Gauthami Jadav: ಕೊನೆಗೂ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಗೌತಮಿ ಜಾಧವ್: ಫ್ಯಾನ್ಸ್ಗೆ ಬಿಗ್ ಸರ್ಪ್ರೈಸ್
ಗೌತಮಿ ಅಭಿಮಾನಿಗಳಿಗೆ ಸಡನ್ ಆಗಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾರ್ಗವಿ LL.B. ಅಲ್ಲಿ ಭಾರ್ಗವಿಗೆ ಅಪಾಯ ಎದುರಾಗಿದೆ, ಕೇಡಿಗಳು ಅವಳ ಪ್ರಾಣಕ್ಕೇ ಕುತ್ತು ತರುವ ಹಂತದಲ್ಲಿದ್ದಾರೆ. ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರೋ ಭಾರ್ಗವಿಯನ್ನು ಕಾಪಾಡಲಿಕ್ಕೆ ಇದೀಗ ಸ್ಪೆಷಲ್ ವ್ಯಕ್ತಿಯ ಎಂಟ್ರಿ ಆಗಿದೆ. ಅದುವೇ ಗೌತಮಿ ಜಾಧವ್.

Gauthami Jadav Bhargavi LLB Serial

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವರು ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಆದರೆ, ಗೌತಮಿ ಜಾಧವ್ (Gauthami Jadav) ಅವರದ್ದು ಮಾತ್ರ ಸುದ್ದಿಯೇ ಇಲ್ಲ. ಬಿಗ್ ಬಾಸ್ ಮುಗಿದ ಬಳಿಕ ಹೆಚ್ಚಿನ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ. ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸಿದರು.
ಆದರೀಗ ಗೌತಮಿ ಅಭಿಮಾನಿಗಳಿಗೆ ಸಡನ್ ಆಗಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾರ್ಗವಿ LL.B. ಅಲ್ಲಿ ಭಾರ್ಗವಿಗೆ ಅಪಾಯ ಎದುರಾಗಿದೆ, ಕೇಡಿಗಳು ಅವಳ ಪ್ರಾಣಕ್ಕೇ ಕುತ್ತು ತರುವ ಹಂತದಲ್ಲಿದ್ದಾರೆ. ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರೋ ಭಾರ್ಗವಿಯನ್ನು ಕಾಪಾಡಲಿಕ್ಕೆ ಇದೀಗ ಸ್ಪೆಷಲ್ ವ್ಯಕ್ತಿಯ ಎಂಟ್ರಿ ಆಗಿದೆ. ಅದುವೇ ಗೌತಮಿ ಜಾಧವ್.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾರ್ಗವಿ LL.B ಯ ಪ್ರೋಮೋದಲ್ಲಿ ಮಿಂಚುತ್ತಿದ್ದಾರೆ ತಾರೆ ಗೌತಮಿ ಜಾಧವ್. ಭಾರ್ಗವಿಯ ಸುತ್ತಮುತ್ತ ಕೇಡಿಗಳು ಸುತ್ತುವರಿದಿದ್ದಾರೆ. ಅವಳು ಅಪಾಯದಲ್ಲಿದ್ದಾಳೆ. ಆಗ ಕೇಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವ ಭಾರ್ಗವಿಯನ್ನು ಕಾಪಾಡಲಿಕ್ಕೆ ಬಂದಿದ್ದಾರೆ ಗೌತಮಿ ಜಾಧವ್.
'ನಾನು ಎಲ್ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ' ಎಂದು ಅವರು ವಿಲನ್ ಗಳಿಗೆ ಪಂಚ್ ಕೊಡುವುದನ್ನು ಪ್ರೋಮೋದಲ್ಲಿ ನೋಡಬಹುದು. ತಮ್ಮ ಎಂದಿನ ಪವರ್ಫುಲ್ ಮಾಸ್ ಡೈಲಾಗ್ ನಿಂದ ಅವರು ಪ್ರೋಮೋದಲ್ಲಿ ಶಕ್ತಿ ತುಂಬಿರುವುದನ್ನ ಕಾಣಬಹುದು. ಅಂದ ಹಾಗೆ ಗೌತಮಿ ಜಾಧವ್ 'ಭಾರ್ಗವಿ LL.B' ಧಾರಾವಾಹಿಯಲ್ಲಿ 'ಸಿಂಧೂರಿ' ಹೆಸರಿನ ಪಾತ್ರದಲ್ಲಿ ವಿಶೇಷ ಅತಿಥಿಯಾಗಿ ನಟಿಸಿದ್ದಾರೆ.
ಭಾರ್ಗವಿಗೆ ರೌಡಿಗಳು ಕಾಟಕೊಡಲು ಬಂದಾಗ, ಅಡ್ಡ ಬರುವ ಗೌತಮಿ ಇನ್ನು ನಾನು ಬಂದಾಯ್ತಲ್ಲ, ಇನ್ನೇನಿದ್ರೂ ನನ್ನದೇ ಹವಾ ಎನ್ನುತ್ತಾ, ಸೀರೆಯನ್ನು ಸೊಂಟಕ್ಕೆ ಸುತ್ತಿ, ರೌಡಿಗಳನ್ನು ಮೂಟೆ ಕಟ್ಟೋಕೆ ರೆಡಿಯಾಗುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸತ್ಯ ಧಾರಾವಾಹಿಯಲ್ಲಿ ಗೌತಮಿ ಜಾಧವ್ ಅವರು ಮಾಸ್ ಡೈಲಾಗ್ ಮೂಲಕ ಫೇಮಸ್ ಆಗಿದ್ದರು. ಟಾಮ್ ಬಾಯ್ ಲುಕ್ನಲ್ಲಿ ಗಮನ ಸೆಳೆದಿದ್ದರು. ಇಲ್ಲಿ ಅವರ ಟಾಮ್ ಬಾಯ್ ಲುಕ್ ಹೋಗಿದೆ. ಇಲ್ಲಿ ಅವರು ಲಕ್ಷಣವಾಗಿ ಸೀರೆ ಉಟ್ಟು ಬಂದಿದ್ದಾರೆ. ಆದರೆ, ಗತ್ತು ಮಾತ್ರ ಹಾಗೆಯೇ ಇದೆ.
Rakesh Poojary: ಹೃದಯಾಘಾತಕ್ಕೂ ಮುನ್ನ ರಾಕೇಶ್ ಅವರ ಕೊನೆಯ ಕ್ಷಣದ ವಿಡಿಯೋ