ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶಕ್ಕೆ ಶೇಖ್ ಹಸೀನಾರನ್ನು ಹಸ್ತಾಂತರ ಮಾಡಲಾಗುತ್ತಾ? ಭಾರತದ ಎದುರು ಇವೆಯೇ ಹಲವು ಸವಾಲುಗಳು?

ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಢಾಕಾ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದ ಬಳಿಕ ಇದೀಗ ಭಾರತ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡುವ ಸವಾಲನ್ನು ಎದುರಿಸುತ್ತಿದೆ. ಬಾಂಗ್ಲಾದೇಶದಿಂದ ಶೇಖ್ ಹಸೀನಾ ಪರಾರಿಯಾಗಲು ಸಹಕರಿಸಿರುವ ಭಾರತ ಮತ್ತೆ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವುದೇ ಎನ್ನುವುದನ್ನು ಕಾದು ನೋಡಬೇಕು.

ಶೇಖ್ ಹಸೀನಾ ಅವರನ್ನು ಬಾಂಗ್ಲಾಕ್ಕೆ ಹಸ್ತಾಂತರ ಮಾಡುವುದೇ ಭಾರತ?

ಡಾ. ಮೊಹಮ್ಮದ್ ಯೂನಸ್ ಮತ್ತು ಶೇಖ್ ಹಸೀನಾ (ಸಂಗ್ರಹ ಚಿತ್ರ) -

ನವದೆಹಲಿ: ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ಉಂಟಾದ ದಂಗೆಯ ಬಳಿಕ ಭಾರತಕ್ಕೆ ಬಂದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ (Former PM, Bangladesh) ಶೇಖ್ ಹಸೀನಾ (Sheikh Hasina) ಅವರಿಗೆ ಇದೀಗ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (International Crime Tribunal )ಯು ಮರಣದಂಡನೆ ಶಿಕ್ಷೆಯನ್ನು (death penalty) ಪ್ರಕಟಿಸಿದೆ. ಇದರಿಂದ ಹಸೀನಾ ಅವರನ್ನು ಒಪ್ಪಿಸಲು ಬಾಂಗ್ಲಾದೇಶ ಭಾರತಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಇದನ್ನು ಭಾರತ ಸ್ವೀಕರಿಸಬೇಕೋ ಅಥವಾ ಬೇಡವೋ ಎನ್ನುವ ಸವಾಲು ಎದುರಾಗಿದೆ.

ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಶೇಖ್ ಹಸೀನಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ ಅನಂತರ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಸರ್ಕಾರವು ಅವರನ್ನು ಗಡಿಪಾರು ಮಾಡಲು ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ. ಈ ಹಿಂದೆಯೇ ಅದು ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡಲು ನವದೆಹಲಿಗೆ ಮನವಿ ಮಾಡಿತ್ತು. ಆದರೆ ಭಾರತ ಸರ್ಕಾರ ಇದನ್ನು ಸ್ವೀಕರಿಸಿರಲಿಲ್ಲ.

ಇದನ್ನೂ ಓದಿ: Sheikh Hasina: ಮರಣದಂಡನೆ ತೀರ್ಪಿನ ಬಗ್ಗೆ ಶೇಖ್‌ ಹಸೀನಾ ಫಸ್ಟ್‌ ರಿಯಾಕ್ಷನ್‌ ಏನು?

ಕಳೆದ ಏಪ್ರಿಲ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾರತವು ತಮ್ಮ ಸರ್ಕಾರವನ್ನು ಟೀಕಿಸುವುದನ್ನು ನಿಲ್ಲಿಸುವಂತೆ ಡಾ. ಮೊಹಮ್ಮದ್ ಯೂನಸ್ ಅವರು ಸೂಚಿಸಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿದ್ದುಕೊಂಡು ಬಾಂಗ್ಲಾದೇಶ ಸರ್ಕಾರವನ್ನು ಟೀಕಿಸುವುದನ್ನು ನಿಲ್ಲಿಸಿದರೆ ಢಾಕಾವು ಅವರನ್ನು ಭಾರತದಿಂದ ಗಡಿಪಾರು ಮಾಡುವಂತೆ ಒತ್ತಾಯಿಸದಿರಬಹುದು ಎನ್ನುತ್ತಾರೆ ವಿಶ್ಲೇಷಕರು.

ಢಾಕಾ ನ್ಯಾಯಾಲಯವು ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವುದರಿಂದ ಬಾಂಗ್ಲಾದೇಶ ಅವರನ್ನು ವಾಪಸ್ ಕಳುಹಿಸಲು ಭಾರತದ ಮೇಲೆ ಒತ್ತಡ ಹೆರುವ ಸಾಧ್ಯತೆ ಇದೆ. ಇದನ್ನು ಎದುರಿಸಲು ಭಾರತದ ಮುಂದಿರುವ ಸಾಧ್ಯತೆಗಳು ಇಂತಿವೆ.

