Vishwavani Editorial: ತಕ್ಕ ಶಾಸ್ತಿ ಮಾಡಲು ಇದು ಸಕಾಲ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಕೊಲ್ಲುವ ಮಟ್ಟಕ್ಕೆ ಪಾಕಿಸ್ತಾನದ ಚಿಂತನೆ ಇಳಿದಿದೆ ಎಂದರೆ, ಇದಕ್ಕಿಂತ ಹೀನ ವರ್ತನೆ ಇನ್ನೊಂದು ಇರಲಾರದು. ವಿನಾಕಾರಣ ಭಾರತದ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದ ವೇಳೆ ಬುದ್ಧಿ ಕಲಿಸಲಾಗಿತ್ತು


ಪಾಕಿಸ್ತಾನದ ಹಾಗೂ ಪಾಕಿಸ್ತಾನ ಪ್ರೇರಿತ ಉಗ್ರರ ಕಿತಾಪತಿಗೆ ಇನ್ನಾದರೂ ಕಡಿವಾಣ ಹಾಕಬೇಕಿದೆ. ಬೇರೊಬ್ಬರ ತಂಟೆಗೆ ಹೋಗದೆ, ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ನಡೆದುಕೊಳ್ಳುವ ಭಾರತವನ್ನು ಇನ್ನಿಲ್ಲದಂತೆ ಕೆರಳಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡದಿದ್ದರೆ ಅದು ನಮಗೇ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಕೊಲ್ಲುವ ಮಟ್ಟಕ್ಕೆ ಪಾಕಿಸ್ತಾನದ ಚಿಂತನೆ ಇಳಿದಿದೆ ಎಂದರೆ, ಇದಕ್ಕಿಂತ ಹೀನ ವರ್ತನೆ ಇನ್ನೊಂದು ಇರಲಾರದು. ವಿನಾಕಾರಣ ಭಾರತದ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದ ವೇಳೆ ಬುದ್ಧಿ ಕಲಿಸಲಾಗಿತ್ತು,
ಅದರ ಕುಮ್ಮಕ್ಕಿನಂತೆ ವರ್ತಿಸುವ ಭಯೋತ್ಪಾದಕರ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಮತ್ತೊಂದು ಸುತ್ತಿನ ಬರೆ ಹಾಕಲಾಗಿತ್ತು.
ಇದನ್ನೂ ಓದಿ: Vishwavani Editorial: ಉಗ್ರರ ದಮನಕ್ಕೆ ದೇಶವೇ ಒಂದಾಗಲಿ
ವಿವೇಚನೆ ಇರುವವರಾದರೆ ಇಂಥ ಬೆಳವಣಿಗೆಗಳಿಂದ ಬುದ್ಧಿ ಕಲಿಯುತ್ತಾರೆ. ಆದರೆ ಭಾರತದ ವಿಭಜನೆ ಆದಾಗಿನಿಂದಲೂ ನಮ್ಮ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ಪಾಕಿಸ್ತಾನಕ್ಕೆ, ಅಲ್ಲಿನ ಆಳುಗರಿಗೆ, ಮಿಲಿಟರಿ ವ್ಯವಸ್ಥೆಗೆ ಅದಕ್ಕೆ ಸಮಯವಾದರೂ ಎಲ್ಲಿ?! ಹೀಗಾಗಿ, ‘ಎಲ್ಲರದೂ ಒಂದು ದಾರಿಯಾದರೆ, ಎಡವಟ್ಟನದೇ ಮತ್ತೊಂದು ದಾರಿ’ ಎಂಬ ರೀತಿಯಲ್ಲಿ ಪಾಕಿಸ್ತಾನ ಇತಿಹಾಸ ದುದ್ದಕ್ಕೂ ವಿಲಕ್ಷಣವಾಗೇ ನಡೆದುಕೊಂಡು ಬಂದಿದೆ.
ಇದಕ್ಕೆ ಜಗತ್ತಿನ ಜನರೇ ಸಾಕ್ಷಿ. ಅಂತಾರಾಷ್ಟ್ರೀಯ ಸಮುದಾಯದೆದುರು ತನ್ನ ಮಾನ ಹರಾಜಾಗಿ ಮೂರಾಬಟ್ಟೆಯಾಗಿದ್ದರೂ, ವಿಶ್ವದ ಯಾವ ರಾಷ್ಟ್ರವೂ ತನ್ನನ್ನು ನಂಬದಂಥ ಸ್ಥಿತಿ ನಿರ್ಮಾಣ ವಾಗಿದ್ದರೂ ಎಚ್ಚೆತ್ತುಕೊಳ್ಳದ ಪಾಕಿಸ್ತಾನವು ಭಾರತದ ವಿರುದ್ಧ ವಿನಾಕಾರಣ ದ್ವೇಷ ಸಾಧಿಸುವು ದರಲ್ಲೇ ತನ್ನ ಸಮಯವನ್ನು ವ್ಯರ್ಥ ಮಾಡುತ್ತಿದೆ. ಪಾಕ್‌ನ ಕುಚೇಷ್ಟೆಗೆ ಭಾರತ ಮತ್ತು ಭಾರತೀ ಯರು ಬೆಲೆ ತೆತ್ತಿದ್ದು ಇನ್ನು ಸಾಕು.
ಪಹಲ್ಗಾಮ್‌ನ ದುರ್ಘಟನೆ ಸೇರಿದಂತೆ ಭಾರತದಲ್ಲಿ ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿ ರುವ ಪಾಕಿಸ್ತಾನಕ್ಕೆ ತಕ್ಕ ಶಿಕ್ಷೆ ನೀಡಬೇಕಾದ ಕಾಲವೀಗ ಒದಗಿ ಬಂದಿದೆ. ಕಾರಣ- ಕೆಟ್ಟ ಹುಳು ಗಳನ್ನು ಬಹಳ ಕಾಲ ಬದುಕಲು ಬಿಟ್ಟರೆ ನಮ್ಮ ಅಸ್ತಿತ್ವಕ್ಕೇ ಸಂಚಕಾರ ತರುತ್ತವೆ!