Bhagya Lakshmi Serial: ಕನ್ನಿಕಾಳ ಮಾಸ್ಟರ್ ಪ್ಲ್ಯಾನ್ಗೆ ಭಾಗ್ಯಾ ಬಲಿ: ಬಂದ್ ಆಯ್ತು ಫುಡ್ ಬ್ಯುಸಿನೆಸ್
ಭಾಗ್ಯಾಳ ಮನೆಗೆ ದಿಢೀರ್ ಆಗಿ ಫುಡ್ ಡಿಪಾರ್ಟ್ಮೆಂಟ್ನಿಂದ 4-5 ಜನ ಆಫೀಸರ್ಸ್ ಬಂದಿದ್ದಾರೆ. ಇವರನ್ನ ಕಂಡು ಭಾಗ್ಯಾಗೆ ಆಘಾತ ಆಗಿದೆ. ನಾವು ಫುಡ್ ಡಿಪಾರ್ಟ್ಮೆಂಟ್ನಿಂದ ಬಂದಿದ್ದೇವೆ.. ನೀವೇನು ಫುಡ್ ಬ್ಯಿಸಿನೆಸ್ ಸ್ಟಾರ್ಟ್ ಮಾಡಿದ್ದೀರಿ ಅಲ್ವಾ.. ಅದರ ಲೈಸನ್ಸ್ ತೋರಿಸಿ ಎಂದು ಕೇಳಿದ್ದಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಭಾಗ್ಯಾಗೆ ಮತ್ತೆ ಸಂಕಷ್ಟ ಬಂದೊದಗಿದೆ. ಭರ್ಜರಿ ಯಶಸ್ವಿಯಾಗಿ ನಡೆಯುತ್ತಿದ್ದ ಫುಡ್ ಬ್ಯುಸಿನೆಸ್ ಕೈ ತುತ್ತು ಬಂದ್ ಆಗಿದೆ. ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಮಾಡಿದ ಮಾಸ್ಟರ್ ಪ್ಲ್ಯಾನ್ ಈ ಬಾರಿ ವರ್ಕ್ ಆಗಿದೆ. ಭಾಗ್ಯಾಳನ್ನು ಸೋಲಿಸಲು ಈ ಮೂವರು ಸೇರಿ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಭಾಗ್ಯಾಳ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆ ಶ್ರೇಷ್ಠಾ-ತಾಂಡವ್-ಕನ್ನಿಕಾ ಕಣ್ಣು ಹಾಕಿದ್ದು, ಇದೀಗ ಭಾಗ್ಯ ದೊಡ್ಡ ತೊಂದರೆಗೆ ಸಿಲುಕಿಕೊಂಡಿದ್ದಾಳೆ.
ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ತಾಂಡವ್-ಶ್ರೇಷ್ಠಾ ಇಬ್ಬರೂ ಪಣತೊಟ್ಟಿದ್ದರು. ಒಂದು ಪ್ಲ್ಯಾನ್ ಫ್ಲಾಫ್ ಆದ ಬೆನ್ನಲ್ಲೇ ಮತ್ತೊಂದು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಹೋಟೆಲ್ ಒಂದರಲ್ಲಿ ಶ್ರೇಷ್ಠಾ-ತಾಂಡವ್ ಹಾಗೂ ಕನ್ನಿಕಾ ಭೇಟಿ ಆಗಿದ್ದಾರೆ. ಭಾಗ್ಯ ನನಗೆ ಯಾವ ರೀತಿ ಶತ್ರುವೊ ನಿನಗೆ ಕೂಡ ಅದೇರೀತಿ ಶತ್ರು ಎಂದು ಕನ್ನಿಕಾಳನ್ನು ಪ್ಯಾಂಪರ್ ಮಾಡಿದ್ದಾನೆ ತಾಂಡವ್. ಅವಳು ಯಾವುದೋ ಫುಡ್ ಬ್ಯುಸಿನೆಸ್ ಸ್ಟಾರ್ಟ್ ಮಾಡಿದ್ದಾಳೆ.. ನಾಳೆ ಒಂದು ದಿನ ದುಡ್ಡು ದುಡಿಯೋಕೆ ಶುರು ಮಾಡಿದ್ರೆ ನಿನ್ನ ಕೂಡ ಸುಮ್ಮನೆ ಬಿಡಲ್ಲ ಎಂದಿದ್ದಾನೆ.
