Bhagya Lakshmi Serial: ಭಾಗ್ಯಾಳ ಸೈಕಲ್ ಪಂಚರ್: ಸರಿಯಾದ ಸಮಯಕ್ಕೆ ತಲುಪುತ್ತ ಕೈ ತುತ್ತು?
ಮನೆಯಲ್ಲಿ ಭಾಗ್ಯಗೆ ಹಬ್ಬದ ಅಡುಗೆ ಊಟ ತಲುಪಿಸಲು ಕರೆ ಬರುತ್ತದೆ. ಅವಳು ಎಲ್ಲವನ್ನು ಸಿದ್ಧಪಡಿಸಿಕೊಂಡು ಕಾರಿನಲ್ಲಿ ಲೊಕೇಷನ್ಗೆ ಹೊರಡಲು ಮುಂದಾಗುತ್ತಾಳೆ. ಆದರೆ ಲೊಕೇಷನ್ ಮಧ್ಯೆ ಟ್ರಾಫಿಕ್ ಜಾಮ್ ಇದೆ ಎಂದು ತೋರಿಸುತ್ತದೆ. ಯಾವುದೋ ಮೆರವಣಿಗೆ ಇರಬೇಕು, ಕಾರಲ್ಲಿ ಹೋಗಲು ಸಾಧ್ಯವಿಲ್ಲ ಅಂತಾಳೆ ಪೂಜಾ. ಆಗ ಭಾಗ್ಯ ಸೈಕಲ್ ಏರುತ್ತಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ಕಷ್ಟ ಮುಗಿಯದಂತೆ ಕಾಣುತ್ತಿದೆ. ಪ್ರತಿದಿನ ಒಂದಲ್ಲ ಒಂದು ಕಷ್ಟ ಭಾಗ್ಯಾಗೆ ಹುಡುಕಿಕೊಂಡು ಬರುತ್ತಿದೆ. ಮಗಳು ತನ್ವಿಯ ವಿಚಾರ ಸೈಲೆಂಟ್ ಆಗುತ್ತಿದೆ ಎಂಬೊತ್ತಿಗೆ ಮತ್ತೊಂದು ತೊಂದರೆ ಎದುರಾಗಿದೆ. ಭಾಗ್ಯಾಳ ಕೈ ತುತ್ತಿದೆ ಒಂದು ದೊಡ್ಡ ಆರ್ಡರ್ ಬಂದಿದೆ. ಆದರೆ, ಅದನ್ನು ಅವರ ಮನೆಗೆ ತಲುಪಿಸಲು ಭಾಗ್ಯಾ ಹರಸಾಹಸ ಪಟ್ಟಿದ್ದಾಳೆ. ಸೈಕಲ್ ಏರಿ ಆರ್ಡರ್ ತೆಗೆದುಕೊಂಡು ಹೋಗುವಾಗ ಸೈಕಲ್ ಟಯರ್ ಪಂಚರ್ ಆಗಿದೆ. ಅತ್ತ ಆರ್ಡರ್ ಮಾಡಿದವರಿಂದ ಪದೇ ಪದೇ ಕಾಲ್ ಬರುತ್ತಿದೆ. ಸದ್ಯ ಆರ್ಡರ್ ಕೈ ತಪ್ಪುತ್ತ ಎಂಬ ಅನುಮಾನ ಮೂಡಿದೆ.
ತನ್ವಿ ವಿಚಾರದಿಂದ ಮನೆಯ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದೆ. ಮನೆಯವರ ಪರ್ಮಿಷನ್ ಸಿಗದ ಕಾರಣ ತನ್ವಿ ಸುಳ್ಳು ಹೇಳಿ ಶ್ರೇಷ್ಠಾ ಸೈನ್ ಪಡೆದು ರೆಸಾರ್ಟ್ಗೆ ಹೋಗಿದ್ದಳು. ಅಲ್ಲಿ ಪೊಲೀಸ್ ರೈಡ್ ಆದಾಗ ತನ್ವಿ ಮೈನರ್ ಎಂದು ತಿಳಿದ ಇನ್ಸ್ಪೆಕ್ಟರ್ ಭಾಗ್ಯಾಳನ್ನು ಕರೆಸಿ ಬುದ್ದಿ ಹೇಳಿದ್ದರು. ಈ ವಿಚಾರ ಮನೆಯಲ್ಲಿ ತಿಳಿದು ದೊಡ್ಡ ರಂಪಾಟ ಆಗಿದೆ. ಸೈನ್ ಹಾಕಿದ್ದು ಶ್ರೇಷ್ಠಾ ಎಂದು ತಿಳಿದ ಕೂಡಲೇ ತಾಂಡವ್ ಅವಳ ಕೆನ್ನೆಗೆ ಎರಡು ಏಟು ಬಾರಿಸುತ್ತಾನೆ. ಭಾಗ್ಯ ಕೂಡ ನಮ್ಮ ಮಗಳನ್ನು ಹೇಗೆ ಬೆಳೆಸಬೇಕು ಎನ್ನುವುದು ನಮಗೆ ತಿಳಿದಿದೆ. ನೀನು ಹೇಳಿಕೊಡಬೇಕಾಗಿಲ್ಲ ಎನ್ನುತ್ತಾಳೆ. ತಾಂಡವ್ ಕೂಡ ಕೋಪದಿಂದ, ನನ್ನ ಮಗಳ, ಮನೆಯವರ ವಿಚಾರದಲ್ಲಿ ತಲೆಹಾಕಬೇಡ ಎಂದು ಎಚ್ಚರಿಸುತ್ತಾನೆ.
