ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನಾನು ಮನೆಗೋದ್ರು ಪರವಾಗಿಲ್ಲ, ರಕ್ಷಿತಾಗೆ ಹೊಡೀತಿನಿʼ; ರೊಚ್ಚಿಗೆದ್ದ ʻಬಿಗ್‌ ಬಾಸ್‌ʼ ಸ್ಪರ್ಧಿ!

ʻಬಿಗ್‌ ಬಾಸ್‌ʼ ಮನೆಯಲ್ಲಿ ಸಹ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ಜಾಹ್ನವಿ ಅವರು ರಕ್ಷಿತಾ ಶೆಟ್ಟಿ ಮೇಲೆ ರೊಚ್ಚಿಗೆದ್ದಿದ್ದಾರೆ. ಟಾಸ್ಕ್‌ ವೇಳೆ ರಕ್ಷಿತಾ ಪಟ್ಟು ಸಡಿಲಿಸದೆ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರೆ, "ನಾನು ಮ್ಯಾನ್ ಹ್ಯಾಂಡಲಿಂಗ್ (ಹಲ್ಲೆ) ಮಾಡಿ, ಮನೆಗೆ ಹೋಗ್ತೀನಿ" ಎಂದು ಜಾಹ್ನವಿ ಹೇಳಿದ್ದಾರೆ.

ರಕ್ಷಿತಾ ಶೆಟ್ಟಿ ಮೇಲೆ ಹಲ್ಲೆ ಮಾಡುವ ಮಾತನ್ನೇಳಿದ ʻಬಿಗ್ ಬಾಸ್‌ʼ ಸ್ಪರ್ಧಿ!

-

Avinash GR
Avinash GR Nov 13, 2025 7:09 PM

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಇರುವಷ್ಟು ದಿನ ಯಾರೂ ಕೂಡ ಸಹ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡುವಂತಿಲ್ಲ. ಒಂದುವೇಳೆ ಯಾರಾದರೂ ಆ ರೀತಿ ಕೈ ಎತ್ತಿದರೆ, ಅವರನ್ನು ತಕ್ಷಣವೇ ಎಲಿಮಿನೇಟ್ ಮಾಡೋದು ಫಿಕ್ಸ್.‌ ಸದ್ಯ ರಿಷಾ ಗೌಡ ಅವರು ಗಿಲ್ಲಿ ನಟ ಮೇಲೆ ಕೈ ಮಾಡಿ, ಈಗಾಗಲೇ ಕಿಚ್ಚ ಸುದೀಪ್‌ ಅವರಿಂದ ಶಿಕ್ಷೆ ಪಡೆದುಕೊಂಡಿದ್ದಾರೆ. ಈ ನಡುವೆ ಮತ್ತೋರ್ವ ಸ್ಪರ್ಧಿ ಕೂಡ "ನಾನು ಮ್ಯಾನ್ ಹ್ಯಾಂಡಲಿಂಗ್‌ ಮಾಡ್ತಿನಿ" ಎಂಬ ಮಾತುಗಳನ್ನಾಡಿದ್ದಾರೆ.

ರಕ್ಷಿತಾ ಮೇಲೆ ಹಲ್ಲೆ ಮಾಡ್ತಾರಂತೆ ಜಾಹ್ನವಿ

ʻಬಿಗ್‌ ಬಾಸ್‌ʼ ಮನೆಯಲ್ಲಿರುವ ಅತ್ಯಂತ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ ಮೇಲೆ ಒಂದಷ್ಟು ಮಂದಿಗೆ ಸಿಟ್ಟು ಇದೆ. ಅದರಲ್ಲೂ ಜಾಹ್ನವಿ (Jhanvi) ಅಂತು, "ನಾನು ಮ್ಯಾನ್ ಹ್ಯಾಂಡಲಿಂಗ್ ಮಾಡಿ, ಮನೆಗೆ ಹೋಗ್ತೀನಿ. ರಕ್ಷಿತಾ ಮೇಲೆ ನನಗೆ ಅಷ್ಟೊಂದು ಸಿಟ್ಟು ಬರುತ್ತಿದೆ" ಅಂತ ಜಾಹ್ನವಿ ಹೇಳಿದ್ದಾರೆ. ಅಷ್ಟಕ್ಕೂ ಜಾಹ್ನವಿ ಈ ಮಾತು ಹೇಳಿದ್ದೇಕೆ?

