ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ರೋಡ್ ಸೈಡ್ ಊಟ, ಹೋಗಲು ಕಾರಿಲ್ಲ: ಮೊದಲ ದಿನ ಆದೀಯ ಮಿಡಲ್ ಕ್ಲಾಸ್ ಲೈಫ್ ಹೇಗಿತ್ತು?

ಕನ್ನಿಕಾ-ಮೀನಾಕ್ಷಿಗೆ ಆದೀಶ್ವರ್ ಮೇಲೆ ಅನುಮಾನ ಮೂಡಿದ್ದು ಆತನ ಫಾಲೋ ಮಾಡುವ ಸಂಭವವಿದೆ. ಆದೀ ಭಾಗ್ಯ ಮನೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಜೀವಿಸುವ ವಿಷಯ ಕಾಮತ್ ಫ್ಯಾಮಿಲಿಗೆ ಗೊತ್ತಾಗುತ್ತ?, ಮೊದಲ ದಿನವೇ ಸುಸ್ತಾಗಿರುವ ಆದೀಶ್ವರ್ಗೆ ಎರಡನೇ ದಿನ ಇನ್ನೇನು ಕಾದಿರುತ್ತೆ ಎಂಬುದೆಲ್ಲ ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.

ಮೊದಲ ದಿನ ಆದೀಯ ಮಿಡಲ್ ಕ್ಲಾಸ್ ಲೈಫ್ ಹೇಗಿತ್ತು?

Bhagya Lakshmi Serial

Profile Vinay Bhat Aug 21, 2025 12:06 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್ ತನ್ನ ಮಿಡಲ್ ಕ್ಲಾಸ್ ಜೀವನವನ್ನು ಶುರು ಮಾಡಿದ್ದಾನೆ. ಆದೀ ಕೊಟ್ಟ 25 ಲಕ್ಷ ಗಿಫ್ಟ್ ಭಾಗ್ಯ ತೆಗೆದುಕೊಳ್ಳದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಒಂದು ವಾರ ನಾನು ನಿಮ್ಮತರ ಜೀವನ ಮಾಡಿ ನೋಡ್ತೀನಿ.. ಮಿಡಲ್ ಕ್ಲಾಸ್ ಜನರಿಗೆ ಇಷ್ಟೊಂದು ದುಡ್ಡು ತೆಗೊಂಡ್ರೆ ಕಷ್ಟ ಅಂತೀರಿ ಅಲ್ವಾ ಅದೇನು ಕಷ್ಟ ಅಂತ ನಾನೂ ನೋಡ್ತೀನಿ.. ಈ ಚಾಲೆಂಜ್​ನಲ್ಲಿ ನಾನು ವಿನ್ ಆದ್ರೆ ಏನು ಪ್ರಶ್ನೆ ಮಾಡದೆ ಈ ದುಡ್ಡನ್ನು ನೀವು ತೆಗೋಬೇಕು.. ಅಕಸ್ಮಾತ್ ನೀವು ಗೆದ್ದರೆ ಈ ಹಣವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

ಅದರಂತೆ ಆದೀ ಈಗ ತನ್ನ ಕಷ್ಟದ ಜೀವನ ಶುರು ಮಾಡಿದ್ದಾನೆ. ಆದರೆ, ಮೊದಲ ದಿನವೇ ಆದೀಗೆ ಬೆವರಿಳಿದು ಹೋಗಿದೆ. ಭಾಗ್ಯ ಮನೆಗೆ ಸ್ಯೂಟ್ ಕೇಸ್ ಹಿಡಿದುಕೊಂಡು ಬಂದ ಆದೀಗೆ ಕುಸುಮಾ ಸೇರಿದಂತೆ ಮನೆಯವರೆಲ್ಲ ಇದೆಲ್ಲ ಬೇಡ ಎಂದು ಹೇಳಿದ್ದಾರೆ.. ಅದಕ್ಕೆ ಆದೀ, ನನಗೆ ಗೊತ್ತು ನಿಮಗೆಲ್ಲ ಇದು ಇಷ್ಟವಿಲ್ಲ ಎಂದು.. ಆದರೆ, ಇದನ್ನ ನಾನು ಮಾಡಲೇ ಬೇಕಿದೆ ಎಂದು ಹೇಳಿದ್ದಾನೆ. ಬಳಿಕ ಭಾಗ್ಯ ಆದೀಶ್ವರ್​ಗೆ ಉಳಿದುಕೊಳ್ಳಲು ರೂಮ್​ ಕೀ ಕೊಟ್ಟಿದ್ದಾಳೆ.

