S-500 Air Defence: ಪಾಕಿಸ್ತಾನವನ್ನು ಪುಡಿಗಟ್ಟಿದ S-400 ಡಿಫೆನ್ಸ್ ಸಿಸ್ಟಂನ ಅಪ್ಡೇಡ್ ವರ್ಷನ್ ಖರೀದಿಗೆ ಭಾರತ ರೆಡಿ?
S-500 Air Defence: ಪಾಕ್ ವಿರುದ್ಧ ಸಮರ ಸಾರಿರುವ ಭಾರತ ಎಸ್-400ನ ಅಪ್‌ಡೇಟ್ ಆವೃತ್ತಿ ಎಸ್-500 ಖರೀದಿಗೆ ಮುಂದಾಗಿದ್ದು, ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎನ್ನಲಾಗಿದೆ. ಎಸ್-500 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣ ಅಪ್‌ಡೇಟೆಡ್ ಮಿಸೈಲ್ ಸಿಸ್ಟಮ್ ಆಗಿದ್ದು, ಇಸ್ರೇಲ್‌ನ ಥಾಡ್, ಅಮೆರಿಕದ ಪೆಟ್ರಿಯಾಟ್ ಹಾಗೂ ರಷ್ಯಾದ ಈಗ ಇರುವ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್‌ಗಿಂತಲೂ ಅತ್ಯಂತ ಬಲಶಾಲಿಯಾದ ವಾಯು ರಕ್ಷಣಾ ವ್ಯವಸ್ಥೆ ಇದಾಗಿದೆ.


ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ಪಾಕಿಸ್ತಾನಕ್ಕೆ ನಡುಕವನ್ನು ಹುಟ್ಟಿಸಿದ್ದು, ಎರಡು ರಾಷ್ಟ್ರಗಳ ನಡುವೆ ಈಗಾಗಲೇ ಎರಡು-ಮೂರು ಬಾರಿ ದಾಳಿ-ಪ್ರತಿದಾಳಿಗಳು ನಡೆದಿವೆ. ಭಾರತೀಯ ವಾಯುಸೇನೆ (Indian Air Force) ಪಾಕಿಸ್ತಾನ (Pakistan) ಮತ್ತು ಪಾಕ್-ಆಕ್ರಮಿತ ಕಾಶ್ಮೀರದ (Pakistan-occupied Kashmir) ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ ಗಡಿಯಲ್ಲಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದೆ. ಆದರೆ, ಭಾರತ ಪಾಕ್ ಯತ್ನವನ್ನು ವಿಫಲಗೊಳಿಸಿದ್ದು, ಸುದರ್ಶನ ಚಕ್ರ ಎಂಬ ರಷ್ಯಾ ನಿರ್ಮಿತ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ರಷ್ಯಾದಿಂದ ಖರೀದಿಸಿದ ಎಸ್-400 ವಾಯು ರಕ್ಷಣಾ ವ್ಯವಸ್ಥೆಗೆ ಹಿಂದೂ ಪುರಾಣಗಳಿಂದ ಸ್ಫೂರ್ತಿ ಪಡೆದು ಸುದರ್ಶನ ಚಕ್ರ ಎಂದು ಹೆಸರಿಡಲಾಗಿದ್ದು, S-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತದ ರಕ್ಷಣಾ ಶಸ್ತ್ರಾಗಾರದಲ್ಲಿ ಬಲಾಢ್ಯ ಸಾಧನವಾಗಿದೆ. ಇದರ ಪ್ರಾಬಲ್ಯ ಕಂಡೇ ಸುದರ್ಶನ ಚಕ್ರ ಎಂದು ಹೆಸರಿಡಲಾಗಿದ್ದು, ರಷ್ಯಾ ತಯಾರಿಸಿದ ಈ ಸಿಸ್ಟಮ್ ಜಾಗತಿಕವಾಗಿ ಅತ್ಯಂತ ಮುಂದುವರಿದ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು 600 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ಪತ್ತೆಹಚ್ಚುವ ಮತ್ತು 400 ಕಿಲೋ ಮೀಟರ್‌ಗಳವರೆಗಿನ ಗುರಿಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ.
ಅಲ್ಲದೇ ರಷ್ಯಾ ನಿರ್ಮಿತ ಈ ಎಸ್-400 ಸಿಸ್ಟಮ್ ವಿಶ್ವದಲ್ಲೇ ಅತ್ಯಂತ ಅಡ್ವಾನ್ಸಡ್ ಸಿಸ್ಟಮ್ಗಳಲ್ಲಿ ಒಂದಾಗಿದ್ದು, 600 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು 400 ಕಿಲೋಮೀಟರ್ಗಳವರೆಗಿನ ಗುರಿಗಳನ್ನು ತಡೆಯುವ ಸಾಮಾರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ 400 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ರಹಸ್ಯ ವಿಮಾನಗಳು, ಫೈಟರ್ ಜೆಟ್‌ಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೈಮಾನಿಕ ದಾಳಿಯನ್ನು ಪತ್ತೆಹಚ್ಚುವ ಸಾಮರ್ಥ್ಯ ಇದಕ್ಕಿದ್ದು, 400 ಕಿಮೀ ದೂರದಿಂದಲೇ ಬರುವ ವೈರಿ ರಾಷ್ಟ್ರಗಳ ಮಿಸೈಲ್ ಅನ್ನು ಪತ್ತೆ ಹಚ್ಚಿ ಹೊಡೆದುರುಳಿಸುತ್ತದೆ. S-400 ಏಕಕಾಲಕ್ಕೆ 72 ವೈರಿ ಮಿಸೈಲ್ ದಾಳಿಯನ್ನು ಪತ್ತೆ ಹಚ್ಚಿ ನಾಶಪಡಿಸುವ ಶಕ್ತಿಯನ್ನು ಹೊಂದಿದೆ.
