Bhagya Lakshmi Serial: ಕಿಶನ್ ಗುಣ, ನಡತೆಗೆ ಫಿದಾ ಆದ ಕುಸುಮಾ: ಪೂಜಾ ಜೊತೆ ಮದುವೆ ಫಿಕ್ಸ್?
ಸೀರೆ ಧರಿಸಿಯೇ ಸೈಕಲಿಂಗ್ ಮಾಡಲು ಕುಸುಮಾ ಟ್ರೈ ಮಾಡಿದ್ದಾರೆ. ಟ್ರೇನರ್‌ನ ಕರೆದು ಇದನ್ನು ಹೇಗೆ ಓಡಿಸೋದು ಎಂದು ಕೇಳಿದ್ದಾಳೆ. ಸೀರೆ ಧರಿಸಿ ಈ ವ್ಯಾಯಾಮ ಮಾಡಲು ಕಷ್ಟ ಎಂದಿದ್ದಾಳೆ. ಈ ಸಂದರ್ಭ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಅಷ್ಟರಲ್ಲಿ ಅದೇ ಸ್ಥಳಕ್ಕೆ ಜಿಮ್ ಮಾಲೀಕ ಕಿಶನ್ ಎಂಟ್ರಿಯಾಗಿದೆ.

Bhagya Lakshmi Serial

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ತಂಗಿ ಪೂಜಾಳ ಮದುವೆಯ ಕುರಿತು ಇಂಟ್ರೆಸ್ಟಿಂಗ್ ಎಪಿಸೋಡ್ ಸಾಗುತ್ತಿದೆ. ಒಂದುಕಡೆ ಪೂಜಾಳ ಮದುವೆ ಮಾಡಲು ಭಾಗ್ಯ ಎಲ್ಲಿಲ್ಲದ ಕಷ್ಟ ಪಡುತ್ತಿದ್ದಾಳೆ. ಬಂದಿದ್ದ ಒಂದು ಸಂಬಂಧವೂ ಮುರಿದು ಹೋಯಿತು. ಮತ್ತೊಂದೆಡೆ ತಾಂಡವ್ ಮದುವೆ ವಿಚಾರದಲ್ಲಿ ಹುಳಿ ಹಿಂಡುತ್ತಿದ್ದಾನೆ. ಭಾಗ್ಯ ನಿನಗೆ ಒಳ್ಳೆಯ ಹುಡುಗನ ಹುಡುಕಿ ನಾನೇ ಮದುವೆ ಮಾಡಿಸುತ್ತೇನೆ ಎಂದು ಪೂಜಾಗೆ ಮಾತು ಕೊಟ್ಟಿದ್ದಾಳೆ. ಇದರ ಮಧ್ಯೆ ತಾಂಡವ್ ಬಂದು ಪೂಜಾ ಪಾರ್ಕ್ನಲ್ಲಿ ಕಿಶನ್ ಜೊತೆ ಮಾತನಾಡುತ್ತಿರುವುದನ್ನು ಭಾಗ್ಯ ಮನೆಯಲ್ಲಿ ಹೇಳಿದ್ದಾರೆ.
