Vishwavani Editorial: ಈ ಶಿಸ್ತು ಮೇಲ್ಪಂಕ್ತಿಯಾಗಲಿ
ಭೂಕಂಪ, ಪ್ರವಾಹದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಪರಿಹಾರ ಕಾರ್ಯಾ ಚರಣೆಯ ಮುಂಚೂಣಿಯಲ್ಲೇ ಆರೆಸ್ಸೆಸ್‌ನ ಸ್ವಯಂಸೇವಕರು ಕಾಣಿಸಿಕೊಳ್ಳುವುದಿದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದವರು, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ಕೂಡ ಹಿಂದೊಮ್ಮೆ ಆರೆಸ್ಸೆಸ್ ಶಾಖೆಗಳಿಗೆ ಭೇಟಿ ನೀಡಿದ್ದರ ಕುರಿತಾದ ಉಲ್ಲೇಖಗಳನ್ನು ನೆನಪಿಸಿಕೊಳ್ಳುವು ದುಂಟು.

-

ವಿಜಯದಶಮಿಯ ಅಚರಣೆಯಲ್ಲಿ ಶ್ರದ್ಧಾವಂತರೆಲ್ಲರೂ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಈ ಸಲದ ವಿಜಯದಶಮಿಯು ಮತ್ತೊಂದು ಸಂಭ್ರಮಾಚರಣೆಗೂ ಸಾಕ್ಷಿಯಾಗಿದ್ದು ವಿಶೇಷ. ಅದುವೇ- ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಸ್ಥಾಪನೆಗೊಂಡು ನೂರು ವರ್ಷಗಳನ್ನು ಪೂರೈಸಿ ದ್ದರ ಸಂಭ್ರಮ. ನೂರಾರು ಸವಾಲು-ಸಂಕಷ್ಟಗಳ ನಡುವೆಯೂ ಇಂಥದೊಂದು ಸುದೀರ್ಘ ಪಯಣದಲ್ಲಿ ಹೆಜ್ಜೆ ಹಾಕಿರುವ, ಹಾಕುತ್ತಲೇ ಇರುವ ಆರೆಸ್ಸೆಸ್ ನಿಜಕ್ಕೂ ಅಭಿನಂದನೆಗೆ ಅರ್ಹ ವಾದ ಸಂಘಟನೆ ಎನ್ನಲಡ್ಡಿಯಿಲ್ಲ.
ಯಾವುದಾದರೊಂದು ಸ್ಥಾಪಿತ ವ್ಯವಸ್ಥೆಯ ನೀತಿ-ನಿಯಮಗಳನ್ನು, ಸಿದ್ಧಾಂತಗಳನ್ನು ಒಪ್ಪುವುದು ಬಿಡುವುದು ಬೇರೆಯ ವಿಚಾರ. ಆದರೆ, ಅದಕ್ಕೆ ಸಲ್ಲಿಸಬೇಕಾದ ಗೌರವವನ್ನು ನೀಡಲೇಬೇಕಾಗುತ್ತದೆ. ಆರೆಸ್ಸೆಸ್ ಪರ ಒಲವಿರುವವರು ಅದನ್ನು ಮೆಚ್ಚಿಕೊಳ್ಳುವುದು ಇದ್ದೇ ಇದೆ, ಆದರೆ ಸೈದ್ಧಾಂತಿಕ ಕಾರಣಗಳಿಗಾಗಿ ಆರೆಸ್ಸೆಸ್‌ನ ಧೋರಣೆಗಳನ್ನು ಒಪ್ಪದವರು ಕೂಡ, ಆ ಸಂಘಟನೆಯಲ್ಲಿ ಕಾಣ ಬರುವ ಶಿಸ್ತು, ಅಚಲ ವಿಶ್ವಾಸ, ಸಂಘಟನೆಯ ನಾಯಕರ ಆದೇಶವನ್ನು ಸ್ವಯಂಸೇವಕರು ಚಾಚೂತಪ್ಪದೆ ಪರಿಪಾಲಿಸುವಿಕೆ ಇತ್ಯಾದಿಗಳನ್ನು ಶ್ಲಾಘಿಸುತ್ತಾರೆ.
ಇದನ್ನೂ ಓದಿ: Vishwavani Editorial: ಹತಾಶೆಯಲ್ಲಿ ಸಿಲುಕಿರುವ ಪಾಕ್
ಭೂಕಂಪ, ಪ್ರವಾಹದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಪರಿಹಾರ ಕಾರ್ಯಾ ಚರಣೆಯ ಮುಂಚೂಣಿಯಲ್ಲೇ ಆರೆಸ್ಸೆಸ್‌ನ ಸ್ವಯಂಸೇವಕರು ಕಾಣಿಸಿಕೊಳ್ಳುವುದಿದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದವರು, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ಕೂಡ ಹಿಂದೊಮ್ಮೆ ಆರೆಸ್ಸೆಸ್ ಶಾಖೆಗಳಿಗೆ ಭೇಟಿ ನೀಡಿದ್ದರ ಕುರಿತಾದ ಉಲ್ಲೇಖಗಳನ್ನು ನೆನಪಿಸಿಕೊಳ್ಳುವು ದುಂಟು.
‘ಅಭಿಪ್ರಾಯಭೇದ ಎಂಬುದು ವೈಯಕ್ತಿಕ ಸಂಬಂಧಗಳನ್ನು ಘಾಸಿಗೊಳಿಸುವುದಕ್ಕೆ ಬಿಡಬಾರದು’ ಎಂಬ ಗ್ರಹಿಕೆಯಲ್ಲಿ ಇವರಿಗೆ ಗಟ್ಟಿ ನಂಬಿಕೆ ಇದ್ದುದರಿಂದಲೇ ಇದು ಸಾಧ್ಯವಾಯಿತು. ಇಂಥ ನಡೆಗಳು ನಿಜಕ್ಕೂ ಅನುಕರಣೀಯ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇರಲಿ, ಆರೆಸ್ಸೆಸ್‌ನಲ್ಲಿ ಕಾಣಬರುವ ಶಿಸ್ತನ್ನು ಇಂದಿನ ಅನೇಕ ಸಂಘಟನೆಗಳು ಮೇಲ್ಪಂಕ್ತಿಯಾಗಿ ಇಟ್ಟುಕೊಳ್ಳುವ ಅಗತ್ಯ ವಿದೆ.