ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bank Of Bhagyalakshmi Review: ದೀಕ್ಷಿತ್‌ ಶೆಟ್ಟಿ ಅಭಿನಯದ ʻಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Bank of Bhagyalakshmi Kannada Movie Review: ಸ್ಯಾಂಡಲ್‌ವುಡ್‌ನಲ್ಲಿ ಡಾರ್ಕ್‌ ಹ್ಯೂಮರ್‌ ಇರುವಂತಹ ಸಿನಿಮಾಗಳು ತೀರಾ ವಿರಳ ಎನ್ನಬಹುದು. ಸದ್ಯ ಅಂಥದ್ದೇ ಒಂದು ಜಾನರ್‌ನ ಸಿನಿಮಾ ತೆರೆಕಂಡಿದೆ. ಅದೇ ʻಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ. ದೀಕ್ಷಿತ್‌ ಶೆಟ್ಟಿ ಅಭಿನಯದ ಈ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು ಮುಂದೆ ಓದಿ.

Dheekshith Shetty: ʻಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ರಿವ್ಯೂ - ರೇಟಿಂಗ್

-

Avinash GR
Avinash GR Nov 27, 2025 9:03 PM

Movie: ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ
Release Date: ನವೆಂಬರ್‌ 27, 2025
Language: ಕನ್ನಡ
Genre: ಥ್ರಿಲ್ಲರ್‌, ಸಸ್ಪೆನ್ಸ್, ಕಾಮಿಡಿ,
Director: ಅಭಿಷೇಕ್
Cast: ದೀಕ್ಷಿತ್‌ ಶೆಟ್ಟಿ, ಬೃಂದಾ ಆಚಾರ್ಯ, ಶ್ರೀವತ್ಸ, ಗೋಪಾಲ್‌ಕೃಷ್ಣ ದೇಶಪಾಂಡೆ, ಭರತ್‌, ಶ್ರುತಿ ಹರಿಹರನ್‌,
Duration: 152 Minutes
Rating: 3/5

"ಇದು ಲಾಸ್ಟ್‌ ಕಳ್ಳತನ ಅಂದ್ಕೊಂಡು ಬಂದ್ವಿ, ಆದರೆ ಇಲ್ಲಿ ಜೀವನವೇ ಲಾಸ್ಟ್‌ ಆಗೋ ಥರ ಇದೆ"- ಅರ್ಧ ಸಿನಿಮಾ ಮುಗಿಯುವ ಹೊತ್ತಿಗೆ ಹೀರೋ ಟೈಗರ್‌ ಬಾಯಿಂದ ಈ ಮಾತು ಬರುತ್ತದೆ. ಅಷ್ಟಕ್ಕೂ ಕಳ್ಳತನ ಮಾಡೋಕೆ ಹೋದವರಿಗೆ ಜೀವ ಭಯ ಶುರುವಾಗುವುದು ಏಕೆ? ಅದನ್ನು ಬೆಳ್ಳಿತೆರೆ ಮೇಲೆ ನೋಡಬೇಕು. ಅದು ಭಾಗ್ಯಲಕ್ಷ್ಮೀ‌ ಕೋ ಆಪರೇಟಿವ್ ಬ್ಯಾಂಕ್. ತುಂಬಾ ರೂರಲ್‌ ಏರಿಯಾದಲ್ಲಿರುವ ಬ್ಯಾಂಕ್. ಅಂತಹ ಬ್ಯಾಂಕ್‌ಗೆ ಕನ್ನ ಹಾಕಿ, ಲೈಫ್‌ ಅಲ್ಲಿ ಸೆಟ್ಲ್ ಆಗಬೇಕು ಎಂದು ಟೈಗರ್‌ ಮತ್ತವನ ಸ್ನೇಹಿತರು ಪ್ಲ್ಯಾನ್‌ ಮಾಡ್ತಾರೆ. ಹಾಡುಹಗಲಲ್ಲೇ ಬ್ಯಾಂಕಿಗೆ ದಾಳಿ ಮಾಡುವ ಟೈಗರ್‌ ಪಡೆ, ಎಲ್ಲವನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳುತ್ತಾರೆ. ಇನ್ನೇನು ಇರೋಬರೋ ಹಣವನ್ನೆಲ್ಲಾ ಬಾಚಿಕೊಂಡು ಜಾಗ ಖಾಲಿ ಮಾಡಬೇಕು ಎಂದು ಕೊಳ್ಳುವಷ್ಟರಲ್ಲೇ ಟ್ವಿಸ್ಟ್‌ ಮೇಲ್‌ ಟ್ವಿಸ್ಟ್‌.. ಟ್ವಿಸ್ಟ್‌ ಮೇಲ್‌ ಟ್ವಿಸ್ಟ್‌..