ಪಟ್ಟು ಸಡಿಲಿಸದ ರಕ್ಷಿತಾ ಶೆಟ್ಟಿ

ಅಶ್ವಿನಿ ಗೌಡ, ಜಾಹ್ನವಿ, ರಾಶಿಕಾ ಮುಂತಾದವರು ಇರುವಂತಹ ನಾಮಿನೇಟೆಡ್‌ ತಂಡದಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಕೂಡ ಇದ್ದರು. ಒಂದು ಟಾಸ್ಕ್‌ನಲ್ಲಿ ನಾಮಿನೇಟೆಡ್‌ ತಂಡದ ಒಬ್ಬರನ್ನ ಸೇಫ್‌ ತಂಡಕ್ಕ ಕಳುಹಿಸಿ, ಸೇಫ್‌ ತಂಡದಿಂದ ಒಬ್ಬರನ್ನು ನಾಮಿನೇಟೆಡ್‌ ತಂಡಕ್ಕೆ ಕರೆಸಿಕೊಳ್ಳುವ ಚಾನ್ಸ್‌ ಅಶ್ವಿನಿ ಗೌಡ ತಂಡಕ್ಕೆ ಲಭಿಸಿತ್ತು. ಎಲ್ಲರ ನಿರ್ಧಾರಕ್ಕೆ ವಿರೋಧವಾಗಿ ರಕ್ಷಿತಾ ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಗೆ ರಕ್ಷಿತಾ ಮಾತಿಗೆ ಎಲ್ಲರೂ ಬೆಲೆ ನೀಡಬೇಕಾಯಿತು. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು. ಅದರಲ್ಲೂ ಜಾಹ್ನವಿ ಅವರಂತೂ ರಕ್ಷಿತಾ ಕೆಂಡಾಮಂಡಲವಾದರು.

Bigg Boss Kannada 12: ನಾಮಿನೇಷ್​ನಿಂದ ಸೇಫ್‌ ಆಗಲು ರಾಶಿಕಾ ಪರದಾಟ; ರಕ್ಷಿತಾ ಜೊತೆ ಕಿತ್ತಾಟಕ್ಕೆ ನಿಂತ ಟೀಂ

ನಂತರ ಎರಡನೇ ಗೇಮ್‌ನಲ್ಲೂ ಅಶ್ವಿನಿ ಗೌಡ ಅವರ ತಂಡ ಗೆದ್ದಿದ್ದರಿಂದ, ಆಗಲೂ ಇಡೀ ತಂಡ ಒಬ್ಬರನ್ನು ಸೆಲೆಕ್ಟ್ ಮಾಡಿ, ಸೇಫ್‌ ತಂಡಕ್ಕೆ ಕಳಿಸಬೇಕಿತ್ತು ಮತ್ತು ಸೇಫ್‌ ತಂಡದಿಂದ ಒಬ್ಬರನ್ನು ನಾಮಿನೇಟೆಡ್‌ ತಂಡಕ್ಕೆ ಕರೆಸಿಕೊಳ್ಳಬೇಕಿತ್ತು. ಎಲ್ಲರೂ ಅಭಿಷೇಕ್‌ ಅವರನ್ನು ಸೇಫ್‌ ತಂಡದಿಂದ ಕರೆಸಿಕೊಳ್ಳುವ ನಿರ್ಧಾರ ಮಾಡಿದ್ದರು. ಆಗ ಜಾಹ್ನವಿ ರಕ್ಷಿತಾ ಮೇಲೆ ಕೋಪಗೊಂಡರು. "ಈಗೇನಾದರೂ ಅಭಿ ಬೇಡ ಅಂತ ರಕ್ಷಿತಾ ಶೆಟ್ಟಿ ನಮ್ಮ ನಿರ್ಧಾರವನ್ನು ಬದಲಾಯಿಸಿದರೆ, ನಾನು ಮ್ಯಾನ್ ಹ್ಯಾಂಡಲಿಂಗ್ (ಹಲ್ಲೆ) ಮಾಡಿ, ಮನೆಗೆ ಹೋಗ್ತೀನಿ. ಅಷ್ಟೊಂದಯ ಕೋಪ ನನಗೆ ಬರುತ್ತಿದೆ" ಎಂದು ಜಾಹ್ನವಿ ಹೇಳಿದ್ದಾರೆ.

ಸದ್ಯ ಈ ಮಾತು ಸಾಕಷ್ಟು ಸದ್ದು ಮಾಡುತ್ತಿದೆ. ಹಲ್ಲೆ ಮಾಡುವುದು ತಪ್ಪು ಎಂದು ಗೊತ್ತಿದ್ದರೂ ಜಾಹ್ನವಿ ಹೇಳಿದ್ದಾರೆ. ಇದರ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಜಾಹ್ನವಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು.