Indi (Vijayapura) News: ಜಿ.ಟಿ.ಟಿ.ಸಿ ಕಾಲೇಜಿನ ಬಹುದಿನಗಳ ಕನಸು ಈಡೇರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿಯನ್ನು ಜಿಲ್ಲೆಯನ್ನಾಗಿಸುವ ಕನಸು ಕಂಡು ಕೇವಲ ಕನಸು ನನಸಾಗಿಸದೆ ಒಂದು ಜಿಲ್ಲೆಗೆ ಏನ್ನೇಲ್ಲಾ ಬೇಕಾದ ಸರಕಾರದ ಇಲಾಖೆಗಳು ತರುವುದರೊಂದಿಗೆ ಇಂಡಿ ಮತಕ್ಷೇತ್ರದಲ್ಲಿ ಅಭಿವೃದ್ದಿ ಯ ಶಕೆ ಪ್ರಾರಂಭಿಸಿ ನಿರುದ್ಯೋಗ ನಿವಾರಣೆಗೆ ಜಿಟಿಟಿಸಿ ಕಾಲೇಜು ಮಂಜೂರಾತಿ ಮಾಡಿಸಿ ಒಬ್ಬ ರಾಜಕೀಯ ನಾಯಕನ ಇಚ್ಛಾಶಕ್ತಿ ಇದ್ದರೆ ಎನೆಲ್ಲಾ ಮಾಡಲು ಸಾಧ್ಯ ಎಂಬು ದನ್ನು ಶಾಸಕ ಯಶವಂತ ರಾಯಗೌಡ ಪಾಟೀಲ ರಾಜ್ಯದಲ್ಲಿಯೇ ಮಾದರಿಯಾಗಿದ್ದಾರೆ.

ಜಿಟಿಟಿಸಿ ಕಾಲೇಜು ನೀಲನಕ್ಷೆ

ಇಂಡಿ: ಇಂಡಿಯನ್ನು ಜಿಲ್ಲೆಯನ್ನಾಗಿಸುವ ಕನಸು ಕಂಡು ಕೇವಲ ಕನಸು ನನಸಾಗಿಸದೆ ಒಂದು ಜಿಲ್ಲೆಗೆ ಏನ್ನೇಲ್ಲಾ ಬೇಕಾದ ಸರಕಾರದ ಇಲಾಖೆಗಳು ತರುವುದರೊಂದಿಗೆ ಇಂಡಿ ಮತಕ್ಷೇತ್ರದಲ್ಲಿ ಅಭಿವೃದ್ದಿಯ ಶಕೆ ಪ್ರಾರಂಭಿಸಿ ನಿರುದ್ಯೋಗ ನಿವಾರಣೆಗೆ ಜಿಟಿಟಿಸಿ ಕಾಲೇಜು ಮಂಜೂರಾತಿ ಮಾಡಿಸಿ ಒಬ್ಬ ರಾಜಕೀಯ ನಾಯಕನ ಇಚ್ಛಾಶಕ್ತಿ ಇದ್ದರೆ ಎನ್ನೇಲ್ಲಾ ಮಾಡಲು ಸಾಧ್ಯ ಎಂಬು ದನ್ನು ಶಾಸಕ ಯಶವಂತರಾಯಗೌಡ ಪಾಟೀಲ ರಾಜ್ಯದಲ್ಲಿಯೇ ಮಾದರಿಯಾಗಿದ್ದಾರೆ.
