ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prema Kavya: ಕಲರ್ಸ್ ಕನ್ನಡದ ಹೊಸ ಧಾರಾವಾಹಿಯಲ್ಲಿ ಡಿ ಬಾಸ್ ಕ್ರೇಜ್: ವೈರಲ್ ಆಗ್ತಿದೆ ಪ್ರೊಮೋ

ಕಲರ್ಸ್ ಕನ್ನಡ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ಹಂಚಿಕೊಂಡಿದೆ. ಇದರ ಹೆಸರು ಪ್ರೇಮ ಕಾವ್ಯ. ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ಡಿ ಬಾಸ್ ದರ್ಶನ್ ಹವಾ ಬೇಜಾನ್ ಇದೆ. ಪ್ರೋಮೋದಲ್ಲಿನ ಕಲಾವಿದರ ಕಂಡು ಸಖತ್‌ ಥ್ರಿಲ್‌ ಕೂಡ ಫ್ಯಾನ್ಸ್‌. ಅದಕ್ಕಿಂತ ಹೆಚ್ಚಾಗಿ ದರ್ಶನ್‌ ಫ್ಯಾನ್ಸ್‌ ಖುಷಿ ಪಟ್ಟಿದ್ದಾರೆ.

ಕಲರ್ಸ್ ಕನ್ನಡದ ಹೊಸ ಧಾರಾವಾಹಿಯಲ್ಲಿ ಡಿ ಬಾಸ್ ಕ್ರೇಜ್

Prema Kavya Serial

Profile Vinay Bhat Jun 10, 2025 7:07 AM

ಕಲರ್ಸ್ ಕನ್ನಡದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಧಾರಾವಾಹಿ, ರಿಯಾಲಿಟಿ ಶೋಗಳು ಬರುತ್ತಿವೆ. ಇತ್ತೀಚೆಗಷ್ಟೆ ಲಕ್ಷ್ಮೀ ಬಾರಮ್ಮ, ಮಜಾ ಟಾಕೀಸ್ (Maja Talkies), ಬಾಯ್ಸ್ vs ಗರ್ಲ್ಸ್ ಶೋಗಳು ಮುಕ್ತಾಯಕಂಡಿತು. ಕೆಲವೇ ದಿನಗಳಲ್ಲಿ ವಧು ಧಾರಾವಾಹಿ ಕೂಡ ಕೊನೆಯಾಗಲಿದೆ. ಇದರ ಬೆನ್ನಲ್ಲೆ ಕಲರ್ಸ್ ಹೊಸ ಹೊಸ ಧಾರಾವಾಹಿ, ಶೋನೊಂದಿಗೆ ಬರುತ್ತಿದೆ. ಮೊನ್ನೆಯಷ್ಟೆ ನಂದಗೋಕುಲ ಎಂಬ ಹೊಸ ಧಾರಾವಾಹಿ ಪ್ರಾರಂಭವಾಯಿತು. ಮುಂದಿನ ವಾರದಿಂದ ವೀಕೆಂಡ್​ನಲ್ಲಿ ಕ್ವಾಟ್ಲೆ ಕಿಚನ್ ಶುರುವಾಗಲಿದೆ.

ಇದರ ಮಧ್ಯೆ ಕಲರ್ಸ್ ಕನ್ನಡ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ಹಂಚಿಕೊಂಡಿದೆ. ಇದರ ಹೆಸರು ಪ್ರೇಮ ಕಾವ್ಯ. ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ಡಿ ಬಾಸ್ ದರ್ಶನ್ ಹವಾ ಬೇಜಾನ್ ಇದೆ. ಪ್ರೋಮೋದಲ್ಲಿನ ಕಲಾವಿದರ ಕಂಡು ಸಖತ್‌ ಥ್ರಿಲ್‌ ಕೂಡ ಫ್ಯಾನ್ಸ್‌. ಅದಕ್ಕಿಂತ ಹೆಚ್ಚಾಗಿ ದರ್ಶನ್‌ ಫ್ಯಾನ್ಸ್‌ ಖುಷಿ ಪಟ್ಟಿದ್ದಾರೆ. ಪ್ರಿಯಾ ಆಚಾರ್, ರಾಘು, ಮಿಥುನರಾಶಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಹಾಗೂ ವಿಕಾಸ್ ಈ ಧಾರಾವಾಹಿಯ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ನಡುವಿನ ಪ್ರೇಮ್ ಕಹಾನಿಯೇ ಪ್ರೇಮ್ ಕಾವ್ಯ ಧಾರಾವಾಹಿ ಕಥೆ. ನಾಯಕ ಹಾಗೂ ನಾಯಕಿ ಇಬ್ಬರೂ ನಟ ದರ್ಶನ್ ಅಭಿಮಾನಿಗಳು. ನೆಚ್ಚಿನ ನಟನ ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಬಂದಾಗಲೂ ಲವ್ ಟ್ರ್ಯಾಕ್ ನಡೆಯುವಂತೆ ಪ್ರೋಮೊದಲ್ಲಿ ತೋರಿಸಲಾಗಿದೆ. ಗಜ ಸಿನಿಮಾ ರೀ-ರಿಲೀಸ್ ಆಗಿ ಚಿತ್ರಮಂದಿರದ ಮುಂದೆ ಕಟೌಟ್ ಹಾಕಿ ಅಭಿಮಾನಿಗಳ ಸಂಭ್ರಮಾಚರಣೆಯನ್ನು ತೋರಿಸಲಾಗಿದೆ. ಇದು ಸಹಜವಾಗಿಯೇ ನಟ ದರ್ಶನ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಪ್ರೊಮೊ ವೈರಲ್ ಆಗುತ್ತಿದೆ.

ಕಾವೇರಿ ಕನ್ನಡ ಮೀಡಿಯಂ ಬಳಿಕ ಪ್ರಿಯಾ ಆಚಾರ್ ಮತ್ತೆ ಲಂಗಾ ದಾವಣಿಯಲ್ಲಿ ಮಿಂಚಿದ್ದಾರೆ. ಮೃಧು ಸ್ವಭಾವದ ಯುವಕನಾಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ಆತನಿಗೆ ಚೈತ್ರಾ ಜೋಡಿಯಾಗಿದ್ದಾರೆ. ತಮಿಳಿನ ಸಿಂಧು ಭೈರವಿ ಧಾರಾವಾಹಿ ರೀಮೆಕ್ ಪ್ರೇಮ ಕಾವ್ಯ ಧಾರಾವಾಹಿ ಎನ್ನಲಾಗುತ್ತಿದೆ. ಸದ್ಯ ಈ ಹೊಸ ಸೀರಿಯಲ್ ಯಾವಾಗ ಆರಂಭವಾಗಲಿದೆ? ಎಂಬ ಬಗ್ಗೆ ವಾಹಿನಿ ಮಾಹಿತಿ ಹಂಚಿಕೊಂಡಿಲ್ಲ. ವಧು ಧಾರಾವಾಹಿ ಜಾಗದಲ್ಲಿ ಇದು ಪ್ರಸಾರ ಕಾಣುವ ಸಾಧ್ಯತೆ ಇದೆ.

Mahanati Season 2: ಬರುತ್ತಿದೆ ಮಹಾನಟಿ ಎರಡನೇ ಸೀಸನ್: ಕಿರುತೆರೆಗೆ ಮತ್ತೆ ಮರಳಿದ ಪ್ರೇಮಾ