ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಮಲ್ಲಿಕಾರ್ಜುನ ಖರ್ಗೆ ಸೇರಿ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

Rajya Sabha: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಕಣದಲ್ಲಿ ಯಾವುದೇ ಸ್ಪರ್ಧಿಗಳಿಲ್ಲದ ಕಾರಣ ಮೂವರು ಕಾಂಗ್ರೆಸ್ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಬಿಜೆಪಿಯ ಪ್ರೊ. ಎಂ. ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಮೀರ್ ಅಹ್ಮದ್‌ ಖಾನ್‌ಗೆ ಸಚಿವ ಸ್ಥಾನ ಸಿಗದಿರಲು ಸಿದ್ದರಾಮಯ್ಯ ಅಸಮಾಧಾನವೇ ಕಾರಣ?

ಆಪ್ತ ಜಮೀರ್ ಅಹ್ಮದ್‌ ವಿರುದ್ಧವೇ ಸಿದ್ದರಾಮಯ್ಯ ಗರಂ

Zameer Ahmed Khan: ಡಿ.ಕೆ. ಶಿವಕುಮಾರ್‌ ಸಚಿವ ಸಂಪುಟದಲ್ಲಿ ಜಮೀರ್ ಅಹ್ಮದ್‌ ಖಾನ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಇದಕ್ಕೆ ಸಿದ್ದರಾಮಯ್ಯ ಅವರ ಅಸಮಾಧಾನವೇ ಕಾರಣ ಎನ್ನಲಾಗಿದೆ. ʼʼದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದಾರೆʼʼ ಎಂದು ಜಮೀರ್‌ ವಿರುದ್ಧ ಸಿದ್ದರಾಮಯ್ಯ ಕೋಪ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ʼʼಹಗರಣದ ಆರೋಪ ಮಾಡುವ ಬಿಜೆಪಿ ಸೂಕ್ತ ದಾಖಲೆ ಒದಗಿಸಲಿʼʼ: ಪ್ರಿಯಾಂಕ್‌ ಖರ್ಗೆ ಸವಾಲು

ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಸವಾಲು

Bengaluru Waste Scam Row: ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ 39,000 ಕೋಟಿ ರುಪಾಯಿ ಹಗರಣ ನಡೆದಿರುವುದಾಗಿ ಆರೋಪಿಸಿರುವ ಬಿಜೆಪಿ ನಾಯಕ ಆರ್‌. ಅಶೋಕ್‌ ಅವರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಇದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ. ʼʼನಿಮ್ಮಲ್ಲಿರುವ ಸಾಕ್ಷ್ಯಗಳನ್ನು ಜನರಿಗೆ ತೋರಿಸಿʼʼ ಎನನುವ ಮೂಲಕ ಪಂಥಾಹ್ವಾನ ನೀಡಿದ್ದಾರೆ.

ನೀತಿ ಆಯೋಗದ ಸಭೆಯಲ್ಲಿ ಡಿಕೆಶಿ ಭಾಗಿ; ಮೋದಿ ಭೇಟಿ ಮಾಡಲಿರುವ ಸಿಎಂ

ನೀತಿ ಆಯೋಗದ ಸಭೆಯಲ್ಲಿ ಡಿಕೆಶಿ ಭಾಗಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಿಎಂ ಡಿಕೆ ಶಿವಕುಮಾರ್‌ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯಗಳ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ. ಸಭೆ ಬಳಿಕ ಡಿಕೆ ಶಿವಕುಮಾರ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಭೇಟಿ ಮಾಡಲಿದ್ದಾರೆ.

Bharani Venkatesh 52nd Birthday: ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಜನ್ಮದಿನ ಆಚರಿಸಿಕೊಂಡ ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್

ಸರಳವಾಗಿ ಜನ್ಮದಿನ ಆಚರಿಸಿಕೊಂಡ ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್

ಹುಟ್ಟುಹಬ್ಬವನ್ನು ಆಡಂಬರ ದಿಂದ ಆಚರಿಸುವ ಬದಲು ಸೇವಾ ಮನೋಭಾವದಿಂದ ಸರಳವಾಗಿ ಆಚರಿಸಬೇಕು ಎಂಬುದು ತಮ್ಮ ಆಶಯವಾಗಿದೆ .ಆದರೂ ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನ ದಿಂದ ಬಾಲಕುಂಟಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಅವರು ಚಿತ್ರದುರ್ಗದಿಂದ ಮಾಡಿಸಿ ತಂದಿದ್ದ ನಾಣ್ಯಗಳಿಂದ ತಯಾರಿಸಿದ ಹಾರವನ್ನು ಅರ್ಪಿಸಿರುವುದು ಸಂತಸ ತಂದಿದೆ

ಕೆರೆಮನೆ ಶಿವಾನಂದ ಹೆಗಡೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಕೆರೆಮನೆ ಶಿವಾನಂದ ಹೆಗಡೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆಯವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಕೆರೆಮನೆ ಮಹಾಬಲ ಹೆಗಡೆ ಮೊಮ್ಮಗ ಹಾಗೂ ಶಂಭು ಹೆಗಡೆ ಅವರ ಪುತ್ರನಾದ ಇವರು ತಮ್ಮ 12 ನೇ ವಯಸ್ಸಿನಿಂದಲೇ ಯಕ್ಷಗಾನ ಅಭ್ಯಾಸ ಶುರು ಮಾಡಿದ್ದರು.

ನರೇಂದ್ರ ಮೋದಿ ದೇಶ ಕಂಡ ಯಶಸ್ವಿ ಪ್ರಧಾನಿ ಹಾಗೂ ದೂರ ದೃಷ್ಠಿಯ ನೇತಾರ : ಬಿಜೆಪಿ ತಾಲೂಕು ಅಧ್ಯಕ್ಷ ಕೋಡಿರ್ಲಪ್ಪ

ನರೇಂದ್ರ ಮೋದಿ ದೇಶ ಕಂಡ ಯಶಸ್ವಿ ಪ್ರಧಾನಿ ಹಾಗೂ ದೂರ ದೃಷ್ಠಿಯ ನೇತಾರ

ವಿದೇಶಿ ಪ್ರವಾಸದ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ ದ್ದಾರೆ. ವಿವಿಧ ಒಪ್ಪಂದಗಳ ಮೂಲಕ ಬಂಡವಾಳ ತಂದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯಾನ(Make in India Campaign)ವು 2047ರೊಳಗೆ ಅಭಿವೃದ್ಧಿ ಶೀಲ ಭಾರತ ನಿರ್ಮಾಣದ ಅವರ ಸ್ಪಷ್ಟ ದೃಷ್ಟಿಕೋನ ಮತ್ತು ಕಾರ್ಯಪಥವನ್ನು ಪ್ರತಿಬಿಂಬಿಸು ತ್ತದೆ ಎಂದರು.

Shidlaghatta News: ದೇಶದ ಅಭಿವೃದ್ಧಿಗೆ ಮೋದಿ ಕೊಡುಗೆ ಸ್ಮರಣೀಯ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅಭಿಮತ

ಪ್ರಧಾನಿಯಾಗಿ 12 ವರ್ಷ: ದೇವಾಲಯದಲ್ಲಿ ವಿಶೇಷ ಪೂಜೆ, ಸ್ವಚ್ಛತಾ ಕಾರ್ಯ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯ ಕ್ರಮಗಳು ದೇಶದ ಪ್ರತಿಯೊಂದು ವರ್ಗದ ಜನರ ಬದುಕಿನಲ್ಲಿ ಬದಲಾವಣೆ ತಂದಿವೆ. ಸಂಸತ್ತಿನಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಹಲವು ಐತಿಹಾಸಿಕ ಮಸೂದೆಗಳು ಮತ್ತು ಕಾನೂನುಗಳು ಮೋದಿ ಅವರ ನೇತೃತ್ವದಲ್ಲಿ ಅಂಗೀಕಾರಗೊಂಡಿವೆ

