ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shobha Shetty: ನವರಾತ್ರಿಗೆ ಸ್ಪೆಷಲ್ ವಿಡಿಯೋ ಹಂಚಿಕೊಂಡು ಶೋಭಾ ಶೆಟ್ಟಿ

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಇವರು ಇದೀಗ ನವರಾತ್ರಿ ಪ್ರಯುಕ್ತ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ನವರಾತ್ರಿಯ ಎರಡನೇ ದಿನ ಎಂದು ಕೆಂಪು ಬಣ್ಣದ ಸೀರೆಯುಟ್ಟು ದುರ್ಗಾ ದೇವಿಗೆ ಪೂಜೆ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಪೂಜೆಯ ಮಹತ್ವವನ್ನು ವಿವರಿಸಿದ್ದಾರೆ.

ನವರಾತ್ರಿಗೆ ಸ್ಪೆಷಲ್ ವಿಡಿಯೋ ಹಂಚಿಕೊಂಡು ಶೋಭಾ ಶೆಟ್ಟಿ

Shobha Shetty Navaratri -

Profile Vinay Bhat Sep 24, 2025 7:47 AM

ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಶೋಭಾ ಶೆಟ್ಟಿ (Shobha Shetty) ಇದೀಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಇವರು ವೈಯಕ್ತಿಕ ಕಾರಣದಿಂದ ಬೇಗನೆ ಮನೆಯಿಂದ ಹೊರಹೋದರು. ಶೋಭಾ ಅವರಿಗೆ ತೆಲುಗು ರಂಗ ಎರಡನೇ ಮನೆಯಿದ್ದಂತೆ. ಈ ಹಿಂದೆ ತೆಲುಗು ಬಿಗ್​ಬಾಸ್ ಸೀಸನ್ 7 ರಲ್ಲಿ ಕೂಡ ಶೋಭಾ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಇವರು ಇದೀಗ ನವರಾತ್ರಿ ಪ್ರಯುಕ್ತ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ನವರಾತ್ರಿಯ ಎರಡನೇ ದಿನ ಎಂದು ಕೆಂಪು ಬಣ್ಣದ ಸೀರೆಯುಟ್ಟು ದುರ್ಗಾ ದೇವಿಗೆ ಪೂಜೆ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಪೂಜೆಯ ಮಹತ್ವವನ್ನು ವಿವರಿಸಿದ್ದಾರೆ. ‘‘ನವರಾತ್ರಿಯ ಎರಡನೇ ದಿನದಂದು ಭಕ್ತರು ದುರ್ಗಾ ದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುತ್ತಾರೆ, ಇದು ತಪಸ್ಸು, ಭಕ್ತಿ ಮತ್ತು ಜ್ಞಾನದ ಸಂಕೇತ. ಮಹತ್ವ: ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಬುದ್ಧಿವಂತಿಕೆ, ದೃಢಸಂಕಲ್ಪ ಮತ್ತು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.’’

‘‘ಪೂಜೆ: ಸಂತೋಷ, ಸಂಪತ್ತು ಮತ್ತು ದೀರ್ಘಾಯುಷ್ಯವನ್ನು ಬಯಸುವ ಭಕ್ತರು ದುರ್ಗಾ ದೇವಿಗೆ ಸಿಹಿತಿಂಡಿಗಳನ್ನು (ಸಕ್ಕರೆ ಅಥವಾ ಇತರ ಸಿಹಿತಿಂಡಿಗಳು) ಅರ್ಪಿಸುತ್ತಾರೆ. ಆಚರಣೆಗಳು: ಈ ದಿನದಂದು, ಭಕ್ತರು ಬ್ರಹ್ಮಚರ್ಯ ಆಶ್ರಮದಲ್ಲಿ ಸಹ ವಿದ್ಯಾರ್ಥಿಗಳೊಂದಿಗೆ ದುರ್ಗಾ ದೇವಿಯನ್ನು ಅವಳ ರೂಪದಲ್ಲಿ ಪೂಜಿಸುತ್ತಾರೆ.’’ ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ತೆಲುಗಿನಲ್ಲಿ ಶೋಭಾ ತಮ್ಮ ಜಗಳ, ಮಾತುಗಳ ಮೂಲಕವೇ ಜನಪ್ರಿಯ ಆಗಿದ್ದರು. ಮೂಲತ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. ಕಾರ್ತಿಕ ದೀಪಂ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯೊಂದಿಗೆ ಕಳೆದ ವರ್ಷ ಎಂಗೇಜ್ಮೆಂಟ್ ಕೂಡ ಆಗಿದೆ. ನಿಶ್ಚಿತಾರ್ಥ ಆಗಿ ಒಂದು ವರ್ಷ ಕಳೆದಿದ್ದು, ಈ ವರ್ಷವೇ ಶೋಭಾ ಮದುವೆ ಆಗಲಿದ್ದಾರೆ ಎನ್ನಲಾಗಿದೆ.

Ninagagi Serial: ದೃಷ್ಟಿಬೊಟ್ಟು ಬೆನ್ನಲ್ಲೇ ಕಲರ್ಸ್​ನ ಮತ್ತೊಂದು ಧಾರಾವಾಹಿ ಅಂತ್ಯ: ಫೋಟೋ ಹಂಚಿಕೊಂಡ ತಂಡ