BBK 12 Contestant: ಈ ಬಾರಿ ಬಿಗ್ ಬಾಸ್ಗೆ ಹೋಗಲಿದ್ದಾರೆ ಮಾಸ್ಟರ್ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ
ಕನ್ನಡ ಚಿತ್ರರಂಗದಲ್ಲಿ ಮಾಸ್ಟರ್ಪೀಸ್ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಶಾನ್ವಿ ಶ್ರೀವಾಸ್ತವ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ಪೀಸ್ ಸಿನಿಮಾದ ನಟನೆಗಾಗಿ ಸೈಮಾ ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಪಡೆದ ಶಾನ್ವಿ, ತಾರಕ್ ಸಿನಿಮಾದಲ್ಲೂ ಮಿಂಚಿದ್ದಾರೆ.

Shanvi Srivastava -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಫೀವರ್ ಶುರುವಾಗಿದೆ. ಇನ್ನೇನು ಕೇವಲ ಮೂರು ದಿನಗಳಲ್ಲಿ ದೊಡ್ಮನೆ ಬಾಗಿಲು ತೆರೆಯಲಿದೆ. ಈಗಾಗಲೇ ಅದ್ಧೂರಿಯಾಗಿ ಹೊಸ ಮನೆ ತಯಾರಾಗಿದ್ದು, ಗ್ರ್ಯಾಂಡ್ ಓಪನಿಂಗ್ಗೆ ಸೆಟ್ ಕೂಡ ಹಾಕಲಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗುತ್ತಾರೆ ಎಂಬ ಅಧಿಕೃತ ಪಟ್ಟಿ ಬಿಡುಗಡೆ ಆಗಿಲ್ಲ.. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಹೆಸರುಗಳು ವೈರಲ್ ಆಗುತ್ತಲೇ ಇವೆ. ಇವುಗಳ ಮಧ್ಯೆ ಮಾಸ್ಟರ್ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ ಬಿಗ್ ಬಾಸ್ ಮನೆಗೆ ಹೋಗುವುದು ಖಚಿತ ಎನ್ನಲಾಗಿದೆ.
ಹೌದು, ಕನ್ನಡ ಚಿತ್ರರಂಗದಲ್ಲಿ ಮಾಸ್ಟರ್ಪೀಸ್ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಶಾನ್ವಿ ಶ್ರೀವಾಸ್ತವ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ಪೀಸ್ ಸಿನಿಮಾದ ನಟನೆಗಾಗಿ ಸೈಮಾ ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಪಡೆದ ಶಾನ್ವಿ, ತಾರಕ್ ಸಿನಿಮಾದಲ್ಲೂ ಮಿಂಚಿದ್ದಾರೆ. ತೆಲುಗು ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಇವರು ಬಿಗ್ ಬಾಸ್ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶಾನ್ವಿ ಶ್ರೀವಾತ್ಸವ ಅವರು 1993ರ ಡಿಸೆಂಬರ್ 8ರಂದು ಜನಿಸಿದರು. ಮೂಲತಃ ವಾರಾಣಾಸಿಯವರಾದ ಇವರು ಉತ್ತರ ಪ್ರದೇಶದ ಚಿಲ್ಡ್ರನ್ ಕಾಲೇಜ್ ಅಜಂಗರ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು. ಮುಂಬೈನ ಠಾಕೂರ್ ಕಾಲೇಜ್ ಆಫ್ ಸೈನ್ಸ್ ಆಂಡ್ ಕಾಮರ್ಸ್‌ನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಇವರು ತಂಗಿ ವಿಧಿಶಾ ಕೂಡ ನಟಿ. ಇವರು ಬಿಕಾಂ ಓದುವಾಗಲೇ ಲವ್‌ಲಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ತೆಲುಗಿನಲ್ಲಿ ಅಡ್ಡ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಾದ ಬಳಿ ರಾಂ ಗೋಪಲ್ ವರ್ಮಾ ಮತ್ತು ವಿಷ್ಣು ಮಂಚು ತೆಲುಗು ಸಿನಿಮಾ ರೌಡಿಯಲ್ಲಿ ಕಾಣಿಸಿಕೊಂಡರು.
Bhagya Lakshmi Serial: ತಾಂಡವ್ ಮನೆಯಲ್ಲೇ ಸೆಟಲ್ ಆದ ತನ್ವಿ: ಯಾವುದೇ ಕಾರಣಕ್ಕೂ ಕರ್ಕೊಂಡು ಬರಲ್ಲ ಎಂದ ತನ್ವಿ
ಬಹುತೇಕ ಕನ್ನಡ ನಟಿಯರು ಕನ್ನಡದಿಂದ ತೆಲುಗಿಗೆ ಹೋಗುತ್ತಾರೆ. ಆದರೆ, ಈ ನಟಿ ತೆಲುಗಿನಿಂದ ಕನ್ನಡ ಚಿತ್ರರಂಗಕ್ಕೆ ಆಗಮಿಸಿ ಸಂಚಲನ ಮೂಡಿಸಿದ್ದರು. ಆದರೆ, ಕಳೆದ ಎರಡು-ಮೂರು ವರ್ಷಗಳಿಂದ ಇವರು ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಬಿಗ್ ಬಾಸ್ಗೆ ಬಂದು ಚಿತ್ರರಂಗದಲ್ಲಿ ಹೊಸ ಜೀವನ ಸ್ಟಾರ್ಟ್ ಮಾಡುವ ಪ್ಲ್ಯಾನ್ ಮಾಡಿದ್ದಾರೆಯೇ ಎಂಬುದು ನೋಡಬೇಕಿದೆ.