Health Benfit: ಸೆಕ್ಸ್ ಮಾಡೋದರಿಂದ ಮಹಿಳೆಯರಿಗೆ ಸಿಗುವ ಆರೋಗ್ಯ ಲಾಭಗಳೇನು?
Health Benfit; ಲೈಂಗಿಕ ಸಂಬಂಧ ಎನ್ನುವುದು ಬಹಳ ಅತ್ಯಗತ್ಯ.ಅದರಲ್ಲೂ ಮಹಿಳೆಯರಿಗೆ ಸೆಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ (Health Benfit) ಸೆಕ್ಸ್ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ.
Pushpa Kumari
December 31, 2024
ನವ ದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಲೈಂಗಿಕ ಬಯಕೆ ಹೊಂದಿರುತ್ತಾನೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಡಲು ಮತ್ತು ಸಂತಾನೋತ್ಪತಿಗೆ ಲೈಂಗಿಕ ಸಂಬಂಧ ಎನ್ನುವುದು ಬಹಳ ಅತ್ಯಗತ್ಯ. ಅದರಲ್ಲೂ ಮಹಿಳೆಯರಿಗೆ ಸೆಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ (Health Benfit) ಸೆಕ್ಸ್ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ.ಮಹಿಳೆಯರಿಗೆ ಯಾವ ರೀತಿಯ ಲಾಭ ಇದೆ ಎನ್ನುವ ಮಾಹಿತಿ ಇಲ್ಲಿದೆ.
ಮಾನಸಿಕ ನೆಮ್ಮದಿ:
ಸೆಕ್ಸ್ನಿಂದ ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಗಳುಂಟಾಗುತ್ತವೆ ಅನ್ನೋದು ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ ಸಾಬೀತಾಗಿದೆ.ಲೈಂಗಿಕತೆಯಿಂದಾಗಿ ಮಹಿಳೆಯರ ಹಾರ್ಮೋನ್ ಗಳ ಸಮತೋಲನಕ್ಕೂ ಸಹಾಯ ವಾಗುತ್ತದೆ. ದೇಹದಲ್ಲಿ ಹಾರ್ಮೋನುಗಳು ಹೆಚ್ಚು ಪ್ರಯಾಣದಲ್ಲಿ ಉತ್ಪತಿಯಾಗುವ ಮೂಲಕ ಮಾನಸಿಕ ನೆಮ್ಮದಿಯು ಸ್ಥಿರವಾಗಿರುತ್ತದೆ
ರೋಗ ನಿರೋಧಕ ಶಕ್ತಿ ಹೆಚ್ಚಲಿದೆ:
ಸೆಕ್ಸ್ ಮಾಡುದರಿಂದ ಮಹಿಳೆಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಣಗಳು ಹೆಚ್ಚುತ್ತವೆ. ವಾರದಲ್ಲಿ ಎರಡು ಮೂರು ಭಾರಿ ಸೆಕ್ಸ್ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ತಜ್ಞರು ಹೇಳುತ್ತಾರೆ.
ಉತ್ತಮ ನಿದ್ರೆ:
ಸೆಕ್ಸ್ ಮಾಡುವುದರಿಂದ ಉತ್ತಮ ಆರಾಮದಾಯಕ ನಿದ್ದೆಯು ಬರಲಿದೆ. ಮನಸ್ಸಿನಲ್ಲಿ ಅದೆಷ್ಟೇ ಯೋಚನೆಗಳಿದ್ರೂ ಸೆಕ್ಸ್ ಸಮಯದಲ್ಲಿ ಅದೆಲ್ಲ ಮನಸ್ಸಿನಿಂದ ಮರೆಯಾಗಿ ಮನಸ್ಸು ನಿರಾಳವಾಗುತ್ತದೆ.
ಒತ್ತಡ ಕಡಿಮೆ ಮಾಡಲಿದೆ:
ಸೆಕ್ಸ್ ಮಾಡುವುದರಿಂದ ಒತ್ತಡ ಕಡಿಮೆಯಾಗಲಿದೆ. ಸೆಕ್ಸ್ ನಿಂದ ಸಂಗಾತಿಯ ಸ್ಪರ್ಶ, ಅಪ್ಪುಗೆಯು ಹೊಸ ಚೈತನ್ಯ ನೀಡಲಿದೆ. ಇದರಿಂದ ಹಾರ್ಮೋನ್‍ಗಳ ಸ್ರವಿಕೆ ಹೆಚ್ಚಾಗಿ ಒತ್ತಡ ಕಡಿಮೆ ಯಾಗಿ ಮನಸ್ಸು ಪ್ರಶಾಂತವಾಗುತ್ತದೆ
ರಕ್ತದೊತ್ತಡ ತಗ್ಗಿಸುತ್ತದೆ:
ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ನಿಯಮಿತವಾಗಿ ಭಾಗಿಯಾಗುವುದರಿಂದ ಹೃದ್ರೋಗದ ಸಮಸ್ಯೆ ಉಂಟಾಗುವುದಿಲ್ಲ. ಲೈಂಗಿಕ ಸಮಯದಲ್ಲಿ ಹೃದಯ ಬಡಿತ ಹೆಚ್ಚಾಗಿ ರಕ್ತದ ಹರಿವು ಮತ್ತು ಆಮ್ಲಜನಕದ ಸೇವನೆಯು ಮಹತ್ತರವಾಗಿ ಹೆಚ್ಚಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಮೂಳೆ ಹಾಗೂ ಮಾಂಸ ಖಂಡಗಳ ಬಲಗೊಳ್ಳುತ್ತದೆ:
ಸೆಕ್ಸ್ ಮಾಡುವುದರಿಂದ ಒಂದೆಳ್ಳೆ ವ್ಯಾಯಾಮ ಆಗಲಿದೆ . ಅಷ್ಟೇ ಅಲ್ಲ ಅದೊಂದು ಶಾರೀರಿಕ ಕ್ರಿಯೆ.ಇದರಿಂದ ಮೂಳೆ ಮಾಂಸ ಖಂಡಗಳು ಬಲಗೊಂಡು ದೇಹಕ್ಕೆ ವ್ಯಾಯಾಮ ಸಿಕ್ಕಂತೆ ಆಗಲಿದೆ.
ತಾಯ್ತನದ ಖುಷಿ:
ಹೆಣ್ಣಿಗೆ ಮದುವೆ ಆದ ಬಳಿ ತಾಯ್ತನದ ಖುಷಿಯು ಸಿಗಲಿದೆ. ನಿಯಮಿತ ಲೈಂಗಿಕತೆಯು ಭಾವನಾತ್ಮಕ ಅನ್ಯೋನ್ಯತೆಯನ್ನು ಸುಧಾರಿಸಿ ದಾಂಪತ್ಯದ ಬಂಧ ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಇದನ್ನು ಓದಿ:Viral Video: ಬಿಬಿಎಂಪಿ ನಿರ್ಲಕ್ಷ್ಯ; 83ರ ಇಳಿ ವಯಸ್ಸಿನಲ್ಲಿ ಬೀದಿ ಕಸ ಗುಡಿಸುವ ಅಜ್ಜ: ವಿಡಿಯೊ ವೈರಲ್