ನಿರ್ದೇಶಕ ಅಭಿಷೇಕ್‌ ತಮ್ಮ ಮೊದಲ ಪ್ರಯತ್ನದಲ್ಲೇ ಕಾಮಿಡಿ ಹ್ಯೂಮರ್‌ ಜೊತೆಗೆ ಮನಿ ಹೈಸ್ಟ್‌ ಜಾನರ್‌ನ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ʻಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾ ಹೆಚ್ಚು ಗಮನಸೆಳೆಯುವುದೇ ಅದರ ನಿರೂಪಣೆಯಿಂದ. ಇಡೀ ಕಥೆ ಒಂದು ಬ್ಯಾಂಕ್‌ನೊಳಗೆ ನಡೆಯುತ್ತದೆ. ಎರಡು ದಿನಗಳ ಕಾಲ ಬ್ಯಾಂಕ್‌ ಕಳ್ಳರ ವಶದಲ್ಲಿರುತ್ತದೆ. ಅಷ್ಟು ಅವಧಿಯಲ್ಲಿ ಬರುವ ಕಾಮಿಡಿ, ತಿರುವುಗಳೇ ಈ ಚಿತ್ರದ ಜೀವಾಳ. ಮೇಕಿಂಗ್‌ನಲ್ಲಿ ಅಭಿಷೇಕ್‌ ಗೆದ್ದಿದ್ದಾರೆ. ಆದರೆ ನಿರೂಪಣೆ ಇನ್ನಷ್ಟು ವೇಗವಾಗಿ ಇರಬೇಕಿತ್ತು. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳಲ್ಲಿ ಆ ಅಂಶವೇ ಪ್ರಧಾನವಾಗಿರುತ್ತದೆ. ಹಾಗಾಗಿ ಚುರುಕಿನ ಚಿತ್ರಕಥೆ ಅವಶ್ಯಕವಾಗಿತ್ತು. ಸಿನಿಮಾ ಅವಧಿ ಕೂಡ ಒಂಚೂರು ಕಮ್ಮಿ ಇದ್ದಿದ್ದರೆ, ಭಾಗ್ಯಲಕ್ಷ್ಮೀ ಮಹಿಮೆ ಮತ್ತಷ್ಟು ರೋಚಕವಾಗಿರುತ್ತಿತ್ತು.

Sriimurali: 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ' ಹೀರೋ ದೀಕ್ಷಿತ್‌ ಶೆಟ್ಟಿಗೆ ಸಾಥ್‌ ನೀಡಿದ ಶ್ರೀಮುರಳಿ

