ವರ್ಲ್ಡ್ ಪಿಕಲ್ ಬಾಲ್ ಲೀಗ್: ಚಾಂಪಿಯನ್ ಆಟವನ್ನ ಮುಂದುವರೆಸಿದ ಡೈರೆಕ್ಟರ್ ಅಟ್ಲೀ ಟೀಮ್ 'ಬೆಂಗಳೂರು ಜವಾನ್ಸ್'
World Pickleball League 2: ಬೆಂಗಳೂರು ತಂಡವಾಗಿರುವ 'ಬೆಂಗಳೂರು ಜವಾನ್ಸ್' ಎರಡನೇ ಸೀಸನ್‌ನಲ್ಲಿ ಪುಣೆ ಯುನೈಟೆಡ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ನಿರ್ದೇಶಕ ಅಟ್ಲೀ ಮತ್ತು ಪ್ರಿಯಾ ಅಟ್ಲೀ ಮಾಲೀಕತ್ವದ ಈ ಚಾಂಪಿಯನ್ ತಂಡ, ತನ್ನ ಬಲಿಷ್ಠ ಪ್ರದರ್ಶನವನ್ನು ಮುಂದುವರೆಸಿದೆ.
-
ವಿಶ್ವ ಪಿಕಲ್ ಬಾಲ್ ಲೀಗ್ ನ ಎರಡನೇ ಸೀಸನ್ ಪ್ರಾರಂಭವಾಗಿದೆ. ಈಚೆಗೆ ಮ್ಯಾಚ್‌ನಲ್ಲಿ 'ಬೆಂಗಳೂರು ಜವಾನ್ಸ್' ತಂಡವು 'ಪುಣೆ ಯುನೈಟೆಡ್' ತಂಡದ ವಿರುದ್ಧ 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ನಟಿ
ಪ್ರಿಯಾ ಅಟ್ಲೀ ಮತ್ತು ಜವಾನ್, ಬಿಗಿಲ್, ಮೆರ್ಸಲ್ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಅಟ್ಲೀ ಮಾಲೀಕತ್ವದ ಬೆಂಗಳೂರು ಜವಾನ್ಸ್ ತಂಡವು ವಿಶ್ವ ಪಿಕಲ್ ಬಾಲ್ ಲೀಗ್‌ನ ಮೊದಲ ಸೀಸಸ್‌ನ ಚಾಂಪಿಯನ್ ತಂಡವಾಗಿದ್ದು, ಮತ್ತೆ ತನ್ನ ಚಾಂಪಿಯನ್ ಆಟವನ್ನು ಈ ಮ್ಯಾಚ್ ಗೆಲ್ಲುವುದರ ಮೂಲಕ ಮುಂದುವರೆಸಿದೆ.
ಗೆಲುವಿನ ಸಂದೇಶ ನೀಡಿದ 'ಬೆಂಗಳೂರು ಜವಾನ್ಸ್'
ಆತ್ಮ ವಿಶ್ವಾಸ ಮತ್ತು ಛಲದೊಂದಿದೆ ಅದ್ಭುತ ಪ್ರದರ್ಶನ ನೀಡಿರುವ 'ಬೆಂಗಳೂರು ಜವಾನ್ಸ್' ತಂಡವು ಲೀಗ್‌ನ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದು ಎಂಬುದನ್ನು ಪುನಃ ಸಾಬೀತುಪಡಿಸಿದೆ. ಇನ್ನು ಸ್ಟೇಡಿಯಂನಲ್ಲಿ ನೆರೆದಿದ್ದ ಅಟ್ಲೀ ಅವರ ಅಭಿಮಾನಿಗಳ ಹರ್ಷೋದ್ಗಾರ ಮತ್ತು ಬೆಂಬಲ ಪಂದ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡಿತು. ಇಡೀ ಕ್ರೀಡಾಂಗಣದಲ್ಲಿ 'ಜವಾನ್ಸ್' ಮಯವಾಗಿತ್ತು.ಮೊದಲ ಸೀಸನ್ ಗೆದ್ದ ಹಾಗೇ ಎರಡನೇಯ ಸೀಸನ್ ಗೆದ್ದು, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಮ್ಮ ತಂಡ ಸನ್ನದವಾಗಿದೆ ಎನ್ನುವ ಬಲವಾದ ಸಂದೇಶವನ್ನು 'ಬೆಂಗಳೂರು ಜವಾನ್ಸ್' ನೀಡಿದೆ.
ಶಾರುಖ್ ಖಾನ್ ಅವರು ಐಪಿಎಲ್‌ನಲ್ಲಿ 'ಕೋಲ್ಕತ್ತಾ ನೈಟ್ ರೈಡರ್ಸ್' (KKR) ತಂಡವನ್ನು ಮುನ್ನಡೆಸುವ ರೀತಿಯೇ ತಮಗೂ ಕ್ರೀಡಾ ತಂಡವೊಂದರ ಮಾಲೀಕರಾಗಲು ಸ್ಫೂರ್ತಿ ಎಂದು ಹೇಳಿಕೊಂದ್ದ ಅಟ್ಲಿ, ತಮ್ಮ ಪತ್ನಿ ಪ್ರಿಯಾ ಅವರ ಜತೆಗೂಡಿ 'ಬೆಂಗಳೂರು ಜವಾನ್ಸ್' (Bengaluru Jawans) ತಂಡವನ್ನು ಖರೀದಿಸಿದ್ದರು. ತಮ್ಮ ಬ್ಲಾಕ್‌ಬಸ್ಟರ್ ಸಿನಿಮಾ 'ಜವಾನ್' ಮತ್ತು ಬೆಂಗಳೂರು ನಗರದ ಮೇಲಿನ ಪ್ರೀತಿಯನ್ನು ಸೇರಿಸಿ ಈ ಹೆಸರನ್ನು ಅವರು ಇಟ್ಟಿದ್ದಾರೆ. ಕ್ರಿಕೆಟ್‌ನಂತೆ ಪಿಕಲ್ ಬಾಲ್ ಕ್ರೀಡೆಗೂ ಭಾರತದಲ್ಲಿ ಉತ್ತೇಜನ ನೀಡುವುದು ನಿರ್ದೇಶಕ ಅಟ್ಲೀ ಅವರ ಉದ್ದೇಶವಾಗಿದೆ.
ಸದ್ಯ ಅಟ್ಲೀ ಅವರು ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮೃಣಾಲ್ ಠಾಕೂರ್ ಮತ್ತು ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್ ಮತ್ತು ಆಕ್ಷನ್ ದೃಶ್ಯಗಳು ಇದರಲ್ಲಿವೆಯಂತೆ. ಸುಮಾರು 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದೆ.