ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holi 2025: ವಿವಿಧ ರಾಜ್ಯಗಳಲ್ಲಿ ಹೋಳಿ ಹಬ್ಬ ಆಚರಣೆ ಹೇಗಿರುತ್ತದೆ?

ಹೋಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೋಳಿಯನ್ನು ಭಾರತದಾದ್ಯಂತ ಆಚರಿಸುವ ಸಂಭ್ರಮ ಹಬ್ಬ. ಈ ಹಬ್ಬದ ಉದ್ದೇಶ ಒಂದೇಯಾದರೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಆಚರಣೆ ಇದೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ಯಾವೆಲ್ಲಾ ಹೆಸರಿನಿಂದ ಕರೆಯುತ್ತಾರೆ, ಹೇಗೆ ಆಚರಿಸುತ್ತಾರೆ ನೋಡಿ.

ಬೇರೆ ಬೇರೆ ರಾಜ್ಯಗಳಲ್ಲಿ ಹೋಳಿ ಆಚರಣೆ ಹೇಗೆ?

ಹೋಳಿ ಆಚರಣೆ

Profile Sushmitha Jain Mar 12, 2025 6:30 AM

ಬೆಂಗಳೂರು, ಮಾ.11: ಹೋಳಿ ಹಬ್ಬ ಎಂದರೆ ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ವಿಶೇಷ ಸಂತೋಷವನ್ನು ನೀಡುತ್ತವೆ. ಹಬ್ಬ ಎಂದರೆ ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ವಿಶೇಷ ಸಂತೋಷವನ್ನು ನೀಡುತ್ತವೆ.

ಹೋಳಿ ಹಬ್ಬ ಎಂದರೆ ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ವಿಶೇಷ ಸಂತೋಷವನ್ನು ನೀಡುತ್ತವೆ.ಳಿ ಹಬ್ಬ ಎಂದರೆ ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ವಿಶೇಷ ಸಂತೋಷವನ್ನು ನೀಡುತ್ತವೆ.
ವರ್ಣರಂಜಿತವಾದ ಈ ಹಬ್ಬದಲ್ಲಿ ಜನರು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಈ ವಿಭಿನ್ನವಾದ ಹಬ್ಬದ ಆಚರಣೆಯನ್ನು ಭಾರತ ಹಾಗೂ ನೇಪಾಳದಲ್ಲಿ ಮಾತ್ರ ಆಚರಿಸುವುದನ್ನು ಕಾಣಬಹುದು. ಪವಿತ್ರವಾದ ಧಾರ್ಮಿಕ ಹಿನ್ನೆಲೆಯನ್ನು ಒಳಗೊಂಡಿರುವ ಈ ಹಬ್ಬದ ಆಚರಣೆ ವಿವಿಧ ರಾಜ್ಯಗಳಲ್ಲಿ ಹೇಗಿರುತ್ತದೆ ಅನ್ನೋ ಮಾಹಿತಿ ಇಲ್ಲಿದೆ.

ಬಿಹಾರ

ಬಿಹಾರದ ಪ್ರಮುಖ ಹಬ್ಬ ಹೋಳಿ. ಹಬ್ಬದ ಹಿಂದಿನ ರಾತ್ರಿ ಹಿರಣ್ಯಕಶಿಪುವಿನ ಸಹೋದರಿ ಹೋಳಿಕಾಳನ್ನು ಬೆಂಕಿಯಲ್ಲಿ ದಹನ ಮಾಡಿ ಜನರು ಹಬ್ಬ ಆಚರಿಸುತ್ತಾರೆ. ಈ ಹಬ್ಬವನ್ನು ಭೋಜ್‌ಪುರಿ ಉಪಭಾಷೆಯಲ್ಲಿ ಫಗುವಾ ಎಂದು ಕರೆಯಲಾಗುತ್ತದೆ ಮತ್ತು ಹೋಳಿ ಹಿಂದಿನ ದಿನವನ್ನು ಫಲ್ಗುಣ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಸಂಪ್ರದಾಯದಂತೆ, ಜನರು ಹೋಲಿಕಾ ದಹನಕ್ಕೆ ಬೆರಣಿ, ಮರಗಳು, ಹೊಸ ಸುಗ್ಗಿಯ ಧಾನ್ಯಗಳನ್ನು ಸೇರಿಸುತ್ತಾರೆ. ಮರುದಿನ ಹೋಳಿಯನ್ನು ಬಣ್ಣಗಳ ನೀರನ್ನು ಒಬ್ಬರಿಗೊಬ್ಬರು ಎರಚಿಕೊಂಡು ಬೆಳಿಗ್ಗೆ/ಮಧ್ಯಾಹ್ನದಲ್ಲಿ ಆಡಲಾಗುತ್ತದೆ. ನಂತರ ಹೋಳಿ ಮಿಲನ್ ಅನ್ನು ಪ್ರದರ್ಶಿಸಲಾಗುತ್ತದೆ. ಇಲ್ಲಿ ಜನರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ ಮತ್ತು ಪರಸ್ಪರರ ಮುಖಕ್ಕೆ ಒಣ ಬಣ್ಣಗಳನ್ನು ಲೇಪಿಸುತ್ತಾರೆ.