ಇದನ್ನೂ ಓದಿ: Indi (Vijayapura) News: ರೈತ, ಸೈನಿಕ ದೇಶದ ಬೆನ್ನೆಲುಬು: ಬಸವಂತರಾಯಗೌಡ.ವ್ಹಿ ಪಾಟೀಲ
ವಿಜಯಪೂರ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ ಬರಕ್ಕೆ ಹೆಸರಾದ ಸಿಂದಗಿ. ಚಡಚಣ,ಇಂಡಿ ಕೂಡಾ ಹೊರತಾಗಿಲ್ಲ, ಈ ಭಾಗದಲ್ಲಿ ಲಿಂಗೈಕ್ಯೆ ಶ್ರೀಭಂಥನಾಳದ ಶ್ರೀ ಸಂಗನಬವ ಶ್ರೀಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಧಾರೆ ಏರೆದರೂ ಕೂಡಾ ಶೈಕ್ಷಣಿಕವಾಗಿ ಇನ್ನು ಹೇಳಿಕೊಳ್ಳು ವಷ್ಟು ಪ್ರಗತಿ ಹೊಂದಿಲ್ಲ, ಅನೇಕ ಯುವ ಜನಾಂಗ ಎಸ್.ಎಸ್ .ಎಲ್. ಸಿ ಉತೀರ್ಣರಾಗಿ ಉದ್ಯೋಗವಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಮಹಾರಾಷ್ಟ್ರ, ಗೋವಾ, ಆಂದ್ರಪ್ರದೇಶ ನೇರೆ ರಾಜ್ಯಗಳಿಗೆ ಉದೋಗ ಹುಡುಕುತ್ತ ಬಾಳು ಪಯಣ ಸಾಗಿಸುತ್ತಿರುವುದು ಒಂದಾದರೆ, ಇನ್ನೋಂದೆಡೆ ನಿರುದ್ಯೋಗಿ ಯುವಕರು ಯಾವುದೇ ಕೆಲಸ ಕಾರ್ಯಗಳು ಇಲ್ಲದೆ " ದಿ ಲಿಟಲ್ ನಾಲೇಜ್ ಈಜ್ ಡೇವಿಲ್ ವರ್ಕ್ ಶಾಪ್" ಹೀಗೆ ಇಂತಹ ಯುವ ಸಮುದಾಯದ ಮನೋಸ್ಥಿತಿ ಅರಿತ ಶಾಸಕ ಯಶವಂತರಾಯಗೌಡ ಪಾಟೀಲರು ಎಸ್.ಎಸ್.ಎಲ್.ಸಿ ಆದನಂತರ ಯುವ ಸಮುದಾಯ ಹೇಗೆ ? ಎಂದು ಆಂತಕ ಪಡುವುದು ಬೇಡ. ದುಡಿಯುವ ಕೈಗಳಿಗೆ ಉದ್ಯೋಗ ಸಿಕ್ಕರೆ ಜಿಲ್ಲೆಯಲ್ಲಿ ಬಡತನ ನಿರ್ಮೂಲನದ ಜೊತೆಗೆ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂಬ ಚಾಣುಕ್ಯನ ಜಾಣ ನೀತಿ ಅನುಸರಿಸಿ ತನ್ನ ಮತಕ್ಷೇತ್ರದ ನಿರುದ್ಯೋಗಿ ಯುವ ಸಮುದಾಯದ ಮೇಲಿನ ಕಾಳಜಿಯಿಂದ ಹತ್ತನೆ ತರಗತಿ ಉರ್ತೀರಾದ ವಿದ್ಯಾರ್ಥಿಗಳಿಗೆ ಜಿಟಿಟಿಸಿ ಡಿಪ್ಲೋಮಾ ಕೋರ್ಸ ಮತ್ತು ನಿರುದ್ಯೋಗಿ ಯುವಕ/ಯುವತಿಯರಿಗೆ ಕರ್ನಾಟಕ ಸರಕಾರದ ಪ್ರಾಯೋಜಿತ ಉಚಿತ ತರಬೇತಿ ಜೊತೆ ಉದ್ಯೋಗ ಅವಕಾಶ ಕೊಡುವಂತಹ ಏಕೈಕ ಜಿಟಿಟಿಸಿ ಶಿಕ್ಷಣ ಸಂಸ್ಥೆ ಇಂಡಿ ಮತಕ್ಷೇತ್ರಕ್ಕೆ ತಂದಿರುವುದು ಯುವಸಮುದಾಯದಲ್ಲಿ ಸಂತಸ ಮನೆ ಮಾಡಿದೆ.