ಇನ್ನು 2018ರಲ್ಲಿ ಭಾರತ ರಷ್ಯಾದ ಜೊತೆ 35 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡು ಐದು ಎಸ್-400 ಸ್ಕ್ವಾಡ್ರನ್‌ಗಳನ್ನು ಖರೀದಿಸಿತ್ತು. ಪಾಕಿಸ್ತಾನ ಹಾಗೂ ಚೀನಾದ ಬೆದರಿಕೆಯನ್ನು ಎದುರಿಸಲು ಈ ಸಿಸ್ಟಮ್ ಅನ್ನು ಭಾರತ ಖರೀದಿಸಿದ್ದು, ಇದರಲ್ಲಿ ಈಗಾಗಲೇ ಭಾರತದ ಸೇನೆಯನ್ನು ಸೇರಿದೆ. ಶತ್ರು ರಾಷ್ಟ್ರಗಳಿಂದ ಭಾರತವನ್ನು ಇದು ರಕ್ಷಿಸಲಿದ್ದು, ಇನ್ನುಳಿದ ಎರಡು 2026ರ ಹೊತ್ತಿಗೆ ಭಾರತದ ಸೇನೆಯನ್ನು ಸೇರಲಿವೆ. 2019ರ ಪುಲ್ವಾಮಾ ದಾಳಿ ಬಳಿಕ ಅಂದ್ರೇ 2021ರಲ್ಲಿ ಭಾರತದ ಬತ್ತಳಿಕೆಗೆ ಮೊದಲ S-400 ಏರ್ ಡಿಫೆನ್ಸ್ ಸಿಸ್ಟಮ್ ಸೇರಿತ್ತು. ಆಗ ರಷ್ಯಾದಿಂದ ಎಸ್-400 ಖರೀದಿಸಿದರೆ ಭಾರತದ ಮೇಲೆ ಕೆಲ ನಿರ್ಬಂಧ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕಿತ್ತು. ಆದರೆ, ಅಮೆರಿಕದ ಸವಾಲಿನ ನಡುವೆಯೂ ಭಾರತ ಖರೀದಿಸಿದ್ದ ಏರ್ ಡಿಫೆನ್ಸ್ ಸಿಸ್ಟಮ್ ಈಗ ದೇಶಕ್ಕೆ ರಕ್ಷಣಾ ಕವಚವಾಗಿದೆ.
ಈ ಸುದ್ದಿಯನ್ನು ಓದಿ: Viral Video: ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ರೊಮ್ಯಾನ್ಸ್; ಸನ್ ರೂಫ್ ತೆಗೆದು ಯುವತಿಗೆ ಚುಂಬಿಸಿದ ಯುವಕ!
ಇನ್ನು ಮುಂದಿನ ದಿನಗಳಲ್ಲಿ ಎಸ್-400ನ ಅಪ್‌ಡೇಟ್ ಆವೃತ್ತಿ ಎಸ್-500 ಖರೀದಿಗೆ ಭಾರತ ಮುಂದಾಗಿದ್ದು, ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎನ್ನಲಾಗಿದೆ. ಎಸ್-500 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣ ಅಪ್‌ಡೇಟೆಡ್ ಮಿಸೈಲ್ ಸಿಸ್ಟಮ್ ಆಗಿದ್ದು, ಇಸ್ರೇಲ್‌ನ ಥಾಡ್, ಅಮೆರಿಕದ ಪೆಟ್ರಿಯಾಟ್ ಹಾಗೂ ರಷ್ಯಾದ ಈಗ ಇರುವ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್‌ಗಿಂತಲೂ ಅತ್ಯಂತ ಬಲಶಾಲಿಯಾದ ವಾಯು ರಕ್ಷಣಾ ವ್ಯವಸ್ಥೆ ಇದಾಗಿದೆ. ಇದು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಸ್ಟೆಲ್ತ್ ಫೈಟರ್ ಜೆಟ್‌ಗಳು, ಭೂಮಿಗೆ ಹತ್ತಿರವಿರುವ ಉಪಗ್ರಹಗಳು ಮತ್ತು ಬಾಹ್ಯಾಕಾಶದಲ್ಲಿರುವ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಬಹುದೊಡ್ಡ ರೇಂಜ್‌ನ ವೈಮಾನಿಕ ದಾಳಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.