Subramanya Shasti: ಇಂದು ಸುಬ್ರಮಣ್ಯ ಷಷ್ಠಿ; ಇದರ ಹಿನ್ನಲೆ, ಮಹತ್ವ ಇಲ್ಲಿದೆ
ಮಾರ್ಗಶೀರ್ಷ ಮಾಸದ 6ನೇ ದಿನದಂದು ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವ ಸಂಪ್ರದಾಯವಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿ ಪೂಜೆ, ಉತ್ಸವ ನಡೆಯಲಿದೆ. 2025 ರ ಸುಬ್ರಹ್ಮಣ್ಯ ಷಷ್ಠಿ ಪೂಜೆ ಯಾವಾಗ.? ಸುಬ್ರಹ್ಮಣ್ಯ ಷಷ್ಠಿ ದಿನದಂದು ಪೂಜೆ ಮಾಡುವ ವಿಧಾನ, ಮಹತ್ವ ಇಲ್ಲಿವೆ.
ಸುಬ್ರಮಣ್ಯ -
ಬೆಂಗಳೂರು: ಸ್ಕಂದ ಷಷ್ಠಿಯ ನಂತರ ಬರುವ ಆರನೇ ತಿಥಿಯನ್ನೇ ಚಂಪಾ ಷಷ್ಠಿ(Champa Sashti) ಎಂದು ಕರೆಯುತ್ತಾರೆ. ಇದು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನವಾಗಿದ್ದು, ಸುಬ್ರಹ್ಮಣ್ಯ ಷಷ್ಠಿ ಎಂಬ ಹೆಸರಿನಿಂದಲೂ ಇದು ಪ್ರಸಿದ್ಧಿಯನ್ನು ಹೊಂದಿದೆ. ಈ ವರ್ಷ ಸುಬ್ರಹ್ಮಣ್ಯ ಷಷ್ಠಿ/ಚಂಪಾ ಷಷ್ಠಿ ನವೆಂಬರ್ 26ರಂದು ಅಂದರೆ ಇಂದು ನಡೆಯಲಿದ್ದು, ರಾಜ್ಯದಾದ್ಯಂತ ಇರುವ ಸುಬ್ರಹ್ಮಣ್ಯ ಸ್ವಾಮಿ (Lord Subramanya) ದೇವಾಲಯಗಳಲ್ಲಿ ಈ ದಿನ ವಿಶೇಷ ಸೇವೆ–ಪೂಜೆಗಳು ಹಾಗೂ ಪುನಸ್ಕಾರ ಕಾರ್ಯಕ್ರಮಗಳು ನಡೆಯುತ್ತವೆ.
ಸುಬ್ರಹ್ಮಣ್ಯ ಷಷ್ಠಿ ಸುಬ್ರಹ್ಮಣ್ಯಸ್ವಾಮಿಗೆ ಅರ್ಪಿಸಲಾದ ಪವಿತ್ರ ದಿನವಾಗಿದ್ದು, ದೇವಸೇನೆಯಾಧ್ಯಕ್ಷರಾಗಿರುವ ಸುಬ್ರಹ್ಮಣ್ಯಸ್ವಾಮಿಯು ತಾರಕಾಸುರನ ಮೇಲೆ ಸಾಧಿಸಿದ ಜಯವನ್ನು ಸ್ಮರಿಸುವ ಪರ್ವವಾಗಿಯೂ ಈ ದಿನವಾಗಿಯೂ ಆಚರಿಸಲ್ಪಡುತ್ತಾರೆ. ದುಷ್ಟ ಸಂಹಾರ ಮಾಡಿ ವಿಜಯವನ್ನು ಪಡೆದುಕೊಂಡ ಈ ದಿನದಲ್ಲಿ ಭಕ್ತರು ಧೈರ್ಯ, ಗೆಲುವು, ಸಮೃದ್ಧಿ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನದಂದು ಪೂಜೆ ಮಾಡುವುದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಸ್ಕಂದ ಷಷ್ಠಿ 2025 ರ ಹಿನ್ನಲೆ, ಮಹತ್ವ, ಪೂಜೆ ವಿಧಾನ ಹೀಗಿದೆ.
ಪೌರಾಣಿಕ ಹಿನ್ನಲೆ ಏನು..?
