Amulya Gowda: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಅಮೂಲ್ಯ ಗೌಡ: ಏನದು ನೋಡಿ
ಕಮಲಿ ಧಾರಾವಾಹಿಯ ನಾಯಕ ರಿಷಿ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್ ಬಿಎಸ್ ಹಾಗೂ ಅಮೂಲ್ಯ ನಿಜ ಜೀವನದಲ್ಲಿಯೂ ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಇದೀಗ ಈ ಗಾಳಿ ಸುದ್ದಿಗೆ ಒಂದು ಸ್ಟಷ್ಟನೆ ಸಿಕ್ಕಿದ್ದು, ನಟ ನಿರಂಜನ್ ಜೊತೆ ಪ್ರೀತಿಯಲ್ಲಿರುವ ನಿಜ ಎಂದು ಅಮೂಲ್ಯ ಗೌಡ ಇನ್ಡೈರೆಕ್ಟ್ ಆಗಿ ಹೇಳಿದ್ದಾರೆ.

Amulya Gowda

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡವರಲ್ಲಿ ನಟಿ ಅಮೂಲ್ಯ ಗೌಡ (Amulya Gowda) ಕೂಡ ಒಬ್ಬರು. ಅರಮನೆ, ಕಮಲಿ, ಬಿಗ್ ಬಾಸ್ ಶೋ ಮೂಲಕ ಮನೆ ಮಾತಾದ ಅಮೂಲ್ಯ ಸದ್ಯ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಇತ್ತೀಚೆಗಷ್ಟೆ ಅಮೂಲ್ಯ ಗೌಡ ವೈಯಕ್ತಿಕ ವಿಚಾರವಾಗಿ ಗಾಳಿ ಸುದ್ದಿಯೊಂದು ಹರಿದಾಡಿತ್ತು. ಅಮೂಲ್ಯ ಗೌಡ ಪ್ರೀತಿಯಲ್ಲಿ ಬಿದ್ದಿದ್ದು, ಕನ್ನಡ ಕಿರುತೆರೆಯ ನಟನನ್ನೇ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಯಿತು. ಕಮಲಿ ಧಾರಾವಾಹಿಯ ನಾಯಕ ರಿಷಿ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್ ಬಿಎಸ್ ಹಾಗೂ ಅಮೂಲ್ಯ ನಿಜ ಜೀವನದಲ್ಲಿಯೂ ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು.
ಇದೀಗ ಈ ಗಾಳಿ ಸುದ್ದಿಗೆ ಒಂದು ಸ್ಟಷ್ಟನೆ ಸಿಕ್ಕಿದ್ದು, ನಟ ನಿರಂಜನ್ ಜೊತೆ ಪ್ರೀತಿಯಲ್ಲಿರುವ ನಿಜ ಎಂದು ಅಮೂಲ್ಯ ಗೌಡ ಇನ್ಡೈರೆಕ್ಟ್ ಆಗಿ ಹೇಳಿದ್ದಾರೆ. ‘ಕಮಲಿ ಧಾರಾವಾಹಿ ಶುರುವಾದ ದಿನದಿಂದಲೂ ಈ ಒಂದು ಗಾಸಿಪ್ ಇದ್ದೇ ಇತ್ತು. ನನ್ನ ಪುಟ್ಟ ಪ್ರಪಂಚದಲ್ಲಿ ನಿರಂಜನ್ ಅವರು ಕೂಡ ಇದ್ದಾರೆ. ಕಮಲಿ ಧಾರಾವಾಹಿ ಮಾಡುವ ಸಮಯದಿಂದಲೂ ಅವರ ಕುಟುಂಬಕ್ಕೆ ನಾನು ಗೊತ್ತು. ನನ್ನ ಕುಟುಂಬಕ್ಕೆ ಅವರು ಗೊತ್ತು. ನಾವೆಲ್ಲಾ ಒಂದು ಫ್ಯಾಮಿಲಿ ಫ್ರೆಂಡ್ಸ್ ತರ ಕ್ಲೋಸ್ ಆಗಿದ್ದೇವೆ' ಎಂದು ಹೇಳಿದ್ದಾರೆ.