ಈ ವಿಷಯದ ಕುರಿತು ಭಾಗ್ಯ ತಾಯಿ ಅಸಮಾಧಾನ ವ್ಯಕ್ತಪಡಿಸಿದರೆ ಭಾಗ್ಯ ಮತ್ತು ಅತ್ತೆ ಕುಸುಮಾ ಹೊಸ ಪ್ಲ್ಯಾನ್ ಮಾಡಿದ್ದಾರೆ. ನಾವ್ಯಾಕೆ ಆ ಹುಡುಗನ್ನ ಒಂದು ಸಲ ಭೇಟಿ ಮಾಡಬಾರದು ಎಂದು ಅತ್ತೆ ಕುಸುಮಾಗೆ ಹೇಳುತ್ತಾಳೆ ಭಾಗ್ಯ. ಭಾಗ್ಯಾಳ ಮಾತು ಕುಸುಮಾಗೂ ಸರಿ ಎನಿಸುತ್ತದೆ. ಆತ ಒಳ್ಳೆಯವನ ಅಥವಾ ಕೆಟ್ಟವನ, ಪೂಜಾಳಿಗೆ ಸರಿಯಾದ ಜೋಡಿಯ ಎಂಬುದನ್ನು ತಿಳಿಯಲು ಇನ್ವೆಸ್ಟಿಗೇಷನ್ ಶುರುಮಾಡಿದ್ದಾರೆ. ಇದಕ್ಕಾಗಿ ಸ್ವತಃ ಕುಸುಮಾ ಅವರೇ ಅಖಾಡಕ್ಕೆ ಇಳಿದಿದ್ದಾರೆ. ಕುಸುಮಾ ಕಿಶನ್ ನಡೆಸುತ್ತಿರುವ ಜಿಮ್‌ಗೆ ತೆರಳಿದ್ದಾರೆ.
ನಾನೂ ಜಿಮ್‌ಗೆ ಸೇರಬೇಕು ಎಂದು ಸೀರೆಯಲ್ಲಿಯೇ ಕುಸುಮಾ ಜಿಮ್‌ಗೆ ಬಂದಿದ್ದಾರೆ. ಜಿಮ್‌ನ ಲೇಡಿ ಟ್ರೇನರ್‌ವೊಬ್ಬರು ಸೀರೆಯುಟ್ಟು ಬಂದ ಕುಸುಮಾರನ್ನು ತಡೆದು, ಇಲ್ಲಿ ಈ ಥರ ಸೀರೆಯುಟ್ಟು ಜಿಮ್ ಮಾಡುವ ಹಾಗಿಲ್ಲ. ಜಿಮ್ ಉಡುಪುಗಳನ್ನೇ ಧರಿಸಿ ಬರಬೇಕು ಎಂದಿದ್ದಾಳೆ. ಅಷ್ಟಕ್ಕೇ ಕುಪಿತಗೊಂಡ ಕುಸುಮಾ, ನಾನು ಸೀರೆಯಲ್ಲಿಯೇ ಜಿಮ್ ಮಾಡುವೆ ಏನಿವಾಗ? ಎಂದು ಗದರಿದ್ದಾಳೆ. ಏನಾದ್ರೂ ಮಾಡ್ಕೊಂಡು ಹೋಗಿ ಎಂದು ಟ್ರೇನರ್ ಬೇರೆ ಕಡೆ ಹೋಗಿದ್ದಾಳೆ.
ಸೀರೆ ಧರಿಸಿಯೇ ಸೈಕಲಿಂಗ್ ಮಾಡಲು ಕುಸುಮಾ ಟ್ರೈ ಮಾಡಿದ್ದಾರೆ. ಟ್ರೇನರ್‌ನ ಕರೆದು ಇದನ್ನು ಹೇಗೆ ಓಡಿಸೋದು ಎಂದು ಕೇಳಿದ್ದಾಳೆ. ಸೀರೆ ಧರಿಸಿ ಈ ವ್ಯಾಯಾಮ ಮಾಡಲು ಕಷ್ಟ ಎಂದಿದ್ದಾಳೆ. ಈ ಸಂದರ್ಭ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಅಷ್ಟರಲ್ಲಿ ಅದೇ ಸ್ಥಳಕ್ಕೆ ಜಿಮ್ ಮಾಲೀಕ ಕಿಶನ್ ಎಂಟ್ರಿಯಾಗಿದೆ. ಕಿಶನ್‌ನ ನೋಡ್ತಿದ್ದಂತೆ ಕುಸುಮಾಗೆ ಆ ಹುಡುಗ ಇಷ್ಟವಾಗಿದ್ದಾನೆ. ಆತ ವರ್ತಿಸಿದ ರೀತಿಗೆ, ಕಾಲಿಗೆ ಬಿದ್ದ ಕ್ಷಮೆ ಕೇಳಿದ್ದಕ್ಕೆ, ಹಿರಿಯರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನೋಡಿದ ಕುಸುಮಾ, ಫಿದಾ ಆಗಿದ್ದಾಳೆ.