ಧಾರ್ಮಿಕ ಪೌರಾಣಿಕ ನಂಬಿಕೆಯ ಪ್ರಕಾರ, ಕಾರ್ತಿಕೇಯನು ತನ್ನ ತಂದೆ ತಾಯಿ ಮತ್ತು ಕಿರಿಯ ಸಹೋದರ ಶ್ರೀ ಗಣೇಶನ ಮೇಲೆ ಕೋಪಗೊಂಡು ಕೈಲಾಸ ಪರ್ವತವನ್ನು ತೊರೆದನು, ಶಿವನ ಜ್ಯೋತಿರ್ಲಿಂಗವಾದ ಮಲ್ಲಿಕಾರ್ಜುನನು ಅಲ್ಲಿಗೆ ಬಂದನು ಮತ್ತು ಕಾರ್ತಿಕೇಯನು ಸ್ಕಂದ ಷಷ್ಠಿಯಂದು ತಾರಕಾಸುರ ಎಂಬ ರಾಕ್ಷಸನನ್ನು ಕೊಂದನು. ಷಷ್ಠಿಯ ದಿನಾಂಕದಂದೇ, ಕಾರ್ತಿಕೇಯನು ದೇವತೆಗಳ ಸೈನ್ಯದ ಒಡೆಯನಾದನು.
ಮಹತ್ವ ಏನು...?
ಚಂಪಾ ಷಷ್ಠಿಯಂದು ಉಪವಾಸ ಮಾಡುವುದರಿಂದ ಸುಖ, ಶಾಂತಿ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಹಿಂದಿನ ಜನ್ಮದ ಪಾಪಗಳು ನಿವಾರಣೆಗೊಳ್ಳುತ್ತದೆ ಎಂದು ನಂಬಲಾಗಿದೆ. ಚಂಪಾ ಷಷ್ಟಿಯ ದಿನದಂದು ಸುಬ್ರಮಣ್ಯ ಸ್ವಾಮಿಯನ್ನು ಪೂಜಿಸುವುದರಿಂದ ಅಜ್ಞಾನದಿಂದ ಮಾಡಿದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರೊಂದಿಗೆ ಭಕ್ತರಿಗೆ ಐಶ್ವರ್ಯ, ಸಂಪತ್ತು ಲಭಿಸುತ್ತದೆ.
ಈ ಸುದ್ದಿಯನ್ನು ಓದಿ: Astro Tips: ಮಂಗಳವಾರ ಆಂಜನೇಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ
ಪೂಜಾ ವಿಧಾನ
ಈ ದಿನದಂದು ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವರ ಧ್ಯಾನ ಮಾಡುತ್ತಾ ವ್ರತ ತೆಗೆದುಕೊಳ್ಳಬೇಕು.
- ನಂತರ ಕಾರ್ತಿಕೇಯನೊಂದಿಗೆ ಶಿವ-ಪಾರ್ವತಿಯರ ವಿಗ್ರಹವನ್ನು ಸ್ಥಾಪಿಸಬೇಕು.
- ತುಪ್ಪ, ಮೊಸರು, ನೀರು ಮತ್ತು ಹೂವುಗಳೊಂದಿಗೆ ಅರ್ಘ್ಯವನ್ನು ಅರ್ಪಿಸಬೇಕು.
- ಜೊತೆಗೆ lಅಕ್ಷತೆ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯ ಇತ್ಯಾದಿಗಳಿಂದ ಪೂಜಿಸಬೇಕು.
- ಕಾಲೋಚಿತ ಹಣ್ಣುಗಳು, ಹೂವುಗಳು, ಬೀಜಗಳನ್ನು ಅರ್ಪಿಸಿ. ತಿಳಿದೋ ತಿಳಯದೆಯೋ ಮಾಡಿದ ತಪ್ಪಿಗಾಗಿ ಕ್ಷಮೆಯನ್ನು ಕೇಳಿ ಪ್ರಾರ್ಥನೆ ಮಾಡಿ.
- ಸಂಜೆ ಮತ್ತೆ ಪೂಜೆ ಮತ್ತು ಆರತಿ ಮಾಡಿದ ನಂತರ ಫಲಾಹಾರವನ್ನು ಸೇವಿಸಿ.
- ಈ ದಿನ ಉಪವಾಸ ಮಾಡುವವರು ದಕ್ಷಿಣ ದಿಕ್ಕಿಗೆ ಮುಖಮಾಡಿ ಕಾರ್ತಿಕೇಯನನ್ನು ಪೂಜಿಸಬೇಕು.
- ರಾತ್ರಿ ನೆಲದ ಮೇಲೆ ಮಲಗಬೇಕು.