Mumbai Crime Branch: ಭಾರತೀಯರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸುವ ಬೃಹತ್ ಜಾಲ ಪತ್ತೆ
ಮುಂಬೈನ ಕ್ರೈಂ ಬ್ರಾಂಚ್ ಅಧಿಕಾರಿಗಳು ಅಕ್ರಮವಾಗಿ ಭಾರತೀಯರನ್ನು ಅಮೆರಿಕಕ್ಕೆ ಕಳಿಸುವ ವಂಚನೆಯ ಬೃಹತ್ ಜಾಲವನ್ನು ಪತ್ತೆ ಮಾಡಿದ್ದಾರೆ. ನಕಲಿ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.


ಮುಂಬೈ: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ವಲಸಿಗರನ್ನು ಗಡಿಪಾರು ಮಾಡುವ ಕೆಲಸ (Mumbai Crime Branch) ನಡೆಯುತ್ತಿದೆ. ಈಗಾಗಲೇ ಎರಡು ಹಂತದಲ್ಲಿ ಅಮೆರಿಕದಿಂದ ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಇದೀಗ ಮುಂಬೈನ ಕ್ರೈಂ ಬ್ರಾಂಚ್ ಅಧಿಕಾರಿಗಳು ಅಕ್ರಮವಾಗಿ ಭಾರತೀಯರನ್ನು ಅಮೆರಿಕಕ್ಕೆ ಕಳಿಸುವ ವಂಚನೆಯ ಬೃಹತ್ ಜಾಲವನ್ನು ಪತ್ತೆ ಮಾಡಿದ್ದಾರೆ. ನಕಲಿ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಗ್ಯಾಂಗ್ ನಕಲಿ ದಾಖಲೆಗಳ ಮೇಲೆ ಯುವಕರನ್ನು ವಿದೇಶಕ್ಕೆ ಕಳುಹಿಸಿದ್ದಲ್ಲದೆ, ಅವರೊಂದಿಗೆ ತಮ್ಮದೇ ಆದ ಏಜೆಂಟರನ್ನು ನಿಯೋಜಿಸಿಕೊಂಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಪರಾಧ ವಿಭಾಗದ ಪ್ರಕಾರ, ಮಾನವ ಕಳ್ಳಸಾಗಣೆ ತಂಡವು ಯೋಜಿತ ತಂತ್ರವನ್ನು ಅನುಸರಿಸುತ್ತದೆ. ಯುವಕರನ್ನು ವಿದೇಶಕ್ಕೆ ಕಳುಹಿಸುವಾಗ ತಮ್ಮ ತಂಡದ ಸದಸ್ಯರನ್ನೂ ಕಳುಹಿಸುತ್ತದ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರು ಪೋಲೆಂಡ್, ಟರ್ಕಿ ಅಥವಾ ಯುಎಇ ತಲುಪಿದ ನಂತರ, ಗ್ಯಾಂಗ್‌ನ ಏಜೆಂಟರು ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವ ಮೊದಲು ಅವರನ್ನು ಗಡಿಯವರೆಗೆ ಕರೆದೊಯ್ಯುತ್ತಿದ್ದರು ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಈ ಜಾಲದ ಮಾಸ್ಟರ್ ಮೈಂಡ್ ಅಜಿತ್ ಪುರಿ, ತಾನು ವಿದೇಶಕ್ಕೆ ಕಳ್ಳಸಾಗಣೆ ಮಾಡಿದ ಎಲ್ಲಾ 80 ಯುವಕರೊಂದಿಗೆ ಏಜೆಂಟರನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರತಿಯೊಬ್ಬರಿಂದ ತಾವು 30-40 ಲಕ್ಷ ರೂ. ವಿಧಿಸುವುದಾಗಿ ಗ್ಯಾಂಗ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Illegal immigrants: ಭಾರತೀಯರು ಸೇರಿದಂತೆ 300 ಅಕ್ರಮ ವಲಸಿಗರು ಪನಾಮದಲ್ಲಿ ಟ್ರ್ಯಾಪ್! ರಕ್ಷಣೆಗಾಗಿ ಕೂಗುತ್ತಿರುವ ವಿಡಿಯೊ ವೈರಲ್
ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ -17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಬಂದಿದೆ. ಅಂಕಿಅಂಶಗಳ ಪ್ರಕಾರ, ಭಾರತದಿಂದ ಬಂದ ಸರಿಸುಮಾರು 725,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ , ಇದು ಮೆಕ್ಸಿಕೊ ಮತ್ತು ಎಲ್ ಸಾಲ್ವಡಾರ್ ನಂತರ ಅನಧಿಕೃತ ವಲಸಿಗರ ಮೂರನೇ ಅತಿದೊಡ್ಡ ಜನಸಂಖ್ಯೆಯಾಗಿದೆ.