ನಟ ಯಶ್ ತಾಯಿಗೆ ಕೋರ್ಟ್ ಬಿಗ್ ಶಾಕ್; ಭೂ ಒತ್ತುವರಿ ಆರೋಪ, ಕಾಂಪೌಂಡ್ ಧ್ವಂಸ
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ಯಶ್ ತಾಯಿಯಿಂದ ಅಕ್ರಮವಾಗಿ ಜಾಗ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ತಮ್ಮ ಮನೆ ಪಕ್ಕದಲ್ಲಿದ್ದ ಸೈಟನ್ನ ಒತ್ತುವರಿ ಮಾಡಿ ಯಶ್ ಅವರ ಅಮ್ಮ ಪುಷ್ಪ ಅವರು ಕಾಂಪೌಡ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಯಶ್ ತಾಯಿ ಪುಷ್ಪ -
ಹಾಸನ: ರಾಕಿಂಗ್ ಸ್ಟಾರ್ ಯಶ್ (Rocking Star Yash) ತಾಯಿ ಪುಷ್ಪಾ (Yash Mother Pushpa) ಅವರಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ಯಶ್ ತಾಯಿಯಿಂದ ಅಕ್ರಮವಾಗಿ ಜಾಗ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ತಮ್ಮ ಮನೆ ಪಕ್ಕದಲ್ಲಿದ್ದ ಸೈಟನ್ನ ಒತ್ತುವರಿ ಮಾಡಿ ಯಶ್ ಅವರ ಅಮ್ಮ ಪುಷ್ಪ ಅವರು ಕಾಂಪೌಡ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸನದ ವಿದ್ಯಾನಗರದಲ್ಲಿ ಪುಷ್ಪಾ ಅವರ ಮನೆ ಇದೆ. ಇವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ಮೂಲ ಮಾಲೀಕ ಧ್ವಂಸಗೊಳಿಸಿದ್ದಾರೆ. ಇಂದು ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ನೆಲಸಮಗೊಳಿಸಿದ್ದಾರೆ. 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ ಆರೋಪ ಇವರ ಮೇಲಿದೆ. ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿದೆ.
ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಅಕ್ರಮ ಕಾಂಪೌಂಡ್ ನಿರ್ಮಿಸಿದ್ದಾರೆಂದು ಆರೋಪಿಸಲಾಗಿತ್ತು. ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಮಾಲೀಕ ದೇವರಾಜು ಕಿಡಿಕಾರಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಜಿಪಿಎ ಹೋಲ್ಡರ್ ಅಕ್ರಮ ಕಾಂಪೌಂಡ್ ತೆರವುಗೊಳಿಸಲಾಗಿದೆ. ಹಾಸನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯ ದೇವರಾಜ್ ಪರವಾಗಿ ಆದೇಶ ಮಾಡಿದ್ದಾರೆ. ಹಲವಾರು ಬಾರಿ ಕೋರ್ಟ್ ಸಮನ್ಸ್ ಹೊರಡಿಸಿದರೂ ಯಶ್ ತಾಯಿ ಕೋರ್ಟ್ ಗೆ ಬಾರದೆ ಇದ್ದು ನ್ಯಾಯಾಲಯಕ್ಕೆ ದಾಖಲೆ ಒದಗಿಸದ ಹಿನ್ನಲೆ ದೇವರಾಜ್ ಪರ ಕೋರ್ಟ್ ಆದೇಶ ಮಾಡಿದೆ. ಅಕ್ರಮವಾಗಿ ಗೋಡೆ ನಿರ್ಮಿಸಿದ್ದರು ಎಂದು ಜಾಗದ ಮಾಲೀಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಇವರ ಆರೋಪಗಳನ್ನು ಯಶ್ ತಾಯಿ ಪುಷ್ಪಾ ಅವರು ಅಲ್ಲಗಳೆದಿದ್ದಾರೆ.
ನಟ ರಾಮ್ ಚರಣ್ ನೋಡಿ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಜುಗರಕ್ಕೀಡಾದ ನಟ, ವಿಡಿಯೊ ವೈರಲ್
ದೇವರಾಜು ಹೇಳಿದ್ದೇನು?
ಪ್ರಕರಣದ ಕುರಿತು ಮಾತನಾಡಿದ ದೇವರಾಜು ಈ ಜಾಗ ಲಕ್ಷ್ಮಮ್ಮ ಎಂಬುವವರಾಗಿದ್ದು, ಅವರಿಗೆ ಈಗ 94 ವರ್ಷ. ಅವರು ಮೈಸೂರಿನಲ್ಲಿ ನೆಲೆಸಿದ್ದು, ಇಲ್ಲಿನ ಜಾಗವನ್ನು ನೋಡಿಕೊಳ್ಳುವ ಉದ್ದೇಶದಿಂದ 2020ರಲ್ಲಿ ನನಗೆ ಜಿಪಿಎ ಹೋಲ್ಡರ್ಗಾಗಿ ಮೈಸೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಡಿಸಿಕೊಟ್ಟರು. ಅವರ ಪ್ರಾಪರ್ಟಿಯನ್ನು ನಾನು ನೋಡಿಕೊಳ್ಳುತ್ತಿದ್ದೆ. ಈ ನಡುವೆ ಪುಷ್ಪಾ ಅವರು ಕಂಪೌಂಡ್ ಹಾಕಲು ಶುರುಮಾಡಿದ್ದರು. ಅದು ನನಗೆ ಗೊತ್ತಾಗಿದೆ. ನಾನು ಅಲ್ಲಿಗೆ ಹೋಗಿ ಕಾರ್ಮಿಕರನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಅವರು, ಇಲ್ಲ ಓನರ್ ಹೇಳಿದ್ದಾರೆ ಎಂದರು. ಅವರ ಓನರ್ಗೆ ಬರುವಂತೆ ಕೇಳಿಕೊಂಡೆ. ಆಗ ಯಶ್ ತಂದೆ ಬಂದರು. ಯಾಕೆ ಸರ್, ನನ್ನ ಜಾಗದಲ್ಲಿ ಕಾಂಪೌಂಡ್ ಹಾಕುತ್ತಿದ್ದೀರಾ ಎಂದು ಕೇಳಿದೆ. ಅದಕ್ಕೆ ನಿಮ್ಮ ಜಾಗ ಅನ್ನೋದಕ್ಕೆ ಏನು ಪುರಾವೆ ಇದೆ ಎಂದು ಕೇಳಿದರು. ಆಗ ನಾನು, ಪೊಲೀಸರಿಗೆ ದೂರು ನೀಡಿದೆ. ಯಾವುದೇ ಪ್ರಯೋಜನ ಆಗಲಿಲ್ಲ ಆಗ ನಾನು ಕೋರ್ಟ್‌ಗೆ ಹಾಕಿದ್ದೆ ಎಂದು ಅವರು ಹೇಳಿದ್ದಾರೆ.