ಬ್ಯಾಂಕ್‌ನಲ್ಲಿ ನಡೆಯುವ ಸಾಕಷ್ಟು ಸನ್ನಿವೇಶಗಳು ನಗುವನ್ನು ಉಕ್ಕಿಸುತ್ತವೆ. ಟ್ವಿಸ್ಟ್‌ಗಳು ಹೆಚ್ಚೇ ಇರುವುರಿಂದ ಥ್ರಿಲ್ಲಿಂಗ್‌ ಜರ್ನಿಯಾಗಿ ಭಾಗ್ಯಲಕ್ಷ್ಮೀ ಬ್ಯಾಂಕ್‌ ದರೋಡೆ ಕಥೆ ಸಾಗುತ್ತದೆ. ಹಾಸ್ಯ, ಸಸ್ಪೆನ್ಸ್‌ ಮಾದರಿಯ ಕಥೆಯಲ್ಲಿ ಮಾನವೀಯತೆಯ ಸೆಂಟಿಮೆಂಟ್‌ ಕೂಡ ಸೇರಿಕೊಂಡಿದೆ. ಒಂದು ಹಂತದಲ್ಲಿ ಚಿತ್ರದ ಹೀರೋ ರಾಬಿನ್‌ ಹುಡ್‌ನನ್ನು ಕೂಡ ನೆನಪಿಸುತ್ತಾನೆ. ನಿರ್ದೇಶಕರು ಕ್ಲೈಮ್ಯಾಕ್ಸ್‌ನಲ್ಲಿ ʻತುಕಾಲಿʼ ಐಡಿಯಾವೊಂದನ್ನು ಬಳಸುವ ಮೂಲಕ ಪ್ರೇಕ್ಷಕರ ಮೊಗದಲ್ಲಿ ನಗು ಮೂಡಿಸುತ್ತಾರೆ.

ಟೆಕ್ನಿಕಲಿ ಈ ಸಿನಿಮಾ ಹೇಗಿದೆ?

ಜ್ಯೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಕಥೆಗೆ ಆಪ್ತವಾಗಿದೆ. ಹಾಡುಗಳು ಒಮ್ಮೆ ಕೇಳಲು ಮಜಾವಾಗಿವೆ. ಹಿನ್ನೆಲೆ ಸಂಗೀತದಲ್ಲಿ ಜ್ಯೂಡಾ ಸ್ಯಾಂಡಿ ತಮ್ಮ ಗುರುತು ಮೂಡಿಸುತ್ತಾರೆ. ಅಭಿಷೇಕ್‌ ಅವರ ಛಾಯಾಗ್ರಹಣ ಈ ಚಿತ್ರದ ಇನ್ನೊಂದು ಪ್ಲಸ್‌ ಪಾಯಿಂಟ್.‌ ಸಾಹಸ ಮತ್ತು ನೃತ್ಯವನ್ನು ವಿಭಿನ್ನವಾಗಿ ಕಂಪೋಸ್‌ ಮಾಡಲಾಗಿದೆ.

ಸಖತ್‌ ಹೈಲೈಟ್‌ ಆಗಿರುವ ದೀಕ್ಷಿತ್‌ ಶೆಟ್ಟಿ

ನಟ ದೀಕ್ಷಿತ್‌ ಶೆಟ್ಟಿ ಅವರು ಈ ಚಿತ್ರದಲ್ಲಿ ಟೈಗರ್‌ ಆಗಿ ಸಖತ್‌ ಆಗಿ ಮಿಂಚಿದ್ದಾರೆ. ಸೀರಿಯಸ್‌ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಟ ದೀಕ್ಷಿತ್‌ ಶೆಟ್ಟಿ ಅವರಿಲ್ಲಿ ತಮ್ಮ ಕಾಮಿಡಿ ಆಂಗಲ್‌ನ ಪರಿಚಯಿಸಿದ್ದಾರೆ. ಅವರ ಡೈಲಾಗ್‌ ಡೆಲಿವರಿ, ನಟನಾ ಕೌಶಲ್ಯ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ. ನಟಿ ಬೃಂದಾ ಆಚಾರ್ಯ ಅವರಿಗೂ ನಟನೆಗೆ ಜಾಸ್ತಿ ಸ್ಕೋಪ್‌ ಸಿಕ್ಕಿದೆ. ಗೋಪಾಲ ಕೃಷ್ಣ ದೇಶಪಾಂಡೆ, ಶ್ರುತಿ ಹರಿಹರನ್, ಭರತ್, ಶ್ರೀವತ್ಸ‌ ನಟನೆಯಲ್ಲಿ ಹೆಚ್ಚು ಸ್ಕೋರ್‌ ಮಾಡುತ್ತಾರೆ. ಟೈಗರ್‌ ಗ್ಯಾಂಗ್‌ನ ಸದಸ್ಯರ ನಟನೆಯೂ ಗಮನಸೆಳೆಯುತ್ತದೆ.