೂ. ಪರಿಹಾರ ಕೋರಿದ್ದಾರೆ. ಜತೆಗೆ ಮಾಸಿಕವಾಗಿ 10 ಲಕ್ಷ ರೂ. ಒದಗಿಸುವಂತೆ ಅರ್ಜಿಯಲ್ಲಿ ಸೂಚಿಸಿದ್ದಾರೆ. ಪತಿಯ ದೌರ್ಜನ್ಯ ತಾಳಲಾರದೆ ಆಸ್ಟ್ರೀಯಾದಲ್ಲಿರುವ ತಮ್ಮ ಮನೆಯಿಂದ ಪಲಾಯನ ಮಾಡಿ ಭಾರತಕ್ಕೆ ಮರಳಿರುವುದಾಗಿ ಹೇಳಿಕೊಂಡಿದ್ದಾರೆ.
ಯಾರು ಈ ಸೆಲಿನಾ?
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 1981ರಲ್ಲಿ ಜನಿಸಿದ ಸೆಲಿನಾ 2001ರಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದರು. 2003ರಲ್ಲಿ ರಿಲೀಸ್ ಆದ ʼಜನಶೀನ್ʼ ಚಿತ್ರದ ಮೂಲ ಬಾಲಿವುಡ್‌ಗೆ ಕಾಲಿಟ್ಟರು. ವಿಶೇಷ ಎಂದರೆ ಸೆಲಿನಾ ಸ್ಯಾಂಡಲ್‌ವುಡ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. 2011 ರಿಲೀಸ್ ಆದ ʼಶ್ರೀಮತಿʼ ಚಿತ್ರದಲ್ಲಿ ಉಪೇಂದ್ರ ಜತೆ ತೆರೆ ಹಂಚಿಕೊಂಡರು. 2012ರಲ್ಲಿ ತೆರೆಕಂಡ ಹಿಂದಿಯ ʼವಿಲ್ ಮ್ಯಾರಿ ಮಿ?ʼ ಚಿತ್ರದ ಬಳಿಕ ಅವರು ಬಣ್ಣದ ಲೋಕದಿಂದ ದೂರ ಸರಿದರು.