ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಘಾರ್ಗಾ' ಚಿತ್ರಕ್ಕಾಗಿ ರಿಮಿಕ್ಸ್‌ ಆಯ್ತು 'ಬಂಗಾರಿ ಯಾರೇ ನೀ ಬುಲ್ ಬುಲ್' ಸಾಂಗ್; ದರ್ಶನ್‌ ಅಭಿಮಾನಿಗಳಿಂದಲೇ ರಿಲೀಸ್!‌

Gharga Movie: 'ಗಜ' ಚಿತ್ರದ ಜನಪ್ರಿಯ 'ಬಂಗಾರಿ ಯಾರೇ ನೀ ಬುಲ್ ಬುಲ್' ಹಾಡನ್ನು ಅಶ್ವಿನಿ ರಾಮ್‌ಪ್ರಸಾದ್ ನಿರ್ಮಾಣದ 'ಘಾರ್ಗಾ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ದರ್ಶನ್ ಅಭಿಮಾನಿಗಳು ಇದನ್ನು ಬಿಡುಗಡೆ ಮಾಡಿದ್ದಾರೆ. ಅರುಣ್ ರಾಮ್‌ಪ್ರಸಾದ್ ನಾಯಕನಾಗಿ ನಟಿಸಿರುವ ಈ ಹಾರರ್-ಅಡ್ವೆಂಚರಸ್ ಸಿನಿಮಾ ಫೆಬ್ರವರಿ 6 ರಂದು ತೆರೆಗೆ ಬರಲಿದ್ದು, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

'ಘಾರ್ಗಾ' ಚಿತ್ರದಲ್ಲಿ 'ಬಂಗಾರಿ ಯಾರೇ ನೀ ಬುಲ್ ಬುಲ್' ರೀಮಿಕ್ಸ್ ಸಾಂಗ್

-

Avinash GR
Avinash GR Jan 30, 2026 5:31 PM

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ಅಭಿನಯದ ʻಗಜʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಗೆಲುವನ್ನು ಪಡೆದುಕೊಂಡಿತ್ತು. ಈ ಸಿನಿಮಾದ 'ಬಂಗಾರಿ ಯಾರೇ ನೀ ಬುಲ್ ಬುಲ್' ಹಾಡಂತೂ ಪಡ್ಡೆ ಹುಡುಗರ ಬಾಯಲ್ಲಿ ನಲಿದಾಡಿತ್ತು. ಇದೀಗ ಈ ಹಾಡನ್ನು ಪುನಃ ಬಳಕೆ ಮಾಡಿಕೊಳ್ಳಲಾಗಿದೆ. ಫೆ.6ರಂದು ರಿಲೀಸಾಗುತ್ತಿರುವ ʻಘಾರ್ಗʼ ಚಿತ್ರದಲ್ಲಿ ವಿಶೇಷವಾಗಿ ದರ್ಶನ್ ಅಭಿಮಾನಿಗಳಿಗಾಗಿಯೇ ಬಂಗಾರಿ ಯಾರೇ ನೀ ಬುಲ್ ಬುಲ್ ಹಾಡನ್ನು ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ. ಇದು ದರ್ಶನ್ ಫ್ಯಾನ್ಸ್ ಗೆ ಒಂದು ಸರ್ ಪ್ರೈಸ್ ಗಿಪ್ಟ್ ಆಗಿದೆ.

ಈಚೆಗೆ ಈ ಹಾಡನ್ನು 50ಕ್ಕೂ ಹೆಚ್ಚು ದರ್ಶನ್ ಅಭಿಮಾನಿಗಳು ರಿಲೀಸ್‌ ಮಾಡಿದ್ದಾರೆ. ʻಫಾರ್ಗಾʼ ಒಂದು ಊರಿನ ಹೆಸರು. ಈ ಚಿತ್ರಕ್ಕೆ ʻದಿ ಲ್ಯಾಂಡ್ ಆಫ್ ಶಾಡೋʼ ಎಂಬ ಅಡಿಬರಹವಿದೆ. ಅರುಣ್ ರಾಮ್‌ಪ್ರಸಾದ್‌ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಘಾರ್ಗಾ ಒಂದು ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ ಎಂ. ಶಶಿಧರ್.

