Defence Budget: ನರಭಕ್ಷಕ ಉಗ್ರರ ಬೇಟೆಗಿಳಿದ ಭಾರತೀಯ ಸೇನೆ; ರಕ್ಷಣಾ ಬಜೆಟ್ 50,000 ಕೋಟಿ ರೂ. ಗೆ ಹೆಚ್ಚಳ?
India- Pak Tensions: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ನಿರಂತರ ದಾಳಿ ನಡೆಸಿ ಉಗ್ರರರನ್ನು ಸಂಪೂರ್ಣ ಸೆದೆ ಬಡಿಯುವ ಪಣ ತೊಟ್ಟಿರುವ ಭಾರತ ಸರ್ಕಾರ ಇದೀಗ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ರಕ್ಷಣಾ ಬಜೆಟ್ ಅನ್ನು 50,000 ಕೋಟಿ ರೂ. ಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಇದರಲ್ಲಿ ಹೆಚ್ಚಿನ ಹಣವನ್ನು ಹೊಸ ಶಸ್ತ್ರಾಸ್ತ್ರಮತ್ತು ಮದ್ದುಗುಂಡುಗಳ ಖರೀದಿ ಹಾಗೂ ತಂತ್ರಜ್ಞಾನಕ್ಕೆ ವ್ಯಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


ನವದೆಹಲಿ: ಕಾಶ್ಮೀರದ ಪಹಲ್ಗಾಮ್ (Pahalgam Terror Attack) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರ ದಾಳಿಗೆ (Terror attack) 27 ಪ್ರವಾಸಿಗರು ಬಲಿಯಾದ ಬಳಿಕ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯ ಮೂಲಕ ಉಗ್ರರ ವಿರುದ್ಧ ಸಮರ ಸಾರಿರುವ ಭಾರತ ಮುಂದಿನ ಬಜೆಟ್ ನಲ್ಲಿ 50,000 ಕೋಟಿ ರೂ. ಅನ್ನು ರಕ್ಷಣಾ ಬಜೆಟ್ (Defence Budget) ಗೆ ಇಡುವ ಸಾಧ್ಯತೆ ಇದೆ. ಇದರಲ್ಲಿ ಹೊಸ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ (Weapons and ammunition) ಖರೀದಿ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಹಣವನ್ನು ವ್ಯಯಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ನಿರಂತರ ದಾಳಿ ನಡೆಸಿ ಉಗ್ರರರನ್ನು ಸಂಪೂರ್ಣ ಸೆದೆ ಬಡಿಯುವ ಪಣ ತೊಟ್ಟಿರುವ ಭಾರತ ಸರ್ಕಾರ ಇದೀಗ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ರಕ್ಷಣಾ ಬಜೆಟ್ ಅನ್ನು 50,000 ಕೋಟಿ ರೂ. ಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಇದರಲ್ಲಿ ಹೆಚ್ಚಿನ ಹಣವನ್ನು ಹೊಸ ಶಸ್ತ್ರಾಸ್ತ್ರಮತ್ತು ಮದ್ದುಗುಂಡುಗಳ ಖರೀದಿ ಹಾಗೂ ತಂತ್ರಜ್ಞಾನಕ್ಕೆ ವ್ಯಯಿಸಲಾಗುವುದು. ಈ ಮೂಲಕ ದೇಶ ಮತ್ತು ನಾಗರಿಕರ ರಕ್ಷಣೆಗೆ ಹೆಚ್ಚಿನ ಹಣ ವಿನಿಯೋಗವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ಮುಂದೆ ಮಂಡನೆಯಾಗುವ ಬಜೆಟ್ ನಲ್ಲಿ ರಕ್ಷಣಾ ಬಜೆಟ್ ಹೆಚ್ಚಿನ ಶಕ್ತಿ ಪಡೆಯುವ ಸಾಧ್ಯತೆಯಿದೆ. ಆಪರೇಷನ್ ಸಿಂದೂರ್ ಅನಂತರ ಹೊಸ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಖರೀದಿ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಖರ್ಚು ಮಾಡಲು ನಿರ್ದೇಶಿಸಲಾಗಿದೆ ಎನ್ನಲಾಗಿದೆ.
ಪೂರಕ ಬಜೆಟ್ ಮೂಲಕ 50,000 ಕೋಟಿ ರೂ.ಗಳ ಹೆಚ್ಚುವರಿ ನಿಬಂಧನೆಗೆ ಪ್ರಸ್ತಾವನೆಯನ್ನು ಈಗಾಗಲೇ ಮಾಡಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಹೆಚ್ಚುವರಿ ಹಣ ಸಿಗುವುದರಿಂದ ಸಶಸ್ತ್ರ ಪಡೆಗಳ ಅಗತ್ಯತೆಗಳು, ಅಗತ್ಯ ಖರೀದಿಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.
ಈ ವರ್ಷ ಕೇಂದ್ರ ಬಜೆಟ್‌ನಲ್ಲಿ ರಕ್ಷಣೆಗಾಗಿ ದಾಖಲೆಯ 6.81 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. 9.53ರಷ್ಟು ಹೆಚ್ಚಾಗಿದೆ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಅನಂತರ ಕಳೆದ 10 ವರ್ಷಗಳಲ್ಲಿ ರಕ್ಷಣಾ ಬಜೆಟ್ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 2014- 15ರಲ್ಲಿ, ರಕ್ಷಣಾ ಬಜೆಟ್ 2.29 ಲಕ್ಷ ಕೋಟಿ ರೂ. ಗಳಷ್ಟಿತ್ತು. ಈ ವರ್ಷ 6.81 ಲಕ್ಷ ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ. ಇದು ಒಟ್ಟು ಬಜೆಟ್‌ನ ಶೇ. 13.45ರಷ್ಟಾಗಿದೆ.
ಇದನ್ನೂ ಓದಿ: Vyomika Singh: ಸೋಫಿಯಾ ಖುರೇಷಿ ಆಯ್ತು...ಈಗ ವ್ಯೋಮಿಕಾ ಸಿಂಗ್ ಬಗ್ಗೆ ವಿವಾದಾತ್ಮಕ ಹೇಳಿಕೆ- ಸಮಾಜವಾದಿ ನಾಯಕ ಹೇಳಿದ್ದೇನು?
ಗಡಿ ರೇಖೆಯನ್ನು ದಾಟದೆ ಪಾಕಿಸ್ತಾನದ ಆಳದಲ್ಲಿದ್ದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಭಾರತ ನಾಶಪಡಿಸಿದ ಆಪರೇಷನ್ ಸಿಂದೂರ್ ನಲ್ಲಿ ವಿಶ್ವಕ್ಕೆ ಭಾರತದ ರಕ್ಷಣಾ ಸಾಮರ್ಥ್ಯದ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ. ಆಪರೇಷನ್ ಸಿಂದೂರ್ ಗೆ ಪ್ರತಿಯಾಗಿ ಪ್ರಾರಂಭವಾದ ಉದ್ವಿಗ್ನತೆಯ ವೇಳೆ ಭಾರತದ ಬಹು-ಪದರದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಸ್ಥಳೀಯ ತಂತ್ರಜ್ಞಾನವನ್ನು ಒಳಗೊಂಡಂತೆ ಬಹುತೇಕ ಪ್ರತಿಯೊಂದು ಒಳಬರುವ ಕ್ಷಿಪಣಿ ಮತ್ತು ಡ್ರೋನ್ ಅನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿತ್ತು.