‘ಇದು ನಾರ್ಮಲ್ ವಿಷಯ ಅಲ್ಲದೇ ಇರುವುದರಿಂದ ಯಾವುದೇ ಗಾಸಿಪ್ ಬಂದರು ಏನೇ ಬಂದರು ಅಂಡರ್‌ಸ್ಟ್ಯಾಂಡಿಂಗ್ ಬಂದರೆ ಆಗಲಿ ಅಂತ ನಾವಿಬ್ಬರೂ ಟೈಮ್ ತೆಗೆದುಕೊಂಡಿದ್ದೇವೆ. ನಾವಿಬ್ಬರೂ ಸದ್ಯಕ್ಕೆ ಒಳ್ಳೆಯ ಫ್ರೆಂಡ್ಶಿಪ್‌ನಲ್ಲಿದ್ದೇವೆ. ನಾವಿಬ್ಬರೂ ಒಂದಾದರೆ ಒಳ್ಳೆಯದು, ಆಗಲಿಲ್ಲ ಅಂದರೂ ಬೇಜಾರಿಲ್ಲ. ನಾವಿಬ್ಬರು ಪ್ರೀತಿಸುತ್ತಿದ್ದೇವಾ, ಇಲ್ಲವಾ ಎನ್ನುವುದು ನಿಜ ಹೇಳಬೇಕು ಅಂದರೆ ನನಗೆ ಸಹ ಗೊತ್ತಿಲ್ಲ, ನೋಡೋಣ. ಮುಂದೆ ಆದರೂ ಆಗಬಹುದು. ಹೇಳಲು ಆಗುವುದಿಲ್ಲ. ನಮ್ಮಿಬ್ಬರ ಮಧ್ಯೆ ಪ್ರೀತಿ ಇಲ್ಲ ಅಂತಾ ನಾನು ಹೇಳುವುದಿಲ್ಲ. ಇವಾಗ ನಾನು ಇಲ್ಲ ಅಂತಾ ಹೇಳಿ ಮುಂದೆ ನಾವಿಬ್ಬರು ಪ್ರೀತಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಏನೇನು ಕಮೆಂಟ್ ಬರಬಹುದು ಅಂತಾ ನನಗೆ ಗೊತ್ತು' ಎಂದು ಇನ್ಡೈರೆಕ್ಟ್ ಆಗಿ ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಹೇಳಿದ್ದಾರೆ.
Rakesh Poojary: ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ತೆರಳದ ಚಿತ್ರತಂಡ ವಿರುದ್ಧ ಹಿತೇಶ್ ಆಕ್ರೋಶ
ತನ್ನ ಸ್ಕೂಲ್ ಲೈಫ್ನ ಲವ್ ಸ್ಟೋರಿ ಬಗ್ಗೆ ಮಾತನಾಡಿದ ಅಮೂಲ್ಯ, ‘ನಾನು ಸ್ಕೂಲಿನಲ್ಲಿ ಓದುತ್ತಿರಬೇಕಾದರೆ ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತಿದ್ದೆ. ಒಬ್ಬ ಹುಡುಗ ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನನ್ನು ಫಾಲೋ ಮಾಡೋಕೆ ಶುರು ಮಾಡಿದ್ದ. ನನ್ನ ಹತ್ತನೇ ತರಗತಿ ಮುಗಿಯುವವರೆಗೂ ಆತ ನನ್ನನ್ನು ದಿನವೂ ಫಾಲೋ ಮಾಡುತ್ತಿದ್ದ. ಆತ ಮಾತನಾಡಿಸುತ್ತಿರಲಿಲ್ಲ. ಆದರೆ ಪ್ರತೀ ದಿನವೂ ನನ್ನ ಹಿಂದೆ ಬರುತ್ತಿದ್ದ. ನಾನು ಕಾಲೇಜಿಗೆ ಹೋದಮೇಲೆ ಅಲ್ಲಿಯೂ ಬರುತ್ತಿದ್ದ. ಹೀಗೆ ಆತ ಒಮ್ಮೆ ನನ್ನನ್ನು ಮಾತನಾಡಿಸಲು ಬಂದಾಗ, ನಾನು ತುಂಬಾ ಕೋಪದಿಂದ ವರ್ತಿಸಿದ್ದೆ. ಅದು ಅವನಿಗೆ ಬೇಜಾರಾಗಿ ಆಮೇಲೆ ಅದು ಅಲ್ಲಿಗೆ ಮುಗಿಯಿತು. ಮೂರ್ನಾಲ್ಕು ವರ್ಷ ಆತ ದಿನವೂ ನನ್ನನ್ನು ಫಾಲೋ ಮಾಡಿದ್ದಾನೆ’ ಎಂದು ಅಮೂಲ್ಯ ಹೇಳಿಕೊಂಡಿದ್ದಾರೆ.