ನಂತರ ಮನೆಯಲ್ಲಿ ಭಾಗ್ಯಗೆ ಹಬ್ಬದ ಅಡುಗೆ ಊಟ ತಲುಪಿಸಲು ಕರೆ ಬರುತ್ತದೆ. ಅವಳು ಎಲ್ಲವನ್ನು ಸಿದ್ಧಪಡಿಸಿಕೊಂಡು ಕಾರಿನಲ್ಲಿ ಲೊಕೇಷನ್ಗೆ ಹೊರಡಲು ಮುಂದಾಗುತ್ತಾಳೆ. ಆದರೆ ಲೊಕೇಷನ್ ಮಧ್ಯೆ ಟ್ರಾಫಿಕ್ ಜಾಮ್ ಇದೆ ಎಂದು ತೋರಿಸುತ್ತದೆ. ಯಾವುದೋ ಮೆರವಣಿಗೆ ಇರಬೇಕು, ಕಾರಲ್ಲಿ ಹೋಗಲು ಸಾಧ್ಯವಿಲ್ಲ ಅಂತಾಳೆ ಪೂಜಾ. ಆಗ ಭಾಗ್ಯ ಸೈಕಲ್ ಏರುತ್ತಾಳೆ. ಸೈಕಲ್ ಓಡಿಸಿಕೊಂಡೇ ಲೊಕೇಷನ್‌ನತ್ತ ಸಾಗುವಾಗ ಟಯರ್ ಪಂಚರ್ ಆಗುತ್ತದೆ. ಇದರ ಮಧ್ಯೆ ಎಲ್ಲಿದಿಯಪ್ಪ.. ಬೇಗ ಬಾ.. ಇಲ್ಲಾಂದ್ರೆ ನಿಮ್ಮ ಆರ್ಡರ್ ಬೇಡ ಕ್ಯಾನ್ಸಲ್ ಮಾಡುತ್ತೇನೆ ಎಂದು ಆರ್ಡರ್ ಮಾಡಿದವರು ಕಾಲ್ ಮಾಡುತ್ತಾರೆ.
ನಾನು ಬರ್ತಾ ಇದ್ದೇನೆ.. ಸ್ವಲ್ಪ ಹೊತ್ತಲ್ಲಿ ರೀಚ್ ಆಗುತ್ತೇನೆ ಎಂದು ಹೇಳಿ ಪಂಚರ್ ಅಂಗಡಿಯ ಎದುರು ನಿಲ್ಲುತ್ತಾಳೆ. ಪಂಚ್ ಹಾಕಲು ಲೇಟ್ ಆಗುತ್ತೆ ಎಂದಾಗ ತಾನೇ ಪಂಚರ್ ಹಾಕಲು ಮುಂದಾಗುತ್ತಾಳೆ. ಪಂಚ್ ಹಾಕಿ ಪುನಃ ಸೈಕಲ್ ತುಳಿಯಲು ಪ್ರಾರಂಭಿಸುತ್ತಾಳೆ. ಸದ್ಯ ಭಾಗ್ಯ ಸರಿಯಾದ ಸಮಯಕ್ಕೆ ಆರ್ಡರ್ ಮುಟ್ಟಿಸುತ್ತಾಳಾ? ಅಥವಾ ಆರ್ಡರ್ ಕ್ಯಾನ್ಸಲ್ ಆಗುತ್ತಾ? ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Kiran Raj: ಇತ್ತ ಧಾರಾವಾಹಿ.. ಅತ್ತ ಸಿನಿಮಾ: ಹಿರಿತೆರೆ-ಕಿರುತೆರೆಯಲ್ಲಿ ಫುಲ್ ಬ್ಯುಸಿಯಾದ ಕಿರಣ್ ರಾಜ್