ದಿನ ಭವಿಷ್ಯ, ಆಗಸ್ಟ್ 6, 2026: ಈ ರಾಶಿಯವರ ಯಶಸ್ಸು ಹಾಗೂ ಗೌರವ ಇಂದು ಹೆಚ್ಚಾಗುವ ದಿನ!
Horoscope Today August 6th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ನವಮಿ ತಿಥಿ, ಕೃತಿಕಾ ನಕ್ಷತ್ರದ, ಆಗಸ್ಟ್ 6ನೇ ತಾರೀಖಿನ ಗುರುವಾರದ ಈ ದಿನ ಸೂರ್ಯ ಕರ್ಕಾಟಕ ರಾಶಿಯಲ್ಲಿದ್ದಾನೆ. ಇಂದು ಗೌರವದ ಜೊತೆಗೆ ಅಧಿಕಾರಿಗಳ ಬೆಂಬಲ ಸಿಗುತ್ತದೆ.
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ಗೌರವ ಪ್ರಾಪ್ತಿಯಾಗುತ್ತದೆ. ಆದರೆ ಆರೋಗ್ಯದ ಕಡೆ ಹೆಚ್ಚು ಗಮನವನ್ನು ನೀಡಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಒತ್ತಡ ಹೆಚ್ಚಾಗಬಹುದು. ಆದರೆ ತಾಳ್ಮೆಯಿಂದ ನಿರ್ಧಾರ ತೆಗೆದುಕೊಂಡರೆ ಕೆಲಸ ಪೂರ್ಣಗೊಳ್ಳಬಹುದು. ಹಳೆ ಸ್ನೇಹಿತರಿಂದ ಸಂತೋಷ ಸಿಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಹೊಸ ಯೋಜನೆಗೆ ಅನುಕೂಲಕರವಾಗಿದೆ. ಕೈ ಹಾಕಿದ ಕೆಲಸಗಲ್ಲಿ ಅಭಿವೃದ್ಧಿ ಹಾಗೂ ಮಾನಸಿಕ ನೆಮ್ಮದಿ
ಕಟಕ ರಾಶಿ: ಕಟಕ ರಾಶಿ ಅವರು ಇಂದು ವ್ಯಾಪಾರ ಹಾಗೂ ವ್ಯವಹಾರದಲ್ಲಿ ಪ್ರಗತಿ. ಕುಟುಂಬದೊಂದಿಗೆ ಶುಭ ಸುದ್ದಿಯನ್ನು ಪಡೆಯಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಆತ್ಮವಿಶ್ವಾಸದಿಂದ ಕೈಗೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.ಅಧಿಕಾರಿಗಳಿಂದ ಸಹಕಾರ ಸಿಗಲಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಿದ್ಯಾರ್ಥಿಗಳ ಶ್ರಮಕ್ಕೆ ಇಂದು ತಕ್ಕ ಫಲಿತಾಂಶ ಬರಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಮನೆ ಹಾಗೂ ಆಸ್ತಿ ವಿಚಾರ ದಲ್ಲಿ ನೆಮ್ಮದಿ ಸಿಗುತ್ತದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಲಾಭ ತಂದು ಕೊಡಬಹುದು.ಆದರೆ ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಅಗತ್ಯ.
Vastu Tips: ಮನೆಗೆ ಸುಖ, ಶಾಂತಿ, ಸಮೃದ್ಧಿ ಬೇಕೇ? ಈ ವಾಸ್ತು ನಿಯಮ ಪಾಲಿಸಿ
ವೃಶ್ಚಿಕ ರಾಶಿ: ಈ ರಾಶಿಗೆ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣ ಗೊಳ್ಳುತ್ತವೆ. ಉದ್ಯೋಗಿದಲ್ಲಿ ಇಂದು ಜವಾಬ್ದಾರಿ ಹೆಚ್ಚಾಗಬಹುದು. ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಹಣಕಾಸಿನ ವಿಚಾರದಲ್ಲಿ ಸ್ಥಿರವಾಗಿರುತ್ತದೆ. ಕುಟುಂಬದ ಜೊತೆ ಸಂವಹನ ನಡೆಸಿ ಕೆಲವೊಂದರಲ್ಲಿ ಯಶಸ್ಸು ಕಾಣುತ್ತೀರಿ.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಕೆಲಸ ಕಾರ್ಯದಲ್ಲಿ ಪ್ರಗತಿ ಸಿಗಲಿದ್ದು ಚಂದ್ರ ನಿಮ್ಮ ರಾಶಿಯಲ್ಲಿ ಇದ್ದಾನೆ. ಇಂದು ಅಧಿಕಾರಿಗಳಿಂದ ನೀವು ಮೆಚ್ಚುಗೆ ಪಡೆಯುತ್ತೀರಿ.
ಕುಂಭ ರಾಶಿ: ಈ ರಾಶಿಗೆ ಇಂದು ಖರ್ಚು ವೆಚ್ಚದ ಕಡೆ ಗಮನ ವಹಿಸಿ. ಆನ್ ಲೈನ್ ಕೆಲಸದಲ್ಲಿ ಅವಕಾಶ ಹೆಚ್ಚಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಕೆಲಸದಲ್ಲಿ ಪ್ರಗತಿ ಹಾಗೂ ಆದಾಯದಲ್ಲಿ ಅಭಿವೃದ್ಧಿ ಕಾಣುತ್ತೀರಿ. ಗೌರವ ಹಾಗೂ ಯಶಸ್ಸು ಕೂಡ ಹೆಚ್ಚುತ್ತದೆ.