Teachers Day: ಜೀವನವೇ ಪಠ್ಯ; ಘಟನೆಗಳೇ ಪಾಠ; ಜೀವಿತವೇ ಗುರು: ಸತ್ಯಸಾಯಿ ಲೋಕಸೇವಾ ಗುರುಕುಲದಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ
ತರಗತಿಯ ನಾಲ್ಕು ಗೋಡೆಗಳಾಚೆಗೂ ಶಿಕ್ಷಣ ವಿಸ್ತರಿಸುತ್ತದೆ. ಬದುಕಿನ ಪ್ರತಿಯೊಂದು ಘಟನೆಯೂ ಒಂದು ಪಾಠ, ಪ್ರತಿಯೊಂದು ಅನುಭವವೂ ಒಬ್ಬ ಗುರು ಎಂಬ ಸಂದೇಶದೊಂದಿಗೆ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲದಲ್ಲಿ ಶಿಕ್ಷಕರ ದಿನಾಚರಣೆ(Teachers Day)ಯನ್ನು ಭಕ್ತಿ, ಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
-
ಚಿಕ್ಕಬಳ್ಳಾಪುರ: ತರಗತಿಯ ನಾಲ್ಕು ಗೋಡೆಗಳಾಚೆಗೂ ಶಿಕ್ಷಣ ವಿಸ್ತರಿಸುತ್ತದೆ. ಬದುಕಿನ ಪ್ರತಿಯೊಂದು ಘಟನೆಯೂ ಒಂದು ಪಾಠ, ಪ್ರತಿಯೊಂದು ಅನುಭವವೂ ಒಬ್ಬ ಗುರು ಎಂಬ ಸಂದೇಶದೊಂದಿಗೆ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲದಲ್ಲಿ ಶಿಕ್ಷಕರ ದಿನಾಚರಣೆ(Teachers Day)ಯನ್ನು ಭಕ್ತಿ, ಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಗುರು-ಶಿಷ್ಯ ಪರಂಪರೆಯ ಪ್ರತೀಕವಾಗಿ ವಿದ್ಯಾರ್ಥಿಗಳು ಗುರುವೃಂದದ ಪಾದಪೂಜೆ ನೆರವೇರಿಸಿ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿಶೇಷವಾಗಿತ್ತು.
ಶಿಕ್ಷಕಿ ಸುಬ್ಬಲಕ್ಷ್ಮಿ ಮಾತನಾಡಿ, “ವೈಫಲ್ಯ ಕಠಿಣ ಶಿಕ್ಷಕ; ಪ್ರಕೃತಿ ಸಂಯಮದ ಗುರು. ಗುರುಗಳ ಉಪದೇಶದಿಂದ ಬದುಕು ರೂಪುಗೊಳ್ಳುತ್ತದೆ” ಎಂದರು. ಉಪಪ್ರಾಂಶುಪಾಲ ಎಸ್.ವಿ.ರಾಜೇಶ್ ಅವರು ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ಶಿಕ್ಷಕರ ಜವಾಬ್ದಾರಿಯನ್ನು ವಿವರಿಸಿದರು.
ವಿದ್ಯಾರ್ಥಿಗಳ ಪರವಾಗಿ ಕುಮಾರ ಮಣಿಕಂಠ ಮಾತನಾಡಿ, ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಭಕ್ತಿ-ಸೇವೆಯ ಪ್ರತೀಕ ಎಂದರು. ವಿದ್ಯಾರ್ಥಿಗಳು ಗಾನಾಮೃತದ ಮೂಲಕ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸಿದರು. ನಂತರ ಶಿಕ್ಷಕರಿಗಾಗಿ ಸಂಗೀತ ಕುರ್ಚಿ, ಚಮಚ–ನಿಂಬೆಹಣ್ಣು ನಡಿಗೆ, ಸುಳಿವುಗಳ ಮೂಲಕ ನಿಧಿ ಬೇಟೆ ಸೇರಿದಂತೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪ್ರಾಂಶುಪಾಲ ಎಸ್.ಬಿ. ಚೇತನ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಸ್ಕಾರ, ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
ಅಧ್ಯಕ್ಷ ಡಾ.ನಿಕೇತನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಲಯ ಪಾಲಕ ರಾದ ಸಾಯಿ ಕೌಶಲ್ ಶಿವಕೋಟಿ, ವಿದ್ಯಾಸಾಗರ್ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.