ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mpox: ಈ ವರ್ಷದ ಮೊದಲ ಮಂಕಿ ಪಾಕ್ಸ್‌ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ; ಏನಿದು ಕಾಯಿಲೆ? ಲಕ್ಷಣಗಳೇನು?

Mpox: ರಾಜ್ಯದ ಈ ವರ್ಷದ ಮೊದಲ ಎಂಪಾಕ್ಸ್‌ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿದೆ. 2024ರ ಸೆಪ್ಟೆಂಬರ್‌ನಲ್ಲಿಯೂ ಎಂಪಾಕ್ಸ್‌ ಎಂದು ಕರೆಯಲ್ಪಡುವ ಮಂಕಿ ಪಾಕ್ಸ್‌ ಸೋಂಕು ಪತ್ತೆಯಾಗಿತ್ತು. ಕಳೆದ ತಿಂಗಳು ಕೇರಳದಲ್ಲಿಯೂ ಸೋಂಕು ಕಂಡು ಬಂದಿತ್ತು. ಜ್ವರ ಮತ್ತು ಮೈಯಲ್ಲಿ ನೋವಿನಿಂದ ಕೂಡಿದ ಗುಳ್ಳೆಗಳನ್ನು ಉಂಟು ಮಾಡುವ ವೈರಾಣು ಸೋಂಕನ್ನು ಎಂಪಾಕ್ಸ್‌ ಅಥವಾ ಮಂಕಿಪಾಕ್ಸ್‌ ಎಂದು ಕರೆಯಲಾಗುತ್ತದೆ.

ಈ ವರ್ಷದ ಮೊದಲ ಮಂಕಿ ಪಾಕ್ಸ್‌ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ; ಏನಿದು ಕಾಯಿಲೆ? ಲಕ್ಷಣಗಳೇನು?

ಸಾಂದರ್ಭಿಕ ಚಿತ್ರ

Profile Ramesh B Jan 23, 2025 3:17 PM

ಬೆಂಗಳೂರು: ರಾಜ್ಯದ ಈ ವರ್ಷದ ಮೊದಲ ಎಂಪಾಕ್ಸ್‌ (Mpox) ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಜ. 22ರಂದು ಉಡುಪಿ ಮೂಲದ 40 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ದುಬೈಯಿಂದ ಮರಳಿದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ನಡೆಸಿದ ತಪಾಸಣೆಯಲ್ಲಿ ಮಂಕಿಪಾಕ್ಸ್‌ ಪಾಸಿಟಿವ್‌ ಕಂಡು ಬಂದಿದೆ. 2024ರ ಸೆಪ್ಟೆಂಬರ್‌ನಲ್ಲಿಯೂ ಎಂಪಾಕ್ಸ್‌ ಎಂದು ಕರೆಯಲ್ಪಡುವ ಮಂಕಿ ಪಾಕ್ಸ್‌ ಸೋಂಕು ಪತ್ತೆಯಾಗಿತ್ತು. ಕಳೆದ ತಿಂಗಳು ಕೇರಳದಲ್ಲಿಯೂ ಸೋಂಕು ಕಂಡು ಬಂದಿತ್ತು. ಆಫ್ರಿಕಾದಲ್ಲಿ ಪತ್ತೆಯಾದ ಈ ವೈರಸ್‌ ಬಳಿಕ ಪಾಕಿಸ್ತಾನ ಮತ್ತು ಥೈಲ್ಯಾಂಡ್‌ಗೂ ಹಬ್ಬಿದೆ. ಎಂಪಾಕ್ಸ್‌ ವೈರಸ್ ಅನ್ನು ಪಬ್ಲಿಕ್ ಹೆಲ್ತ್ ಎರ್ಮಜೆನ್ಸಿ ಆಫ್ ಇಂಟರ್‌ನ್ಯಾಷನಲ್‌ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಘೋಷಿಸಿದೆ.

ಏನಿದು ಮಂಕಿಪಾಕ್ಸ್‌?

ಜ್ವರ ಮತ್ತು ಮೈಯಲ್ಲಿ ನೋವಿನಿಂದ ಕೂಡಿದ ಗುಳ್ಳೆಗಳನ್ನು ಉಂಟು ಮಾಡುವ ವೈರಾಣು ಸೋಂಕನ್ನು ಎಂ ಪಾಕ್ಸ್‌ ಅಥವಾ ಮಂಕಿಪಾಕ್ಸ್‌ (Monkeypox) ಎಂದು ಕರೆಯಲಾಗುತ್ತದೆ. ಇದನ್ನು ಮೊದಲಿಗೆ ಮಂಗನಲ್ಲಿ ಪತ್ತೆ ಹಚ್ಚಲಾಯಿತು. ಇದಕ್ಕಾಗಿಯೇ ಈ ಹೆಸರು ಬಂತು.

ಸೋಂಕು ಪೀಡಿತರ ದೇಹದ ಗುಳ್ಳೆಯಿಂದ ಹೊರಸೂಸುವ ದ್ರವದ ಸ್ಪರ್ಶ, ಸೋಂಕು ಪೀಡಿತರ ಶ್ವಾಸಕೋಶದಿಂದ ಹೊರ ಬಿದ್ದ ಹನಿಯ ಸ್ಪರ್ಶ, ಸೋಂಕು ಪೀಡಿತರ ಚರ್ಮ, ಮುಖದ ನೇರ ಸ್ಪರ್ಶ, ಗರ್ಭಿಣಿಯಿಂದ ಮಗು-ಈ ಎಲ್ಲ ಕಾರಣಗಳಿಂದ ಸೋಂಕು ಹರಡುತ್ತದೆ.

ಈ ಸುದ್ದಿಯನ್ನೂ ಓದಿ: Coffee And Health: ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ

ಲಕ್ಷಣಗಳು

ಈ ವೈರಸ್‌ ಸೋಂಕು ಕಾಣಿಸಿಕೊಂಡ 5ರಿಂದ 13 ದಿನಗಳ ಬಳಿಕ ಲಕ್ಷಣ ಕಾಣಿಸಿಕೊಳ್ಳುತ್ತವೆ. ಜ್ವರ, ತಲೆನೋವು, ಸುಸ್ತು ಸಾಮಾನ್ಯ ಲಕ್ಷಣಗಳು. ಜತೆಗೆ ಮೈಯಲ್ಲಿ ನೋವಿನಿಂದ ಕೂಡಿದ ಗುಳ್ಳೆಗಳು ಕಂಡು ಬರುತ್ತವೆ. ಇನ್ನು ಕೆಲವರಿಗೆ ಗುದದ್ವಾರದಲ್ಲಿ ನೋವು, ಊತ, ರಕ್ತಸ್ರಾವ, ಗಂಟಲು ನೋವು, ಕಣ್ಣಿನ ಊತ, ಕಿರಿಕಿರಿ, ನೋವು ಅಥವಾ ಮಂಜಾಗುವುದು ಇತ್ಯಾದಿ ಸಮಸ್ಯೆ ಕಂಡು ಬರುತ್ತದೆ.