ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 26th: ಶುಕ್ರ ವೃಶ್ಚಿಕ ರಾಶಿ ಪ್ರವೇಶ: ಯಾರಿಗೆ ಒಳಿತು? ಯಾರಿಗೆ ಕೆಡುಕು!.

Daily Horoscope: ನಿತ್ಯ ಭವಿಷ್ಯ ನವೆಂಬರ್‌ 26: 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ಷಷ್ಠಿ ತಿಥಿ, ಶ್ರವಣ ನಕ್ಷತ್ರದ ನವೆಂಬರ್ 26ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಈ ರಾಶಿಗೆ ಇಂದು ಶುಕ್ರನಿಂದ ಯಶಸ್ಸಿನ ಜೊತೆಗೆ ಆರ್ಥಿಕ ಲಾಭ!

ದಿನ ಭವಿಷ್ಯ-(ಸಂಗ್ರಹ ಚಿತ್ರ) -

Profile
Pushpa Kumari Nov 26, 2025 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ಷಷ್ಠಿ ತಿಥಿ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಶುಕ್ರ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಮತ್ತು ಶನಿ ವಕ್ರ ತ್ಯಾಗ ಮಾಡ್ತಾ ಇದ್ದಾನೆ ಹೀಗಾಗಿ ಇದರಿಂದ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾದ್ಯತೆ ಇದೆ..ಮೇಷ ರಾಶಿಯವರಿಗೆ ಸಾಡೇ ಸಾತ್ ಪರಿಣಾಮ ಇರಲಿದೆ. ಕೆಲಸ ಕಾರ್ಯದಲ್ಲಿ ಅಡಚಣೆ ಹಾಗೂ ಮನಸ್ಸಿಗೆ ಬೇಸರ ನಿಮಗೆ ಮೂಡಲಿದೆ. ಹಾಗೆಯೇ ಮನೆಯಲ್ಲೂ ಸ್ವಲ್ಪ ಬೇಸರ, ಆತಂಕ ಮೂಡಬಹುದು‌. ಹಣಕಾಸಿನ ಬಗ್ಗೆಯೂ ಎಚ್ಚರಿಕೆ ವಹಿಸಿ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಅತ್ಯುತ್ತಮವಾದ ಫಲವಾಗಿದೆ.‌ ನಿಮ್ಮ ಸಾಮಾಜಿಕ ವ್ಯವಹಾರದಲ್ಲಿ ಮಿತ್ರರಿಂದ ಖುಷಿ ಸಿಗಲಿದೆ. ದಾಂಪತ್ಯ ಹಾಗೂ ಪ್ರೇಮ, ಪ್ರೀತಿ ವಿಚಾರದಲ್ಲಿ ಒಳ್ಳೆಯ ದಿನ ಅಲ್ಲ.

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಹಿಂದಿನ ದಿನದಲ್ಲಿ ನೋಡದಂತ ಪ್ರಗತಿಯನ್ನು ಕಾರ್ಯಕ್ಷೇತ್ರದಲ್ಲಿ ಈ ಭಾರೀ ನೀವು ನೋಡಲಿದ್ದೀರಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಅಷ್ಟಮ ಶನಿಯ ಭಾದೆಯಿಂದ ಬಿಡುಗಡೆ ಪ್ರಾಪ್ತಿಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಇದೆ. ಅದರೆ ನಿಮ್ಮ ಅದೃಷ್ಟ ಪರೀಕ್ಷೆ ಬಹಳಷ್ಟು ನಿಧಾನವಾಗಿ ಆಗುತ್ತದೆ. ಹಿಂದೆ ಇದ್ದಂತಹ ಕ್ಷೇಷಗಳು ಇಂದು ಮಯವಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಅಷ್ಟಮ ಶನಿ ಸಂಪೂರ್ಣ ವಾಗಿ ಆರಂಭವಾಗಲಿದೆ. ನಾನಾ ರೀತಿಯ ಕ್ಷೇಷಗಳನ್ನು ನೀವು ಅನುಭವಿಸಬೇಕಾಗುತ್ತದೆ‌. ನಿಮ್ಮ ವ್ಯಕ್ತಿತ್ವದಲ್ಲಿ ಕೆಲವು ರೀತಿಯ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಸಪ್ತಮ ಶನಿ ಆರಂಭವಾಗಿದೆ. ಇದರಿಂದ ನಿಮ್ಮ ಪ್ರೀತಿ- ಪಾತ್ರರಿಂದ ಹಾಗೂ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ಬಿಸೆನೆಸ್ ವ್ಯವಹಾರದಲ್ಲಿ ನಿಮಗೆ ಒಡಕು ಉಂಟಾಗಬಹುದು. ಹಾಗಾಗಿ ಬಹಳ ಜಾಗೃತೆಯಿಂದ ಕೆಲಸ ಕಾರ್ಯಗಳನ್ನು ಮಾಡ ಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ನಿಮ್ಮ ಷಷ್ಠ ಸ್ಥಾನಕ್ಕೆ ಶನಿ ಬಂದಿದ್ದಾನೆ. ಇದರಿಂದ ನಿಮಗೆ ಆರೋಗ್ಯದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸಾಮಾಜಿಕ ವ್ಯವಹಾರದಲ್ಲಿ ಯಶಸ್ಸು ಸಿಕ್ಕರೂ ಶತ್ರು ಭಾದೆ ಕಾಡುವ ಸಾದ್ಯತೆ ಇರುತ್ತದೆ.‌ ಹಾಗಾಗಿ ಈ ಬಗ್ಗೆ ಗಮನವನ್ನು ವಹಿಸ ಬೇಕಾಗುತ್ತದೆ.