ಇದಕ್ಕೆ ಕನ್ನಿಕಾ, ಈಗೇನು ಭಾಗ್ಯಾಳ ಬ್ಯುಸಿನೆಸ್ ನಡಿಬಾರದು, ಅವಳು ಬೀದಿಗೆ ಬರಬೇಕು ಅಲ್ವಾ.. ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ.. ಇನ್ಮುಂದೆ ಭಾಗ್ಯ ಫುಡ್ ಬ್ಯುಸಿನೆಸ್ ನಡಿಯಲ್ಲ ಎಂದು ಹೇಳುತ್ತಾಳೆ. ಕನ್ನಿಕಾಳ ಮಾತು ಕೇಳಿ ಶ್ರೇಷ್ಠಾ-ತಾಂಡವ್ಗೆ ಖುಷಿ ಆಗುತ್ತದೆ. ತಾಂಡವ್ ಮತ್ತು ಶ್ರೇಷ್ಠಾ ಅಂದುಕೊಂಡಂತೆ, ಭಾಗ್ಯಗೆ ಕಿರುಕುಳ ಕೊಡಲು ಮತ್ತು ಅವಳ ಕೈ ತುತ್ತಿಗೆ ತೊಂದರೆ ಮಾಡಲು ಕನ್ನಿಕಾ ಒಪ್ಪಿಕೊಂಡಿದ್ದಾಳೆ. ಅದರಂತೆ ಈ ಪ್ಲ್ಯಾನ್ನಲ್ಲಿ ಇವರು ಯಶಸ್ಸು ಕಂಡಿದ್ದಾರೆ.
ಭಾಗ್ಯಾಳ ಮನೆಗೆ ದಿಢೀರ್ ಆಗಿ ಫುಡ್ ಡಿಪಾರ್ಟ್ಮೆಂಟ್ನಿಂದ 4-5 ಜನ ಆಫೀಸರ್ಸ್ ಬಂದಿದ್ದಾರೆ. ಇವರನ್ನ ಕಂಡು ಭಾಗ್ಯಾಗೆ ಆಘಾತ ಆಗಿದೆ. ನಾವು ಫುಡ್ ಡಿಪಾರ್ಟ್ಮೆಂಟ್ನಿಂದ ಬಂದಿದ್ದೇವೆ.. ನೀವೇನು ಫುಡ್ ಬ್ಯಿಸಿನೆಸ್ ಸ್ಟಾರ್ಟ್ ಮಾಡಿದ್ದೀರಿ ಅಲ್ವಾ.. ಅದರ ಲೈಸನ್ಸ್ ತೋರಿಸಿ ಎಂದು ಕೇಳಿದ್ದಾರೆ. ಆದರೆ, ಇದರ ಬಗ್ಗೆ ಭಾಗ್ಯಾಗೆ ತಿಳಿದೇ ಇರುವುದಿಲ್ಲ.. ಏನು ಲೈಸನ್ಸ್ ಸರ್ ಎಂದು ಭಾಗ್ಯ ಅವರ ಬಳಿ ಕೇಳಿದ್ದಾಳೆ. ಆಗ ಆಫೀಸರ್, ಹಾಗಾದ್ರೆ ನಿಮ್ ಹತ್ರ ಲೈಸನ್ಸ್ ಇಲ್ವಾ?, ಇನ್ಮುಂದೆ ಲೈಸನ್ಸ್ ಸಿಗೋ ತನಕ ವ್ಯಾಪಾರಕ್ಕೋಸ್ಕರ ಒಂದು ಅನ್ನ ಕೂಡ ಬೇಯಿಸೊ ಬಾರದು ಎಂದು ವಾರ್ನ್ ಮಾಡಿ ಹೋಗಿದ್ದಾರೆ.
ಇದೀಗ ಭಾಗ್ಯಾಳ ಕೈ ತುತ್ತು ಬ್ಯುಸಿನೆಸ್ಗೂ ದೊಡ್ಡ ಕಂಟಕ ಬಂದೊದಗಿದೆ. ಶ್ರೇಷ್ಠಾ-ತಾಂಡವ್ ಅವರು ಕನ್ನಿಕಾ ಜೊತೆ ಸೇರಿ ಮಾಡಿದ ಪ್ಲ್ಯಾನ್ ಈ ಬಾರಿ ವರ್ಕ್ ಆದಂತಿದೆ. ಇದರ ಸುಳಿಯಿಂದ ಭಾಗ್ಯ ಹೇಗೆ ಹೊರಬರುತ್ತಾಳೆ?, ಲೈಸನ್ಸ್ಗೋಸ್ಕರ್ ಇನ್ನೆಷ್ಟು ಕಷ್ಟ ಪಡುತ್ತಾಳೆ?, ಮನೆಯ ಲೋನ್ ಕಟ್ಟಲು ಹಣ ಎಲ್ಲಿಂದ ಹೊಂದಿಸುತ್ತಾಳೆ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Rajath Kishan: ‘ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ನಾನು ಮಚ್ಚು ಬಿಸಾಕಿದೆ’: ಸತ್ಯ ಬಾಯಿಬಿಟ್ಟ ರಜತ್ ಕಿಶನ್