ಜಿಲ್ಲೆಯಲ್ಲಿಯೇ ೨ನೇ ಜೆ.ಟಿ.ಟಿ.ಸಿ ಉದ್ಯೋಗ ಆಧಾರಿತ ಕಾಲೇಜು ನಾಳೆ ಜು.14 ಮುಖ್ಯ ಮಂತ್ರಿ ಸಿದ್ದರಾಮಯ್ಯನರ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ ಶಿವುಕುಮಾರ ಇವರ ಅಮೃತ ಹಸ್ತದಿಂದ ಶಂಕುಸ್ಥಾನೆ ನೆರವೇರಲಿದೆ.
ಏನಿದರ ವಿಶೇಷತೆ: ಜೆಟಿಟಿಸಿ ಡಿಪ್ಲೋಮಾ ಕೋರ್ಸ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಕೌಶಲ್ಯ ಶ್ರೇಷ್ಠತೆಯಿಂದ ಆಸ್ಟ್ರೇಲಿಯಾ, ಮಲೇಶಿಯಾ, ಸಿಂಗಪೂರ , ಕೆನಡಾ ಹಲವು ದೆಶಗಳಲ್ಲಿ ಇವರಿಗೆ ಬೇಡಿಕೆ *ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಯಾವುದೇ ಇಂಜನಿಯರಿಂಗ್ ಕೋರ್ಸ ಆಯ್ಕೆ ೨ನೇ ವರ್ಷಕ್ಕೆ ಪ್ರವೇಶ ಮಾಡಿಕೊಳ್ಳಬಹುದು* ಕ್ಲಾಸ್ ರೋಮ್ ತರಗತಿ ಇರುವುದಿಲ್ಲ ಪ್ರಾಯೋಜಿತ ರಚನಾತ್ಮಕ ಕೈಗಾರಿಕಾ ಆಧಾರಿತ ಪಠ್ಯಕ್ರಮ*ಕೈಗಾರಿಕಾ ತಂತ್ರಜ್ಞಾನ ಆಧಾರಿತ ಲ್ಯಾಬ್ ಸರಕಾರಿ, ಅಂತರಾ ಷ್ಟ್ರೀಯ ಸಹಯೋಗ ಸಂಸ್ಥೆ ಅತೀ ಚಿಕ್ಕ ವಯಸ್ಸಿನಲ್ಲಿ ಉದ್ಯೋಗ ಜಿಟಿಟಿಸಿ ಸಂಸ್ಥೆ ವಿದ್ಯಾರ್ಥಿ ಗಳಿಗೆ ಕೇವಲ ಶಿಕ್ಷಣವಲ್ಲದೆ ಭವಿಷ್ಯಕ್ಕೂ ಶೇ.100 ಉದ್ಯೋಗಕಾಶದ ಉದ್ಯೋಗ ಭದ್ರತೆ ಗ್ಯಾರಂಟಿ ನೀಡುತ್ತದೆ.
*
ಶಾಸಕ ಯಶವಂತರಾಯಗೌಡ ಪಾಟೀಲ ದೂರದೃಷ್ಠಿಯ ರಾಜಕಾರಣಿ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದು ಹಗುರದ ಕೆಲಸವಲ್ಲ, ಹಿಂದೆ ಕೇವಲ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಬಗ್ಗೆ ಪ್ರಾರಂಭಿಸುವುದು ಬಿಡಿ ಮಾತನಾಡಿದರೆ ಭಯ ಇಂತಹ ಕೆಲಸ ಮಾಡಿರುವುದು ದೈವಿ ಸಂಕಲ್ಪ. ಜೆಲ್ಲೆ ಮಾಡುವ ಕನಸು ಹೊತ್ತ ಶಾಸಕರು ಲಿಂಬೆ ಅಭಿವೃದ್ದಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ,ಮೆಗಾಮಾರುಕಟ್ಟೆ, ಸಣ್ಣ ಕೈಗಾರಿಕೆ ಸ್ಥಾಪನೆ, ಇಂದು ಜಿಟಿಟಿಸಿ ಕಾಲೇಜು ಇವೇಲ್ಲಾ ಯಾರಿಗೂ ಗೊತ್ತಿಲ್ಲ . ಒಂದು ಅಭಿವೃದ್ದಿ ಮಂಡಳಿ ಸ್ಥಾಪಿಸಬೇಕಾದರೆ ಸಾಕಷ್ಟು ಸಂಖ್ಯಾಬಲ , ವಿವಿಧ ಪ್ರಗತಿಪರ ಸಂಘಟನೆಗಳ, ಚಿಂತಕರ ,ಬುದ್ದಿಜೀವಿಗಳ ಬೆಂಬಲ ಬೇಕು ಕೇವಲ ಅವರ ಬುದ್ದಿ ಶಕ್ತಿ,ರಾಜಕೀಯ ಅನುಭವ ಮತ್ತು ಶ್ರೀಸಿದ್ದಲಿಂಗನ ಕೃಪಾರ್ಶೀವಾ ದಿಂದ ಅನೇಕ ಅಭಿವೃದ್ದಿ ಕೆಲಸಗಳ ಜೊತೆ ರೈತರಿಗಾಗಿ ನೀರಾವರಿ ಯೋಜನೆಗಳು ಮಾಡಿದ್ದಾರೆ ಇಂತಹ ಶಾಸಕರನ್ನು ಪಡೆದಿರುವ ಮತಕ್ಷೇತ್ರದ ಜನರು ಧನ್ಯರು.
ಪುರಸಭೆ ಸದಸ್ಯ ಮುಸ್ತಾಕ ಇಂಡಿಕರ್
*
ನಾನೇ ಮಾಡಿರುವೆ ಎನ್ನುವುದಕ್ಕಿಂತ ನನಗೆ ಇಂಡಿ ಮತಕ್ಷೇತ್ರದ ಹೃದಯವಂತ ಜನರು ಸುಮಾರು ೪೦ ವರ್ಷಗಳ ಸುಧೀರ್ಗ ರಾಜಕೀಯವಾಗಿ ಎತ್ತರಕ್ಕೆ ಬೆಳೆಸಿದ್ದಾರೆ. ಈ ಬಾಗದ ಜನರ ರೈತರ ,ಯುವಜನಾಂಗದ ಬಾಳು, ಬದುಕು ನಾಡಿಮಿಡಿತ ಅರಿತ್ತಿರುವೆ. ಯಾವ ಅಧಿಕಾರ ಅಂತಸ್ತು ,ಶಾಸಕ ಸ್ಥಾನ ಮಹತ್ವದಲ್ಲ ನಮ್ಮಂತವರು ಎಷ್ಟೋ ಜನರು ಬಂದಿದ್ದಾರೆ ಹೋಗಿದ್ದಾರೆ ಉಸಿರು ಹೋಗಬ ಹುದು ನಾವು ಮಾಡಿರುವ ಕೆಲಸಗಳು ಸದಾ ಮಾತನಾಡುವಂತಿರಬೇಕು. ನನ್ನ ಅಧಿಕಾರ ಅವಧಿಯ ಯೋಜನೆ ಹಾಗೂ ಕೆಲಸಗಳು ದೂರದೃಷ್ಠಿಯದಾಗಿವೆ ಮುಂದಿನ ತಲೆಮಾರಿನ ಶಾಸಕರಿಗೆ ಮಾಡುವ ಕೆಲಸಗಳೇ ಇರುವುದಿಲ್ಲ ಮತಕ್ಷೇತ್ರದ ಜನರ ಮುಂದೆ ಕುಳಿತು ಶಾಸಕ ಯಶವಂತರಾಯ ಗೌಡ ಪಾಟೀಲ ಎಲ್ಲಾ ಮಾಡಿದ್ದಾರೆ ನಾನು ಎನು ಮಾಡಬೇಕು ಎಂದು ಮಾತನಾಡುವ ದಿನಗಳು ಮುಂದಿನ ಜನಾಂಗ ಮಾತನಾಡುವಂತೆ ಮಾಡಿದ್ದೇನೆ.
ಶಾಸಕ ಯಶವಂತರಾಯಗೌಡ ಪಾಟೀಲ