BBK 12: 'ಬಿಗ್ ಬಾಸ್ ಮನೆಯಲ್ಲಿ ನಂಗೆ ಇಬ್ರು ಸ್ಪರ್ಧಿಗಳು ಪ್ರಪೋಸ್ ಮಾಡಿದ್ರು'; ಡಾಗ್ ಸತೀಶ್ ಬಿಚ್ಚಿಟ್ರು ಹೊಸ ಸತ್ಯ!
Bigg Boss 12 Dog Satish: ಡಾಗ್ ಸತೀಶ್ ಅವರು ತಮಗೆ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಇಬ್ಬರು ಸ್ಪರ್ಧಿಗಳು ಪ್ರಪೋಸ್ ಮಾಡಿದ್ದರು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದ ನಂತರ ಅನೇಕ ಹುಡುಗಿಯರು ಸತೀಶ್‌ಗೆ ಪ್ರಪೋಸ್ ಮಾಡಿದ್ದಾರಂತೆ! 'ನಿಮ್ಮ ಮಗನಿಗಿಂತ ನೀವೇ ಚೆನ್ನಾಗಿದ್ದೀರಿ' ಅಂತ ಹೊಗಳುತ್ತಿದ್ದಾರಂತೆ!
-
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಡಾಗ್ ಸತೀಶ್ ಅವರು ಈಚೆಗೆ ವಿಶ್ವವಾಣಿ ಟಿವಿ ಜೊತೆಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಈ ವೇಳೆ ತಮಗೆ ಬಿಗ್ ಬಾಸ್‌ನಿಂದ ಆಚೆ ಬಂದಮೇಲೆ ಪ್ರಪೋಸಲ್‌ಗಳು ಜಾಸ್ತಿ ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ.
ಪ್ರಪೋಸ್ ಮಾಡಿದವರ ಹೆಸರು ಹೇಳುವುದಿಲ್ಲ
"ನನಗೆ ಪರೋಕ್ಷವಾಗಿ ಪ್ರಪೋಸ್ ಮಾಡಿದ್ದಾರೆ. ನೀವು ಆಫೀಸರ್ ಥರ ಕಾಣಿಸ್ತೀರಿ, ತುಂಬಾ ಪ್ರಾಮಾಣಿಕರಿದ್ದೀರಿ, ಎಲ್ಲರೂ ರೆಡಿಯಾಗಿ ಬಂದ್ರೆ ಒಂಥರಾ ಕಾಣಿಸ್ತಾರೆ. ನೀವು ಬಂದರೆ ಬೇರೆ ಥರನೇ ಕಾಣಿಸ್ತೀರಿ. ನೀವಂದ್ರೆ ನನಗೆ ಇಷ್ಟ ಎಂದು ಇಬ್ಬಿದ್ರು ಹೇಳಿದ್ದಾರೆ. ಆದರೆ. ನನಗೆ ಆ ರೀತಿ ಹೇಳಿದವರ ಹೆಸರನ್ನು ನಾನು ಹೇಳುವುದಕ್ಕೆ ಆಗೋದಿಲ್ಲ" ಎಂದು ಡಾಗ್ ಸತೀಶ್ ಹೇಳಿದ್ದಾರೆ.
Bigg Boss 12: ʻಸುಮ್ ಸುಮ್ನೆ ಜಗಳ ಮಾಡೋಣ, ಮಾತು ಬಿಡೋಣʼ; ಜಾಹ್ನವಿ - ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!
ಸರ್ಧಿಯೊಬ್ಬರ ಕನಸಿನಲ್ಲಿ ನಾನು ಹೋಗಿದ್ನಂತೆ!
"ಓರ್ವ ಸ್ಪರ್ಧಿಗೆ ನಾನು ಕನಸಿನಲ್ಲಿ ಬಂದು ಕಾಡಿದ್ದೀನಂತೆ. ಅದು ಕೂಡ ನಾವೆಲ್ಲಾ ಬಿಗ್ ಬಾಸ್ ಮನೆಗೆ ಹೋದ ಮೂರೇ ದಿನಕ್ಕೆ. ಆದರೆ ಆ ಸ್ಪರ್ಧಿಯ ಹೆಸರನ್ನು ನಾನು ಹೇಳುವುದಕ್ಕೆ ಆಗೋದಿಲ್ಲ. ಹೇಳಿದರೆ, ಅವರ ಬಾಳು ಹಾಳಾಗುತ್ತದೆ" ಎಂದು ಡಾಗ್ ಸತೀಶ್ ಹೇಳಿದ್ದಾರೆ.