ಪ್ರಧಾನಿ ಮೋದಿ ದೀರ್ಘಾವಧಿ ಆಡಳಿತಕ್ಕೆ ಗುಬ್ಬಿಯಲ್ಲಿ ವಿಶೇಷ ಪೂಜೆ

ಪ್ರಧಾನಿ ಮೋದಿ ದೀರ್ಘಾವಧಿ ಆಡಳಿತಕ್ಕೆ ಗುಬ್ಬಿಯಲ್ಲಿ ವಿಶೇಷ ಪೂಜೆ

ಅತ್ಯಧಿಕ ಅವಧಿಯ ಚುನಾಯಿತ ಪ್ರಧಾನಿಯಾಗಿ ಇಡೀ ವಿಶ್ವ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಹನ್ನೆರಡು ವರ್ಷದ ಅಧಿಕಾರ ವಿಶ್ವಕ್ಕೆ ಮಾದರಿಯಾಗಿದೆ. ಜಾಗತಿಕ ಮಟ್ಟದಲ್ಲಿ ವಿಶೇಷ ಹೆಗ್ಗುರುತು ಹಚ್ಚಿದ ಮೋದಿ ಅವರ ಸ್ವಚ್ಛ ಆಡಳಿತ ಸರ್ವಧರ್ಮ ಸಾಕಾರ ಹಾಗೂ ಅಭಿವೃದ್ದಿಯ ಹರಿಕಾರ ಎಂದೆನಿಸಿದ್ದಾರೆ.

Gubbi News: ಹೇಮಾವತಿ ಲಿಂಕ್ ಕೆನಾಲ್ ನಿಲ್ಲಲೇಬೇಕು: ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು

ಹೇಮಾವತಿ ಲಿಂಕ್ ಕೆನಾಲ್ ನಿಲ್ಲಲೇಬೇಕು

ಜಿಲ್ಲೆಯ ಏಳು ತಾಲ್ಲೂಕಿಗೆ ಜೀವನದಿಯಾದ ಹೇಮಾವತಿ ಅವೈಜ್ಞಾನಿಕವಾಗಿ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಹೆಸರಲ್ಲಿ ಮಾಗಡಿ ರಾಮನಗರಕ್ಕೆ ಹರಿಸುವ ಕಾಮಗಾರಿಯನ್ನು ಸರ್ಕಾರ ಕೈ ಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೈತರಿಂದ ನಡೆಯಲಿದೆ. ಈ ಬಗ್ಗೆ ಪೂರ್ವ ಭಾವಿ ಸಭೆಯನ್ನು ಗುಬ್ಬಿಯಲ್ಲಿ ಜೂ.11ರಂದು ನಡೆಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.

ಸತ್ಯಸಾಯಿ ಸಂಸ್ಥೆಯ ಉಚಿತ ಆರೋಗ್ಯ ಸೇವೆಯನ್ನು ಮುಕ್ತಕಂಠದಿಂದ ಕೊಂಡಾಡಿದ ಶಾಸಕ

2 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪದೀಪ್ ಈಶ್ವರ್

ತಿರ‍್ನಹಳ್ಳಿ ಗ್ರಾಮದಿಂದ ಮುದ್ದೇನಹಳ್ಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ದಿಪಡಿಸಿ ಕೊಡುವಂತೆ ನಾಗರೀಕ ರಿಂದ ಒತ್ತಾಯವಿತ್ತು. ಕಾರಣ ಈ ರಸ್ತೆಯು ಸತ್ಯಸಾಯಿ ಗ್ರಾಮಕ್ಕೆ ಭೇಟಿಕೊಡುವ ಪ್ರಮುಖ ರಸ್ತೆ ಯಾಗಿದೆ. ಈ ಮಾರ್ಗದ ಮೂಲಕವೇ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಗೆ ನಿತ್ಯವೂ ನೂರಾರು ಮಂದಿ ಸಂಚರಿಸುತ್ತಾರೆ. ದೇಶ ವಿದೇಶಗಳ ಮಂದಿ ಇಲ್ಲಿಗೆ ಭೇಟಿ ಕೊಡುತ್ತಾರೆ

Chikkaballapur News: ವೈಭವ ಮತ್ತು ಲವಲವಿಕೆಯಿಂದ 91ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ

ಭೂರೀ ಭೋಜನದ ವ್ಯವಸ್ಥೆಗೆ ಸಂತೃಪ್ತಗೊಂಡ ನಾಗರೀಕರು

50 ವರ್ಷಗಳಷ್ಟು ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಮುತ್ಸದ್ದಿ ರಾಜಕಾರಣಿ ಪಿ.ಎನ್. ಕೇಶವರೆಡ್ಡಿ ಜನ್ಮದಿನದ ಅಂಗವಾಗಿ ಬೆಳಗಿನಿಂದಲೇ ಅಭಿಮಾನಿಗಳು ಕಾರ್ಯಕರ್ತರು, ಬಂದು ಬಳಗವೇ ನೆರೆದಿದ್ದು ಬಂದವರಿಗೆ ಪುಷ್ಕಳ ಭೋಜನದ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಿದ್ದು, ಊಟ ಸವಿದ ಪ್ರತಿಯೊಬ್ಬರೂ ಶುಭ ಹಾರೈಸಿ ಮುನ್ನಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

