ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chaithra Kundapura: ಅವರಿಬ್ಬರು ಕಳ್ಳರು: ಮದುವೆ ಸಂಭ್ರಮದಲ್ಲಿರುವ ಚೈತ್ರಾ ಕುಂದಾಪುರ ಬಗ್ಗೆ ತಂದೆಯಿಂದ ಶಾಕಿಂಗ್ ಹೇಳಿಕೆ

ಚೈತ್ರಾ ಅವರು ಶಾಸ್ತ್ರ ಸಂಪ್ರದಾಯವನ್ನು ಹೆಚ್ಚು ಫಾಲೋ ಮಾಡುವವರು. ಅವರ ಪತಿ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದಾರೆ. ಆದರೆ, ಈ ಮದುವೆಗೆ ಚೈತ್ರಾ ಅವರು ತಮ್ಮ ತಂದೆಗೆ ಸರಿಯಾಗಿ ಕರೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಚೈತ್ರಾ ಕುಂದಾಪುರ ಅವರ ತಂದೆಯೇ ತನ್ನ ಮಗಳ ಹಾಗೂ ಅಳಿಯನ ಬಗ್ಗೆ ದೊಡ್ಡ ಆರೋಪ ಮಾಡಿದ್ದಾರೆ.

ಅವರಿಬ್ಬರು ಕಳ್ಳರು: ಚೈತ್ರಾ ಕುಂದಾಪುರ ಬಗ್ಗೆ ತಂದೆಯಿಂದ ಶಾಕಿಂಗ್ ಹೇಳಿಕೆ

Chaithra kundapura Father

Profile Vinay Bhat May 15, 2025 1:52 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ, ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಅವರ ಮದುವೆ ಮೇ 9 ರಂದು ಶ್ರೀಕಾಂತ್‌ ಕಶ್ಯಪ್‌ ಅವರ ಜೊತೆ ಕುಂದಾಪುರದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ನಡೆದಿದೆ. ಚೈತ್ರಾ ಅವರದ್ದು ಲವ್‌ ಕಮ್ ಅರೇಂಜ್ಡ್‌ ಮ್ಯಾರೇಜ್. ಮದುವೆಗೆ ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಹಾಜರಿದ್ದರು. ರಜತ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ಶಾಸ್ತ್ರವನ್ನು ಮಾಡಿದರು. ಆದರೆ, ಈ ಮದುವೆಯಲ್ಲಿ ಚೈತ್ರಾ ಅವರ ತಂದೆ ಎಲ್ಲೂ ಕಾಣಿಸಿಕೊಂಡಿಲ್ಲ.

ಚೈತ್ರಾ ಅವರು ಶಾಸ್ತ್ರ ಸಂಪ್ರದಾಯವನ್ನು ಹೆಚ್ಚು ಫಾಲೋ ಮಾಡುವವರು. ಅವರ ಪತಿ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದಾರೆ. ಮದುವೆಯ ಬಳಿಕ ಕೂಡ ಚೈತ್ರಾ ಅವರು, ನಾವಿಬ್ಬರೂ ಕೂಡ ಶಾಸ್ತ್ರ ಸಂಪ್ರದಾಯಗಳನ್ನು ನಂಬುವವರು. ನಮಗೆ ನಮ್ಮ ಮದುವೆಯಲ್ಲಿ ಇದನ್ನ ಫಾಲೋ ಮಾಡಬೇಕು, ಅದೇ ನಮಗೆ ಬಹಳ ಮುಖ್ಯ ಅಂತೆನಿಸುತ್ತು. ಹಾಗಾಗಿ ನಾವು ತುಂಬಾ ಸಿಂಪಲ್‌ ಆಗಿ ಮದುವೆಯಾಗಿದ್ದೇವೆ ಎಂದು ಹೇಳಿದ್ದರು. ಆದರೆ, ಈ ಮದುವೆಗೆ ಚೈತ್ರಾ ಅವರು ತಮ್ಮ ತಂದೆಗೆ ಸರಿಯಾಗಿ ಕರೆದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸ್ವತಃ ಚೈತ್ರಾ ಕುಂದಾಪುರ ಅವರ ತಂದೆಯೇ ತನ್ನ ಮಗಳ ಹಾಗೂ ಅಳಿಯನ ಬಗ್ಗೆ ದೊಡ್ಡ ಆರೋಪ ಮಾಡಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಚೈತ್ರಾ ತಂದೆ ಬಾಲಕೃಷ್ಣ, ‘‘ನನ್ನ ಮಗಳು ವಿವಾಹಕ್ಕೆ ನನಗೆ ಸರಿಯಾದ ಆಮಂತ್ರಣ ಕೊಟ್ಟಿಲ್ಲ. ಮಗಳ ಮದುವೆಯನ್ನು ನಾನು ಒಪ್ಪುವುದಿಲ್ಲ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ (ಚೈತ್ರಾ ಅವರ ಅಮ್ಮ) ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ಚೈತ್ರಾ ಬಿಗ್ ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನನ್ನು ಮನೆಯಲ್ಲಿ ಬಿಟ್ಟು ಅಮ್ಮ-ಮಗಳು ಬೀಗ ಹಾಕಿ ಹೋಗಿದ್ದರು’’ ಎಂದು ಚೈತ್ರಾ ಅವರ ತಂದೆ ಬಾಲಕೃಷ್ಣ ಆರೋಪ ಮಾಡಿದ್ದಾರೆ.

Bhagya Lakshmi Serial: ಕಿಶನ್ ಗುಣ, ನಡತೆಗೆ ಫಿದಾ ಆದ ಕುಸುಮಾ: ಪೂಜಾ ಜೊತೆ ಮದುವೆ ಫಿಕ್ಸ್?

‘‘ಚೈತ್ರಾನ ಇಂದು ತುಂಬಾ ಹೊಗಳುತ್ತಿದ್ದಾರೆ. ಅವಳಿಗೆ ಅಷ್ಟು ದೊಡ್ಡ ಸ್ಥಾನಮಾನ ಕೊಡುವ ಅಗತ್ಯವಿಲ್ಲ. ತಂದೆಯನ್ನೇ ದೂರವಿಟ್ಟವರು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ?. ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಅದು ಹೆಮ್ಮೆಯ ವಿಷಯ. ಆದರೆ, ಅವಳು ಕೊಟ್ಟಿರುವುದು ಮೋಸದ ಹಣ. ಮದುವೆ ಸಂದರ್ಭ ಆಕೆ ನನ್ನಲ್ಲಿ ಹಣ ಕೇಳಿದಳು. ನಾನು ಹೋಟೆಲ್​ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಚೈತ್ರಾ ಮತ್ತು ಆಕೆಯ ತಾಯಿ ಹಣಕ್ಕಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರ ಪತಿ ನಮ್ಮ ಮನೆಯಲ್ಲಿ ಇದ್ದವನು. ಅವನು ಕೂಡ ಕಳ್ಳ. ಅವರಿಗೆ ಮಾನ ಮರ್ಯಾದೆ ಇಲ್ಲ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಆಕೆ ಹಣ ಹೊಡೆದಿದ್ದಾಳೆ. ಆ ಹಣವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿದ್ದಾಳೆ’’ ಎಂದು ಹೇಳಿದ್ದಾರೆ.