Namrutha Gowda: ರಾಜಕಾರಣಿ ಜೊತೆ ಡೇಟಿಂಗ್ ಬಾ ಎಂದವನ ಮೈಚಳಿ ಬಿಡಿಸಿದ ನಮ್ರತಾ ಗೌಡ: ಸ್ಕ್ರೀನ್ ಶಾಟ್ ವೈರಲ್
ನಮ್ರತಾ ಗೌಡ ವ್ಯಕ್ತಿಯೊಬ್ಬನ ಮೈಚಳಿ ಬಿಡಿಸಿದ್ದಾರೆ. ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡುವಂತೆ ಹಿಂದೆ ಬಿದ್ದವನ ಬಂಡವಾಳವನ್ನು ನಟಿ ಬಯಲು ಮಾಡಿದ್ದಾರೆ. ಸಾಕ್ಷಿ ಸಮೇತ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಸ್ಕ್ರೀನ್ ಶಾಟ್ ಈಗ ಎಲ್ಲಡೆ ವೈರಲ್ ಆಗುತ್ತಿದೆ.

Namrutha Gowda

ಬಿಗ್ ಬಾಸ್ ಕನ್ನಡ 10ರ ಖ್ಯಾತಿಯ ನಟಿ ನಮ್ರತಾ ಗೌಡ (Namrata Gowda) ಅವರು ಮೊದಲಿಗೆ ಬಾಲ ನಟಿಯಾಗಿ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡವರು. ಬಳಿಕ ನಾಗಿಣಿ ಧಾರವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಸಿಕ್ಕಿತು. ಬಿಗ್ ಬಾಸ್ ಶೋಗೆ ಹೋಗಿಬಂದ ನಂತರ ಹೆಚ್ಚು ಸಿನಿಮಾ ಅವಕಾಶಗಳು ಅವರಿಗೆ ಸಿಗುತ್ತಿವೆ, ಅಲ್ಲದೆ ಅವರ ಅಭಿಮಾನಿಗಳ ಬಳಗ ಕೂಡ ಹೆಚ್ಚಾಗಿದೆ. ಹೀಗಿರುವಾಗ ಅವರಿಗೆ ಹಿಂಸೆ ಆಗುವ ರೀತಿಯಲ್ಲಿ ವರ್ತಿಸುವವರು ಕೂಡ ಇರುತ್ತಾರೆ. ಇದೀಗ ನಮ್ರತಾ ಅಂತ ವ್ಯಕ್ತಿಯೊಬ್ಬನ ಮೈಚಳಿ ಬಿಡಿಸಿದ್ದಾರೆ.
ನಮ್ರತಾ ಗೌಡ ಕಿಡಿಗೇಡಿ ಕಿರುಕುಳದ ವಿರುದ್ಧ ತಿರುಗಿಬಿದ್ದಿದ್ದಾರೆ. ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡುವಂತೆ ಹಿಂದೆ ಬಿದ್ದವನ ಬಂಡವಾಳವನ್ನು ನಟಿ ಬಯಲು ಮಾಡಿದ್ದಾರೆ. ಸಾಕ್ಷಿ ಸಮೇತ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಶೇರ್ ಮಾಡಿದ್ದಾರೆ. ಈ ಸ್ಕ್ರೀನ್ ಶಾಟ್ ಈಗ ಎಲ್ಲಡೆ ವೈರಲ್ ಆಗುತ್ತಿದೆ.
ರೋಷನ್ ಎಂಬಾತ, ರಾಕಿ ಜಿ43 (Rocky.g43) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ನಮ್ರತಾಗೆ ಸಂದೇಶಗಳನ್ನು ಕಳಿಸಿದ್ದಾನೆ. ರೋಷನ್ ಪ್ರೊಫೈಲ್ ಪಿಕ್ಚರ್ನಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ತೆಗೆಸಿಕೊಂಡಿರುವ ಫೋಟೊ ಇದೆ. ತಮಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟು ಇದ್ದು, ರಾಜಕಾರಣಿಗಳ ಜೊತೆಗೆ ಡೇಟಿಂಗ್‌ಗೆ ಬರಲು ಇಚ್ಛೆ ಇದೆಯಾ? ಎಂದು ರೋಷನ್ ನಮ್ರತಾರನ್ನು ಕೇಳಿದ್ದಾನೆ. ಡೇಟಿಂಗ್ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆ ಸಹ ರೋಷನ್ ಒತ್ತಾಯಿಸಿದ್ದಾನೆ.
ನಾನು ವಿಐಪಿಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ. ನಿಮ್ಮ ಫೋನ್ ನಂಬರ್, ಫೋಟೋಗಳನ್ನು ಕಳುಹಿಸುವ ಅಗತ್ಯವಿಲ್ಲ. ಡೇಟಿಂಗ್‌ಗೆ ಬುಕ್ ಮಾಡ್ತೀನಿ, ಹೆಚ್ಚಿನ ಹಣ ಕೇಳಿದರು ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾನೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾರಿಗೂ ಗೊತ್ತಾಗುವುದಿಲ್ಲ. ಸೇಫ್ ಆಗಿರುತ್ತದೆ ಎಂದು 4 ಬಾರಿ ಸಂದೇಶವನ್ನು ನಟಿಗೆ ಕಳುಹಿಸಿದ್ದಾರೆ.
Amulya Gowda: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಅಮೂಲ್ಯ ಗೌಡ: ಏನದು ನೋಡಿ
ಇದು ನಮ್ರತಾಗೆ ಬೇಸರ ಮೂಡಿಸಿದೆ. ತಕ್ಕ ಪಾಠ ಕಲಿಸಬೇಕೆಂದೇ ಕಿಡಿಗೇಡಿ ರೋಷನ್ ಮಾಡಿದ ಸಂದೇಶವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ನಟಿಯರಿಗೆ ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿಯರಿಗೆ ಈ ರೀತಿ ಮೆಸೇಜ್‌ಗಳು ಬರೋದು ಈಗೆಲ್ಲಾ ಕಾಮನ್ ಆಗಿಬಿಟ್ಟಿದೆ. ಕೆಲವರು ಇಂತಹ ಮೆಸೇಜ್ ಮಾಡುವವರನ್ನು ಬ್ಲಾಕ್ ಮಾಡುತ್ತಾರೆ. ಇನ್ನೂ ಕೆಲವರು ನಮಗ್ಯಾಕೆ ಅಂತ ಸುಮ್ಮನೆ ಆಗಿಬಿಡುತ್ತಾರೆ. ನೂರರಲ್ಲಿ ಒಬ್ಬರು ಇಂತಹ ವಿಚಾರಗಳನ್ನು ಧೈರ್ಯವಾಗಿ ಹೇಳುತ್ತಾರೆ. ಸದ್ಯ ನಮ್ರತಾ ಗೌಡ ಕೂಡ ಧೈರ್ಯವಾಗಿ ಈ ದುಷ್ಕೃತ್ಯವನ್ನು ಬಹಿರಂಗಪಡಿಸಿದ್ದಾರೆ. "ಮಿಸ್ಟರ್ ರೋಷನ್ ಇದನ್ನು ಇಲ್ಲಿಗೆ ನಿಲ್ಲಿಸಿ" ಎಂದು ಸ್ಕ್ರೀನ್‌ಶಾಟ್ ಹಂಚಿಕೊಂಡು ಹೇಳಿದ್ದಾರೆ.