ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿಮ್ಮ ದೂರನ್ನು ಯಾರೂ ಸ್ವೀಕರಿಸುತ್ತಿಲ್ಲವೇ? ಹಾಗಾದರೆ ನೇರವಾಗಿ ಪ್ರಧಾನಿಗೆ ಕಂಪ್ಲೆಂಟ್‌ ನೀಡಿ!

ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲವೇ? ಸರ್ಕಾರಿ ಕಚೇರಿಗಳಲ್ಲಿ ತಿರುಗಿ ತಿರುಗಿ ಬೇಸತ್ತಿದ್ದೀರಾ? ಅಧಿಕಾರಿಗಳು, ಸ್ಥಳೀಯ ಆಡಳಿತ ಅಥವಾ ಜನಪ್ರತಿನಿಧಿಗಳಿಂದ ಪರಿಹಾರ ಸಿಗದ ಸ್ಥಿತಿಯಲ್ಲಿದ್ದೀರಾ? ಹಾಗಿದ್ದರೆ, ನೀವು ನೇರವಾಗಿ ಪ್ರಧಾನಮಂತ್ರಿ ಅವರಿಗೆ ನಿಮ್ಮ ದೂರು ಸಲ್ಲಿಸುವ ಅವಕಾಶ ಇದೆ. ಸಾಮಾನ್ಯವಾಗಿ ಪ್ರತಿಯೊಂದು ಸಮಸ್ಯೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಇಲಾಖೆಗಳು ಹಾಗೂ ಪ್ರಕ್ರಿಯೆಗಳು ಇರುತ್ತವೆ.

ನಿಮ್ಮ ದೂರನ್ನು ಪ್ರಧಾನಿಗೆ ಕಳುಹಿಸಲು ಬಯಸುವಿರಾ? ಇಲ್ಲಿದೆ ಮಾಹಿತಿ

ಪ್ರಧಾನಮಂತ್ರಿ -

Profile
Sushmitha Jain Jan 4, 2026 7:00 AM

ಬೆಂಗಳೂರು: ನಿಮ್ಮ ಸಮಸ್ಯೆಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲವೇ? ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದೀರಾ? ಅಧಿಕಾರಿಗಳು, ಸ್ಥಳೀಯ ಆಡಳಿತ, ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದರೆಯುತ್ತಿಲ್ಲವೆ? ಹಾಗಾದರೆ ನೀವು ನೇರವಾಗಿ ಪ್ರಧಾನಿಯವರಿಗೆ (Prime Minister) ನಿಮ್ಮ ನೀಡಬಹುದು. ಹೌದು, ಪ್ರತಿಯೊಂದು ಸಮಸ್ಯೆ ಪರಿಹರಿಸಲು ಅದರದ್ದೇ ಆದ ಇಲಾಖೆಗಳಿರುತ್ತವೆ. ಸಿದ್ಧ ಸೂತ್ರಗಳಿರುತ್ತವೆ. ಆದರೆ ಅದೆಷ್ಟೋ ಬಾರಿ ಜನಸಾಮಾನ್ಯರ ದೂರುಗಳನ್ನು ಸ್ವೀಕರಿಸುತ್ತಿರುವುದಿಲ್ಲ..ದೂರು ನೀಡಿ ವರ್ಷಗಳೇ ಕಳೆದರೂ ಸಮಸ್ಯೆಗೆ ಪರಿಹಾರವೇ ದೊರೆತಿರುವುದಿಲ್ಲ. ಇದೀಗ ಕೆಲಸ ಆಗುವುದೇ ಇಲ್ಲ ಎಂದು ನೀವು ಕೈಚೆಲ್ಲಿ ಕೂರುವ ಅಗತ್ಯವಿಲ್ಲ. ಏಕೆಂದರೆ ನೀವು ನೇರವಾಗಿ ಪ್ರಧಾನಿಯವರಿಗೆ ನಿಮ್ಮ ದೂರುಗಳನ್ನು ನೀಡಬಹುದುಅಗಿದೆ. ಇದು ಅತೀ ಸುಲಭ ಹಾಗೂ ಸರಳವೂ ಹೌದು.

ಸಾಮಾನ್ಯ ನಾಗರಿಕ ಪ್ರಧಾನಮಂತ್ರಿಗಳಿಗೆ ದೂರು-ಸಲಹೆ ನೀಡುವುದು ಹೇಗೆ?