ನಿಮ್ಮ ಮಗನಿಗಿಂತ ನೀವೇ ಚೆನ್ನಾಗಿದ್ದೀರಿ ಅಂತಾರೆ!
"ನಾನು ಬಿಗ್ ಬಾಸ್‌ನಿಂದ ಹೊರಗೆ ಬಂದಮೇಲೆ ಚಿಕ್ಕ ಚಿಕ್ಕ ಹುಡುಗಿಯರೇ ಮೇಸೆಜ್ ಮಾಡ್ತಾರೆ. ನಾನಂತೂ ಸುಮಾರು 1000 ಕಾಲ್ ಬ್ಲಾಕ್ ಮಾಡಿದ್ದೇನೆ. ನಾನು ನನ್ನ ನಂಬರ್ ಅನ್ನು ಎಲ್ಲರಿಗೂ ಸಿಗೋ ಥರ ಓಪನ್ ಆಗಿ ಹಾಕಿಕೊಂಡಿದ್ದೆ. ಆನಂತರ ಒಂದು ಹುಡುಗಿ ನನಗೆ ಆ ರೀತಿ ನಂಬರ್ ಹಾಕಬಾರದು ಎಂದು ಹೇಳಿದ್ದಳು. ಹಾಗಾಗಿ, ಡಿಲೀಟ್ ಮಾಡಿದ್ದೇನೆ. ಆದರೂ ನನ್ನ ನಂಬರ್ ಅನ್ನು ಹುಡುಕಿಕೊಂಡು ನನಗೆ ಕಾಲ್ ಮಾಡ್ತಾರೆ. ʻನಿಮ್ಮ ಮಗನಿಗಿಂತಲೂ ನೀವೇ ಚೆನ್ನಾಗಿದ್ದೀರಿʼ ಎಂದು ಹೊಗಳುತ್ತಾರೆ. ನನಗೆ ಆಸಕ್ತಿ ಇಲ್ಲ, ಹಾಗಾಗಿ ಪ್ರಪೋಸ್ ಮಾಡಿದವರನ್ನಲ್ಲಾ ಬ್ಲಾಕ್ ಮಾಡಿದ್ದೇನೆ" ಎಂದು ಡಾಗ್ ಸತೀಶ್ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನನಗೆ ಊಟ ಸಿಗಲಿಲ್ಲ!
"ನಾನು ತುಂಬಾ ಚೆನ್ನಾಗಿ ಊಟ ಮಾಡಿಕೊಂಡಿದ್ದವನು. ಆದರೆ ನನಗೆ ಬಿಗ್ ಬಾಸ್ ಮನೆಯಲ್ಲಿ ಅಲ್ಲಿದ್ದ ಸ್ಪರ್ಧಿಗಳ ಪ್ರಾಬ್ಲಂನಿಂದ ಊಟ ಸಾಕಾಗ್ತಿರಲಿಲ್ಲ. ಸುಸ್ತು ಆಗ್ತಿತ್ತು. ರಾತ್ರಿಯೆಲ್ಲಾ ಅಲ್ಲಿದ್ದವರು ಮಾತಾಡಿಕೊಂಡು ಇರುತ್ತಿದ್ದರು. ಅದರಿಂದ ನನಗೆ ನಿದ್ದೆ ಸಾಕಾಗ್ತಿರಲಿಲ್ಲ. ಅಲ್ಲಿನ ಗಲಾಟೆಗಳು ಕೂಡ ನನಗೆ ಇರಿಟೇಷನ್ ಮಾಡ್ತಿದ್ದವು. ನನಗೆ ಇಷ್ಟೊಂದು ಪ್ರಪೋಸಲ್ ಬರ್ತಿದ್ರು, ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ. ನನಗೆ ಸದ್ಯ ನನ್ನ ಮಗನೇ ಎಲ್ಲಾ. ಅವನ ಕಾಳಜಿಯೇ ನನಗೆ ಮುಖ್ಯ. ಬೇರೆ ಯಾವುದು ಬೇಡ" ಎಂದು ಡಾಗ್ ಸತೀಶ್ ಅವರು ಹೇಳಿದ್ದಾರೆ.