ಕರ್ನಾಟಕ

ಕರ್ನಾಟಕದಲ್ಲಿ ಹೋಳಿ ಉತ್ಸವವು ಎರಡು ದಿನಗಳ ಕಾಲ ನಡೆಯಲಿದ್ದು, ಜನರು ಹಬ್ಬಕ್ಕೆ ಕೆಲವು ದಿನಗಳ ಮೊದಲು ಸೌದೆಯನ್ನು ಸಂಗ್ರಹಿಸಿ 'ಕಾಮದಹನ' ರಾತ್ರಿಯಲ್ಲಿ ಸುಡುತ್ತಾರೆ. ಅನೇಕ ಮನೆಗಳು ಈ ದಿನದಂದು ವಿಶೇಷ ಭಕ್ಷ್ಯಗಳನ್ನು ಸಹ ತಯಾರಿಸುತ್ತವೆ. ರಾಜ್ಯದ ಶಿರಸಿ ಭಾಗದಲ್ಲಿ ಜನರು ಹಬ್ಬಕ್ಕೆ ಐದು ದಿನಗಳ ಮೊದಲು 'ಬೇಡರ ವೇಷ' ಎಂಬ ಜಾನಪದ ನೃತ್ಯವನ್ನು ಮಾಡುತ್ತಾರೆ.

ಉತ್ತರ ಪ್ರದೇಶ

ಹೋಳಿ ಹಬ್ಬದ ಸಂದರ್ಭದಲ್ಲಿ ಮಥುರಾ ಮತ್ತು ವೃಂದಾವನದಲ್ಲಿ ನಾನಾರೀತಿಯ ಜಾನಪದ ಹಾಡು ಹಾಗೂ ನೃತ್ಯಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೇ ಹೋಲಿಕಾ ಪ್ರತಿಕೃತಿ ದಹಿಸಲಾಗುತ್ತದೆ. ಹೋಳಿ ಹಬ್ಬದಂದು ಜನರು ಬೆಂಕಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಉತ್ತಮ ಫಸಲುಗಾಗಿ ಪ್ರಾರ್ಥಿಸುತ್ತಾರೆ. ಈ ದಿನವನ್ನು ‘ಪುನೋ’ ಎಂದೂ ಕರೆಯುತ್ತಾರೆ. ಅವರು ಕೃತಜ್ಞತೆಯನ್ನು ಸಲ್ಲಿಸಲು ತೆಂಗಿನಕಾಯಿ ಮತ್ತು ಹೂವುಗಳ ಜೊತೆಗೆ ಸುಗ್ಗಿಯ ಕಾಳು ಮತ್ತು ಕಾಂಡಗಳನ್ನು ಅರ್ಪಿಸುತ್ತಾರೆ. ಬಳಿಕ ಸುಟ್ಟ ತೆಂಗಿನಕಾಯಿಯನ್ನು ಮನೆಗೆ ಪ್ರಸಾದವಾಗಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ಜನರು ಹೋಳಿ ಹಬ್ಬದ ದಿನ ‘ಗುಲಾಲ್’ ಎಂಬ ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಲತ್ಮಾರ್ ಹೋಳಿ ಈ ಹಬ್ಬಕ್ಕೆ ಇರುವ ಇನ್ನೊಂದು ಹೆಸರು.

