ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ರಾಶಿಕಾಗೆ ವಾರ್ನ್ ಮಾಡಿದ ಕಿಚ್ಚ: ಒಂದೇ ವಾರಕ್ಕೆ ಎಂಡ್ ಆಗುತ್ತ ಸೂರಜ್ ಜೊತೆಗಿನ ಲವ್?

ಹ್ಯಾಂಡ್ಸಮ್ ಹಂಕ್ ಸೂರಜ್ ಸಿಂಗ್ ಕಳೆದ ವಾರ ದೊಡ್ಮನೆಗೆ ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಆಗ ಬಿಗ್ ಬಾಸ್ ಇವರಿಗೆ, ಈ ಮನೆಯ ಸುಂದರ ಸದಸ್ಯೆ ಯಾರು ಅವರಿಗೆ ಒಂದು ರೆಡ್ ರೋಸ್ ಕೊಡಿ ಎಂದು ಹೇಳಿದರು. ಸೂರಜ್ ತಕ್ಷಣವೇ ಕೆಂಪು ಗುಲಾಬಿಯನ್ನು ರಾಶಿಕಾಗೆ ನೀಡಿದ್ದಾರೆ. ಇಲ್ಲಿಂದ ರಾಶಿಕಾ ತಮ್ಮ ಆಟವನ್ನೇ ಮರೆತು ದಿನಪೂರ್ತಿ ಸೂರಜ್ ಜೊತೆಗೇ ಸಮಯ ಕಳೆಯುತ್ತಿದ್ದಾರೆ.

ರಾಶಿಕಾಗೆ ವಾರ್ನ್ ಮಾಡಿದ ಕಿಚ್ಚ

Rashika Suraj Sudeep -

Profile Vinay Bhat Oct 27, 2025 7:26 AM

ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಲವ್ ಹುಟ್ಟೋದು ಕಾಮನ್.. ಆದ್ರೆ ಅದು ಆಟಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಬಿಗ್ ಬಾಸ್ ಮನೆಯೊಳಗಿನ ಪ್ರೀತಿ-ಪ್ರೇಮ ನಿಮ್ಮ ಪರ್ಸನ್ ವಿಚಾರ.. ಆದರೆ ಅದು ಟಾಸ್ಕ್​ಗೆ ಎಫೆಕ್ಟ್ ಆದಾಗ ಅಥವಾ ಮನೆಯಲ್ಲಿ ಅವರ ಉಳಿವಿಗೆ ಕುತ್ತು ಬಂದಾಗ ವೀಕೆಂಡ್ ಕಿಚ್ಚ ಸುದೀಪ್ ಬಂದು ಆ ಸ್ಪರ್ಧಿಗೆ ಎಚ್ಚರಿಕೆ ನೀಡುತ್ತಾರೆ. ಆದರೆ, ಇದೆಲ್ಲ ನಡೆಯುವುದು ಅರ್ಧ ಸೀಸನ್ ಆದ ನಂತರ. ಆದರೆ, ಈ ಬಾರಿಯ ಸೀಸನ್​ನಲ್ಲಿ ಹಾಗಿಲ್ಲ. ಬಿಗ್ ಬಾಸ್ ಕನ್ನಡ 12ನೇ ಸೀಸನ್ ಶುರುವಾಗಿ ನಾಲ್ಕು ವಾರ ಆಗಿದೆಯಷ್ಟೆ. ಅದಾಗಲೇ ರಾಶಿಕಾ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್ ಸಿಂಗ್ ಜೊತೆ ಪ್ರೀತಿಯಲ್ಲಿ ಬಿದ್ದಿರುವಂತೆ ಕಾಣುತ್ತಿದೆ.

ಹೌದು, ಹ್ಯಾಂಡ್ಸಮ್ ಹಂಕ್ ಸೂರಜ್ ಸಿಂಗ್ ಕಳೆದ ವಾರ ದೊಡ್ಮನೆಗೆ ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಆಗ ಬಿಗ್ ಬಾಸ್ ಇವರಿಗೆ, ಈ ಮನೆಯ ಸುಂದರ ಸದಸ್ಯೆ ಯಾರು ಅವರಿಗೆ ಒಂದು ರೆಡ್ ರೋಸ್ ಕೊಡಿ ಎಂದು ಹೇಳಿದರು. ಸೂರಜ್ ತಕ್ಷಣವೇ ಕೆಂಪು ಗುಲಾಬಿಯನ್ನು ರಾಶಿಕಾಗೆ ನೀಡಿದ್ದಾರೆ. ಇಲ್ಲಿಂದ ರಾಶಿಕಾ ತಮ್ಮ ಆಟವನ್ನೇ ಮರೆತು ದಿನಪೂರ್ತಿ ಸೂರಜ್ ಜೊತೆಗೇ ಸಮಯ ಕಳೆಯುತ್ತಿದ್ದಾರೆ.

