ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangla Citizens: ಜೆಸ್ಸೋರ್-ಬೆನಾಪೋಲ್ ಗಡಿಯಲ್ಲಿ ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಬಾಂಗ್ಲಾ ಪ್ರಜೆಗಳ ಬಂಧನ

ಜೆಸ್ಸೋರ್-ಬೆನಾಪೋಲ್ ಗಡಿಯಲ್ಲಿ ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ನುಸುಳಿದ 18 ರಿಂದ 20 ಬಾಂಗ್ಲಾದೇಶಿ ನಾಗರಿಕರ ಗುಂಪನ್ನು ಜಲಾಲ್ಪುರ ಪ್ರದೇಶದಲ್ಲಿ ಮೇ 27ರ ಮಂಗಳವಾರದಂದು ಬಂಧಿಸಲಾಗಿದೆ. ಗುಜರಾತ್‌ನ ಅಹಮದಾಬಾದ್‌ಗೆ ಪ್ರಯಾಣಿಸುವ ವೇಳೆ ಬ್ರೋಕರ್‌ಗಳ ಸಹಾಯದಿಂದ ವ್ಯಕ್ತಿಗಳು ನಕಲಿ ಆಧಾರ್ ಕಾರ್ಡ್‌ಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಬಾಂಗ್ಲಾ ಪ್ರಜೆಗಳ ಬಂಧನ

Profile Vishakha Bhat May 28, 2025 4:52 PM

ಕೊಲ್ಕಾತ್ತಾ: ಜೆಸ್ಸೋರ್-ಬೆನಾಪೋಲ್ ಗಡಿಯಲ್ಲಿ (Bangla Citizens) ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ನುಸುಳಿದ 18 ರಿಂದ 20 ಬಾಂಗ್ಲಾದೇಶಿ ನಾಗರಿಕರ ಗುಂಪನ್ನು ಜಲಾಲ್ಪುರ ಪ್ರದೇಶದಲ್ಲಿ ಮೇ 27ರ ಮಂಗಳವಾರದಂದು ಬಂಧಿಸಲಾಗಿದೆ. ಗುಜರಾತ್‌ನ ಅಹಮದಾಬಾದ್‌ಗೆ ಪ್ರಯಾಣಿಸುವ ವೇಳೆ ಬ್ರೋಕರ್‌ಗಳ ಸಹಾಯದಿಂದ ವ್ಯಕ್ತಿಗಳು ನಕಲಿ ಆಧಾರ್ ಕಾರ್ಡ್‌ಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬ್ರೋಕರ್‌ಗಳ ಸಹಾಯದಿಂದ ನಕಲಿ ಆಧಾರ್‌ ಕಾರ್ಡ್‌ಗಳನ್ನು ರೂಪಿಸಿಕೊಂಡು ಬಾಂಗ್ಲಾದೇಶಕ್ಕೆ ಮರಳಲು ಪ್ರಯತ್ನಿಸುತ್ತಿದ್ದ ಈ ಗುಂಪನ್ನು ವಶಕ್ಕೆ ಪಡೆಯಲಾಗಿದೆ.

ಶಂಕಿತ ದಲ್ಲಾಳಿಗಳ ಸಹಾಯದಿಂದ ಬಾಂಗ್ಲಾದೇಶಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾಗ ಗುಂಪನ್ನು ತಡೆಹಿಡಿಯಲಾಯಿತು. ಅವರಿಗೆ ಸಹಾಯ ಮಾಡುತ್ತಿದ್ದ ಐದು ಆಟೋ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಾಹನಗಳ ಮಾಲೀಕರು ಭಂಗರ್ಪದಾದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಎಲ್ಲಾ ವ್ಯಕ್ತಿಗಳನ್ನು ಗುಮ್ರಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ನಂತರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಲ್ಚಾರ್ ಸದರ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಅಸ್ಸಾಂ ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

2019ರಿಂದ ಈವರೆಗೆ ಅಕ್ರಮವಾಗಿ ಭಾರತ ಪ್ರವೇಶ ಮಾಡಿದ್ದ ಸುಮಾರು 14 ಸಾವಿರ ಬಾಂಗ್ಲಾ ದೇಶೀಯರನ್ನು ವಾಪಸ್ ಬಾಂಗ್ಲಾ ದೇಶಕ್ಕೆ ರವಾನಿಸಲಾಗಿದೆ. ಗಡಿ ಭದ್ರತಾ ಪಡೆಯ ವರದಿಯಲ್ಲಿ ಈ ಅಂಕಿ ಸಂಖ್ಯೆ ನಮೂದಿಸಲಾಗಿದೆ. ಇನ್ನು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ಭಾರತದಲ್ಲೇ ವಾಸವಿದ್ದು, ವಾಪಸ್ ಬಾಂಗ್ಲಾ ದೇಶಕ್ಕೆ ನುಸುಳಲು ಯತ್ನಿಸುತ್ತಿದ್ದ 9,233 ಬಾಂಗ್ಲಾ ದೇಶದ ಪ್ರಜೆಗಳನ್ನೂ ಗಡಿ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: S-500 Air Defence: ಪಾಕಿಸ್ತಾನವನ್ನು ಪುಡಿಗಟ್ಟಿದ S-400 ಡಿಫೆನ್ಸ್‌ ಸಿಸ್ಟಂನ ಅಪ್ಡೇಡ್‌ ವರ್ಷನ್‌ ಖರೀದಿಗೆ ಭಾರತ ರೆಡಿ?

ದಕ್ಷಿಣ ಬಾಂಗ್ಲಾ ಗಡಿಯಿಂದಲೇ ಬಹುತೇಕ ಅಕ್ರಮ ನುಸುಳುಕೋರರು ಭಾರತದ ಒಳಗೆ ನುಗ್ಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 14,361 ಅಕ್ರಮ ಒಳ ನುಸುಳುಕೋರರ ಪೈಕಿ 11,034 ಮಂದಿ ದಕ್ಷಿಣ ಬಾಂಗ್ಲಾ ಗಡಿಯಿಂದಲೇ ಭಾರತದ ಒಳಗೆ ನುಸುಳಿದ್ದಾರೆ. ದಕ್ಷಿಣ ಬಾಂಗ್ಲಾ ಗಡಿಯಲ್ಲಿ ಸೆರೆ ಸಿಕ್ಕ ಬಾಂಗ್ಲಾ ದೇಶದ ಪ್ರಜೆಗಳಾದ ಅಕ್ರಮ ನುಸುಳುಕೋರರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಈ ವಿಚಾರ ಬಹಿರಂಗವಾಗಿದೆ.