Rice: ಹೆಚ್ಚಿದ ಭತ್ತದ ಇಳುವರಿ; ರೈತರಿಗೇ ಅದೇ ವರಿ !
Rice: ಹೆಚ್ಚಿದ ಭತ್ತದ ಇಳುವರಿ; ರೈತರಿಗೇ ಅದೇ ವರಿ !
Ashok Nayak
December 26, 2024
ಹೂವಪ್ಪ ಐ.ಎಚ್. ಬೆಂಗಳೂರು
ರಾ, ರೈಸ್ ಕೆಜಿಗೆ 6-8 ರು. ಇಳಿಕೆ
ಸ್ಟೀಮ್ ರೈಸ್ 10-15 ರು. ಇಳಿಕೆ
ಮುಂದಿನ ದಿನಗಳಲ್ಲಿ ಇನ್ನೂ ಇಳಿಕೆ ಸಂಭವ
ಭತ್ತ ಅಕ್ಕಿ ಬೆಲೆಯಲ್ಲಿ ಹಾವು-ಏಣಿ ಆಟ ಶುರುವಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಇಳುವರಿಯೂಉತ್ತಮವಾಗಿದ್ದರೂ, ಬೆಲೆ ನೆಲಕಚ್ಚಿ, ರೈತರುಕಂಗಾಲಾಗಿದ್ದಾರೆ. ಭತ್ತದ ಬೆಲೆ ಭಾರಿ ಇಳಿಕೆಯಾರೂ ಅಕ್ಕಿ ಬೆಲೆ ಮಾತ್ರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.
ಭತ್ತ ಬೆಲೆ ಕುಸಿತ ಪರಿಣಾಮ ಕೆಲ ರೈತರು ಇ-ಟೆಂಡರ್ ಕರೆಯುವಂತೆ ಪಟ್ಟು ಹಿಡಿದಿದ್ದು, ಮತ್ತೆ ಕೆಲವರು ಭತ್ತದ ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ವರ್ಷ ಬರ ಸೇರಿ ಇನ್ನಿತರೆ ಕಾರಣಕ್ಕೆ ಕೆಲ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿಹೊರತು ಪಡಿಸಿದರೆ ರಾಜ್ಯದಲ್ಲಿ ಭತ್ತದ ಬೆಳೆ ಕಡಿಮೆಯಿತ್ತು. ಆದರೆ ಈ ಬಾರಿ ಉತ್ತಮ ಮಳೆಯ ಕಾರಣಕ್ಕೆ ಜಲಾಶಯಗಳು ಅವಧಿಗೆಮುನ್ನವೇ ಭರ್ತಿಯಾಗಿದ್ದು, ಭತ್ತದ ಕಣಜ ಎಂದು ಪ್ರಸಿದ್ಧಿ ಪಡೆದ ಜಿಗಳಾದ ರಾಯಚೂರು, ಗಂಗಾವತಿ,ಕೊಪ್ಪಳ ಜಿಲ್ಲೆಗಳಲ್ಲಿ ಈ ವರ್ಷ ಹೆಚ್ಚು ಭತ್ತ ಬೆಳೆಯಲಾಗಿದೆ. ಬೆಳೆಯುವ ಪ್ರದೇಶ ಹಿಂದಿನ ವರ್ಷಕ್ಕಿಂತ ತುಸು ಹೆಚ್ಚಿದೆ. ಜತೆಗೆ ಉತ್ತಮ ಇಳುವರಿಯೂ ಬಂದಿದೆ.