ಸೂರಜ್ ಬಂದ ಎರಡನೇ ದಿನವೇ ರಾಶಿಕಾ ಕೈ ಕೈ ಹಿಡಿದುಕೊಂಡು ಮಾತನಾಡಲು ಆರಂಭಿಸಿದ್ದರು. ಪ್ರೀತಿ ವಿಚಾರವನ್ನು ದಾಳವಾಗಿ ಬಳಕೆ ಮಾಡಿಕೊಂಡು ಗೆಲ್ಲಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಅಲ್ಲದೆ ರಾಶಿಕಾ ಶೆಟ್ಟಿ ಅವರೇ ಸೂರಜ್‌ ಬಳಿ ಬಂದು, ಯಾರಾದರೂ ಏನಾದರೂ ಹೇಳ್ತಾರಾ ಅಂತ ತಲೆ ಕೆಡಿಸಿಕೊಳ್ಳಬೇಡ, ನೀನು ನನ್ನ ಜೊತೆ ಮಾತಾಡು, ನಾನು ಏನೂ ಅಂದುಕೊಳ್ಳಲ್ಲ ಎಂದು ಹೇಳಿದ್ದಾರೆ. ಇಲ್ಲಿಂದ ಇವರಿಬ್ಬರು ಮಾತುಕತೆ ಜೋರಾಗಿ ಸಾಗುತ್ತಿದೆ.

ಇದೀಗ ಸುದೀಪ್ ಅವರು ನೇರವಾಗಿ ರಾಶಿಕಾ-ಸೂರಜ್​ಗೆ ಎಚ್ಚರಿಕೆ ನೀಡಿದ್ದಾರೆ. ನೀವು (ಸೂರಜ್) ಬಂದು ಶರ್ಟ್​ ತೆಗೆದಿದ್ದು ನೋಡಿ ಕೆಲವರು ಆಟ ಆಡುವುದನ್ನೇ ನಿಲ್ಲಿಸಿದ್ದಾರೆ. ಅಲ್ಲಿ ಚೇಂಜ್ ಆದವರು ಆಟವನ್ನೇ ಆಡುತ್ತಿಲ್ಲ. ಹೀಗೆ ಮುಂದುವರಿದರೆ ನೀವು ಅಲ್ಲೇ ಇರ್ತೀರಿ, ನೀವು ಔಟ್ ಆಗ್ತೀರಾ ಎಂದು ಸುದೀಪ್ ಅವರು ರಾಶಿಕಾಗೆ ಎಚ್ಚರಿಕೆ ನೀಡಿದರು. ಅಭಿಷೇಕ್‌ ಶ್ರೀಕಾಂತ್‌ ಅವರು ಶರ್ಟ್‌ ಬಿಚ್ಚಿದರೂ ಕೂಡ, ಯಾರು ಅವರನ್ನು ನೋಡಲಿಲ್ಲ. ಹಾಸಿಗೆ ಮೇಲೆ ಏನೇನು ಮಾತುಕತೆ ಆಗತ್ತೆ ಎಂದು ನಿಮಗೆ ಗೊತ್ತಿಲ್ಲ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

BBK 12: ಕಿಚ್ಚ ಸುದೀಪ್ ಮುಂದೆಯೇ ಕಿತ್ತಾಡಿಕೊಂಡ ಜಾನ್ವಿ-ರಿಷಾ: ರಣರಂಗವಾದ ಮನೆ

ಈ ಮೂಲಕ ಕಿಚ್ಚ ಸುದೀಪ್‌ ಅವರು ರಾಶಿಕಾ ಶೆಟ್ಟಿ ಆದಷ್ಟು ಬೇಗ ಹೊರಗಡೆ ಬರ್ತಾರೆ ಎಂದು ಸುಳಿವು ನೀಡಿದಂತಿದೆ. ರಾಶಿಕಾ ಸೂರಜ್ ಜೊತೆಗೆ ಹೆಚ್ಚು ಇರುತ್ತಾರೆ ಎಂಬ ಕಾರಣಕ್ಕೆ ಈ ವಾರ ನಾಮಿನೇಟ್ ಆಗುವುದು ಖಚಿತ. ಇದನ್ನ ಅವರು ಹೇಗೆ ಬದಲಾಯಿಸುತ್ತಾರೆ?, ತಮ್ಮ ಆಟಕ್ಕೆ ಮರಳುತ್ತಾರ ಎಂಬುದು ನೋಡಬೇಕಿದೆ.