ಇದನ್ನು ಓದಿ:Vastu Tips: ಮನೆಯಲ್ಲಿ ಲಾಫಿಂಗ್ ಬುದ್ಧನ ವಿಗ್ರಹ ಇದ್ದರೆ ಎಷ್ಟೆಲ್ಲ ಲಾಭ ಗೊತ್ತೆ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಶನಿ ತನ್ನ ವಕ್ರ ತ್ಯಾಗವನ್ನು ಮಾಡುವುದರಿಂದ ಒಳ್ಳೆಯ ಫಲವನ್ನು ನೀವು ನೋಡ ಬೇಕಾಗುತ್ತದೆ. ಯಾವುದೇ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗಲಿದೆ. ಹಿಂದೆ ಇದ್ದಂತಹ ಕ್ಷೇಷಗಳು ಎಲ್ಲವೂ ಮಯವಾಗಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೂ ಕಷ್ಟಕರವಾದ ಗೋಚರ ಇರಲಿದೆ. ನಿಮ್ಮ ವ್ಯಯ ಭಾವಕ್ಕೆ ಶುಕ್ರ ಬರುವುದರಿಂದ ಮಿತೃತ್ವದಲ್ಲಿ ಒಡಕು ಉಂಟಾಗಬಹುದು.‌ ಮನೆಯ ವಿಚಾರ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ತೊಂದರೆ ಕಾಡಬಹುದು. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ವನ್ನು ವಹಿಸಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಅತ್ಯುತ್ತಮವಾದ ಗೋಚರ ವಾಗಲಿದೆ. ಶನಿ ವಕ್ರ ತ್ಯಾಗದಿಂದ ನಿಮ್ಮ ಕಾರ್ಯಕ್ಷೇತ್ರದ ಯಶಸ್ಸು, ಸಾಮಾಜಿಕ ಯಶಸ್ಸು ಮುಂದುವರಿಯುತ್ತದೆ. ಹಿಂದಿನ ಕ್ಷೇಷ ಎಲ್ಲವೂ ಮಯವಾಗಲಿದ್ದು ಯಶಸ್ಸನ್ನು ಕಾಣುತ್ತೀರಿ.

ಕುಂಭರಾಶಿ: ಕುಂಭ ರಾಶಿ ಅವರಿಗೆ ನಿಮ್ಮ ದ್ವೀತಿಯ ಸ್ಥಾನದಲ್ಲಿ ಶನಿ ಬರುತ್ತಿದ್ದಾನೆ. ಹಾಗಾಗಿ ಸಂಸಾರದ ತಾಪತ್ರಯಗಳಲ್ಲಿ ಮನಸ್ಸಿಗೆ ಖುಷಿ ಸಿಗುತ್ತದೆ.‌ ಇತರರಿಂದ ನೀವು ಪ್ರಶಂಸೆಯನ್ನು ಕಾಣುತ್ತೀರಿ. ಹಾಗಾಗಿ ನೀವು ಕೂಡ ನಿಮ್ಮ ವ್ಯಕ್ತಿತ್ವದಲ್ಲಿ ವೈಯಕ್ತಿಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ನಿಮ್ಮ ರಾಶಿಯಲ್ಲೇ ಶನಿ ಇದ್ದಾನೆ. ನಿಮ್ಮ ವ್ಯಕ್ತಿತ್ವ ದಲ್ಲಿ ಕೆಲವು ಬದಲಾವಣೆ ಮಾಡಿ ಕೊಳ್ಳುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.