ಈ ಮಹಿಳೆ ಸ್ನೇಕ್ ಡಾಕ್ಟರ್
ಈ ಮಹಿಳೆ ಸ್ನೇಕ್ ಡಾಕ್ಟರ್



ಶಾರದಾಂಬ.ವಿ.ಕೆ.
ಹಾವು ಕಡಿದದ್ದಕ್ಕೆ ಇಲ್ಲಿಯವರೆಗೆ ೩೦,೦೦೦ ಜನರಿಗಿಂತಲೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿ ತಮ್ಮಲ್ಲಿರುವ ವಿದ್ಯೆಯನ್ನು ಸಾರ್ಥಕ ಗೊಳಿಸಿ ಕೊಂಡಿದ್ದಾರೆ. ಚೇಳು, ಝರಿಯಂತಹ ವಿಷಜಂತುಗಳ ಕಡಿತಕ್ಕೂ ಸಹಾ ಔಷಧ ನೀಡಿ ನೋವು ಹೋಗಲಾ ಡಿಸುವುದರಲ್ಲಿ ನಿಷ್ಣಾತರು.
ತಮ್ಮನ್ನು ತಾವು ಸಮಾಜಸೇವಕರು ಎಂದು ಮೆರೆಯುವವರ ನಡುವೆ ಸದ್ದಿಲ್ಲದೆ ಎಲೆ ಮರೆಯ ಕಾಯಿಯಂತೆ ಹಲವಾರು ಜೀವಿಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿರುವ, ವಿಷಯುಕ್ತ ಹಾವು ಕಡಿತಕ್ಕೆ ಯಶಸ್ವಿ ಚಿಕಿತ್ಸೆ ನೀಡಿ, ವಿಷಸರ್ಪ ಕಡಿದವರು ಉಳಿಯುವುದು ಕಷ್ಟ ಎಂಬ ಮಾತನ್ನು ಸುಳ್ಳಾಗಿಸಿ ಅಂತಹವರ ಪಾಲಿಗೆ ಉಚಿತ ವಾಗಿ ಚಿಕಿತ್ಸೆ ನೀಡಿ ಜೀವ ಸಂಜೀವಿನಿಯಾಗಿ ’ಸ್ನೇಕ್ ಡಾಕ್ಟರ್’ ಎಂದು ಪ್ರಸಿದ್ಧಿ ಪಡೆದ ತುರುವೇಕೆರೆಯ ಯಶಸ್ವಿ ಮಹಿಳೆ ರೆಹನಾ ಬೇಗಂ.
ಹಾವು ಕಡಿದ ತಕ್ಷಣ ಗಾಬರಿ, ಹೆದರಿಕೆಯಿಂದ ಪ್ರಾಣ ಬಿಡುವವರ ಸಂಖ್ಯೆಯೇ ಹೆಚ್ಚು. ‘ಹಾವು ಕಡಿದ ಮೂರು ಗಂಟೆಯೊಳಗೆ ನನ್ನ ಬಳಿಗೆ ಬಂದರೆ ಎಂಥಹಾ ಹಾವಿನ ವಿಷವನ್ನಾದರೂ ತೆಗೆಯುತ್ತೇನೆ’ ಎಂದು ಆತ್ಮವಿಶ್ವಾಸ ದಿಂದ ನುಡಿಯುತ್ತಾರೆ ರೆಹನಾ ಬೇಗಂ. ಹಾವಿನಿಂದ ಕಡಿತಕ್ಕೊಳಗಾದವರು ಯಾವುದೇ ಕಾರಣಕ್ಕೂ ಹೆದರ ಬಾರದು, ಕಚ್ಚಿದ ಜಾಗದಿಂದ ಸ್ವಲ್ಪ ದೂರಕ್ಕೆ ದಾರ ಕಟ್ಟಿ ನೀರು ಕುಡಿಸದೆ, ಮಾತು ನಿಲ್ಲಿಸದಂತೆ ನನ್ನಲ್ಲಿಗೆ ಕರೆತಂದರೆ ಆ ವ್ಯಕ್ತಿಯನ್ನು ಖಂಡಿತಾ ಉಳಿಸುತ್ತೇನೆ ಎಂದು ಭರವಸೆಯ ನುಡಿಗಳನ್ನಾಡುತ್ತಾರೆ.