Bengaluru theft case: ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ರೂ. ಕಳ್ಳತನ; ನೇಪಾಳ ಮೂಲದ ಚಾಲಾಕಿ ದಂಪತಿ ಅರೆಸ್ಟ್

ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ಕಳ್ಳತನ; ದಂಪತಿ ಅರೆಸ್ಟ್

ಬೆಂಗಳೂರಿನ ಅಮೃತಹಳ್ಳಿಯ ಅರ್ಕಾವತಿ ಲೇಔಟ್‌ನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ನಗದು ಕಳ್ಳತನವಾಗಿತ್ತು. ಮನೆಕೆಲಸಕ್ಕೆ ಸೇರಿದವರೇ ಕೃತ್ಯ ಎಸಗಿದ್ದು, ಪರಾರಿಯಾಗಲು ಯತ್ನಿಸುತ್ತಿದ್ದ ನೇಪಾಳ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಗದು ವಶಕ್ಕೆ ಪಡೆಯಲಾಗಿದೆ.

World Day Against Child Labor: ಕನ್ನಡ ಭವನದಲ್ಲಿ ಜೂ.12ರಂದು ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಕನ್ನಡ ಭವನದಲ್ಲಿ ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಕೀಲರ ಸಂಘ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾ ಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆ(World Day Against Child Labor)ಯನ್ನು ಜೂ.12ರಂದು ಬೆಳಗ್ಗೆ 11 ಗಂಟೆಗೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.

World Day Against Child Labor: ಜೂ.12ರಂದು ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ

ಜೂ.12ರಂದು ಜಾಥಾ ಕಾರ್ಯಕ್ರಮ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಕೀಲರ ಸಂಘ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾ ಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ ವನ್ನು ಕೂಡ ಏರ್ಪಡಿಸಲಾಗಿದೆ.

Bidar News: ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ; ಬೀದರ್‌ನಲ್ಲಿ ಕೃಷಿ ಅಧಿಕಾರಿಗಳಿಂದ 9.35 ಲಕ್ಷ ಮೌಲ್ಯದ 1,539 ಚೀಲ ಜಪ್ತಿ

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ; ಬೀದರ್‌ನಲ್ಲಿ 1,539 ಚೀಲ ಜಪ್ತಿ

ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಯಾರಾದರೂ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿದ್ದರೆ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಶಿಮ್ಲಾ ಬಿಡಿ! ಬೆಂಗಳೂರೇ ಇದೀಗ ಗಿರಿಧಾಮ: ಸಿಲಿಕಾನ್ ಸಿಟಿಯ ತಂಪಾದ ವಾತಾವರಣಕ್ಕೆ ನಿವಾಸಿಗಳಿ ಫಿದಾ

ಶಿಮ್ಲಾವನ್ನು ಮೀರಿಸಿದ ಬೆಂಗಳೂರು: ಕೂಲ್ ವಾತಾವರಣಕ್ಕೆ ನೆಟ್ಟಿಗರು ಫಿದಾ

Viral News: ಸಿಲಿಕಾನ್ ಸಿಟಿ ಬೆಂಗಳೂರಿನ ತಂಪಾದ ವಾತಾವರಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಪ್ರಸಿದ್ಧ ಆಹ್ಲಾದಕರ ಹವಾಮಾನವನ್ನು ಹಿಮಾಚಲ ಪ್ರದೇಶದ ಪ್ರಸಿದ್ಧ ಗಿರಿಧಾಮ ಶಿಮ್ಲಾ ಜತೆ ಹೋಲಿಕೆ ಮಾಡಲಾಗುತ್ತಿದೆ. ಇಲ್ಲಿನ ತಂಪಾದ ವಾತಾವರಣ, ಪ್ರಕೃತಿ ಸೌಂದರ್ಯ ಎಲ್ಲವೂ ಶಿಮ್ಲಾದ ಗಿರಿಧಾಮವನ್ನೇ ಹೋಲುವಂತಿದೆ ಎಂದು ಪೋಸ್ಟ್ ಒಂದರಲ್ಲಿ ಬರೆಯಲಾಗಿದೆ.

