ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಜೈದೇವ್ ಅಂತ್ಯ ಹೇಗಾಯ್ತು? ಧಾರಾವಾಹಿ ಮುಕ್ತಾಯಕ್ಕೆ ವೀಕ್ಷಕರು ಭಾವುಕ!

Amruthadhaare Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare serial) ಮುಕ್ತಾಯವಾಗಿದೆ. ಅಮೃತಧಾರೆ ಧಾರಾವಾಹಿ ಕಳೆದ ನಾಲ್ಕು ವರ್ಷಗಳಿಂದ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಾ ಬಂದಿದ್ದು, ಗೌತಮ್ ದಿವಾನ್ (Gowtham Diwan) ಮತ್ತು ಭೂಮಿಕಾ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಕೇಡಿ ಅಂತ್ಯವಾಗಿದೆ. ಮಲ್ಲಿ ಇಂದಾನೇ ಕೊನೆಯುಸಿರು ಬಿಟ್ಟಿದ್ದಾನೆ. ಧಾರಾವಾಹಿಯ ಖಡಕ್ ವಿಲನ್ ಜೈದೇವ್ (Jaidev) ಮಾಡುವ ಕುತಂತ್ರಗಳು ವೀಕ್ಷಕರಲ್ಲಿ ಸಾಕಷ್ಟು ಆಕ್ರೋಶ ಮೂಡಿಸಿತ್ತು.

ಜೈದೇವ್ ಅಂತ್ಯ ಹೇಗಾಯ್ತು? ಧಾರಾವಾಹಿ ಮುಕ್ತಾಯಕ್ಕೆ ವೀಕ್ಷಕರು ಭಾವುಕ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Nov 16, 2026 10:24 AM

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare serial) ಮುಕ್ತಾಯವಾಗಿದೆ. ಅಮೃತಧಾರೆ ಧಾರಾವಾಹಿ ಕಳೆದ ನಾಲ್ಕು ವರ್ಷಗಳಿಂದ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಾ ಬಂದಿದ್ದು, ಗೌತಮ್ ದಿವಾನ್ (Gowtham Diwan) ಮತ್ತು ಭೂಮಿಕಾ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಕೇಡಿ ಅಂತ್ಯವಾಗಿದೆ. ಮಲ್ಲಿ ಇಂದಾನೇ ಕೊನೆಯುಸಿರು ಬಿಟ್ಟಿದ್ದಾನೆ. ಧಾರಾವಾಹಿಯ ಖಡಕ್ ವಿಲನ್ ಜೈದೇವ್ (Jaidev) ಮಾಡುವ ಕುತಂತ್ರಗಳು ವೀಕ್ಷಕರಲ್ಲಿ ಸಾಕಷ್ಟು ಆಕ್ರೋಶ ಮೂಡಿಸಿತ್ತು. ಅಂತೂ ಎಲ್ಲವೂ ಸುಖಾಂತ್ಯಗೊಂಡಿದೆ.

ದೀಪಿಕಾಳನ್ನು ಅಪಹರಿಸಿ ಆಕೆಯಿಂದ ಆಸ್ತಿಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲು ಜೈದೇವ್ ಮತ್ತು ಶಕುಂತಲಾ ಸಂಚು ರೂಪಿಸಿದ್ದರು. ತಮ್ಮ ಯೋಜನೆಯಂತೆ ದೀಪಿಕಾಳನ್ನು ಬಂಧಿಸಿಟ್ಟುಕೊಂಡು ಆಸ್ತಿಗಾಗಿ ಒತ್ತಡ ಹೇರುತ್ತಿದ್ದರು. ಆದರೆ ಅಷ್ಟರಲ್ಲಿ ಅಲ್ಲಿಗೆ ಬಂದ ಭೂಮಿಕಾ ಇಡೀ ಕಥೆಗೆ ಹೊಸ ತಿರುವು ನೀಡಿದ್ದಳು. ದೀಪಿಕಾಳಿಗೆ ಭೂಮಿಕಾ ಒಂದು ದೊಡ್ಡ ಸತ್ಯವನ್ನು ತಿಳಿಸಿದ್ದಾಳೆ. ನಾವಿಬ್ಬರೂ ಒಂದೇ ತಾಯಿಯ ಮಕ್ಕಳು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಈ ಸತ್ಯ ಕೇಳಿ ದೀಪಿಕಾ ಮಾತ್ರವಲ್ಲ, ಶಕುಂತಲಾ ಮತ್ತು ಜೈದೇವ್ ಕೂಡ ಶಾಕ್ ಆಗಿದ್ದಾರೆ.ಆದರೂ ತಮ್ಮ ಕುತಂತ್ರವನ್ನು ಬಿಡದ ಜೈದೇವ್, ಭೂಮಿಕಾ ಮತ್ತು ದೀಪಿಕಾ ಇಬ್ಬರಿಗೂ ಗನ್ ತೋರಿಸಿ ಆಸ್ತಿಪತ್ರಗಳಿಗೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ‌Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್

ತಾಯಿ ಶಕುಂತಲಾ ವಿರುದ್ಧ ಗೌತಮ್ ಆಕ್ರೋಶ!

ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಗೌತಮ್, ತಾಯಿ ಶಕುಂತಲಾ ವಿರುದ್ಧ ತನ್ನ ಅಸಮಾಧಾನವನ್ನು ಹೊರಹಾಕಿದ್ದಾನೆ. ಇಷ್ಟು ದಿನ ತಾಯಿಯನ್ನು ನಂಬಿ ಕ್ಷಮಿಸಿದ್ದಕ್ಕೆ ಆಕೆ ಮೋಸ ಮಾಡಿದ್ದಾಳೆ ಎಂಬ ನೋವು ಗೌತಮ್ ಮಾತುಗಳಲ್ಲಿ ವ್ಯಕ್ತವಾಗಿದೆ.

“ಬದಲಾವಣೆ ಜಗದ ನಿಯಮ ಎಂದು ನಿನ್ನನ್ನು ಕ್ಷಮಿಸಿ ಮತ್ತೆ ಮನೆಗೆ ಸೇರಿಸಿಕೊಂಡೆ” ಎಂಬ ಅರ್ಥದಲ್ಲಿ ಶಕುಂತಲಾಳಿಗೆ ತನ್ನ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾನೆ.

ಅಷ್ಟೇ ಅಲ್ಲದೆ, ತಂದೆ ತನಗೆ ವಹಿಸಿದ್ದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆದರೆ ಒಬ್ಬ ತಮ್ಮನನ್ನು ಮಾತ್ರ ಸರಿದಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಗೌತಮ್ ಭಾವುಕನಾಗಿದ್ದಾನೆ. ಜೈದೇವ್‌ನ ತಪ್ಪುಗಳು ಹಾಗೂ ತಾಯಿಯ ಮೋಸದಿಂದ ಗೌತಮ್ ಮನಸ್ಸಿಗೆ ತೀವ್ರ ನೋವಾಗಿದೆ.

ಗೌತಮ್ ಬುದ್ಧಿಮಾತಿಗೂ ಬಗ್ಗದ ಜೈದೇವ್!

ಗೌತಮ್ ಅಷ್ಟೆಲ್ಲಾ ಬುದ್ಧಿಮಾತು ಹೇಳಿದರೂ ಜೈದೇವ್ ಮಾತ್ರ ತನ್ನ ಅಹಂಕಾರವನ್ನು ಬಿಟ್ಟಿಲ್ಲ. ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಮತ್ತೆ ದರ್ಪದ ಮಾತುಗಳನ್ನೇ ಆಡಿದ್ದಾನೆ. ಅಣ್ಣನ ಮಾತುಗಳಿಗೂ ಬೆಲೆ ಕೊಡದೆ ತನ್ನ ಹಳೆಯ ವರ್ತನೆಯನ್ನೇ ಮುಂದುವರಿಸಿದ್ದಾನೆ.

ಇದರಿಂದ ಜೈದೇವ್‌ನನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಜೈದೇವ್ ಬಂಧನಕ್ಕೆ ಮಲ್ಲಿ ಎಂಟ್ರಿ!

ಇತ್ತ ಜೈದೇವ್‌ನನ್ನು ಬಂಧಿಸಲು ಮಲ್ಲಿ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದಳು. ಮಲ್ಲಿ ಪೊಲೀಸರೊಂದಿಗೆ ಬರುತ್ತಿದ್ದಂತೆ ಜೈದೇವ್ ಮತ್ತೆ ಹೊಸ ನಾಟಕ ಆರಂಭಿಸಿದ್ದ.

“ನಾನು ಮಾತ್ರ ಜೈಲು ಸೇರುವುದಿಲ್ಲ, ನನ್ನ ಶತ್ರುಗಳನ್ನೂ ಉಳಿಸುವುದಿಲ್ಲ” ಎಂಬ ಬೆದರಿಕೆಯ ಮಾತುಗಳನ್ನಾಡುತ್ತಾ ಕೈಯಲ್ಲಿ ಗನ್ ಹಿಡಿದು ನಿಂತಿದ್ದ. ಆ ಬಳಿಕ ಜೈದೇವ್‌ನನ್ನು ಮಲ್ಲಿ ಶೂಟ್‌ ಮಾಡಿದ್ದಾಳೆ. ಮಗನ ಅಂತ್ಯ ನೋಡಿ ಶಕುಂತಲಾ ಹುಚ್ಚಿ ಆದಳು. ಜೈಲು ಸೇರಿದಳು.

ಇದನ್ನೂ ಓದಿ: Sai Pallavi: ಹೊಸ ಸಿನಿಮಾಗಾಗಿ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ ಸಾಯಿ ಪಲ್ಲವಿ!

ಅಮೃತಧಾರೆಯ ಜಾಗಕ್ಕೆ ಗೌರಿಪುತ್ರ ಬರುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಈ ಸೀರಿಯಲ್‌ನ ಕೇಂದ್ರಬಿಂದು ಆಗಿದ್ದಾರೆ. ರಾಮಚಾರಿ ಖ್ಯಾತಿಯ ರಿತ್ವಿಕ್, ಡ್ರಾಮಾ ಜೂನಿಯರ್ಸ್ ಕಲಾವಿದೆ ಮಹತಿ ಭಟ್, ಹಿರಿಯ ಕಲಾವಿದರ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ದೊಡ್ಡ ತಾರಾಗಣವನ್ನು ಗೌರಿಪುತ್ರ ಹೊಂದಿದೆ. ಇಂದಿನಿಂದ ಪ್ರತಿದಿನ ಸಂಜೆ 7ಕ್ಕೆ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.