ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drishti bottu: ದೃಷ್ಟಿಬೊಟ್ಟು ವೀಕ್ಷಕರಿಗೆ ನಿರಾಸೆ: ಕಟ್ಟ ಕಡೆಯ ಎಪಿಸೋಡ್​ನಲ್ಲೂ ಬರಲಿಲ್ಲ ವಿಜಯ್ ಸೂರ್ಯ

ದೃಷ್ಟಿಬೊಟ್ಟು ಧಾರಾವಾಹಿ ಸೆಪ್ಟೆಂಬರ್ 9, 2024 ರಂದು ಶುರುವಾಯಿತು. ಸುಮಾರು ಒಂದು ವರ್ಷ ಕಾಲ ಪ್ರಸಾರ ಕಂಡ ಧಾರಾವಾಹಿ ಒಟ್ಟು 319 ಸಂಚಿಕೆಗಳನ್ನ ಪೂರ್ಣಗೊಳಿಸಿ ಅಂತ್ಯಕಂಡಿದೆ. ಕೊನೆಯ ಎಪಿಸೋಡ್ನಲ್ಲಿ ದತ್ತ ಭಾಯ್ ಆಗಿ ಪುನಃ ವಿಜಯ್ ಸೂರ್ಯ ಬರಲಿದ್ದಾರೆ ಎಂದೇ ವೀಕ್ಷಕರು ನಂಬಿದ್ದರು. ಆದರೆ, ಅದುಕೂಡ ಆಗಲಿಲ್ಲ.

ದೃಷ್ಟಿಬೊಟ್ಟು: ಕಡೆಯ ಎಪಿಸೋಡ್​ನಲ್ಲೂ ಬರಲಿಲ್ಲ ವಿಜಯ್ ಸೂರ್ಯ

Drishti Bottu Kannada Serial -

Profile Vinay Bhat Sep 22, 2025 3:58 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೃಷ್ಟಿಬೊಟ್ಟು (Drishti bottu) ಧಾರಾವಾಹಿ ಕಿರುತೆರೆ ವೀಕ್ಷಕರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿತ್ತು. ಆದರೀಗ ಧಾರಾವಾಹಿಗೆ ಶುಭಂ ಬೋರ್ಡ್ ಬಿದ್ದಿದೆ. ಸೆಪ್ಟಂಬರ್​ 21 ರಂದು ತನ್ನ ಕೊನೆ ಸಂಚಿಕೆ ಪ್ರಸಾರ ಮಾಡುವ ಮೂಲಕ ಧಾರಾವಾಹಿ ಕೊನೆಯಾಗಿದೆ. ಅಂತಿಮ ಎಪಿಸೋಡ್​ಗಳಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ ನೀಡಲಾಗಿತ್ತು. ಸೀರಿಯಲ್ ವೀಕ್ಷಿಸುವವರಿಗೆ ಈ ಕಥೆ ಕುತೂಹಲ ಕೆರಳಿಸಿತ್ತು. ಇತ್ತೀಚೆಗಷ್ಟೆ ದೃಷ್ಟಿಯ ಬಣ್ಣ ಹಾಗೂ ಸತ್ಯದ ಅನಾವರಣ ಆಗಿರುವುದು ಕಥೆಯನ್ನು ನೆಕ್ಸ್ಟ್ ಲೆವೆಲ್​ಗೆ ಕೊಂಡೊಯ್ಯಿತು. ಹೀಗಿರುವಾಗಲೇ ಈ ಧಾರಾವಾಹಿಯನ್ನು ಅಂತ್ಯ ಮಾಡಲಾಗಿದೆ.

ದೃಷ್ಟಿಬೊಟ್ಟು ಧಾರಾವಾಹಿ ಸೆಪ್ಟೆಂಬರ್ 9, 2024 ರಂದು ಶುರುವಾಯಿತು. ಸುಮಾರು ಒಂದು ವರ್ಷ ಕಾಲ ಪ್ರಸಾರ ಕಂಡ ಧಾರಾವಾಹಿ ಒಟ್ಟು 319 ಸಂಚಿಕೆಗಳನ್ನ ಪೂರ್ಣಗೊಳಿಸಿ ಅಂತ್ಯಕಂಡಿದೆ. ಕೊನೆಯ ಎಪಿಸೋಡ್​ನಲ್ಲಿ ದತ್ತ ಭಾಯ್ ಆಗಿ ಪುನಃ ವಿಜಯ್ ಸೂರ್ಯ ಬರಲಿದ್ದಾರೆ ಎಂದೇ ವೀಕ್ಷಕರು ನಂಬಿದ್ದರು. ಆದರೆ, ಅದುಕೂಡ ಆಗಲಿಲ್ಲ.

