ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka SSLC Result: ಪೆಟ್ರೋಲ್ ಬಂಕ್ ಕಾರ್ಮಿಕನ ಮಗಳಿಗೆ 623 ಅಂಕ; ಬಡತನದ ಮಧ್ಯೆಯೂ ಅರಳಿದ ಪ್ರತಿಭೆ

Karnataka SSLC Result 2026: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ದೇವೇಂದರ್ ಎಂಬುವರ ಪುತ್ರಿ ಹಿತಾಶ್ರೀ ಡಿ. ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರಿದ ಮಧುಗಿರಿ ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಬಡತನದ ನಡುವೆಯೂ 623 ಅಂಕ ಗಳಿಸಿದ ವಿದ್ಯಾರ್ಥಿನಿ

ಹಿತಾಶ್ರೀ ಡಿ. -

Profile
Pushpa Kumari Apr 23, 2026 6:24 PM

ತುಮಕೂರು, ಏ. 23: ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿರುವ ವ್ಯಕ್ತಿಯ ಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 623 (ಶೇ. 99.6) ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮುಂದೆ ವೈದ್ಯರಾಗಿ ಸೇವೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಪಟ್ಟಣದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ದೇವೇಂದರ್, ಎಂಬುವವರ ಮಗಳಾದ ಹಿತಾಶ್ರೀ ಡಿ., ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರಿದ ಮಧುಗಿರಿ ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Result) 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಬಡತನದ ನಡುವೆಯೂ ಅಧಿಕ ಅಂಕಗಳನ್ನು ಗಳಿಸಿರುವ ಹಿತಾಶ್ರೀ ಗಮನ ಸೆಳೆದಿದ್ದಾಳೆ. ಹಿತಾಶ್ರೀಯ ತಾಯಿ ಗೀತಾ ಗೃಹಿಣಿಯಾಗಿದ್ದು, ತಂದೆ ದೇವೇಂದರ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಮಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ. ಸಣ್ಣ ಆದಾಯದಲ್ಲೇ ಮಗಳನ್ನು ಓದಿಸಿ ದೊಡ್ಡ ಸಾಧನೆ ಮಾಡಿಸಬೇಕು ಎಂಬ ಅವರ ಕನಸು ಈಗ ನನಸಾಗಿದೆ.

ದಾಖಲೆ ಬರೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ, 7 ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್

ಕಷ್ಟದ ಪರಿಸ್ಥಿತಿಗಳ ನಡುವೆಯೂ ಹಿತಾಶ್ರೀ ತನ್ನ ಓದಿನಲ್ಲಿ ನಿರಂತರ ಪರಿಶ್ರಮ ತೋರಿದ್ದು, ಸಮಯವನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದ್ದಾಳೆ. ಈ ಸಾಧನೆಗೆ ಶಾಲೆಯ ಶಿಕ್ಷಕರು, ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎಂಬುದನ್ನು ಹಿತಾಶ್ರೀ ಸಾಬೀತುಪಡಿಸಿದ್ದಾಳೆ. ಹಿತಾಶ್ರೀಯ ಸಾಧನೆ ಅನೇಕ ಬಡ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಿದ್ದು, ಪರಿಶ್ರಮ ಮತ್ತು ದೃಢ ನಿಶ್ಚಯ ಇದ್ದರೆ ಯಾವ ಪರಿಸ್ಥಿತಿಯೂ ಅಡ್ಡಿಯಾಗುವುದಿಲ್ಲ ಎಂಬ ಸಂದೇಶವನ್ನು ಸಾರಿದೆ.