ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi (Vijayapura) News: ರೈತ, ಸೈನಿಕ ದೇಶದ ಬೆನ್ನೆಲುಬು: ಬಸವಂತರಾಯಗೌಡ.ವ್ಹಿ ಪಾಟೀಲ

ಭಾರತ ದೇಶ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿದ್ದು, ಇದಕ್ಕೆ ಸೈನಿಕರ ಆತ್ಮಸ್ಥೆರ್ಯೆವೇ ಕಾರಣ. ಸೈನಿಕರು ತಮ್ಮ ಮನೆ, ಮಠ.ಬಂಧು ಬಾಂದವರನ್ನು ಬಿಟ್ಟು ತಾಯ್ನಾಡಿನ ಸೇವೆ ಮಾಡುತ್ತಿರುವುದು ಪುಣ್ಯದ ಕೆಲಸ ಇಡೀ ದೇಶವೆ ನನ್ನ ಮನೆ ಎಂಬ ಮನೋದೋರಣೆ ಅವರಲ್ಲಿದೆ ದೇಶ ಸೇವೆ ಈಶ ಸೇವೆ ಇಂತಹ ಪವಿತ್ರ ಕಾಯಕ ಮಾಡುತ್ತಿರುವ ಇವರ ಕುಟುಂಬಸ್ಥರು ಭಾಗ್ಯವಂತರು ಸರಕಾರಗಳು ಸೈನಿಕರ ಕುಟುಂಬ ಗಳಿಗೆ ಇನ್ನು ಹೆಚ್ಚಿನ ಸಹಾಯ ಸೌಲಭ್ಯಗಳು ನೀಡಬೇಕು

ರೈತ, ಸೈನಿಕ ದೇಶದ ಬೆನ್ನೆಲುಬು

ದಿ.ಯೋಧ ರಾಜಶೇಖರ ಮುಜಗೊಂಡ ಇವರ ಪುಣ್ಯಸ್ಮರಣೆಯಲ್ಲಿ ಬಸವಂತರಾಯಗೌಡ ಪಾಟೀಲ ಮಾತನಾಡಿದರು.

Profile Ashok Nayak Jul 7, 2025 6:12 PM

ಇಂಡಿ: ರೈತ, ಸೈನಿಕ ಈ ದೇಶದ ಬೆನ್ನೆಲುಬು ಭಾರತ ಭವ್ಯ ಭವಿಷ್ಯಕ್ಕೆ ಹಾಗೂ ಶಾಂತಿ ನೆಮ್ಮದಿಗೆ ಯೋಧರ ಕೊಡುಗೆ ಅಪಾರವಾಗಿದೆ ಎಂದು ಶಾಸಕರ ಸಹೋದರ ಬಸವಂತರಾಯಗೌಡ. ವ್ಹಿ ಪಾಟೀಲ ಹೇಳಿದರು.

ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಇಂದು ಜರುಗಿದ ಕರ್ತವ್ಯ ನಿರತ ಯೋಧ ರಾಜಶೇಖರ ಮುಜ ಗೊಂಡ ಭಾರತೀಯ ಸೈನಿಕ ಕಂಚಿನ ಮೋರ್ತಿ ದ್ವೀತಿಯ ಪುಣ್ಯಸ್ಮರಣಾರ್ಥ ಶಾಸಕರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತ ದೇಶ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿದ್ದು, ಇದಕ್ಕೆ ಸೈನಿಕರ ಆತ್ಮಸ್ಥೆರ್ಯೆವೇ ಕಾರಣ. ಸೈನಿಕರು ತಮ್ಮ ಮನೆ, ಮಠ.ಬಂಧು ಬಾಂದವರನ್ನು ಬಿಟ್ಟು ತಾಯ್ನಾಡಿನ ಸೇವೆ ಮಾಡುತ್ತಿರುವುದು ಪುಣ್ಯದ ಕೆಲಸ ಇಡೀ ದೇಶವೆ ನನ್ನ ಮನೆ ಎಂಬ ಮನೋದೋರಣೆ ಅವರಲ್ಲಿದೆ ದೇಶ ಸೇವೆ ಈಶ ಸೇವೆ ಇಂತಹ ಪವಿತ್ರ ಕಾಯಕ ಮಾಡುತ್ತಿರುವ ಇವರ ಕುಟುಂಬಸ್ಥರು ಭಾಗ್ಯವಂತರು ಸರಕಾರಗಳು ಸೈನಿಕರ ಕುಟುಂಬ ಗಳಿಗೆ ಇನ್ನು ಹೆಚ್ಚಿನ ಸಹಾಯ ಸೌಲಭ್ಯಗಳು ನೀಡಬೇಕು ಎಂದರು.

ಇದನ್ನೂ ಓದಿ: Vinayaka V Bhat Column: ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

ಭಂಥನಾಳದ ಅಭಿನವ ವೃಷಭಲಿಂಗ ಮಹಾಶಿವಯೋಗಿಗಳು ಕಾರ್ಯಕ್ರಮ ಉದ್ದೇಶಿಸಿ ಆಶೀರ್ವಚನ ನೀಡಿದರು.

ನಿವೃತ್ತ ಶಿಕ್ಷಕ ಎ.ಪಿ ಕಾಗವಾಡಕರ್ , ಅರಣ್ಯ ಇಲಾಖೆ ಅಧಿಕಾರಿ ಧನರಾಜ ಮುಜಗೊಂಡ ಮಾತನಾಡಿದರು.

ಕಲ್ಲನಗೌಡ ಬಿರಾದಾರ, ಮಹೇಶ ಬಿಸೆ ಗ್ರಾ.ಪಂ ಅಧ್ಯಕ್ಷ, ಈರಣ್ಣಾ ಕಾರಕಲ್ ಎಸ್.ಡಿ.ಎಂ.ಸಿ ಅಧ್ಯಕ್ಷ, ಸಂಗಪ್ಪಗೌಡ ಬಿರಾದಾರ, ಬಿ.ಎಸ್ ಪಾಟೀಲ, ಎ.ಪಿ ಕಾಗವಾಡಕರ್, ರಾಜೇಂದ್ರ ಹತ್ತಳ್ಳಿ, ಎಂ.ಎಸ್ ಪಾಟೀಲ, ಮಲ್ಲಕಣ್ಣಾ ಗುಬ್ಯಾಡ, ರಾಜೀವ ನಧಾಫ, ಧನರಾಜ ಮುಜಗೊಂಡ ಯಶವಂತ ಬಿರಾದಾರ, ಕಳಾವಂತ ಶಿಕ್ಷಕರು ಮಾಜಿ ಸೈನಿಕರು ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಶಾಲಾ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.