ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sarigamapa: ‘ಸರಿಗಮಪ' ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜು: ಈ ಬಾರಿ ಒಟಿಟಿಯಲ್ಲಿ ನೇರಪ್ರಸಾರ

ಮುಂದಿನ ತಿಂಗಳು ಜೂನ್ 05 ರಂದು ಸರಿಗಮಪ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆಗೆ ಅದ್ಧೂರಿಯಾಗಿ ಅಂತ್ಯ ಹಾಡುವುದಕ್ಕೆ ಝೀ ಸಂಸ್ಥೆ ನಿರ್ಧರಿಸಿದೆ. ಜೂನ್ 5 ರಂದು ಲೈವ್ ಸ್ಟ್ರೀಮಿಂಗ್ ಕೂಡ ಆಗುತ್ತಿದೆ. ಸಂಜೆ 6 ಗಂಟೆಗೆ ಸ್ಟ್ರೀಮಿಂಗ್ ಪ್ಲಾನ್ ಆಗಿದೆ.

‘ಸರಿಗಮಪ' ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜು

Sarigamapa

Profile Vinay Bhat May 29, 2025 4:14 PM

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಸರಿಗಮಪ (Saregamapa). Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಅನೇಕ ಸಿಂಗರ್​ಗಳನ್ನು ಕೊಡುಗೆಯಾಗಿ ನೀಡಿದೆ. ಸಂಜಿತ್ ಹೆಗ್ಡೆ, ಪೃಥ್ವಿಭಟ್, ಜಸ್ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾಭಟ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿಶಾಸ್ತ್ರೀ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ, ರಜತ್ ಹೆಗ್ಡೆ, ಹರ್ಷ, ದರ್ಶನ್, ಕಂಬದ ರಂಗಯ್ಯ, ಇಂಪನಾ ಜಯರಾಜ್, ಜ್ಞಾನಗುರುರಾಜ್, ಸುಪ್ರೀತ್, ನಿಹಾಲ್, ಅಶ್ವಿನ್ ಶರ್ಮ ರಂತಹ ಪ್ರತಿಭಾವಂತ ಗಾಯಕರನ್ನ ಕೊಡುಗೆಯಾಗಿ ನೀಡಿದೆ.

ಇದೀಗ ಮತ್ತೊಂದಿಷ್ಟು ಗಾಯಕರು ಈ ವೇದಿಕೆ ಮುಖೇನ ಹೊರಬರಲಿದ್ದಾರೆ. ಮುಂದಿನ ತಿಂಗಳು ಜೂನ್ 05 ರಂದು ಸರಿಗಮಪ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆಗೆ ಅದ್ಧೂರಿಯಾಗಿ ಅಂತ್ಯ ಹಾಡುವುದಕ್ಕೆ ಝೀ ಸಂಸ್ಥೆ ನಿರ್ಧರಿಸಿದೆ. ಜೂನ್ 5 ರಂದು ಲೈವ್ ಸ್ಟ್ರೀಮಿಂಗ್ ಕೂಡ ಆಗುತ್ತಿದೆ. ಸಂಜೆ 6 ಗಂಟೆಗೆ ಸ್ಟ್ರೀಮಿಂಗ್ ಪ್ಲಾನ್ ಆಗಿದೆ. ಗ್ರ್ಯಾಂಡ್ ಫಿನಾಲೆಯನ್ನ ಸಂಜೆ 6 ಗಂಟೆ ಹೊತ್ತಿಗೆ ZEE5 ಅಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಇಲ್ಲಿ ಸ್ಟ್ರೀಮಿಂಗ್ ಆದ್ಮೇಲೆ ಝೀ ಕನ್ನಡ ಚಾನೆಲ್‌ ಅಲ್ಲಿ ಪ್ರಸಾರ ಆಗುತ್ತಿದೆ.

ಇಲ್ಲಿವರೆಗೂ ರಿಯಾಲಿಟಿ ಶೋಗಳನ್ನ ಓಟಿಟಿಯಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿಯೇ ಇಲ್ಲ. ಆದರೆ, ಝೀ ಕನ್ನಡ ಚಾನೆಲ್ ಇದೀಗ ಆ ಒಂದು ಪ್ರಯೋಗ ಮಾಡುತ್ತಿದೆ. ಸಂಗೀತ ಪ್ರಿಯರು ತಮ್ಮ ಮೋಬೈಲ್ ಅಲ್ಲಿಯೇ ಈ ಒಂದು ಸರಿಗಮಪ ಶೋದ ಫಿನಾಲೆ ನೋಡ ಬಹುದಾಗಿದೆ.

Bhagya Lakshmi Serial: ಮುಖಾಮುಖಿಯಾದ ಭಾಗ್ಯ- ಆದೀಶ್ವರ್: ಮೊದಲ ಭೇಟಿಯಲ್ಲೇ ಗಲಾಟೆ

ಇನ್ನು ಟಿಕೆಟ್‌ ಟು ಫಿನಾಲೆ ರೌಂಡ್‌ನಲ್ಲಿ ಬೀದರ್‌ನ ಶಿವಾನಿ ಹಾಗೂ ಉಡುಪಿಯ ಆರಾಧ್ಯ ರಾವ್ ನೇರವಾಗಿ ಆಯ್ಕೆಯಾಗಿದ್ದರು. ಮೇ 24 ಹಾಗೂ 25ರಂದು ನಡೆದ ಸೆಮಿ ಫೈನಲ್​ನಲ್ಲಿ ರಶ್ಮಿ, ಬಾಳು ಬೆಳಗುಂದಿ, ದ್ಯಾಮೇಶ್, ಅಮೋಘ ವರ್ಷ ಅವರು ಕೂಡ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಸೆಮಿಫೈನಲ್‌ ರೌಂಡ್‌ ಸೇರಿ ಅಂತಿಮವಾಗಿ ಆರು ಸ್ಪರ್ಧಿಗಳು ಫಿನಾಲೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಕಪ್‌ ಗೆಲ್ಲೋರು ಯಾರು ಅನ್ನೋ ಕುತೂಹಲ ಕೂಡ ಹೆಚ್ಚಾಗಿದ್ದು, ಎಲ್ಲರ ಚಿತ್ತ ಈ ಆರು ಸ್ಪರ್ಧಿಗಳತ್ತ ಇದೆ.

ಇದರ ಮಧ್ಯೆ ಗ್ರ್ಯಾಂಡ್ ಫಿನಾಲೆಗೂ ಮುನ್ನ ಪ್ರಿ-ಫಿನಾಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಫಿನಾಲೆ ಏರಿದ ಸ್ಪರ್ಧಿಗಳ ಜೊತೆ ಜಡ್ಜ್​ಗಳು ಒಂದಷ್ಟು ಸಮಯ ಕಳೆದಿದ್ದಾರೆ. ಈ ಶನಿವಾರ ಹಾಗೂ ಭಾನುವಾರ ಎಪಿಸೋಡ್ ಫನ್ ಆಗಿರಲಿದೆ.