ರೂಮ್​ಗೆ ಕಾಲಿಟ್ಟೊಡನೆ ಆದೀಗೆ ಶಾಕ್ ಆಗಿದೆ. ಧೂಳು-ಕಸದಿಂದ ಆ ಸಣ್ಣ ರೂಮ್ ಫುಲ್ ಗಲೀಜು ಆಗಿತ್ತು. ಕೋಟ್ ಬಿಚ್ಚಿಟ್ಟು ಆದೀ ಬಕೆಟ್, ಪೊರಕೆ ಹಿಡಿದುಕೊಂಡು ರೂಮ್ ಕ್ಲೀನ್ ಮಾಡಲು ಮುಂದಾಗಿದ್ದಾನೆ. ಇದರ ಮಧ್ಯೆ ನೆಲ ಒರೆಸುವಾಗ ಕಾಲು ಜಾರಿ ಬಿದ್ದು ಮೈಮೇಲೆ ಪೂರ್ತಿ ನೀರು ಎರಚಿಕೊಂಡಿದ್ದಾನೆ. ಬಳಿಕ ಹೊರಗಡೆ ನೇತು ಹಾಕಿದ್ದ ಲುಂಗಿ ಉಟ್ಟುಕೊಂಡು ಇಡೀ ರೂಮ್ ಕ್ಲೀನ್ ಮಾಡಿದ್ದಾನೆ. ಎಲ್ಲ ಕ್ಲೀನಿಂಗ್ ಕೆಲಸ ಮುಗಿಯುವ ಹೊತ್ತಿಗೆ ಆದೀಗೆ ಸುಸ್ತಾಗಿದೆ.

ಸ್ವಲ್ಪ ಸಮಯ ರೆಸ್ಟ್ ಮಾಡೋಣ ಎಂದು ಫ್ಯಾನ್ ಮಾಡಿ ಕೂತಾಗ ಫ್ಯಾನ್ ತಿರುಗುವುದಿಲ್ಲ.. ತಕ್ಷಣ ಭಾಗ್ಯಾಗೆ ಕಾಲ್ ಮಾಡಿ ಫ್ಯಾನ್ ರನ್ ಆಗುತ್ತಿಲ್ಲ ಎಂದಿದ್ದಾನೆ. ಆಗ ಭಾಗ್ಯ ಕರೆಂಟ್ ಹೋಗಿದೆ.. ಸ್ವಲ್ಪ ಸಮಯದ ಬಳಿಕ ಬರಬಹುದು ಎಂದಿದ್ದಾಳೆ. ಅದಕ್ಕೆ ಆದೀ ಜನರೇಟರ್ ಅಥವಾ ಯುಪಿಎಸ್ ಇಲ್ವಾ ಎಂದು ಕೇಳಿದ್ದಾನೆ. ಅದಕ್ಕೆ ಭಾಗ್ಯ ಇದು ಕಾಮತ್ ಫ್ಯಾಮಿಲಿ ಅಲ್ಲ.. ಮಿಡಲ್ ಕ್ಲಾಸ್​ನವರ ಮನೆ.. ನಿಮಗೆ ಕಷ್ಟ ಆಗುತ್ತೆ ಅಂತ ಆದ್ರೆ ಚಾಲೆಂಜ್ ಅರ್ಧಕ್ಕೆ ಬಿಟ್ಟು ಆ ಹಣ ತೆಗೆದುಕೊಂಡು ಹೋಗಿ ಎಂದಿದ್ದಾಳೆ. ಇಲ್ಲ ಕಷ್ಟ ಏನಿಲ್ಲ.. ಜಸ್ಟ್ ಕೇಳಿದೆ ಅಷ್ಟೆ ಎಂದು ಆದೀ ಕಾಲ್ ಕಟ್ ಮಾಡಿದ್ದಾನೆ.

ಸ್ವಲ್ಪ ರೆಸ್ಟ್ ಮಾಡಿದ ಬಳಿಕ ಆದೀಶ್ವರ್ ಆಫೀಸ್ ಹೋಗಲು ಮುಂದಾಗಿದ್ದಾನೆ. ಆದರೆ, ಅಷ್ಟೊತ್ತಿಗೆ ಮಧ್ಯಾಹ್ನ ಆಗಿರುತ್ತದೆ. ತಿಂಡಿ ಕೂಡ ಆಗಿಲ್ಲ.. ಡೈರೆಕ್ಟ್ ಊಟ ಮಾಡ್ಕೊಂಡೆ ಆಫೀಸ್ ಹೋಗೋಣ ಎಂದು ಹೋಟೆಲ್​ಗೆ ಹೋಗುತ್ತಾನೆ. ಅಲ್ಲಿ ಒಂದು ಊಟದ ಬೆಲೆ 80 ರೂಪಾಯಿ. ಆದೀ ಬಳಿ ದಿನ ಖರ್ಚಿಗೆ ಇರುವುದು 150 ರೂಪಾಯಿ ಅಷ್ಟೆ. ಹೀಗಾಗಿ ಅಲ್ಲಿಂದ ಎದ್ದು ಹೊರಬಂದಾಗ ರೋಡ್ ಸೈಡ್​ ಗಾಡಿಯಲ್ಲಿ ಊಟ ಬಣಿಸುವವರು ಕಾಣಿಸುತ್ತಾರೆ.