2013ರಲ್ಲಿ ಅಂದರೆ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿದ್ದಾಗ ಭಾರತ-ಬಾಂಗ್ಲಾದೇಶ ನಡುವೆ ಹಸ್ತಾಂತರ ಒಪ್ಪಂದ ನಡೆದಿದೆ. ಇದರ ಪ್ರಕಾರ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದರೆ ನವದೆಹಲಿಯು ಹಸ್ತಾಂತರ ವಿನಂತಿಯನ್ನು ತಿರಸ್ಕರಿಸಬಹುದು ಎಂಬುದು ಇದೆ. ರಾಜಕೀಯ ಪ್ರೇರಿತವಲ್ಲದ ಅಪರಾಧಗಳ ಪಟ್ಟಿಯನ್ನು ಇದು ಒಳಗೊಂಡಿದ್ದು, ಇದರಲ್ಲಿ ಕೊಲೆ, ಅಪಹರಣ, ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದನೆಗಳು ಸೇರಿವೆ.

ಶೇಖ್ ಹಸೀನಾ ವಿರುದ್ಧ ಕೊಲೆ ಮತ್ತು ನರಮೇಧದ ಅಪರಾಧದ ಆರೋಪ ಇರುವುದರಿಂದ ಈ ಆಧಾರದಲ್ಲಿ ಅವರನ್ನು ಭಾರತದಿಂದ ಗಡಿಪಾರು ಮಾಡುವ ಸಾಧ್ಯತೆ ಇದೆ. ಆದರೆ ಇದಕ್ಕಾಗಿ 2016ರಲ್ಲಿ ಒಪ್ಪಂದಕ್ಕೆ ಸೇರಿಸಲಾದ ಷರತ್ತಿನ ಪ್ರಕಾರ ಪುರಾವೆ ನೀಡುವುದು ಕಡ್ಡಾಯವಲ್ಲ. ನ್ಯಾಯಾಲಯ ಹೊರಡಿಸಿದ ಬಂಧನ ವಾರಂಟ್ ಸಾಕಾಗುತ್ತದೆ.

ಒಂದು ವೇಳೆ ಶೇಖ್ ಹಸೀನಾ ವಿರುದ್ಧ ಜಿಲ್ಲಾ ನ್ಯಾಯಾಲಯವು ಬಂಧನದ ವಾರಂಟ್ ಹೊರಡಿಸಿದರೆ ಮತ್ತು ಢಾಕಾ ಅವರನ್ನು ಹಸ್ತಾಂತರಿಸುವಂತೆ ಕೇಳಿದರೆ ಭಾರತ ಒಪ್ಪಂದದ ಕೆಲವು ಇತರ ನಿಬಂಧನೆಗಳ ಅಡಿಯಲ್ಲಿ ಇದನ್ನು ತಿರಸ್ಕರಿಸಬಹುದು. ಯಾಕೆಂದರೆ ಹಸ್ತಾಂತರಿಸಬೇಕಾದ ಪ್ರಕರಣವು ಭಾರತದಲ್ಲೂ ದಾಖಲಾಗಿರಬೇಕಾಗುತ್ತದೆ.

ಇದನ್ನೂ ಓದಿ: IND vs SA: ವಾಷಿಂಗ್ಟನ್‌ ಸುಂದರ್‌ ಬಗ್ಗೆ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ದಿನೇಶ್‌ ಕಾರ್ತಿಕ್!

ಹಸೀನಾ ಹಸ್ತಾಂತರವನ್ನು ಭಾರತ ನಿರಾಕರಿಸುವುದೇ?

ಹಸೀನಾ ವಿರುದ್ದದ ಆರೋಪಗಳು ಸಾಮಾಜಿಕ ಅಪರಾಧಗಳಿಗೆ ಸಂಬಂಧಿಸಿದ್ದರೆ ಮತ್ತು ಕ್ರಿಮಿನಲ್ ನ್ಯಾಯಶಾಸ್ತ್ರದ ಅಡಿಯಲ್ಲಿ ಬರದಿದ್ದರೆ ನವದೆಹಲಿಯು ಹಸ್ತಾಂತರ ವಿನಂತಿಗಳನ್ನು ತಿರಸ್ಕರಿಸಬಹುದಾಗಿದೆ. ಅಲ್ಲದೇ ಅಲ್ಲಿ ಶೇಖ್ ಹಸೀನಾ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದಾದ ಸಾಧ್ಯತೆ ಇದ್ದರೂ ಹಸ್ತಾಂತರಕ್ಕೆ ನಿರಾಕರಿಸಬಹುದು ಎನ್ನುತ್ತಾರೆ ವಿಶ್ಲೇಷಕರು.