ಡಿ.ಕೆ. ಶಿವಕುಮಾರ್‌ಗೆ ಸಿದ್ದರಾಮಯ್ಯ ʼಪವರ್ʼ ಫುಲ್ ಡಿಚ್ಚಿ?; ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದೇನು?
Karnataka CM Row: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಕುರ್ಚಿ ಕಾಳಗ ತಾರಕಕ್ಕೇರಿದೆ. ಸಿಎಂ ಪಟ್ಟಕ್ಕಾಗಿ ಇಬ್ಬರು ನಾಯಕರ ಬಣ ಪೈಪೋಟಿ ನಡೆಸುತ್ತಿದೆ. ಈ ಮಧ್ಯೆ ಡಿಕೆಶಿ ಮತ್ತು ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಮೂಲಕ ಪರಸ್ಪರ ಟೀಕಿಸುತ್ತಿದ್ದಾರಾ ಎನ್ನುವ ಅನುಮಾನ ಮೂಡ ತೊಡಗಿದೆ. ಆ ಕುರಿತಾದ ವಿವರ ಇಲ್ಲಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ನ. 27: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ (Karnataka CM Row). ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಒಂದು ಬಣ ಸಕ್ರಿಯವಾಗಿ ಬಿರುಸಿನ ಚಟುವಟಿಕೆ ನಡೆಸುತ್ತಿದೆ. ಈ ಮಧ್ಯೆ ಡಿ.ಕೆ. ಶಿವಕುಮಾರ್ ʼʼಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼʼ ಎಂಬ ಮಾರ್ಮಿಕ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ʼʼನಮ್ಮ ಮಾತು ಜಗತ್ತಿನ ಜನರಿಗೆ ಒಳಿತು ಮಾಡದಿದ್ದರೆ ಅದಕ್ಕೆ ಶಕ್ತಿ ಇಲ್ಲʼʼ ಎಂದು ಬರೆದುಕೊಂಡಿದ್ದಾರೆ. ಡಿಕೆಶಿ ಅವರ ವರ್ಡ್ ಮತ್ತು ವರ್ಲ್ಡ್ ಪದವನ್ನು ಬಳಸಿ ಸಿದ್ದರಾಮಯ್ಯ ಈ ಪೋಸ್ಟ್ ಹಂಚಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
Word power is world power ಎಂದು ಡಿಕೆಶಿ ಬರೆದುಕೊಂಡಿದ್ದರು. ಇದೀಗ ಸಿದ್ದರಾಮಯ್ಯ A Word is not power unless it betters the World for the people ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಜತೆಗೆ Word ಮತ್ತು World ಪದಕ್ಕೆ ವಿಶೇಷ ಒತ್ತು ಕೊಟ್ಟಿರುವುದು ಕುತೂಹಲ ಮೂಡಿಸಿದೆ. ಈ ಮೂಲಕ ಡಿಕೆಶಿಗೆ ತಿರುಗೇಟು ನೀಡಿದ್ರಾ ಎನ್ನುವ ಅನುಮಾನ ಹುಟ್ಟು ಹಾಕಿದೆ. ಜತೆಗೆ ಸರ್ಕಾರ ಮಾತು ತಪ್ಪಿದೆ ಎಂದು ಟೀಕಿಸಿದ್ದ ಜೆಡಿಎಸ್‌ಗೆ ಉತ್ತರವಾಗಿ ಸಿದ್ದರಾಮಯ್ಯ ಇದನ್ನು ಹಂಚಿಕೊಂಡಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ.
ಸಿಎಂ ಸಿದ್ದರಾಮಯ್ಯ ಎಕ್ಸ್ ಪೋಸ್ಟ್:
A Word is not power unless it betters the World for the people.
— Siddaramaiah (@siddaramaiah) November 27, 2025
Proud to declare that the Shakti scheme has delivered over 600 crore free trips to the women of our state. From the very first month of forming the government, we transformed our guarantees into action; not in… pic.twitter.com/lke1J7MnbD
ಸಿದ್ದರಾಮಯ್ಯ ಹೇಳಿದ್ದೇನು?
ʼʼಕರ್ನಾಟಕಕ್ಕೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ. ಅದು ನಮ್ಮ ಪಾಲಿನ ಜಗತ್ತುʼʼ ಎಂದು ಸಿದ್ದರಾಮಯ್ಯ ಹೇಳಿದ್ದು, ಸರ್ಕಾರದ ಯೋಜನೆ ಹೇಗೆ ಯಶಸ್ವಿಯಾಗಿದೆ ಎಂಬುದರ ಬಗ್ಗೆ ವಿವರ ನೀಡಿದ್ದಾರೆ.