ಅತ್ಯಾಧುನಿಕ ರೋಬೋಟಿಕ್ ಸೊಂಟ ಮತ್ತು ಮೊಣಕಾಲು ಕೀಲು ಮರುಜೋಡಣೆ ತಂತ್ರಜ್ಞಾನ ಪರಿಚಯಿಸಿದ ತಜ್ಞ ವೈದ್ಯ ಡಾ. ರಾಜಶೇಖರ್

ಹುಟ್ಟೂರಿನ ಜನರಿಗೆ ಪರಿಣತ ವೈದ್ಯಕೀಯ ಸೇವೆ ಒದಗಿಸಿದ ಮಾದರಿ ನಡೆ

ದಾವಣಗೆರೆ ಮೂಲದವರಾದ ಡಾ. ರಾಜಶೇಖರ್ ಅವರು ಎಂಬಿಬಿಎಸ್, ಮೂಳೆಚಿಕಿತ್ಸೆಯಲ್ಲಿ ಎಂ.ಎಸ್ಸಿ., ಎಂ.ಸಿಎಚ್. ಪದವಿಗಳನ್ನು ಹೊಂದಿದ್ದು, ಜಂಟಿ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ ಯಲ್ಲಿ ಪ್ರತಿಷ್ಠಿತ ರಾಣಾವತ್ ಫೆಲೋಶಿಪ್ ಪಡೆದಿದ್ದಾರೆ. ಪ್ರಸ್ತುತ ಅಪೋಲೋ ಆಸ್ಪತ್ರೆಯ ಮೂಳೆಚಿಕಿತ್ಸೆ ಮತ್ತು ರೋಬೋಟಿಕ್ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸಾ ವಿಭಾಗದ ಪ್ರಮುಖ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೇವರಾಜ ಅರಸು ಬರುವುದಕ್ಕೂ ಮುನ್ನ ಭ್ರಷ್ಟಾಚಾರ ಇರಲಿಲ್ಲವೇ?: ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಪ್ರಶ್ನೆ

ದೇವರಾಜ ಅರಸುಗಿಂತ ಮುನ್ನ ಭ್ರಷ್ಟಾಚಾರ ಇರಲಿಲ್ಲವೇ?: ರಮೇಶ್‌ ಕುಮಾರ್

ತುಮಕೂರು ವಿಶ್ವವಿದ್ಯಾನಿಲಯ ಮತ್ತು ಡಿ.ದೇವರಾಜ ಅರಸು ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಮುಖಿ ಅರಸು ಕೃತಿಯ ಲೋಕಾರ್ಪಣೆ ಮತ್ತು ʼಡಿ.ದೇವರಾಜ ಅರಸು ಸಮಸಮಾಜದ ಕನಸುಗಾರ' ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಮಾತನಾಡಿದ್ದಾರೆ.

Minister K H Muniyappa: BIEC ನಲ್ಲಿ ಜೂ.11ರಿಂದ ಮೆಗಾ ಫುಡ್ ಎಕ್ಸ್‌ಪೋ 2026’ : ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ

BIEC ನಲ್ಲಿ ಜೂ.11ರಿಂದ ಮೆಗಾ ಫುಡ್ ಎಕ್ಸ್‌ಪೋ 2026’

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ(Food and Civil Supplies Minister K.H. Muniyappa) ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ದೇಶ, ವಿದೇಶಗಳ ತಯಾರಕರು, ಪೂರೈಕೆ ದಾರರು, ವಿತರಕರು, ನವೋದ್ಯಮಗಳು ಹಾಗೂ ಕೈಗಾರಿಕಾ ವೃತ್ತಿಪರರಿಗೆ ತಮ್ಮ ಇತ್ತೀಚಿನ ಉತ್ಪನ್ನಗಳು, ತಂತ್ರಜ್ಞಾನ ಮತ್ತು ನವೀನ ಆವಿಷ್ಕಾರಗಳನ್ನು ಪ್ರದರ್ಶಿಸಲು ಸಮಗ್ರ ವೇದಿಕೆಯನ್ನು ಇದು ಒದಗಿಸ ಲಿವೆ.

