Ranji Trophy: ಮಹಾರಾಷ್ಟ್ರ ತಂಡ ಪ್ರಕಟ; ಋತುರಾಜ್ ನಾಯಕ
Ranji Trophy: ಬರೋಡಾ ತಂಡ ಆಡಿದ 5 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ ಬಹುತೇಕ ನಾಕೌಟ್ ಟಿಕೆಟ್ ಖಾತ್ರಿಪಡಿಸಿದೆ.
 
                                Ruturaj Gaikwad -
 Abhilash BC
                            
                                Jan 22, 2025 1:20 PM
                                
                                Abhilash BC
                            
                                Jan 22, 2025 1:20 PM
                            ಮುಂಬಯಿ: ಗುರುವಾರ(ಜ.23) ಆರಂಭಗೊಳ್ಳುವ ರಣಜಿ ಟೂರ್ನಿಯ(Ranji Trophy) ಬರೋಡಾ ವಿರುದ್ಧದ ಪಂದ್ಯಕ್ಕೆ ಮಹಾರಾಷ್ಟ್ರ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸಲಿದ್ದಾರೆ. 'ಎ' ಗುಂಪಿನಲ್ಲಿರುವ ಮಹಾರಾಷ್ಟ್ರ ಆಡಿರುವ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ಇನ್ನೆರಡು ಪಂದ್ಯಗಳನ್ನು ಗೆದ್ದರೂ ನಾಕೌಟ್ ಪ್ರವೇಶಿಸುವ ಸಾಧ್ಯತೆ ಕಡಿಮೆ. ಬರೋಡಾ ತಂಡ ಆಡಿದ 5 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ ಬಹುತೇಕ ನಾಕೌಟ್ ಟಿಕೆಟ್ ಖಾತ್ರಿಪಡಿಸಿದೆ.
ಮಹಾರಾಷ್ಟ್ರ ತಂಡ
ಋತುರಾಜ್ ಗಾಯಕ್ವಾಡ್ (ನಾಯಕ), ಸಿದ್ಧೇಶ್ ವೀರ್, ಪವನ್ ಶಾ, ಯಶ್ ಕ್ಷೀರಸಾಗರ್, ಸಿದ್ಧಾರ್ಥ್ ಮ್ಹಾತ್ರೆ, ಸೌರಭ್ ನವಲೆ (ವಿ.ಕೀ), ರಾಮಕೃಷ್ಣ ಘೋಷ್, ಹಿತೇಶ್ ವಾಲುಂಜ್, ಪ್ರಶಾಂತ್ ಸೋಲಂಕಿ, ರಜನೀಶ್ ಗುರ್ಬಾನಿ, ಪ್ರದೀಪ್ ದಾಧೆ, ಮುಖೇಶ್ ಚೌಧರಿ, ಮುರ್ತುಜಾ ಟ್ರಂಕ್ವಾಲಾ, ಸತ್ಯರಾಜ್ ಟ್ರಂಕ್ವಾಲಾ, ಸನ್ನಿ ಪಂಡಿತ್.
ರೋಹಿತ್ ಜಮ್ಮುಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕಣಕಿಳಿಯಲಿದ್ದಾರೆ. ಇದು 10 ವರ್ಷದ ಬಳಿಕ ಅವರು ಆಡುವ ದೇಶೀಯ ಕ್ರಿಕೆಟ್ ಪಂದ್ಯವಾಗಿದೆ. ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ತಂಡದಲ್ಲಿದ್ದಾರೆ. ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಸೌರಾಷ್ಟ್ರ ಪರ ಆಡಲಿದ್ದಾರೆ. ರಿಷಭ್ ಪಂತ್ ಡೆಲ್ಲಿ ಪರ, ಮೊಹಮ್ಮದ್ ಸಿರಾಜ್ ಹೈದರಾಬಾದ್ ಪರ, ಶುಭಮನ್ ಗಿಲ್ ಪಂಜಾಬ್ ಪರ ಆಡಲಿದ್ದಾರೆ.
ಇದನ್ನೂ ಓದಿ Ranji Trophy: ಸೌರಾಷ್ಟ್ರ ಪರ ರಣಜಿ ಆಡಲು ಮುಂದಾದ ಜಡೇಜಾ
ಕುತ್ತಿಗೆ ನೋವಿನಿಂದಾಗಿ ಸೌರಾಷ್ಟ್ರ ವಿರುದ್ಧದ ರಣಜಿ(Ranji Trophy) ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಇದೀಗ ಜ.30ರಂದು ನಡೆಯುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕಿಳಿಯುವುದು ಖಚಿತ ಎಂದು ಹೇಳಲಾಗಿದೆ.
 
            