ದೃಷ್ಟಿಬೊಟ್ಟು ಧಾರಾವಾಹಿಯಿಂದ ವಿಜಯ್ ಸೂರ್ಯ ದಿಢೀರನೆ ಹೊರಬಂದರು. ಹೀಗಾಗಿ ಇವರು ನಿರ್ವಹಿಸುತ್ತಿದ್ದ ದತ್ತಾ ಭಾಯ್ ಪಾತ್ರವನ್ನ ಸಾಯಿಸಲಾಯಿತು. ಸ್ವಂತ ಅಕ್ಕ ಶರಾವತಿಯೇ ದತ್ತಾ ಭಾಯ್‌ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂತು. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ ಸಿಕ್ಕಿ ದತ್ತಾ ವಾಪಸ್ ಆಗಬಹುದು ಎಂದು ನಂಬಲಾಗಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಯಿತು.

ದೃಷ್ಟಿಗೆ ದತ್ತಾ ಭಾಯ್ ಅನ್ನು ಸಾಯಿಸಿದ್ದು ಶರಾವತಿ ಎಂಬ ಸತ್ಯ ಗೊತ್ತಾಯಿತು, ಅದು ಕೂಡ ಸಾಖ್ಷಿ ಸಮೇತ. ದತ್ತನನ್ನು ಸಾಯಿಸಲು ಕರೀಂಗೆ ಶರಾವತಿ ದುಡ್ಡು ಟ್ರ್ಯಾನ್ಸ್‌ಫರ್ ಮಾಡಿರುವ ಸಾಕ್ಷಿ ಇಟ್ಟುಕೊಂಡು ಎಲ್ಲರ ಮುಂದೆ ಪ್ರಶ್ನೆ ಮಾಡಿದಳು. ನನ್ನ ತಂದೆಯ ಸಾವಿಗೆ ದತ್ತಾ ಕಾರಣ. ಹೀಗಾಗಿ, ನಾನು ದತ್ತಾನ ಸಾಯಿಸಿದೆ ಅಂತ ಶರಾವತಿ ಸಮಜಾಯಿಷಿ ಕೊಡುತ್ತಾಳೆ. ಅಂತಿಮವಾಗಿ ಶರಾವತಿಯನ್ನ ದೃಷ್ಟಿ ಮನೆಯಿಂದ ಹೊರಗೆ ಹಾಕುತ್ತಾಳೆ. ಬಳಿಕ ‘ದತ್ತಾತ್ರೇಯ ಶ್ರೀರಾಮ ಪಾಟೀಲ್ ಪತ್ನಿಯಾಗಿ ನಾನು ಸಮಾಜ ಸೇವೆ ಮುಂದುವರೆಸುತ್ತೇನೆ. ಎಲ್ಲರನ್ನೂ ಜೋಪಾನವಾಗಿ ನೋಡಿಕೊಳ್ಳುತ್ತೇನೆ’ ಎಂದು ದೃಷ್ಟಿ ಎಲ್ಲರಿಗೂ ಅಭಯ ನೀಡುತ್ತಾಳೆ. ಅಲ್ಲಿಗೆ, ದೃಷ್ಟಿಬೊಟ್ಟು ಧಾರಾವಾಹಿ ಕೊನೆಯಾಗಿದೆ.

Bhagya Lakshmi Serial: ಶ್ರೇಷ್ಠಾ-ಕನ್ನಿಕಾ ಭೇಟಿ: ಸದ್ಯದಲ್ಲೇ ಭಾಗ್ಯಾಗೆ ಕಾದಿದೆ ಮತ್ತೊಂದು ಶಾಕ್

ಬಿಗ್ ಬಾಸ್​ಗೆ ವಿಜಯ್ ಸೂರ್ಯ:

ವಿಜಯ್ ಸೂರ್ಯ, ದೃಷ್ಟಿಬೊಟ್ಟು ಸೀರಿಯಲ್ ನಿಂದ ಹೊರಗೆ ಬಂದಿರುವುದು ಬಿಗ್ ಬಾಸ್​ಗೆ ಹೋಗಲು ಎನ್ನುವ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಅತ್ತ ಬಿಗ್ ಬಾಸ್ 12 ಇನ್ನೇನು ಶುರುವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ವಿಜಯ್ ಸೂರ್ಯ ಬಿಗ್ ಬಾಸ್ ಮನೆ ಸೇರ್ತಾರೆ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ. ಬಿಗ್ ಬಾಸ್ ಕನ್ನಡ 12 ಸೆಪ್ಟೆಂಬರ್ 28 ರಿಂದ ಶುರುವಾಗಲಿದೆ.