Poonam Pandey: ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ ಪಾಂಡೆ
ಭಾರತ ಚಿತ್ರರಂಗದ ಸಕತ್ ಹಾಟ್ ತಾರೆ ಪೂನಂ ಪಾಂಡೆ 2025ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದು, ಮಹಾಕುಂಭ ಮೇಳಕ್ಕೆ ಹೋಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಫೊಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಲಖನೌ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮಹಾಕುಂಭ ಮೇಳ ನಡೆಯುತ್ತಿದೆ. ನಾಗ ಸಾಧುಗಳು ಪವಿತ್ರ ಸ್ನಾನ ಮಾಡುವ ಮೂಲಕ ಮಹಾಕುಂಭ ಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದರು. ಇದಾದ ಮೇಲೆ ಕೋಟ್ಯಂತರ ಜನರು ತ್ರಿವೇಣಿ ಸಂಗಮಕ್ಕೆ ತೆರಳಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.
ಹಿಂದೂ ಧಾರ್ಮಿಕರ ಅತೀ ದೊಡ್ಡ ಉತ್ಸಗಳಲ್ಲಿ ಒಂದು ಎಂಬ ಖ್ಯಾತಿ ಗಳಿಸಿರುವ ಈ ಸಮ್ಮೇಳನದಲ್ಲಿ 100 ಕೋಟಿ ವಿಶ್ವದ ಭಕ್ತರು ಭಾಗವಹಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಒಂದು ಬೆಂಕಿ ಅನಾಹುತ ಮತ್ತು ಅಲಹಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಭೀಕರ ಕಾಲ್ತುಳಿತ ಹೊರತುಪಡಿಸಿದರೆ ಕುಂಭಮೇಳ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ.
ಭಾರತದ ಎಲ್ಲ ಪ್ರದೇಶಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ವಿದೇಶಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಪಡೆದು ಪುನೀತರಾಗಲು ಹರಿದುಬರುತ್ತಿದ್ದಾರೆ. ಸರಕಾರ ಮತ್ತು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವವರು, ಧಾರ್ಮಿಕ ಮುಖಂಡರು, ಜನಸಾಮಾನ್ಯರಿಗೆ ಸುಲಭವಾಗಿ ಸಿಗದ ಸಿನೆಮಾ ತಾರೆಯರು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಪುನೀತ ಭಾವನೆ ಹೊಂದಿ ವಾಪಸ್ ಹೋಗುತ್ತಿದ್ದಾರೆ.
ಇದೀಗ ಭಾರತ ಚಿತ್ರರಂಗದ ಕಾಂಟ್ರವರ್ಸಿ ತಾರೆ ಪೂನಂ ಪಾಂಡೆ (Poonam Pandey) ಮಹಾ ಕುಂಭಮೇಳ( Maha Kumbh Mela) ದಲ್ಲಿ ಭಾಗವಹಿಸಿದ್ದು, ಪುಣ್ಯ ಸ್ನಾನ ( amrit snaan) ಮಾಡಿದ್ದಾರೆ. ಗಂಗಾಸ್ನಾನ ತುಂಗಾಪಾನ ಎಂಬ ಮಾತಿನಂತೆ ಭಾರತೀಯರಲ್ಲಿ ಗಂಗೆಯ ಬಗ್ಗೆ ಭಾರೀ ಪವಿತ್ರ ಭಾವನೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಗಂಗಾಯಾತ್ರೆ ಮಾಡಿ ಗಂಗೆಯಲ್ಲಿ ಸ್ನಾನ ಮಾಡಿ ಮಾಡಿದ ಪಾಪಗಳನ್ನೆಲ್ಲಾ ಪರಿಹಾರ ಮಾಡಬೇಕು ಎಂಬುದು ಬಹುತೇಕ ಹಿಂದೂ ಸನಾತನ ಧರ್ಮದ ಜನರ ನಂಬಿಕೆ. ಹೀಗಾಗಿ ಬಹುತೇಕರು ಸಾಯುವ ಮೊದಲೊಮ್ಮೆ ಗಂಗೆಗೆ ಭೇಟಿ ನೀಡಲು ಬಯಸುತ್ತಾರೆ. ಗಂಗೆ ಸತ್ತವರಿಗೆ ಮುಕ್ತಿ ನೀಡುತ್ತಾಳೆ. ಬದುಕಿದವರಿಗೆ ಪಾಪ ವಿಮೋಚನೆ ಮಾಡುತ್ತಾಳೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಅದೇ ರೀತಿ ಮಾಜಿ ಪೋರ್ನ್ ಸ್ಟಾರ್ ಬಾಲಿವುಡ್ ನಟಿ ಪೂನಂ ಪಾಂಡೆ ಗಂಗೆಗೆ ಭೇಟಿ ನೀಡಿದ್ದು, ಅಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಜ. ರಂದು ಪ್ರಯಾಗ್ ರಾಜ್ ಗೆ ನಟಿ ಪೂನಂ ಪಾಂಡೆ ಭೇಟಿ ನೀಡಿದ್ದು, ಮೌನಿ ಅಮವಾಸ್ಯೆಯಂದು ಮಹಾಕುಂಭಕ್ಕೆ ಆಗಮಿಸಿ ಅಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸ್ಕೂಟಿ ಮೂಲಕ ಪೂನಂ ಪಾಂಡೆ ಸಂಗಮ್ ಬೀಚ್ ತಲುಪಿದ್ದು, ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕಾಲ್ತುಳಿತ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನು ಇನ್ಸ್ಟಾಗ್ರಾಮ್ ಪೂನಂ ಪುಣ್ಯ ಸ್ನಾನ ಮಾಡಿದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಗಂಗಾ, ಯಮುನಾ ಮತ್ತು ಸರಸ್ವತಿ ಈ ಮಹಾ ನದಿಗಳ ಸಂಗಮ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ದೇವರಿಗೆ ನಮಸ್ಕರಿಸಿದ್ದಾರೆ.
ಈ ಸುದ್ದಿಯನ್ನು ಓದಿ: Maha Kumbh 2025: ತ್ರಿವೇಣಿ ಸಂಗಮದಲ್ಲಿ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಪುಣ್ಯ ಸ್ನಾನ
ಇನ್ನು ನಿನ್ನೆ ಪ್ರಯಾಗ್ ರಾಜ್ ನಲ್ಲಿ ಏಕಕಾಲಕ್ಕೆ ಮೂರು ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನದಲ್ಲಿ ಮಿಂದೇದಿದ್ದು, ತಾತ್ಕಾಲಿಕ ಸೇತುವೆ ಬಂದ್ ಮಾಡಿದ್ದ ಕಾರಣ ಕೆಲವರು ಸಂಗಮದ ಸನಿಹದ ಬ್ಯಾರಿಕೇಡ್ಗಳಲ್ಲಿ ಸಿಲುಕಿದರು. ತ್ರಿವೇಣಿ ಸಂಗಮದಲ್ಲಿ ಪ್ರತ್ಯೇಕ ಪ್ರವೇಶವಿದ್ದು, ನಿರ್ಗಮನ ಇರಲಿಲ್ಲ. ಹೀಗಾಗಿ ಭಕ್ತರು ಬಂದ ದಾರಿಯಲ್ಲೇ ಹಿಂದಿರುಗುವ ಅನಿವಾರ್ಯತೆಯಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿದೆ.
ಹಾಗೇ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನ ಮಹಾ ಕುಂಭಮೇಳದಲ್ಲಿ ನಿನ್ನೆ ದುರಂತ ಸಂಭವಿಸಿದ್ದು, ಮೂವತ್ತು ಜನರು ಸಾವನ್ನಪ್ಪಿದ್ದಾರೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವು-ನೋವುಗಳು ಉಂಟಾಗಿದೆ.