ಇಷ್ಟೇ ಅಲ್ಲದೆ ಜಿಮ್ ಲೇಡಿ ಟ್ರೇನರ್ ಒಬ್ಬಳು ಕಿಶನ್ಗೆ ಪ್ರಪೋಸ್ ಮಾಡುತ್ತಾಳೆ. ಇದನ್ನು ಅಲ್ಲೆ ಇದ್ದ ಕುಸುಮಾ ಕೇಳಿಸುತ್ತಾಳೆ. ಆಗ ಕಿಶನ್ ಈ ಬಗ್ಗೆ ಒಳಗಡೆ ಮಾತಾಡೋಣ ಎಂದು ಆಕೆಯನ್ನು ಕರೆದುಕೊಂಡು ಹೋಗುತ್ತಾನೆ. ನಾನು ಇಲ್ಲಿ ಕರ್ಕೊಂಡು ಬಂದು ನಿಮ್ಮನ್ನ ಮಾತಾಡ್ತಾ ಇರೋದು ಲವ್ ಇದೆ ಅಂತ ಅಲ್ಲ.. ಅಲ್ಲಿ ಬೇರೆಯವರ ಎದುರು ನಿಮಗೆ ಅವಮಾನ ಆಗಬಾರದು ಅಂತ ಎಂದು ಹೇಳಿದ್ದಾನೆ. ಆದರೆ. ಈ ಎಲ್ಲ ಸಂಭಾಷಣೆಯನ್ನು ಕುಸುಮಾ ಮೆತ್ತಗೆ ಕೇಳಿಸಿಕೊಳ್ಳುತ್ತ ಇರುತ್ತಾಳೆ.
ಬಳಿಕ ಕುಸುಮಾ ಅವರಿಗೆ ಭಾಗ್ಯಾಳ ಫೋನ್ ಬಂದಿದೆ. ಹೇಗಿದ್ದಾನೆ ಹುಡುಗ ಎಂದೆಲ್ಲ ವಿಚಾರಿಸಿದ್ದಾಳೆ. ಕುಸುಮಾ ಸಹ ಕಿಶನ್ ಬಗ್ಗೆ ಒಳ್ಳೆಯ ಓಪಿನಿಯನ್ ಹೇಳಿದ್ದಾರೆ. ಒಳ್ಳೆಯ ನಡತೆ, ಗುಣ ಹೊಂದಿದ್ದಾನೆ ಎಂದು ಕುಸುಮಾ ಕಿಶನ್ನನ್ನು ಹಾಡಿ ಹೊಗಳಿದ್ದಾರೆ. ಒಟ್ಟಿನಲ್ಲಿ ಪೂಜಾಳಿಗೆ ಒಳ್ಳೆಯ ಹುಡುಗನೇ ಸಿಕ್ಕ ಅನ್ನೋ ಖುಷಿಯಲ್ಲಿ ಕುಸುಮಾ ಮತ್ತು ಭಾಗ್ಯ ಇದ್ದಾರೆ.
ಈ ಮೂಲಕ ಪೂಜಾ-ಕಿಶನ್ ಮದುವೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ, ಇದನ್ನು ತಪ್ಪಿಸಲು ಕಾದು ಕುಳಿತಿರುವ ತಾಂಡವ್ ಏನೆಲ್ಲ ಮಾಡುತ್ತಾನೆ ಎಂಬುದು ನೋಡಬೇಕಿದೆ.
Namrutha Gowda: ರಾಜಕಾರಣಿ ಜೊತೆ ಡೇಟಿಂಗ್ ಬಾ ಎಂದವನ ಮೈಚಳಿ ಬಿಡಿಸಿದ ನಮ್ರತಾ ಗೌಡ: ಸ್ಕ್ರೀನ್ ಶಾಟ್ ವೈರಲ್