ಒಂದು ಕಡೆ ಮಳೆಯಾಗಿ ಬೆಳೆದ ಭತ್ತವೆಲ್ಲ ನೆಲಕಚ್ಚಿ ಹಾನಿಯಾಗಿದ್ದರೆ, ಇನ್ನೊಂದು ಕಡೆಗೆ ಫೆಂಗಲ್ಚಂಡ ಮಾರುತದಿಂದ ಕಟಾವು ಮಾಡಿದ ಭತ್ತ ಜಡಿ ಮಳೆಗೆ ತೊಯ್ದು ಭತ್ತ ಸ್ಥಿತಿ ಕೇಳುವವರಿಲ್ಲದಂತಾಗಿದೆ.ಕಳೆದ ವರ್ಷ ೭,೩೮,೧೪೪ ಕ್ವಿಂಟಲ್ ಭತ್ತ ಮಾರುಕಟ್ಟೆಗೆ ಬಂದಿತ್ತು. ಈ ಬಾರಿ ಸುಮಾರು 8 ಲಕ್ಷ ಕ್ವಿಂಟಲ್‌ನಷ್ಟುಭತ್ತ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಈ ಪೈಕಿ ಅದಾಗಲೇ ೧ ಲಕ್ಷ ಕ್ವಿಂಟಲ್‌ಗೂ ಅಧಿಕ ಭತ್ತ ಮಾರುಕಟ್ಟೆಗೆ ಬಂದಿದೆ. ಇನ್ನೊಂದು ವಾರದಲ್ಲಿ ಬಹುತೇಕ ಭತ್ತ ಮಾರುಕಟ್ಟೆಗೆ ಬರಲಿದೆ ಎನ್ನಲಾಗುತ್ತಿದೆ.
ಅಕ್ಕಿ ಬೆಲೆಯೂ ಇಳಿಕೆ: ಸೋನಾಮಸೂರಿ ರಾ ರೈಸ್ ಅಲ್ಪ ಪ್ರಮಾದಣಲ್ಲಿ ಇಳಿಕೆಯಾಗಿದೆ. ಕೆಜಿಗೆ 5-8 ರು. ಇಳಿಕೆಯಾಗಿದೆ ಆದರೆ ಬಡವರು ಉಪಯೋಗಿಸುವ ಸೋನಾಮಸೂರಿ ಸ್ಟಿಮ್ ಅಕ್ಕಿ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೆಜಿಗೆ 10-15 ರು. ನಷ್ಟು ಇಳಿಕೆಯಾಗಿದೆ. ಹೀಗಾಗಿ ಮಾಧ್ಯಮ ಗ್ರಾಹಕಾರು ಖುಷಿಯಾಗಿದ್ದಾರೆ. ಒಟ್ಟಿನಲ್ಲಿ ಕೆಜಿಗೆ ಸರಾಸರಿ 6-15 ರೂ. ನಷ್ಟು ಇಳಿದಿದೆ ಇದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
*
ಜಾಗತಿಕ ಮಟ್ಟದಲ್ಲಿ ಅಕ್ಕಿಗೆ ಒಳ್ಳೆ ಬೇಡಿಕೆ ಇದೆ. ಸ್ಥಳೀಯ ವ್ಯಾಪಾರಿಗಳ ಗುzಟ ಮತ್ತು ಒಳ ಸಂಚಿನಿಂದ ಬೆಲೆ ನೆಲಕಚ್ಚಿದೆ. ಬೆಲೆ ಏರಿಕೆಗೆ ಬಿಡ್ತಿಲ್ಲ.-ಸತೀಶ್ ರೈತ ಮುಖಂಡ
ಹಿಂದಿನ ಬೆಲೆ ಹೋಲಿಸಿದರೆ ಪ್ರತಿ ಕ್ವಿಂಟಲ್ ಭತ್ತದ ಬೆಲೆ 600 ರಿಂದ 1000 ರುಪಾಯಿಯಷ್ಟು ಕಡಿಮೆಯಾಗಿದೆ. ಈ ಬೆಲೆಗೆ ಮಾರಾಟ ಮಾಡಿದರೆ ಬೆಳೆಗೆ ಹಾಕಿದ ಖರ್ಚು ಬರುವುದಿಲ್ಲ.-ವಿನೋದ್ ರೈತ