N A Harris: ವಸತಿ ಸಂಕಿರಣಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆಗಳಿಗೆ ಕ್ರಮ: ಎನ್.ಎ. ಹ್ಯಾರಿಸ್

ವಸತಿ ಸಂಕಿರಣಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆಗಳಿಗೆ ಕ್ರಮ

ಬೆಂಗಳೂರು ವಿವಿಧ ಹಿನ್ನೆಲೆಯ ಜನ ವಾಸಿಸುವ ಚೈತನ್ಯಮಯ ಮಹಾನಗರವಾಗಿದೆ. ಜೀವನ ಶೈಲಿ ಹಾಗೂ ನಗರ ಜೀವನದ ಮಾದರಿಗಳು ಬದಲಾಗಿರುವ ಹಿನ್ನೆಲೆಯಲ್ಲಿ ಹಳೆಯ ಕಾನೂನುಗಳು ಮತ್ತು ಪದ್ಧತಿಗಳು ಹಲವು ಬಾರಿ ಅಡಚಣೆಯಾಗುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೊಸ ಕಾನೂನು ಚೌಕಟ್ಟುಗಳು, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ಜಾಗೃತಿಯ ಮೂಲಕ ವ್ಯವಸ್ಥೆಯನ್ನು ಆಧುನೀಕರಿಸಲು ಕ್ರಮ ಕೈಗೊಳ್ಳುತ್ತಿದೆ

Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ

ಉಜ್ವಲ ಯೋಜನೆಯಡಿ 14.2 ಕೆ.ಜಿ 12 ಸಿಲೆಂಡರ್ ಗಳನ್ನು ನೀಡಲಾಗುತ್ತಿತ್ತು. ಕಳೆದ ವರ್ಷ ಇದನ್ನು 9ಕ್ಕೆ ಇಳಿಸಿ, ಇದೀಗ 4ಕ್ಕೆ ತಗ್ಗಿಸಿರುವುದು ಖಂಡನೀಯ. ಮೋದಿ ಸರ್ಕಾರ ಮತ್ತೊಂದು ದುಬಾರಿ ಬದುಕಿನ ಕೊಡುಗೆ ನೀಡಿದ್ದು, ಮೂರು ತಿಂಗಳಲ್ಲಿ ಅಡುಗೆ ಬೆಲೆ ದರವನ್ನು 90 ರೂಪಾಯಿ ಹೆಚ್ಚಿಸಿದೆ. ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ 400 ರೂ ಇದ್ದ ಸಿಲೆಂಡರ್ ಬೆಲೆ ಇದೀಗ ಒಂದು ಸಾವಿರ ರೂ ಸನಿಹಕ್ಕೆ ಬಂದಿದೆ.

ನೋಂದಣಿ ರದ್ದಾಗಿರುವ ಶಾಲೆಯಿಂದ ವಿದ್ಯಾರ್ಥಿಗಳಿಗೆ ಟಿ.ಸಿ ಕೊಡದಿರುವ ಬಗ್ಗೆ ಮಾಜಿ ಪ್ರಾಂಶುಪಾಲರಿಂದ ದೂರು: ಶಾಲಾ ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ

ನೋಂದಣಿ ರದ್ದಾಗಿರುವ ಶಾಲೆಯಿಂದ ಟಿ.ಸಿ ಕೊಡದಿರುವ ಬಗ್ಗೆ ದೂರು

ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಬೇಡಿಕೆಯಂತೆ ಆಡಳಿತ ಮಂಡಳಿಯವರು ವರ್ಗಾವಣೆ ಪತ್ರ ನೀಡದೇ ಬೆದರಿಕೆ ಹಾಕುತ್ತಿದ್ದಾರೆ. ಈ ದೌರ್ಜನ್ಯ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಮೇಲೆ ಕೇವಲ ಮೂವರು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿದ್ದಾರೆ. ಪ್ರತಿನಿತ್ಯ ಹಲವಾರು ವಿದ್ಯಾರ್ಥಿಗಳು, ಪೋಷಕರು ಟಿಸಿಗಾಗಿ ಅಲೆಯುತ್ತಿದ್ದಾರೆ. ಆದರೆ ಟಿಸಿ ನೀಡದೇ ಗೂಂಡಾ ವರ್ತನೆ ತೋರಿ, ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದಾರೆ.

12 ವರ್ಷಗಳ ದಾಖಲೆಯ ಆಡಳಿತ; ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದಿಸಿದ ಎಚ್.ಡಿ. ಕುಮಾರಸ್ವಾಮಿ

ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದಿಸಿದ ಎಚ್.ಡಿ. ಕುಮಾರಸ್ವಾಮಿ

HD Kumaraswamy: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವು ಬೃಹತ್ ಪ್ರಮಾಣದ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ, ಪಾರದರ್ಶಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Loading...