ʼʼನಮ್ಮ ಮಾತು ಜನರಿಗೆ ಒಳಿತು ಮಾಡದಿದ್ದರೆ ಅದಕ್ಕೆ ಶಕ್ತಿ ಇಲ್ಲʼʼ ಎಂದು ಪೋಸ್ಟ್ ಆರಂಭಿಸಿದ್ದಾರೆ. ʼʼಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖವಾದ ಶಕ್ತಿ ಸ್ಕೀಮ್ ಸುಮಾರು 600 ಕೋಟಿ ಉಚಿತ ಟ್ರಿಪ್ ಪೂರೈಸಿದೆ ಎನ್ನುವುದನ್ನು ಹೆಮ್ಮೆಯಿಂದ ಘೋಷಿಸುತ್ತಿದ್ದೇವೆ. ಈ ಯೋಜನೆ ರಾಜ್ಯದ ಮಹಿಳೆಯರಿಗೆ ಸಾಕಷ್ಟು ನೆರವಾಗಿದೆ. ಸರ್ಕಾರ ರಚನೆಯಾದ ಮೊದಲ ತಿಂಗಳೇ ನಾವು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಮಾತಿನ ಮೂಲಕವಲ್ಲ ಬದಲಾಗಿ ಕೃತಿಯ ಮೂಲಕ ಅನುಷ್ಠಾನಗೊಳಿಸಿದ್ದೇವೆʼʼ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕ ಎಕ್ಸ್ ಸಂದೇಶ
- ಶಕ್ತಿ: 600ಕ್ಕಿಂತ ಅಧಿಕ ಉಚಿತ ಪ್ರಯಾಣ-ದುಡಿಯುವ ಮಹಿಳೆಯರಿಗೆ ನೆರವು
- ಗೃಹ ಲಕ್ಷ್ಮೀ: ಕುಟುಂಬದ ಜವಾಬ್ದಾರಿ ಹೊತ್ತುಕೊಂಡ 1.24 ಕೋಟಿಗೂ ಹೆಚ್ಚು ಮಹಿಳೆಯರ ಬಲ ವೃದ್ದಿ
- ಯುವ ನಿಧಿ: 3 ಲಕ್ಷಕ್ಕೂ ಅಧಿಕ ಯುವ ಜನತೆಗೆ ಉತ್ತೇಜನ
- ಅನ್ನ ಭಾಗ್ಯ: 4.08 ಕೋಟಿ ಜನರಿಗೆ ಆಹಾರ ಭದ್ರತೆ
- ಗೃಹ ಜ್ಯೋತಿ: 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್
ಹೈಕಮಾಂಡ್ ಕರೆದರೆ ಸಿದ್ದರಾಮಯ್ಯ ಜತೆ ದೆಹಲಿಗೆ ಹೋಗುತ್ತೇನೆ: ಡಿ.ಕೆ. ಶಿವಕುಮಾರ್
ʼʼನನ್ನ ಮೊದಲ ಅವಧಿ (2013–18)ಯಲ್ಲಿ ನೀಡಲಾದ 165 ವಾಗ್ದಾನಗಳ ಪೈಕಿ 157 ನೆರವೇರಿಸಿ ಶೇ. 95ರಷ್ಟು ಸಾಧನೆ ಮಾಡಲಾಗಿದೆ. ಈ ಅವಧಿಯಲ್ಲಿ 593 ಘೋಷಿತ ಯೋಜನೆಗಳ ಪೈಕಿ 243+ ಅನ್ನು ಈಗಾಗಲೇ ನೆರವೇರಿಸಲಾಗಿದೆ. ಉಳಿದ ಭರವಸೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದ ಜನರು ನೀಡಿದ ಜನಾದೇಶವು ಒಂದು ಕ್ಷಣವಲ್ಲ, ಬದಲಾಗಿ 5 ವರ್ಷಗಳ ಕಾಲ ನಡೆಯುವ ಜವಾಬ್ದಾರಿಯಾಗಿದೆ. ನಾನು ಸೇರಿದಂತೆ ಕಾಂಗ್ರೆಸ್‌ನ ಎಲ್ಲರೂ ನಮ್ಮ ಜನರ ಪರವಾಗಿ ಕಾರ್ಯ ನಿರ್ವಹಿಸುತ್ತೇವೆʼʼ ಎಂದು ಹೇಳಿದ್ದಾರೆ.