ಈಶಾನ್ಯ ಭಾರತ

18ನೇ ಶತಮಾನದಲ್ಲಿ ವೈಷ್ಣವರೊಂದಿಗೆ ಪ್ರಾರಂಭವಾದ ಹೋಳಿಯನ್ನು ಮಣಿಪುರದಲ್ಲಿ ಆರು ದಿನಗಳ ಕಾಲ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ʼಯೋಸಾಂಗ್ʼ ಎಂಬ ಮತ್ತೊಂದು ಹಳೆಯ ಹಬ್ಬವನ್ನು ಆಚರಿಸಲಾಗುತ್ತದೆ. ಮಣ್ಣಿನ ಮತ್ತು ಮಣ್ಣಿನ ಹುಲ್ಲಿನ ಗುಡಿಸಲು ಮಾಡಿ ಸಂಜೆ ಸುಡಲಾಗುತ್ತದೆ. ಮಣಿಪುರದಲ್ಲಿ ಹುಡುಗರು ತಮ್ಮೊಂದಿಗೆ ಹೋಳಿ ಆಡಲು ಹುಡುಗಿಯರಿಗೆ ಹಣ ನೀಡಬೇಕು. ದೇವಾಲಯಗಳಲ್ಲಿ ನೃತ್ಯಗಳು, ಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಭಕ್ತರು ಬಿಳಿ ಉಡುಪುಗಳು ಮತ್ತು ಹಳದಿ ಪೇಟಗಳನ್ನು ಧರಿಸಿ ದೇವಸ್ಥಾನದ ಮುಂದೆ ಬಣ್ಣಗಳನ್ನು ಆಡುತ್ತಾರೆ. ಕೊನೆಯ ದಿನ ಇಂಫಾಲದ ಬಳಿಯ ಕೃಷ್ಣ ದೇವಸ್ಥಾನದಲ್ಲಿ ಮೆರವಣಿಗೆ ಇರುತ್ತದೆ.

ವಾಯುವ್ಯ ಭಾರತದ ಇತರ ಬುಡಕಟ್ಟುಗಳು ಈ ವಸಂತ ಹಬ್ಬವನ್ನು ಆಚರಿಸಲು ತಮ್ಮದೇ ಆದ ವಿಧಾನಗಳನ್ನು ಹೊಂದಿವೆ. ಅವರು ಹೋಳಿಯ ಮುನ್ನಾದಿನದಂದು ಬೆಂಕಿಯನ್ನು ಹಚ್ಚುತ್ತಾರೆ ಮತ್ತು ದೇವಿಯನ್ನು ಪೂಜಿಸುತ್ತಾರೆ. ಬುಡಕಟ್ಟು ಜನರು ಹೋಳಿ ಆಚರಣೆ ವೇಳೆ ಕೆಸುಡೋ ಮತ್ತು ಮಾವಿನ ವಸಂತ ಹೂವುಗಳು ಮತ್ತು ಧಾನ್ಯಗಳನ್ನು ಅರ್ಪಿಸುತ್ತಾರೆ.

ರಾಜಸ್ಥಾನದಲ್ಲಿ ಹೋಳಿ

ರಾಜಸ್ಥಾನದಲ್ಲಿ ಹೋಳಿಯ ವಿವಿಧ ರೂಪಗಳನ್ನು ಕಾಣಬಹುದು. ಕೆಲವೆಡೆ ಲಾಠ್‌ಮಾರ್‌ ಸಂಪ್ರದಾಯವಿದ್ದು, ಕೆಲವೆಡೆ ಬೇಟಮಾರ್‌ ಹೋಳಿ ಆಚರಣೆ ಮಾಡಲಾಗುತ್ತದೆ. ಅಜ್ಮೀರ್‌ನ ಪುಷ್ಕರ್‌ನಲ್ಲಿ ಬಟ್ಟೆ ಹರಿದು ಹೋಳಿ ಆಡಲಾಗುತ್ತದೆ. ಪಶ್ಚಿಮ ರಾಜಸ್ಥಾನದಲ್ಲಿ ಗೈರ್ ನೃತ್ಯವನ್ನು ಆಯೋಜಿಸಲಾದರೆ ಶೇಖಾವತ್‌ನಲ್ಲಿ ಹೋಳಿ ಸಂದರ್ಭದಲ್ಲಿ ಗಿಂಡಾಡ್ ನೃತ್ಯವನ್ನು ಆಯೋಜಿಸಲಾಗುತ್ತದೆ. ಇಲ್ಲಿ ಹೋಳಿ ಹಬ್ಬವು ಹೋಳಿಗೆ 21 ದಿನಗಳ ಮೊದಲು ಪ್ರಾರಂಭವಾಗುತ್ತದೆ. ಅಲ್ಲಿ ಪುರುಷರ ಗುಂಪು ಜಾನಪದ ಹಾಡುಗಳನ್ನು ಹಾಡುತ್ತಾರೆ ಮತ್ತು ಬಣ್ಣಗಳನ್ನು ಪರಸ್ಪರ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ.

