BBK 12: ಸುದೀಪ್ ಮನವೊಲಿಸುವಲ್ಲಿ ಕಲರ್ಸ್ ಯಶಸ್ವಿ: ಬಿಗ್ ಬಾಸ್ 12ಕ್ಕೆ ಕಿಚ್ಚನ ನಿರೂಪಣೆ
ಕಲರ್ಸ್ ಕನ್ನಡ ಹಾಗೂ ಅದರ ಆಯೋಜಕರು ಇಂದು ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಇದರಲ್ಲಿ ಕಿಚ್ಚ ಸುದೀಪ್ ಹಾಜರಾಗಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಅವರೇ ಸೀಸನ್ 12 ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಕಿಚ್ಚನ ಮಧ್ಯೆ ನಡೆದ ಮಾತುಕತೆ ಯಶಸ್ವಿಯಾಗಿದೆ.

Kiccha Sudeep BBK 12

ಬಿಗ್ ಬಾಸ್ ಕನ್ನಡ ಸೀಸನ್ 11ರ ಫೀವರ್ ಮುಗಿಯುವ ಹೊತ್ತಿಗೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada season 12) ಕುರಿತು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಸದ್ಯದಲ್ಲೇ ಬಿಬಿಕೆ 12 ಸೀಸನ್ ಶುರುವಾಗಲಿದೆ. ಆದರೆ, ಈ ಬಾರಿ ನಿರೂಪಕರಾಗಿ ಯಾರು ಇರುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಯಾಕೆಂದರೆ ಕಳೆದ ಸೀಸನ್ನ ಅಂತ್ಯದ ವೇಳೆಗ ಕಿಚ್ಚ ಸುದೀಪ್ ಅವರು ಇದು ನನ್ನ ಕೊನೆಯ ಆವೃತ್ತಿ ಎಂದು ಹೇಳಿದ್ದರು. ಆದರೀಗ ಬಂದಿರುವ ಮಾಹಿತಿಯ ಪ್ರಕಾರ ಕಿಚ್ಚ ಬಿಗ್ ಬಾಸ್ 12 ನಿರೂಪಣೆ ಮಾಡಲಿದ್ದಾರೆ.
ಕಲರ್ಸ್ ಕನ್ನಡ ಹಾಗೂ ಅದರ ಆಯೋಜಕರು ಇಂದು ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಇದರಲ್ಲಿ ಕಿಚ್ಚ ಸುದೀಪ್ ಹಾಜರಾಗಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಅವರೇ ಸೀಸನ್ 12 ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಕಿಚ್ಚನ ಮಧ್ಯೆ ನಡೆದ ಮಾತುಕತೆ ಯಶಸ್ವಿಯಾಗಿದೆ.
ಕಿಚ್ಚ ಸುದೀಪ್ ಕೆಲವು ಷರತ್ತುಗಳನ್ನು ಹಾಕಿದ್ದರು. ಅದರಲ್ಲಿ ಬಲವಾಗಿ ಕೇಳಿ ಬರುತ್ತಿದ್ದಿದ್ದು ಕನ್ನಡ ಪ್ರಾಮುಖ್ಯತೆ ನೀಡಬೇಕು ಎಂಬುದಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಯನ್ನೇ ಬಳಸುವುದಕ್ಕೆ ಅಸಮಧಾನಗೊಂಡಿದ್ದರು. ಅದಕ್ಕೆ ಕಿಚ್ಚ ಸುದೀಪ್ ಕನ್ನಡ ಬಳಕೆಯಾಗಬೇಕು ಎಂದು ಹೇಳಿದ್ದರು ಎನ್ನುಲಾಗಿದೆ. ಇದರೊಂದಿಗೆ ಇನ್ನೂ ಕೆಲವು ಷರತ್ತುಗಳನ್ನು ಹಾಕಿದ್ದರು. ಆ ಬಗ್ಗೆ ಮಾತುಕತೆ ನಡೆದು, ಕೊನೆಗೆ ಕಿಚ್ಚನ ಮನವೊಲಿಸುವಲ್ಲಿ ಕಲರ್ಸ್ ಕನ್ನಡ ಯಶಸ್ವಿಯಾಗಿದೆ.
ಕಳೆದ 11 ಸೀಸನ್‌ಗಳಿಂದ ನಿರಂತರವಾಗಿ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತ ಬಂದಿದ್ದಾರೆ. ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ನಿರೂಪಣೆ ಮಾಡುವ ಸ್ಟಾರ್‌ಗಳು ಬದಲಾಗಿದ್ದಾರೆ. ಆದರೆ, ಕನ್ನಡದಲ್ಲಿ ಹಾಗಾಗಿರಲಿಲ್ಲ. ಕಿಚ್ಚ ಸುದೀಪ್ ನಿರೂಪಣಾ ಶೈಲಿಯನ್ನು ಮೆಚ್ಚಿಕೊಂಡಿದ್ದ ವೀಕ್ಷಕರು ಇವರ ಸ್ಥಾನಕ್ಕೆ ಬೇರೆ ನಿರೂಪಕರನ್ನು ಊಹಿಸುವುದಕ್ಕೂ ಸಾಧ್ಯವಾಗಿರಲಿಲ್ಲ. ಆದರೀಗ ಕಲರ್ಸ್ ಕನ್ನಡ ಕಿಚ್ಚ ಸುದೀಪ್ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವುದು ಅವರನ್ನು ಅಂತಿಮಗೊಳಿಸುವುದು, ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಈಗಾಗಲೇ ಆಯೋಜಕರು ಆರಂಭ ಮಾಡಿದ್ದಾರೆ. ಕೆಲ ವರದಿಗಳ ಪ್ರಕಾರ, ಈ ಬಾರಿ ಬಿಗ್ ಬಾಸ್ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಈಗಾಗಲೇ ತಯಾರಾಗಿದೆಯಂತೆ. ಆದರೆ ಅಂತಿಮ ಹಂತದ ಜರಡಿ ಹಿಡಿಯುವ ಕಾರ್ಯಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.