BBK 12: ಬಿಗ್ ಬಾಸ್ ಮನೆಗೆ ಕಾಲಿಟ್ಟ ಕರಾವಳಿಯ ಕುವರಿ ಬಲೆ.. ಬಲೆ.. ರಕ್ಷಿತಾ ಶೆಟ್ಟಿ: ಯಾರಿವರು?
ಬಿಗ್ ಬಾಸ್ ಮನೆಗೆ ಕಾಲಿಡಲಿರುವ ನಾಲ್ಕನೇ ಸ್ಪರ್ಧಿ ಯಾರೆಂಬ ಸಣ್ಣ ಝಲಕ್ ಕಲರ್ಸ್ ಬಿಡುಗಡೆ ಮಾಡಿದೆ. ನಾಲ್ಕನೇ ಸ್ಪರ್ಧಿ.. ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿ. ಇವರು ಸ್ಟೇಜ್ ಮೇಲೆ ಬರುವ ಪ್ರೋಮೋವನ್ನು ಕಲರ್ಸ್ ಬಿಡುಗಡೆ ಮಾಡಿದ್ದು, ನಮ್ಮ ಕರಾವಳಿಯ ಕನ್ನಡತಿ ರಕ್ಷಿತಾ ಶೆಟ್ಟಿ ಅವರಿಗೆ ಸ್ವಾಗತ ಎಂದು ಸುದೀಪ್ ಹೇಳಿದ್ದಾರೆ.

Bigg Boss Rakshita Shetty -

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಸಂಚಿಕೆ ಪ್ರಸಾರ ಕಾಣಲಿದೆ. ಇದರ ಮೂಲಕ ಈ ಬಾರಿ ದೊಡ್ಮನೆಯೊಳಗೆ ಹೋಗುವ ಸ್ಪರ್ಧಿಗಳು ಯಾರೆಲ್ಲ ಎಂಬುದು ತಿಳಿಯಲಿದೆ. ಆದರೆ, ಈ ಬಾರಿಯ ಬಿಗ್ ಬಾಸ್ನ ಟ್ಯಾಗ್ ಲೈನ್ ‘‘Expect the Unexpected’’ ಇದಕ್ಕೆ ಹೊಂದಿಕೆ ಆಗುವಂತೆ ಓಪನಿಂಗ್ ಎಪಿಸೋಡ್ ಪ್ರಸಾರಕ್ಕೂ ಮುನ್ನವೇ ಹೊಸ ಕಂಟೆಸ್ಟೆಂಟ್ನ ಹೆಸರು ಕಲರ್ಸ್ ಕನ್ನಡ ರಿವೀಲ್ ಮಾಡಿದೆ.
ಕಲರ್ಸ್ ಕನ್ನಡ ವಾಹಿನಿಯ ನಿನ್ನೆ ಕ್ವಾಟ್ಲೆ ಕಿಚನ್‌ನ ಫಿನಾಲೆಯಲ್ಲಿ ಮೂವರು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಿತ್ತು. ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು. ಇದೀಗ ನಾಲ್ಕನೇ ಸ್ಪರ್ಧಿ ಯಾರೆಂಬ ಸಣ್ಣ ಝಲಕ್ ಕಲರ್ಸ್ ಬಿಡುಗಡೆ ಮಾಡಿದೆ. ನಾಲ್ಕನೇ ಸ್ಪರ್ಧಿ.. ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿ.
ಇವರು ಸ್ಟೇಜ್ ಮೇಲೆ ಬರುವ ಪ್ರೋಮೋವನ್ನು ಕಲರ್ಸ್ ಬಿಡುಗಡೆ ಮಾಡಿದ್ದು, ನಮ್ಮ ಕರಾವಳಿಯ ಕನ್ನಡತಿ ರಕ್ಷಿತಾ ಶೆಟ್ಟಿ ಅವರಿಗೆ ಸ್ವಾಗತ ಎಂದು ಸುದೀಪ್ ಹೇಳಿದ್ದಾರೆ. ಇವರಿಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ.. ಆದರೆ ತುಳು ಭಾಷೆ ಮಾತನಾಡುತ್ತಾರೆ. ಬಲೆ ಬಲೆ ಎನ್ನುತ್ತ ವ್ಲಾಗ್ ಮಾಡುವ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ಸ್ ಇದ್ದಾರೆ. ಕನ್ನಡ ಹಾಗೂ ತುಳು ಎರಡೂ ಭಾಷೆಯಲ್ಲಿ ಇವರು ವ್ಲಾಗ್ ಮಾಡಿ ಫೇಮಸ್ ಆಗಿದ್ದಾರೆ.
ರಕ್ಷಿತಾ ಶೆಟ್ಟಿ ಮಂಗಳೂರಿನವರು. ಆದರೆ, ಮಂಗಳೂರಿನಲ್ಲಿ ಹುಟ್ಟಿದ್ದಾದರೂ ಬೆಳೆದಿದ್ದು ಮುಂಬೈನಲ್ಲಿ. ಇವರ ತಾಯಿಯ ತವರು ಮನೆ ಮಂಗಳೂರು. ಇವರು ಬಿಬಿಎಂ ಓದಿದ್ದು ರಾಷ್ಟ್ರೀಯ ಕ್ರೀಡಾಪಟು ಕೂಡ ಹೌದು. ಸದ್ಯ ಮತ್ತೊಂದು ಇಂಟ್ರೆಸ್ಟಿಂಗ್ ಕಂಟೆಸ್ಟೆಂಡ್ ದೊಡ್ಮನೆಯೊಳಗೆ ಕಾಲಿಟ್ಟಿದ್ದು, ಹೇಗೆ ಆಡುತ್ತಾರೆ ನೋಡಬೇಕು.
BBK 12: ಇಂಟರೆಸ್ಟಿಂಗ್ ಸ್ಪರ್ಧಿಗಳು: ಮೊದಲ ದಿನದ ಶೂಟಿಂಗ್ ಮುಗಿಸಿ ಕಿಚ್ಚ ಸುದೀಪ್ ಟ್ವೀಟ್