ಎಲ್ಲ ವಯೋಮಾನದವರಿಗೂ ಚಿಕಿತ್ಸೆ ನೀಡಿರುವ ಇವರು ಹಾವು ಕಚ್ಚಿಸಿಕೊಂಡು ತಮ್ಮ ಬಳಿ ಬಂದ ಆರು ತಿಂಗಳ ಮಗು ಉಳಿದುದು ದೇವರ ಪವಾಡವೇ ಸರಿ ಎನ್ನುತ್ತಾರೆ. ಇದುವರೆಗೆ ಬಂದವರಲ್ಲಿ , ಸಮಯ ಮೀರಿ ಬಂದದ್ದರಿಂದ ೩ ಜನರು ತೀರಿ ಕೊಂಡಿದ್ದು ಬಿಟ್ಟರೆ ತಮ್ಮ ಔಷಧಿಯಿಂದ ಗುಣಮುಖರಾಗಿ ಕೃತಜ್ಞತಾಭಾವದಿಂದ ಹಿಂತಿರುಗಿದ್ದಾರೆ ಎಂದು ಸಾರ್ಥಕ ಭಾವದಿಂದ ನುಡಿಯುತ್ತಾರೆ.
ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ... ಪರಮಾತ್ಮ ನನ್ನನ್ನು ಸೇವೆ ಮಾಡಲು ಆಜ್ಞೆ ಮಾಡಿ ಕಳಿಸಿzನೆ. ಅದನ್ನು ಪಾಲಿಸುವುದಷ್ಟೇ ನನ್ನ ಕೆಲಸ. ಚಿಕಿತ್ಸೆಗೆ ಯಾವ ಸಮಯದಲ್ಲಿ ಬಂದರೂ ನನ್ನ ಮನೆ ಬಾಗಿಲು ತೆರೆದಿರುತ್ತದೆ. ಅ ನಮಗೆ ಎಲ್ಲವನ್ನೂ ನೀಡಿದ್ದಾನೆ ನಾನೇಕೆ ಹಣ ಪಡೆಯಲಿ ಎಂದು ಹೃದಯ ಶ್ರೀಮಂತಿಕೆಯನ್ನು ಮೆರೆಯುತ್ತಾರೆ.
ಜಾತಿ ಮತ, ಆಚಾರ ವಿಚಾರ, ಸಂಸ್ಕಾರ ಇವುಗಳಿಗಿಂತ ಪ್ರಾಣವೇ ಮುಖ್ಯ ಎಂದು ನಂಬಿರುವ ಇವರಿಂದ ಜೀವದಾನ ಪಡೆದವರು ಕೃತಜ್ಞತೆಯಿಂದ ತಮ್ಮ ಕಣ್ಣೀರಲ್ಲಿ ಇವರ ಪಾದ ತೊಳೆದ ಮನಕಲಕುವ ಘಟನೆಗಳಿವೆ. ಕೆಲವು ಗಿಡಮೂಲಿಕೆಗಳಿಂದ ತಾವೇ ತಯಾರಿಸಿದ, ಕಾಡಿಗೆಯಂತಹ ಕಪ್ಪುಬಣ್ಣದ ಔಷಧಿಯನ್ನು ಹಾವು ಕಚ್ಚಿದ ವ್ಯಕ್ತಿಯ ಎರಡೂ ಕಣ್ಣುಗಳಿಗೆ ಹಚ್ಚಿದಾಗ, ಕಣ್ಣೀರಿನ ಜತೆಗೇ ವಿಷವೂ ಇಳಿದುಹೋಗುತ್ತದೆ. ಇದೊಂದು ನಾಟಿ ವಿದ್ಯೆ. ಮಾಟ ಮಂತ್ರಗಳಂತಹ ಬೂಟಾಟಿಕೆ ಏನಿಲ್ಲ. ಈಗ ನಾಶವಾಗುತ್ತಿರುವ ಪರಿಸರದಿಂದ ಮೊದಲು