ಭಾರತದಲ್ಲಿ ಯಾವುದೇ ಸಾಮಾನ್ಯ ನಾಗರಿಕನು ಪ್ರಧಾನಮಂತ್ರಿಯವರಿಗೆ ತನ್ನ ದೂರು, ಸಲಹೆ ಅಥವಾ ಆಲೋಚನೆಗಳನ್ನು ತಿಳಿಸಬಹುದು. ಇದಕ್ಕಾಗಿ ಹಲವು ಮಾರ್ಗಗಳಿವೆ. ಅತಿ ಸುಲಭವಾದ ಮಾರ್ಗವೆಂದರೆ ಆನ್‌ಲೈನ್ ಪೋರ್ಟಲ್. ಸರ್ಕಾರವು pmindia.gov.in ಎಂಬ ಅಧಿಕೃತ ಪೋರ್ಟಲ್ ಅನ್ನು ರೂಪಿಸಿದೆ. ಅಲ್ಲಿ ‘ ಇಂಟರಾಕ್ಟ್ ವಿಥ್ ಪಿಎಂ (Interact With PM)’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಅಲ್ಲಿ ನಿಮ್ಮ ದೂರು, ಸಲಹೆ ಅಥವಾ ಆಲೋಚನೆಗಳನ್ನು ದಾಖಲಿಸಬಹುದು. ಇದಕ್ಕಾಗಿ ನೀವು ಮೊದಲು ಖಾತೆಯೊಂದು ತೆರದು, ಲಾಗಿನ್ ಮಾಡುವುದು ಕಡ್ಡಾಯವಾಗಿದೆ.

ಮೋದಿ-ಲಕ್ಸನ್ ಮಹತ್ವದ ಚರ್ಚೆ; ಭಾರತ- ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ

ಎರಡನೆಯಾದಗಿ ಪ್ರಧಾನಮಂತ್ರಿಯವರಿಗೆ ನೀವು ಪತ್ರದ ಮೂಲಕವೂ ನೇರವಾಗಿ ನಿಮ್ಮ ದೂರುಗಳನ್ನು ನೀಡಬಹುದು. ಭಾರತೀಯ ಡಾಕ್ ಮೂಲಕ ಪತ್ರ ಬರೆದು ಪ್ರಧಾನಮಂತ್ರಿಗಳ ಕಚೇರಿಗೆ ನಿಮ್ಮ ದೂರುಗಳನ್ನು ಸಲ್ಲಿಸಬಹುದು. ಅಲ್ಲದೇ ದೂರವಾಣಿ ಸಂಖ್ಯೆ +91-11-23012312ಗೆ ಕರೆ ಮಾಡುವ ಮೂಲಕ ಹಾಗೂ +91-11-23019545, 23016857ಗೆ ಫ್ಯಾಕ್ಸ್ ಮಾಡುವ ಮೂಲಕವು ಪ್ರಧಾನಿಯವರಿಗೆ ನಿಮ್ಮ ಸಲಹೆ-ಸೂಚನೆ ಹಾಗೂ ದೂರಗಳನ್ನು ಸಲ್ಲಿಸಬಹುದು. ಇಷ್ಟೇ ಅಲ್ಲದೇ ಇಮೇಲ್ ಮೂಲಕ (narendramodi1234@gmail.com) ಅಥವಾ ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಧಾನಮಂತ್ರಿಗೆ ನಿಮ್ಮ ಮಾತು ತಲುಪಿಸಬಹುದು.

ಪ್ರಧಾನಮಂತ್ರಿಯನ್ನು ಹೇಗೆ ಭೇಟಿಯಾಗಬಹುದು?

ಯಾವುದೇ ಸಾಮಾನ್ಯ ನಾಗರಿಕನು ಪ್ರಧಾನಿಯವರನ್ನು ಭೇಟಿಯಾಗಲು ಮೊದಲು ಅಪಾಯಿಂಟ್‌ಮೆಂಟ್ ಪಡೆಯುವುದು ಅಗತ್ಯ. ಇದಕ್ಕಾಗಿ ನಿಮ್ಮ ಕ್ಷೇತ್ರದ ಸಂಸದರು, ಶಾಸಕರು, ಮುಖ್ಯಮಂತ್ರಿ ಅಥವಾ ಸಂಬಂಧಿತ ಅಧಿಕಾರಿಗಳನ್ನು ಮೊದಲು ಸಂಪರ್ಕಿಸಬೇಕು. ಸ್ಥಳೀಯ ಮಟ್ಟದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ನಂತರ ನೇರವಾಗಿ ಪ್ರಧಾನಮಂತ್ರಿ ಕಚೇರಿ (PMO)ಯಿಂದ ಅಪಾಯಿಂಟ್‌ಮೆಂಟ್‌ಗೆ ವಿನಂತಿಸಬಹುದು. ಈ ರೀತಿಯಲ್ಲಿ ಸಾಮಾನ್ಯ ನಾಗರಿಕರೂ ತಮ್ಮ ದೂರು ಅಥವಾ ಸಲಹೆಯನ್ನು ಪ್ರಧಾನಮಂತ್ರಿಯವರಿಗೆ ತಲುಪಿಸಬಹುದು.