Bigg Boss Kannada 12: ಗಿಲ್ಲಿ ಲುಕ್ ಕಂಡು ಶಾಕ್ ಆದ್ರು ರಕ್ಷಿತಾ, ರಘು; ತಯಾರಿ ವೇಳೆಯಲ್ಲೂ ಕಾಮಿಡಿ ಕಿಕ್ ಕೊಟ್ಟ ಮಾತಿನ ಮಲ್ಲ!
Gilli Nata: ಬಿಗ್ ಬಾಸ್ ಸೀಸನ್ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಸ್ಪರ್ಧಿಗಳು ಕೂಡ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ಸ್ಪರ್ಧಿಗಳು ರೆಡಿ ಆಗುತ್ತಿರೋದು ಪ್ರಸಾರ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ (Finalist) ಹೊರಹೊಮ್ಮಿದ್ದಾರೆ. ಸ್ಪರ್ಧಿಗಳು ಕೂಡ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ಸ್ಪರ್ಧಿಗಳು ರೆಡಿ ಆಗುತ್ತಿರೋದು ಪ್ರಸಾರ ಆಗಿದೆ. ಆಗಲೂ ಗಿಲ್ಲಿ ತಮ್ಮ ಕಾಮಿಡಿ (Gilli Nata Comedy) ಮೂಲಕ ನೋಡುಗರಿಗೆ ಖುಷಿ ಕೊಟ್ಟಿದ್ದಾರೆ. ಗಿಲ್ಲಿ ಲುಕ್ (Gilli Nata Look) ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
ಗಿಲ್ಲಿ ಲುಕ್ ಮಾತ್ರ ಚಿಂದಿ!
ಗಿಲ್ಲಿಗೆ ಸಖತ್ ಆಗಿ ಹೇರ್ ಕಟ್ ಮಾಡಿಸಿ, ಮುಖಕ್ಕೆ ಮಸಾಜ್ ಮಾಡಿಸಲಾಗಿದೆ. ಎಲ್ಲ ಸ್ಪರ್ಧಿಗಳು ಸಖತ್ ರೆಡಿ ಆಗ್ತಿದ್ದಾರೆ. ಅದರಲ್ಲೂ ಗಿಲ್ಲಿ ಮುಖ ಆಗಲೇ ಬೆಳ್ಳಗಾಗೋಯ್ತು ಎಂದಿದ್ದಾರೆ. ರಕ್ಷಿತಾ ಕೂಡ ಗಿಲ್ಲಿ ಅಂತ ಗೊತ್ತೇ ಆಗಲ್ಲ ಅಷ್ಟು ಚೇಂಜಸ್ ಆಗಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಈ ಸ್ಪರ್ಧಿಗೆ ಹನುಮಂತ ಲಮಾಣಿ ಫುಲ್ ಸಪೋರ್ಟ್! ಮತ ಹಾಕುವಂತೆ ಮನವಿ ಮಾಡಿದ ಜವಾರಿ ಹುಡುಗ
ಇನ್ನು ರಘು ಕೂಡ ಗಿಲ್ಲಿಗೆ ಹ್ಯಾಂಡ್‌ಸಮ್ ಆಗಿ ಕಾಣ್ತಿದ್ದೀಯಾ ಎಂದಿದ್ದಾರೆ. ಕಾವ್ಯ ಅವರು ಮುಖಕ್ಕೆ ಮಾಸ್ಕ್ ಹಾಕಿಸಿಕೊಂಡಿದ್ದರು. ಅದಕ್ಕೆ ಗಿಲ್ಲಿ ಕೂಡ ಗಂಡಸರೂ ಅದನ್ನು ಹಾಕಿಸಿಕೊಳ್ಳಬಹುದಾ? ಅಂತ ಕೇಳಿದ್ದಾರೆ. ಈ ವೇಳೆ ರಕ್ಷಿತಾ ಮೆನು ಕೊಡಿ ನೋಡ್ತೀವಿ ಅಂದಿದ್ದಾರೆ. ಅದಕ್ಕೆ ಗಿಲ್ಲಿ ಇದೇನು ಮಿಲಿಟಿರಿ ಹೋಟೆಲ್ಲಾ? ಅಂತ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ.
Chindi aagide 🥶
— Feed My Ego (@badgag_235) January 16, 2026
Swalpa mass / Tapanguchi steps haakisbidro @ColorsKannada
🙏#BBK12 #Gilli #GilliNata pic.twitter.com/v6XFfJ4gGJ
ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಇಂದು (ಜನವರಿ 17) ಫಿನಾಲೆ ನಡೆಯಬೇಕಿತ್ತು. ಆದರೆ, ಸುದೀಪ್ ಅವರು ಗೈರಾಗಿದ್ದಾರೆ. ಸಿಸಿಎಲ್ ಕಾರಣದಿಂದ ಅವರು ಇಂದು ಆಗಮಿಸೋದು ಅನುಮಾನ ಎನ್ನಲಾಗುತ್ತಿದೆ. ಇಂದು ಪ್ರೀ-ಫಿನಾಲೆ ನಡೆಯಲಿದೆ. ಅದು ಯಾವ ರೀತಿ ಇರುತ್ತದೆ ಎಂಬ ಕುತೂಹಲ ಮೂಡಿದೆ.
ವರದಿಯ ಪ್ರಕಾರ ಇಂದು ಸಾಮಾನ್ಯ ಎಪಿಸೋಡ್ ಪ್ರಸಾರ ಕಾಣಲಿದೆಯಂತೆ. ವಿಶೇಷ ಡ್ಯಾನ್ಸ್ಗಳು ಇಂದು ಪ್ರಸಾರ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಿಲ್ಲಿ ನಟ ಕ್ರೇಜ್!
ಅಂದಹಾಗೆ, ಕಳೆದ ಸೀಸನ್‌ನಲ್ಲಿ ಹನುಮಂತ ಲಮಾಣಿ ಅವರು ವಿನ್ನರ್ ಆಗಿದ್ದರು. ಅವರು ದಾಖಲೆಯ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ದಾಖಲೆಯಾಗಿದೆ.
ಇದನ್ನೂ ಓದಿ: Bigg Boss Kannada 12: ಇಂದು 'Pre Finaleʼ, ನಾಳೆ ಗ್ರ್ಯಾಂಡ್ ಫಿನಾಲೆ; ಸುದೀಪ್ ಅಭಿಮಾನಿಗಳ ಬೇಸರಕ್ಕೆ ಕಾರಣ ಏನು?
ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಅವರು ಸುಮಾರು 2.53 ಕೋಟಿ ಮತಗಳನ್ನು ಪಡೆದಿದ್ದರು. ಸದ್ಯದ ಕ್ರೇಜ್ ನೋಡಿದರೆ, ಹನುಮಂತು ದಾಖಲೆಯನ್ನು ಗಿಲ್ಲಿ ನಟ ಬ್ರೇಕ್ ಮಾಡುವ ಸಾಧ್ಯತೆಗಳಿವೆ. ಕೊನೇ ಕ್ಷಣದಲ್ಲಿ ಗೆಲುವು ಯಾರಿಗೆ ಸಿಗಬಹುದು ಎಂಬ ಕುತೂಹಲವಂತೂ ಇದೆ.