40 ರೂಪಾಯಿಗೆ ಆದೀ ಅಲ್ಲಿಯೇ ಊಟ ಮಾಡುತ್ತಾನೆ. ಹೀಗೆ ಮಾಡುವಾಗ ಭಾಗ್ಯ ಅಚಾನಕ್ ಆಗಿ ಅಲ್ಲಿಗೆ ಬರುತ್ತಾಳೆ. ನೀವೇನು ನನ್ನ ಫಾಲೋ ಮಾಡುತ್ತ ಇದ್ದೀರಾ ಎಂದು ಆದೀ ಕೇಳಿದ್ದಾನೆ.. ಇಲ್ಲ ನನಗೆ ಕೆಲಸ ಇತ್ತು ಈಕಡೆ ಹಾಗೆ ಬಂದಿದ್ದೆ ಎಂದು ಭಾಗ್ಯ ಹೇಳಿ ಇಬ್ಬರೂ ಅಲ್ಲೇ ಊಟ ಮಾಡಿದ್ದಾನೆ. ನಂತರ ಆದೀ ಟೈ-ಕೋಟ್-ಐರನ್ ಮಾಡದ ಡ್ರೆಸ್​ನಲ್ಲೇ ಆಫೀಸ್ ಹೋಗಿದ್ದಾನೆ.

ಮತ್ತೊಂದೆಡೆ ಅತ್ತ ಆದೀಶ್ವರ್ ಮನೆಯಲ್ಲಿ ಈ ಚಾಲೆಂಜ್ ಬಗ್ಗೆ ಹೇಳುವಂತಿಲ್ಲ.. ಹೀಗಾಗಿ ಸುಳ್ಳು ಹೇಳಿದ್ದಾನೆ. ತುಂಬಾ ಇಂಪಾರ್ಟೆಂಟ್ ಕೆಲಸ ಒಂದಿದೆ.. ಒಂದು ವಾರದ ಮಟ್ಟಿಗೆ ನಾನು ಹೊರಗೆ ಹೋಗುತ್ತಿದ್ದೇನೆ.. ನಾನು ಅಲ್ಲೇ ಇದ್ದು ಆ ಕೆಲಸ ಮಾಡಿಕೊಳ್ಳಬೇಕು, ಹೀಗಾಗಿ ಅಲ್ಲೆ ಉಳಿದುಕೊಳ್ಳುತ್ತೇನೆ.. ಹೀಗಾಗಿ ಮನೆ ಕಡೆ ಬರೋಕೆ ಆಗಲ್ಲ ಎಂದಿದ್ದಾನೆ. ಇದು ಕನ್ನಿಕಾ-ಮೀನಾಕ್ಷಿಗೆ ಅನುಮಾನ ಮೂಡಿಸಿದೆ. ಅಲ್ಲದೆ ಆಫೀಸ್​ಗೆ ಲೇಟ್ ಆಗಿ ಬಂದಿದ್ದಾನೆ ಎಂದು ಮಾಹಿತಿ ಕನ್ನಿಕಾಗೆ ಸಿಗುತ್ತದೆ.

Gagana Bhari: ರಾಜಕುಮಾರಿ ಧಾರಾವಾಹಿಗೆ ಮಹಾನಟಿ ಗಗನಾ ಸೆಲೆಕ್ಟ್ ಆಗಿದ್ದು ಹೇಗೆ?

ಸದ್ಯ ಕನ್ನಿಕಾ-ಮೀನಾಕ್ಷಿಗೆ ಆದೀಶ್ವರ್ ಮೇಲೆ ಅನುಮಾನ ಮೂಡಿದ್ದು ಆತನ ಫಾಲೋ ಮಾಡುವ ಸಂಭವವಿದೆ. ಆದೀ ಭಾಗ್ಯ ಮನೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಜೀವಿಸುವ ವಿಷಯ ಕಾಮತ್ ಫ್ಯಾಮಿಲಿಗೆ ಗೊತ್ತಾಗುತ್ತ?, ಮೊದಲ ದಿನವೇ ಸುಸ್ತಾಗಿರುವ ಆದೀಶ್ವರ್​ಗೆ ಎರಡನೇ ದಿನ ಇನ್ನೇನು ಕಾದಿರುತ್ತೆ ಎಂಬುದೆಲ್ಲ ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.