Gauthami Jadav: ಇನ್ಸ್ಟಾಗ್ರಾಮ್ನಿಂದ ಹಣ ಸಂಪಾದಿಸುತ್ತಿರುವ ಗೌತಮಿ ಜಾಧವ್: ಯಾವುದು ಈ ಬ್ಯುಸಿನೆಸ್?
ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿ ಗೌತಮಿ ಗೆಸ್ಟ್ ಪಾತ್ರದಲ್ಲಿ ಬಂದು ದರ್ಶನ ನೀಡಿದ್ದರಷ್ಟೆ. ಇತ್ತ ಮುಖ್ಯಪಾತ್ರದ ಧಾರಾವಾಹಿಯೂ ಇಲ್ಲ.. ಅತ್ತ ಸಿನಿಮಾ ಕೂಡ ಇಲ್ಲ.. ಹಾಗಾದ್ರೆ ಗೌತಮಿ ಏನು ಮಾಡುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ. ಇದಕ್ಕೆ ಸ್ವತಃ ಅವರೇ ಉತ್ತರಿಸಿದ್ದು, ಗೌತಮಿ ಸದ್ಯ ತಮ್ಮ ಬ್ಯುಸಿನೆಸ್ ಒಂದರಲ್ಲು ಬ್ಯುಸಿಯಾಗಿದ್ದಾರೆ.

Gauthami Jadav

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವರು ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಆದರೆ, ಗೌತಮಿ ಜಾಧವ್ ಅವರದ್ದು ಮಾತ್ರ ಸುದ್ದಿಯೇ ಇಲ್ಲ. ಬಿಗ್ ಬಾಸ್ ಮುಗಿದ ಬಳಿಕ ಹೆಚ್ಚಿನ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ.
ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿ ಗೌತಮಿ ಗೆಸ್ಟ್ ಪಾತ್ರದಲ್ಲಿ ಬಂದು ದರ್ಶನ ನೀಡಿದ್ದರಷ್ಟೆ. ಇತ್ತ ಮುಖ್ಯಪಾತ್ರದ ಧಾರಾವಾಹಿಯೂ ಇಲ್ಲ.. ಅತ್ತ ಸಿನಿಮಾ ಕೂಡ ಇಲ್ಲ.. ಹಾಗಾದ್ರೆ ಗೌತಮಿ ಏನು ಮಾಡುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ. ಇದಕ್ಕೆ ಸ್ವತಃ ಅವರೇ ಉತ್ತರಿಸಿದ್ದು, ಗೌತಮಿ ಸದ್ಯ ತಮ್ಮ ಬ್ಯುಸಿನೆಸ್ ಒಂದರಲ್ಲು ಬ್ಯುಸಿಯಾಗಿದ್ದಾರೆ.
ಹೌದು, ಗೌತಮಿ ಜಾಧವ್ ತಮ್ಮದೇ ಆದ ಒಂದು ಬ್ಯುಸಿನೆಸ್ ನಡೆಸುತ್ತಿದ್ದಾರೆ. ಈ ಕುರಿತು ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಗೌತಮಿ ಜಾಧವ್, ‘‘ಅವಕಾಶ ಇದ್ದರೂ ಇಲ್ಲದೇ ಇದ್ದರೂ ನಾನು ದುಡಿಯುತ್ತಿದ್ದೇನೆ. ಸ್ವಲ್ಪ ಸೇವಿಂಗ್ಸ್ ಮಾಡುತ್ತೀನಿ ಹಾಗಾಗಿ ಲೈಫ್ ಬ್ಯಾಲೆನ್ಸ್ಡ್ ಇದೆ. ನಟನೆ ಬಿಟ್ಟು ನನ್ನದೇ ಚಿಕ್ಕ ಬ್ಯುಸಿನೆಸ್ ಇದೆ. ಈ ಮೂಲಕ ನಾನು ಖುಷಿಯಾಗಿದ್ದೇನೆ. ನಾನು ಹೇರ್ ಆಯಿಲ್ ಬ್ಯುಸಿನೆಸ್ ನಡೆಸುತ್ತಿದ್ದೇನೆ. ಅದನ್ನು ನಾನು ತುಂಬಾ ವರ್ಷದಿಂದ ಉಪಯೋಗಿಸುತ್ತಿದ್ದೆ. ಹೀಗೆ ಒಂದು ದಿನ ಅದನ್ನು ಬ್ಯುಸಿನೆಸ್ ಮಾಡೋಣ ಅಂತ ಹೇಳಿ, ಅದರ ಬಗ್ಗೆ ರಿಸರ್ಚ್ ಮಾಡಿ, ಈಗ ಆ ಆಯಿಲ್ ಅನ್ನು ದೇವಸ್ಥಾನದಲ್ಲಿಯೇ ತಯಾರು ಮಾಡುತ್ತೇನೆ. ಮನೆಗೆ ಬಂದು ಪ್ಯಾಕಿಂಗ್ ಮಾಡಿ ಇನ್ಸ್ಟಾಗ್ರಾಮ್ ಮೂಲಕ ಸೇಲ್ ಮಾಡುತ್ತಿದ್ದೇನೆ. ಈ ಬ್ಯುಸಿನೆಸ್ ತುಂಬಾ ಚೆನ್ನಾಗಿ ನಡೆಯುತ್ತಿದೆ’’ ಎಂದು ಹೇಳಿದ್ದಾರೆ.
Seetha Rama Serial: ಮಧ್ಯರಾತ್ರಿ ಮನೆಬಿಟ್ಟು ಹೋದ ಸುಬ್ಬಿ: ಸೀತಾ-ರಾಮ್ನಿಂದ ಹುಡುಕಾಟ
ಬಿಗ್ ಬಾಸ್ ಬಗ್ಗೆ ಮಾತನಾಡಿದ ಗೌತಮಿ, ನನಗೆ ಈ ಶೋ ದೊಡ್ಡ ಬೋನಸ್. ನಾನು ಹಿಂದೆ ಮಾಡಿದ್ದ ಪಾತ್ರ ತುಂಬಾ ರೀಚ್ ಆಗಿತ್ತು ಹೌದು. ಅಲ್ಲಿ ನಾನು ಪಾತ್ರವಾಗಿ ರೀಚ್ ಆಗಿದ್ದೆ. ಗೌತಮಿಯಾಗಿ ಪ್ರತಿಯೊಂದು ಮನೆ ಮನೆಗೆ ನನ್ನನ್ನು ಪರಿಚಯಿಸಿದ್ದು ಬಿಗ್ ಬಾಸ್. ಈ ಹಿಂದೆ ನನ್ನನ್ನು ಪಾತ್ರವಾಗಿ ಗುರುತಿಸಿಸುತ್ತಿದ್ದರು. ಅದು ನನಗೆ ಖುಷಿಯಾಗುತ್ತಿತ್ತು. ಈಗ ನನ್ನನ್ನು ವ್ಯಕ್ತಿಯಾಗಿ ಗುರುತಿಸುತ್ತಿದ್ದಾರೆ ಎಂದಿದ್ದಾರೆ.