Kannada New Movie: `ಘಾರ್ಗಾ' ಚಿತ್ರದ ಟ್ರೈಲರ್ ರಿಲೀಸ್‌; ಸಿನಿಪ್ರಿಯರು ಫುಲ್‌ ಖುಷ್‌

ಈ ಹಾಡು ದರ್ಶನ್‌ಗೆ ಡೆಡಿಕೇಟ್‌

ಘಾರ್ಗ ಸಿನಿಮಾವನ್ನು ʻಜೋಗಿʼ ಖ್ಯಾತಿಯ ಅಶ್ವಿನಿ ರಾಮ್‌ಪ್ರಸಾದ್ ನಿರ್ಮಾಣ ಮಾಡಿದ್ದಾರೆ. "ಗಜ ಚಿತ್ರದ ಹಾಡುಗಳು ನಮ್ಮ ಅಶ್ವಿನಿ ಆಡಿಯೋದಲ್ಲೇ ರಿಲೀಸ್‌ ಆಗಿತ್ತು‌. ಆಗ ಈ ಹಾಡು ಮಿಲಿಯನ್‌ಗಟ್ಟಲೇ ಪ್ರೇಕ್ಷಕರು ನೋಡಿದ್ದರು. ಈಗಲೂ ಸಹ ರಿಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಾಗಿದೆ. ಈ ಹಾಡನ್ನು ದರ್ಶನ್ ಅವರಿಗೆ ಡೆಡಿಕೇಟ್ ಮಾಡುತ್ತಿದ್ದೇವೆ. ಚಿತ್ರದ ರಿಲೀಸ್ ದಿನ ಈ ಹಾಡಿನ ಯಶಸ್ಸನ್ನು ಸೆಲಬ್ರೇಟ್ ಮಾಡುತ್ತೇವೆ. ಈಗಾಗಲೇ ಎಲ್ಲಾ ಕಡೆ ಪ್ರೊಮೋಷನ್ ಕಾರ್ಯ ನಡೆಯುತ್ತಿದೆ. ಚಿತ್ರವನ್ನು ಎಷ್ಟು ಬೇಕೋ ಅಷ್ಟು ಸೆಂಟರ್‌ಗಳಲ್ಲಿ ಮಾತ್ರ ರಿಲೀಸ್ ಮಾಡುತ್ತಿದ್ದೇವೆ. ಎನ್. ಕುಮಾರ್ ಅವರು ಉತ್ತಮ ಚಿತ್ರಮಂದಿರಗಳ ಸೆಟಪ್ ಮಾಡಿಕೊಟ್ಟಿದ್ದಾರೆ. ಇದು ಮಾಮೂಲಿ ಸಿನಿಮಾ ಅಲ್ಲ, ವಿಭಿನ್ನ ರೀತಿಯ ಮೇಕಿಂಗ್ ನಿರೂಪಣೆ ಕಾಣಬಹುದು" ಎಂದು ರಾಮ್‌ಪ್ರಸಾದ್‌ ಹೇಳಿದ್ದಾರೆ.

"ಜನ‌ ಮೆಚ್ಚುವಂಥ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ 3 ಗೆಟಪ್‌ಗಳಿವೆ. ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ" ಎಂದು ನಿರ್ದೇಶಕ ಶಶಿಧರ್ ಹೇಳಿದರೆ, "ನನ್ನ ಪಾತ್ರ ತುಂಬಾ ವಿಭಿನ್ನವಾಗಿದ್ದು, ರೈಟರ್, ಅಂಡರ್‌ವರ್ಲ್ಡ್‌ ಹೀಗೆ ಹಲವಾರು ಶೇಡ್ಸ್ ಇದೆ. ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್" ಅಂತಾರೆ ನಟ ಅರುಣ್‌ ರಾಮ್‌ಪ್ರಸಾದ್‌. ಈ ಚಿತ್ರವನ್ನು ಎನ್. ಕುಮಾರ್ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.