ಗೋವಾದ ಶಿಮ್ಗೋ

ಗೋವಾದಲ್ಲಿ ಕೊಂಕಣಿ ಜನರು ಹೋಳಿಯನ್ನು ಶಿಮ್ಗೋ ಅಥವಾ ಶಿಮ್ಗೋತ್ಸವ್ ಎಂದು ಆಚರಿಸುತ್ತಾರೆ. ಈ ಜನರು ವಸಂತವನ್ನು ಸ್ವಾಗತಿಸಲು ಬಣ್ಣ ಎರಚಿ ಆಡುತ್ತಾರೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಆಹಾರವೆಂದರೆ ಮಸಾಲೆಯುಕ್ತ ಚಿಕನ್ ಅಥವಾ ಮಟನ್ ಕರಿ ಇದನ್ನು ಕೊಂಕಣಿಯಲ್ಲಿ ಶಾಗೋಟಿ ಎಂದು ಕರೆಯಲಾಗುತ್ತದೆ. ಗೋವಾದಲ್ಲಿ ಶಿಮ್ಗೋತ್ಸವದ ಸಂದರ್ಭದಲ್ಲಿ ಬೃಹತ್ ಮೆರವಣಿಗೆಯನ್ನು ಮಾಡಲಾಗುತ್ತದೆ.

ಈ ಸುದ್ದಿಯನ್ನು ಓದಿ: Holi Dresscode 2025: ಹೋಳಿ ಸಂಭ್ರಮಕ್ಕೆ ಬಂತು 3 ಶೈಲಿಯ ಡ್ರೆಸ್ ಕೋಡ್ಸ್

ತೆಲಂಗಾಣ

ಇಲ್ಲ, ಹೋಳಿ ಹಬ್ಬವನ್ನು ಕಾಮದೇವನ ದಂತಕಥೆಯೊಂದಿಗೆ ಬೆರೆಸುತ್ತಾರೆ. ಹಾಗಾಗಿ ಇದಕ್ಕೆ ಕಾಮುನಿ ಪುನ್ನಮಿ ಅಥವಾ ಕಾಮ ಪೂರ್ಣಿಮಾ ಅಥವಾ ಜಾಜಿರಿ ಎಂದೂ ಕರೆಯುತ್ತಾರೆ. ಈ ರಾಜ್ಯದಲ್ಲಿ 10 ದಿನಗಳ ಸುದೀರ್ಘ ಹಬ್ಬ ಇದಾಗಿದ್ದು, ಕೊನೆಯ ದಿನವು ಮುಖ್ಯ ಹೋಳಿ ಹಬ್ಬವಾಗಿದೆ. ಇದಕ್ಕೂ ಮುನ್ನಾದ 9 ದಿನಗಳ ಕಾಲ ಮಕ್ಕಳು ಹೋಲಿಕಾ ದಹನಕ್ಕಾಗಿ ಜನಪದ ಗೀತೆಗಳನ್ನು ಹಾಡುತ್ತಾ, ಕೋಲಾಟ ಆಡುತ್ತಾ ಹಣ, ಅಕ್ಕಿ, ಕಟ್ಟಿಗೆ ಸಂಗ್ರಹಿಸುತ್ತಾರೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ, ಹೋಳಿ ಹಬ್ಬವನ್ನು 'ಡೋಲ್ ಜಾತ್ರೆ' ಅಥವಾ 'ಡೋಲ್ ಪೂರ್ಣಿಮಾ' ಎಂದು ಕರೆಯಲಾಗುತ್ತದೆ. ಜನರು ಪಲ್ಲಕ್ಕಿಯ ಮೇಲೆ ರಾಧಾ ಕೃಷ್ಣನ ಪ್ರತಿಮೆಗಳನ್ನು ಇರಿಸಿ ಊರೆಲ್ಲ ಮೆರವಣಿಗೆ ಮಾಡುತ್ತಾರೆ. ಈ ಪಲ್ಲಕ್ಕಿಯ ಎದುರು ಕುಣಿಯುತ್ತಾ, ಹಾಡುತ್ತಾ ಹಬ್ಬವನ್ನು ಸಂಭ್ರಮಿಸಲಾಗುತ್ತದೆ.