ಸುಲಭವಾಗಿ ಸಿಗುತ್ತಿದ್ದ ಗಿಡಮೂಲಿಕೆಗಳು ದೊರೆಯುವುದೇ ಕಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಹಾವು ಕಡಿದದ್ದಕ್ಕೆ ಇಲ್ಲಿಯವರೆಗೆ ೩೦,೦೦೦ ಜನರಿಗಿಂತಲೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿ ತಮ್ಮಲ್ಲಿರುವ ವಿದ್ಯೆಯನ್ನು ಸಾರ್ಥಕಗೊಳಿಸಿಕೊಂಡಿzರೆ. ಹಾವು, ಚೇಳು, ಝರಿಯಂತಹ ವಿಷಜಂತುಗಳ ಕಡಿತಕ್ಕೂ ಸಹಾ ಔಷಧ ನೀಡಿ ನೋವು ಹೋಗಲಾಡಿಸುವುದರಲ್ಲಿ ನಿಷ್ಣಾತರು ಇವರು ಬಿ.ಆರ್.ಪ್ರಾಜೆಕ್ಟ್
ಮೂಲದ ಇವರು ಸುಮಾರು ೪೦ ವರ್ಷಗಳಿಂದ ನೀಡುತ್ತಿರುವ ಚಿಕಿತ್ಸಾ ಕ್ರಮ, ಅವರ ತಾಯಿಯಿಂದ ಬಂದ ಬಳುವಳಿ.
೪ ತಲೆಮಾರುಗಳಿಂದ ಪರಂಪರಾಗತವಾಗಿ ಬಂದಿರುವ ಈ ವಿದ್ಯೆಯನ್ನು ಇವರ ಸೋದರು ಮುಂದುವರೆಸಿದ್ದಾರೆ. ಇವರ ೪ ಮಕ್ಕಳಲ್ಲಿ ಹಿರಿಯ ಮಗಳು ಸಬಾನಾ ನವಾಜ್ ತಾಯಿಯ ಹಾದಿಯಲ್ಲಿ ಮುನ್ನಡೆದಿದ್ದಾರೆ. ತಮ್ಮ ಪತಿ, ಕುಟುಂಬದ ಎಲ್ಲಾ ಸದಸ್ಯರು, ಹಿರಿಯರ ಪ್ರೋತ್ಸಾಹದಿಂದ ಈ ಸೇವೆ ಸುಗಮವಾಗಿ ಸಾಗುತ್ತಿದೆ ಎಂದು ವಿನಮ್ರವಾಗಿ ನುಡಿಯುತ್ತಾರೆ.
ಹಲವಾರು ಸಾವಿರ ಜೀವಿಗಳಿಗೆ ಜೀವದಾನ ಮಾಡಿರುವ ಇವರ ಸೇವೆಯನ್ನು ಗುರುತಿಸಿ ಸಂಘ ಸಂಸ್ಥೆಗಳಿಂದ ಸಂದಿರುವ ಬಿರುದು, ಸನ್ಮಾನಗಳು ಲೆಕ್ಕವಿಲ್ಲದಷ್ಟು. ಕರ್ನಾಟಕದ ಹೆಮ್ಮೆಯ ರಾಜ್ಯೋತ್ಸವ ಪ್ರಶಸ್ತಿ(೨೦೦೫), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಹಿರಿಮೆ ಇವರದು.ಇವರ ಸಮಾಜಸೇವಾ ಮನೋಭಾವಕ್ಕೆ ಶುಭವಾಗಲಿ.